
ಮನೆ ವಾಸ್ತು ಎಂದರೆ ಮನೆಯ ವಿನ್ಯಾಸ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಚೀನ ಭಾರತೀಯ ವಾಸ್ತುಶಿಲ್ಪದ ಒಂದು ಪದ್ಧತಿ. ಇದು ಮನೆಯಲ್ಲಿ ಶಕ್ತಿ ಹರಿಯುವಿಕೆಯನ್ನು ಉತ್ತಮಪಡಿಸಿ, ಮನೆಯವರ ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಆದರೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದು ಮನೆಯ ಸದಸ್ಯರ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ವಾಸ್ತು ದೋಷವು ಮನೆಯಲ್ಲಿ ಜಗಳ, ಆರ್ಥಿಕ ಸಮಸ್ಯೆ ಮತ್ತು ಮದುವೆಯಲ್ಲಿ ವಿಳಂಬದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ಈ ವಾಸ್ತು ದೋಷಗಳಿದ್ದರೆ, ಅವುಗಳನ್ನು ಆದಷ್ಟು ಬೇಗ ತೊಡೆದುಹಾಕಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ದ್ವಾರವು ಮನೆಯಲ್ಲಿನ ಶಕ್ತಿಯ ಪ್ರವೇಶ ಬಿಂದುವಾಗಿದೆ. ಅದು ತಪ್ಪು ದಿಕ್ಕಿನಲ್ಲಿದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದು ಮನೆಯಲ್ಲಿ ಅಶಾಂತಿ ಮತ್ತು ದುರದೃಷ್ಟಕ್ಕೆ ಕಾರಣವಾಗಬಹುದು.
ಅಡುಗೆಮನೆಯು ಮನೆಯ ಒಂದು ಪ್ರಮುಖ ಭಾಗವಾಗಿದ್ದು, ವಾಸ್ತು ಶಾಸ್ತ್ರದ ಪ್ರಕಾರ ಅದರ ಸ್ಥಳವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಅಡುಗೆಮನೆಯು ತಪ್ಪು ದಿಕ್ಕಿನಲ್ಲಿದ್ದರೆ, ಅದು ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ; ‘ಮ್ಯಾಕ್ಸಿ’ಯ ಶಿವ ಭಕ್ತಿಗೆ ನೆಟ್ಟಿಗರು ಫಿದಾ
ಮಲಗುವ ಕೋಣೆ ಮನೆಯಲ್ಲಿ ಒಬ್ಬ ವ್ಯಕ್ತಿಯು ವಿಶ್ರಾಂತಿ ಪಡೆಯುವ ಮತ್ತು ಚೈತನ್ಯಶೀಲನಾಗಿರುವ ಸ್ಥಳವಾಗಿದೆ. ಮಲಗುವ ಕೋಣೆ ತಪ್ಪು ದಿಕ್ಕಿನಲ್ಲಿದ್ದರೆ, ಅದು ನಿದ್ರೆಯ ಸಮಸ್ಯೆಗಳು, ಒತ್ತಡ ಮತ್ತು ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ವಾಸ್ತು ಪ್ರಕಾರ ಶೌಚಾಲಯದ ಸ್ಥಳವೂ ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಶೌಚಾಲಯವು ತಪ್ಪು ದಿಕ್ಕಿನಲ್ಲಿದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಅದು ಕುಟುಂಬ ಸದಸ್ಯರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು,ಮನೆಯನ್ನು ಸ್ವಚ್ಛವಾಗಿಡಬೇಕು, ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ತಪ್ಪಿಸಬೇಕು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ