AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸ್ತು ಸಲಹೆ: ಮಲಗುವಾಗ ದಿಂಬಿನ ಕೆಳಗೆ ಈ ವಸ್ತುಗಳನ್ನು ತಪ್ಪಾಗಿಯೂ ಇಡಬೇಡಿ!

ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವಾಗ ದಿಂಬಿನ ಕೆಳಗೆ ಇಡುವ ವಸ್ತುಗಳು ನಮ್ಮ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ. ಪರ್ಸ್, ಹಳೆಯ ಬಿಲ್‌, ಕೀಲಿಗಳು, ಗಡಿಯಾರ, ಮೊಬೈಲ್ ಮತ್ತು ಪುಸ್ತಕಗಳನ್ನು ದಿಂಬಿನ ಕೆಳಗೆ ಇಡುವುದು ಅಶುಭ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ಹಣಕಾಸಿನ ಸಮಸ್ಯೆಗಳು ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಶಾಂತಿ ಮತ್ತು ಸಮೃದ್ಧಿಗೆ ಈ ಅಭ್ಯಾಸಗಳನ್ನು ತ್ಯಜಿಸಿ.

ವಾಸ್ತು ಸಲಹೆ: ಮಲಗುವಾಗ ದಿಂಬಿನ ಕೆಳಗೆ ಈ ವಸ್ತುಗಳನ್ನು ತಪ್ಪಾಗಿಯೂ ಇಡಬೇಡಿ!
ವಾಸ್ತು ಸಲಹೆImage Credit source: Getty Images
ಅಕ್ಷತಾ ವರ್ಕಾಡಿ
|

Updated on:Oct 28, 2026 | 7:56 AM

Share

ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ವಸ್ತುಗಳು ನಮ್ಮ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತವೆ. ಅನೇಕರಿಗೆ ಮಲಗುವಾಗ ತಮ್ಮ ಬೆಲೆಬಾಳುವ ಅಥವಾ ನಿತ್ಯ ಬಳಕೆಯ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ, ಶಾಸ್ತ್ರಗಳ ಪ್ರಕಾರ ದಿಂಬಿನ ಕೆಳಗೆ ಕೆಲವು ನಿರ್ದಿಷ್ಟ ವಸ್ತುಗಳನ್ನು ಇಟ್ಟು ಮಲಗುವುದು ಅಶುಭ ಹಾಗೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ದಿಂಬಿನ ಕೆಳಗೆ ಹಣದ ಪರ್ಸ್ ಅಥವಾ ಹಳೆಯ ಬಿಲ್ಲುಗಳನ್ನು ಇಡದಿರಿ:

ಮಲಗುವಾಗ ಕೈಚೀಲವನ್ನು (Wallet/Purse) ದಿಂಬಿನ ಕೆಳಗೆ ಇಡುವುದು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ಹಳೆಯ ಬಿಲ್​ ಅಥವಾ ರಸೀದಿಗಳನ್ನು ದಿಂಬಿನ ಅಡಿಯಲ್ಲಿಡುವುದು ಹಣಕಾಸಿನ ಚಿಂತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಳೆಯ ಬಿಲ್ಲುಗಳನ್ನು ಫೈಲ್‌ನಲ್ಲಿ ತೆಗೆದಿಡಿ ಅಥವಾ ಅಗತ್ಯವಿಲ್ಲದಿದ್ದರೆ ಬಿಸಾಕಿ.

ಕೀಲಿಗಳು ಮತ್ತು ಗಡಿಯಾರಗಳನ್ನು ಇಡುವುದು ಅಶುಭ:

ಮನೆ, ವಾಹನ ಅಥವಾ ಲಾಕರ್‌ನ ಕೀಲಿಗಳನ್ನು (Keys) ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಮನೆಯಲ್ಲಿ ಮಾನಸಿಕ ಒತ್ತಡದ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಹಾಗೆಯೇ, ವಾಚ್ ಅಥವಾ ಗಡಿಯಾರವನ್ನು ದಿಂಬಿನ ಬಳಿ ಇಡುವುದರಿಂದ ಮನಸ್ಸು ಚಂಚಲಗೊಂಡು, ನಿದ್ರಾಹೀನತೆ ಹಾಗೂ ಅಶಾಂತಿ ಉಂಟಾಗುತ್ತದೆ.

ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಮೊಬೈಲ್ ಫೋನ್ ಮತ್ತು ಪುಸ್ತಕಗಳ ಬಳಕೆಯ ಅಭ್ಯಾಸ ತಪ್ಪಿಸಿ:

ತಡರಾತ್ರಿಯವರೆಗೆ ಮೊಬೈಲ್ ಬಳಸಿ ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದು ಸಕಾರಾತ್ಮಕ ಶಕ್ತಿಯನ್ನು ಕುಗ್ಗಿಸುತ್ತದೆ. ಮತ್ತೊಂದೆಡೆ, ಓದುತ್ತಾ ನಿದ್ರೆಗೆ ಜಾರಿ ಪುಸ್ತಕಗಳನ್ನು ದಿಂಬಿನ ಕೆಳಗೆ ಇಡುವುದು ಸೂಕ್ತವಲ್ಲ. ಪುಸ್ತಕಗಳು ಜ್ಞಾನದೇವತೆ ಸರಸ್ವತಿಯ ಸಂಕೇತವಾಗಿದ್ದು, ಹೀಗೆ ಮಾಡುವುದರಿಂದ ಏಕಾಗ್ರತೆ ಹಾಗೂ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:55 am, Wed, 28 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More