Vastu for plants: ಕ್ರಾಸ್ಸುಲಾ ಸಸ್ಯದ ಹೆಸರು ಕೇಳಿದ್ದೀರಾ? ಈ ಸಸ್ಯ ಮನೆಯಲ್ಲಿದ್ದರೆ ನಿಮ್ಮ ಹಣಕ್ಕಿಲ್ಲ ಬರ!

| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2022 | 7:00 AM

ಕ್ರಾಸ್ಸುಲಾ ಸಸ್ಯದ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟ ಕ್ರಾಸ್ಸುಲಾ ಸಸ್ಯವು ಸಂಪತ್ತನ್ನು ತರುತ್ತದೆ.

Vastu for plants: ಕ್ರಾಸ್ಸುಲಾ ಸಸ್ಯದ ಹೆಸರು ಕೇಳಿದ್ದೀರಾ? ಈ ಸಸ್ಯ ಮನೆಯಲ್ಲಿದ್ದರೆ ನಿಮ್ಮ ಹಣಕ್ಕಿಲ್ಲ ಬರ!
ಕ್ರಾಸ್ಸುಲಾ ಸಸ್ಯ (ಸಂಗ್ರಹ ಚಿತ್ರ)
Follow us on

ಪ್ರತಿ ಮನೆಗೂ ವಾಸ್ತು ಅತ್ಯಗತ್ಯ. ವಾಸ್ತುವಿದ್ದ ಮನೆ ವಾಸಕ್ಕೆ ಯೋಗ್ಯ ಎನ್ನುವ ಮಾತಿದೆ. ಮನೆಯ ವಾಸ್ತು (Vastu) ಜೊತೆಗೆ ಮನೆ ಸುತ್ತಮುತ್ತಲಿನ ವಾಸ್ತು ಸರಿಯಾಗಿದ್ದರೆ ಮಾತ್ರ ಫಲಿತಾಂಶ ಅನುಕೂಲಕರವಾಗಿರುತ್ತದೆ. ವಾಸ್ತು ಶಾಸ್ತ್ರದ ತಜ್ಞರು ಹೇಳುವಂತೆ, ಎಲ್ಲಿಯಾದರೂ ಮನೆ ಕಟ್ಟಲು ಯೋಜಿಸಿದರೆ ಮನೆಯ ಸ್ಥಳದೊಂದಿಗೆ ಸುತ್ತಮುತ್ತಲಿನ ವಾಸ್ತುವನ್ನು ಗಮನಿಸುವುದು ಅವಶ್ಯಕ. ಹಾಗೆಯೇ ಮನೆಯಲ್ಲಿ ವಾಸ್ತು ನೆಡುವ ವಿಷಯ ಬಂದಾಗ ಮನಿ ಪ್ಲಾಂಟ್, ತುಳಸಿ, ಶಮಿ ಇವುಗಳನ್ನು ಸಂಪತ್ತಿನ ಮೂಲ ಎಂದು ಪರಿಗಣಿಸಲಾಗಿದೆ. ಆದರೆ ಕ್ರಾಸ್ಸುಲಾ ಸಸ್ಯದ (crussulla plant) ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟ ಕ್ರಾಸ್ಸುಲಾ ಸಸ್ಯವು ಸಂಪತ್ತನ್ನು ತರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ. ಹಾಗಾದರೆ ಈ ಸಸ್ಯಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳು ಏನು ಎಂದು ತಿಳಿಯೋಣ.

ಇಲ್ಲಿಯವರೆಗೆ, ಅನೇಕ ಜನರು ಮನಿ ಪ್ಲಾಂಟ್​ನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಿದ್ದರು. ಅವರ ಪ್ರಕಾರ ಅದು ತಪ್ಪಲ್ಲ. ಅಂತಹ ಮತ್ತೊಂದು ಸಸ್ಯ ಕ್ರಾಸ್ಸುಲಾ. ಇದನ್ನು ಜಡ್ಡ್ ಸಸ್ಯ ಎಂದೂ ಕರೆಯುತ್ತಾರೆ. ಹಣದ ಲಾಭಕ್ಕಾಗಿ ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಈ ಸಸ್ಯವನ್ನು ಬೆಳೆಯಿರಿ. ಈ ಸಸ್ಯವು ನೈಸರ್ಗಿಕ ಗಾಳಿ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ಇಂಗಾಲದ ಡೈಆಕ್ಸೈಡ್​ನ್ನು ಹೀರಿಕೊಳ್ಳುತ್ತದೆ.

ನೀವು ಈ ಸಸ್ಯವನ್ನು ಮನೆ ಅಥವಾ ಕಛೇರಿಯ ಸರಿಯಾದ ದಿಕ್ಕಿನಲ್ಲಿ ಇರಿಸಿದ್ದೆಯಾದರೇ ಅದು ವಾಸ್ತು ದೋಷಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ. ಆದರೆ, ಈ ಗಿಡವನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡಬಾರದು. ಮುಖ್ಯ ಬಾಗಿಲನ್ನು ಶಕ್ತಿ ಮತ್ತು ಚಟುವಟಿಕೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕ್ರಾಸ್ಸುಲಾ ಸಸ್ಯವನ್ನು ಮುಖ್ಯ ಬಾಗಿಲಿನಿಂದ ದೂರ ಇಡಬೇಕು. ಜೊತೆಗೆ ಮಲಗುವ ಕೋಣೆ, ಅಡುಗೆ ಮನೆಯ ಬಳಿಯೂ ಇಡಬಾರದು.

ಅಲ್ಲದೆ, ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಒತ್ತಡವನ್ನು ತಪ್ಪಿಸಲು ಈ ಸಸ್ಯವನ್ನು ನಿಮ್ಮ ಮೇಜಿನ ನೈಋತ್ಯ ದಿಕ್ಕಿನಲ್ಲಿ ಇರಿಸಬಹುದು. ಇದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ. ನೀವು ವ್ಯಾಪಾರವನ್ನು ಹೊಂದಿದ್ದರೆ, ಆ ಸ್ಥಳದಲ್ಲಿ ನಿಮ್ಮ ಕ್ಯಾಶ್ ಕೌಂಟರ್‌ನ ಮೇಲೆ ಈ ಗಿಡವನ್ನು ನೆಟ್ಟರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ರೂಸಿಫೆರಸ್ ಸಸ್ಯವನ್ನು ತೆರೆದ ಪ್ರದೇಶದಲ್ಲಿ ನೆಡುವುದು ವಿಶೇಷವಾಗಿ ಮಂಗಳಕರವಾಗಿದೆ.

ಕ್ರಾಸ್ಸುಲಾ ಸಸ್ಯವನ್ನು ಮನೆಯಲ್ಲಿ ಕತ್ತಲೆಯ ಸ್ಥಳದಲ್ಲಿ ಇರಿಸಿದರೆ, ಅದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಈ ಸಸ್ಯವನ್ನು ಒಳಾಂಗಣದಲ್ಲಿ ಬಿಸಿಲಿನ ಸ್ಥಳದಲ್ಲಿ ಇರಿಸಿ. ಮನೆಯ ಬಾಲ್ಕನಿ ಟೆರೇಸ್‌ನಲ್ಲಿ ಇರಿಸಿದರೆ, ಅದು ಸಮೃದ್ಧಿಗೆ ಕಾರಣವಾಗುತ್ತದೆ. ಗಿಡದ ಎಲೆಗಳು ಧೂಳೀಪಟವಾಗದಂತೆ ನೋಡಿಕೊಳ್ಳಿ. ಇದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.

ಮತ್ತಷ್ಟು ಆಧ್ಯತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.