Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯಕ್ಕೆ ಹೋದಾಗ ಈ ಸ್ಥಳಗಳಿಗೆ ಮರೆಯದೇ ಭೇಟಿ ನೀಡಿ

ನೀವು ಕೂಡ ಮಂತ್ರಾಲಯಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರೆ ಅಥವಾ ಈ ಮೊದಲೇ ಅಲ್ಲಿಗೆ ಹೋಗಿ ಬಂದಿದ್ದರೆ ಮುಂದಿನ ಬಾರಿ ಅಲ್ಲಿಗೆ ಹೋಗುವಾಗ ಮಂತ್ರಾಲಯದ ಸುತ್ತ ಮುತ್ತ ನೋಡಬಹುದಾದ ಸ್ಥಳಗಳನ್ನು ಪಟ್ಟಿ ಮಾಡಿಕೊಳ್ಳಿ. ನೀವು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರೋ ಅಥವಾ ನಿಮ್ಮದೇ ಸ್ವಂತ ವಾಹನದಲ್ಲಿ ಪ್ರಯಾಣ ಮಾಡುತ್ತಿರೋ ಎಂಬುದು ತುಂಬಾ ಮುಖ್ಯವಾದರೂ ಕೂಡ ಸರಿಯಾದ ಸಿದ್ಧತೆ ಮಾಡಿಕೊಂಡಲ್ಲಿ ಎಲ್ಲವೂ ಸಾಧ್ಯವಾಗುತ್ತದೆ.

ಮಂತ್ರಾಲಯಕ್ಕೆ ಹೋದಾಗ ಈ ಸ್ಥಳಗಳಿಗೆ ಮರೆಯದೇ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2023 | 6:33 PM

ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯವಾಗಿದೆ. ಅದು ನಿಮಗೂ ತಿಳಿದಿದೆ. ನೀವು ಕೂಡ ಅಲ್ಲಿಗೆ ಹೋಗಲು ತಯಾರಿ ನಡೆಸುತ್ತಿದ್ದರೆ ಅಥವಾ ಈ ಮೊದಲೇ ಅಲ್ಲಿಗೆ ಹೋಗಿ ಬಂದಿದ್ದರೆ ಮುಂದಿನ ಬಾರಿ ಅಲ್ಲಿಗೆ ಹೋಗುವಾಗ ಮಂತ್ರಾಲಯದ ಸುತ್ತ ಮುತ್ತ ನೋಡಬಹುದಾದ ಸ್ಥಳಗಳನ್ನು ಪಟ್ಟಿ ಮಾಡಿಕೊಳ್ಳಿ. ನೀವು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರೋ ಅಥವಾ ನಿಮ್ಮದೇ ಸ್ವಂತ ವಾಹನದಲ್ಲಿ ಪ್ರಯಾಣ ಮಾಡುತ್ತಿರೋ ಎಂಬುದು ತುಂಬಾ ಮುಖ್ಯವಾದರೂ ಕೂಡ ಸರಿಯಾದ ಸಿದ್ಧತೆ ಮಾಡಿಕೊಂಡಲ್ಲಿ ಎಲ್ಲವೂ ಸಾಧ್ಯವಾಗುತ್ತದೆ.

ಮಂತ್ರಾಲಯದಲ್ಲಿ ನೋಡಬಹುದಾದ ಸ್ಥಳಗಳು ಯಾವವು?

ರಾಯಚೂರು ಮೂಲಕ ಮಂತ್ರಾಲಯ ಪ್ರವೇಶಿಸುವ ಮುಖ್ಯ ದ್ವಾರದ ಮುಂದೆ ಸುಮಾರು 32 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಸ್ವಾಮಿ ವಿಗ್ರಹವಿದೆ. ಇದು ಮಂತ್ರಾಲಯದಿಂದ ಕೇವಲ 550 ಮೀ. ದೂರವಿದ್ದು ಕಾಲ್ನಡಿಗೆಯಲ್ಲಿ ನೀವು ಇಲ್ಲಿಗೆ ಭೇಟಿ ನೀಡಬಹುದು. ಇದನ್ನು 2021ರ ಮಾರ್ಚ್ 14, 15 ರಂದು ಈಗಿನ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಇದನ್ನು ನಿರ್ಮಿಸಿದ್ದು ಈಗ ಈ ಮೂರ್ತಿಯ ಮುಂದೆ ಇರುವ ಸುಮಾರು ಆರು ಎಕರೆ ಪ್ರದೇಶದಲ್ಲಿ ಶ್ರೀ ಅಭಯ ರಾಮನ 33 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಕೆಲಸ ಭರದಿಂದ ಸಾಗಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ ವೇಳೆಗೆ ಇಲ್ಲಿ ಶ್ರೀರಾಮನ ಬೃಹತ್‌ ಮೂರ್ತಿ ಪ್ರತಿಷ್ಠಾಪಿಸಲು ಶ್ರೀಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ

ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ತುಂಗಭದ್ರಾ ನದಿಯ ಇನ್ನೊಂದು ಬದಿಯಲ್ಲಿದೆ. ಇದು ಕರ್ನಾಟಕದಲ್ಲಿ ಪ್ರಮುಖ ಹಾಗೂ ಶಕ್ತಿಶಾಲಿ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಒಂದಾಗಿದೆ. ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ತೆರಳುವ ಮೊದಲು 12 ವರ್ಷಗಳ ಕಾಲ ಈ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ಈ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿರುವ ಆಂಜನೇಯನ ಮೂರ್ತಿಯು ಐದು ತಲೆಗಳನ್ನು ಹೊಂದಿದ್ದು ಇದನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇಲ್ಲಿಯೇ ಹೊರಗೆ ನಿಮಗೆ ಹನುಮಂತನ ಪಾದರಕ್ಷೆಗಳು ಸಹ ಕಾಣ ಸಿಗುತ್ತದೆ. ಈ ಸ್ಥಳಕ್ಕೆ ಹೋಗಲು ನಿಮಗೆ ಮಂತ್ರಾಲಯದಿಂದ ಹಲವಾರು ಶೇರ್ ಆಟೋ ಗಳು ಲಭ್ಯವಿದೆ.

ಬಿಚ್ಚಾಲೆ

ಮಂತ್ರಾಲಯದಿಂದ 21 ಕಿ. ಮೀ ದೂರದಲ್ಲಿರುವ ಬಿಚ್ಚಾಲೆ ಎಂಬ ಗ್ರಾಮವು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಯಾಯಿಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಲ್ಲಿ ರಾಘವೇಂದ್ರ ಸ್ವಾಮಿಗಳ ಮಠವಿದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂದೂ ಸಹ ಕರೆಯುತ್ತಾರೆ. 2009 ರಲ್ಲಿ, ಮಂತ್ರಾಲಯಕ್ಕೆ ಅಪ್ಪಳಿಸಿದ ಪ್ರವಾಹವು ಇಡೀ ಬಿಚ್ಚಾಲೆ ಗ್ರಾಮವನ್ನು ಮುಳುಗಿಸಿತ್ತು ಆದರೂ ಇಲ್ಲಿನ ಕುರುಹುಗಳನ್ನು ಇಂದಿಗೂ ನೋಡಬಹುದು. ಗುರು ರಾಘವೇಂದ್ರರು ತಮ್ಮ ಮುಖ್ಯ ಶಿಷ್ಯರೊಂದಿಗೆ ಕೆಲವು ವರ್ಷಗಳ ಕಾಲ ಈ ಪವಿತ್ರ ಸ್ಥಳದಲ್ಲಿ ವಾಸಿಸಿದ್ದರು ಎನ್ನುವ ಉಲ್ಲೇಖಗಳಿವೆ. ಅಪ್ಪಣಾಚಾರ್ಯರು ಮತ್ತು ರಾಘವೇಂದ್ರ ಸ್ವಾಮಿಗಳು ಈ ಸ್ಥಳದಲ್ಲಿ ಕೆಲವು ಪವಿತ್ರ ಗ್ರಂಥಗಳನ್ನು ಸಹ ಬರೆದಿದ್ದಾರೆ ಎಂಬುದನ್ನು ಪುರಾಣಗಳು ಹೇಳುತ್ತವೆ. ಕೆಲವರು ಬಿಚ್ಚಾಲೆ ಮಂತ್ರಾಲಯ ದೇವಸ್ಥಾನವನ್ನು ಮೂರನೇ ಮಂತ್ರಾಲಯವೆಂದು, ಇನ್ನು ಕೆಲವರು ಎರಡನೇ ಮಂತ್ರಾಲಯವೆಂದು ಕರೆಯುತ್ತಾರೆ.

ಲಕ್ಷ್ಮೀ ವೆಂಕಟೇಶ ದೇವಸ್ಥಾನ

ಇದು ಹಳೆಯ ದೇವಾಲಯವಾಗಿದ್ದು ಮಂತ್ರಾಲಯದ ಮುಖ್ಯ ದೇವಾಲಯಕ್ಕೆ ಬಹಳ ಹತ್ತಿರದಲ್ಲಿ (0.5 ಕಿ.ಮೀ) ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಹೋಗಲು ನಿಮಗೆ ಅಲ್ಲಲ್ಲಿ ಮಾರ್ಗ ಸೂಚಿಗಳನ್ನು ಹಾಕಲಾಗಿದೆ. ಇದರ ಸಹಾಯದಿಂದ ನೀವು ಸುಲಭವಾಗಿ ದರ್ಶನ ಮುಗಿಸಿಕೊಳ್ಳಬಹುದು. ಇಲ್ಲಿಗೆ ನೀವು ಕಾಲ್ನಡಿಗೆಯಲ್ಲಿಯೇ ಹೋಗಿ ಬರಬಹುದು.

ಇದನ್ನೂ ಓದಿ: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ 34 ದಿನದಲ್ಲೇ ಕೋಟಿ ಒಡೆಯ: ಇತಿ​ಹಾ​ಸ​ದ​ಲ್ಲಿಯೇ ರಾಯರ ಹುಂಡಿಯಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರ​ಹ

ಗುರು ರಾಯರ ಬೃಂದಾವನ

ಇವರ ಮೂಲ ಬೃಂದಾವನ ತುಂಗಭದ್ರಾ ನದಿ ತಟದಲ್ಲಿದೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆವರೆಗೂ ಭವ್ಯ ಆರಾಧನೆ ನಡೆಯುತ್ತದೆ. ನೀವು ಇಲ್ಲಿಗೆ ಭೇಟಿ ನೀಡಲೇ ಬೇಕು. ರಾಯರ ಆಶೀರ್ವಾದ ಪಡೆಯಲೇ ಬೇಕು.

ಇನ್ನು ನೀವು ಮಂತ್ರಾಲಯಕ್ಕೆ ಹೋಗುವಾಗ ನಿಮ್ಮದೇ ಸ್ವಂತ ವಾಹನದಲ್ಲಿ ಹೋಗುವುದಾದರೆ ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡುವುದು ತುಂಬಾ ಸುಲಭ, ಜೊತೆಗೆ ನೀವಿಲ್ಲಿ ಶೇರ್ ಆಟೋಗಳ ಮೂಲಕವೂ ಬೇರೆ ಬೇರೆ ಸ್ಥಳಗಳಿಗೆ ಹೋಗಿಬರಬಹುದು. ಇಲ್ಲಿ ಬಸ್ ಲಭ್ಯತೆ ಅಷ್ಟು ಖಚಿತವಾಗಿಲ್ಲ. ಈ ವಿಡಿಯೋವನ್ನು thefoodiegirlvibha ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇಷ್ಟು ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಹಲವರು ಧನ್ಯವಾದ ವ್ಯಕ್ತ ಪಡಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !