ನಮ್ಮ ಪುಟ್ಟ ಕುಟುಂಬಕ್ಕೊಂದು ಕಾರು ಬೇಕು ಎಂಬುದು ಎಲ್ಲರ ಕನಸು. ಅಂದರಂತೆಯೇ ಪ್ರತಿಯೊಬ್ಬರೂ ತಮ್ಮ ಬಜೆಟ್‌ಗೆ ಅನುಗುಣವಾಗಿ ಕಾರು ಖರೀದಿಸುತ್ತಿದ್ದಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕಾರು ಖರೀದಿಸುವಾಗ ವಾಸ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂಬ ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಿಶೇಷ ವಸ್ತುಗಳನ್ನು ನಿಮ್ಮ ಕಾರಿನಲ್ಲಿ ಇಡುವುದು ತುಂಬಾ ಒಳ್ಳೆಯದು. ಜೊತೆಗೆ ಯಾವ ವಸ್ತುವನ್ನು ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಎಲ್ಲರೂ ತಮ್ಮ ಕಾರಿನಲ್ಲಿ ಕೆಲವು ದೇವರ ಚಿತ್ರಗಳನ್ನು ಇಟ್ಟುಕೊಳ್ಳುವುದನ್ನು ಕಾಣಬಹುದು. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಸಣ್ಣ ವಿಗ್ರಹವನ್ನು ಕಾರಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನಿಗೆ ಕೇತುವಿನ ಸಂಬಂಧವಿದೆ. ಹಾಗಾಗಿ ಕಾರಿನಲ್ಲಿ ಗಣೇಶನ ಮೂರ್ತಿ ಇದ್ದರೆ ಅಪಘಾತಗಳ ಸಮಸ್ಯೆ ದೂರವಾಗುತ್ತದೆ. ಅದೂ ಅಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಹನುಮಂತನ ಮೂರ್ತಿಯನ್ನು ಕಾರಿನಲ್ಲಿ ಪ್ರತಿಷ್ಠಾಪಿಸುವುದು ಶುಭ. ಕಾರಿನಲ್ಲಿ ಪ್ರಯಾಣಿಸುವಾಗ ಎದುರಾಗುವ ಎಲ್ಲಾ ತೊಂದರೆಗಳನ್ನು ಹನುಮಂತ ನಿವಾರಿಸುತ್ತಾರೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಈ ಫೋಟೋಗಳನ್ನು ಮನೆಯಲ್ಲಿ ಇಡುವುದು, ಸಮಸ್ಯೆಯನ್ನು ನೀವೇ ಬರಮಾಡಿಕೊಂಡಂತೆ
ಸಾರಯುಕ್ತ ತೈಲ:
ಕಾರಿನಲ್ಲಿ ಸಣ್ಣ ಬಾಟಲಿಯ ಸಾರಯುಕ್ತ ತೈಲವನ್ನು ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಧನಾತ್ಮಕತೆಯ ಸಂಕೇತವಾಗಿದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಇದರ ಸುವಾಸನೆಯು ಕಾರು ಪ್ರಯಾಣಿಕರನ್ನು ಸುಸ್ತಾಗದಂತೆ ಮಾಡುತ್ತದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಆಮೆ ಆಟಿಕೆ:
ಕಾರಿನಲ್ಲಿ ಸಣ್ಣ ಆಮೆ ಆಟಿಕೆ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಮೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಯಾವುದೇ ಮುರಿದ ವಸ್ತುಗಳನ್ನು ಕಾರಿನಲ್ಲಿ ಇಡಬೇಡಿ. ಕಾರಿನ ಕಿಟಕಿಗಳು, ಕಾರ್ಪೆಟ್, ಸೀಟುಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ಇದು ನಿಮಗೆ ಶಾಂತಿಯನ್ನು ನೀಡುತ್ತದೆ.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: