
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮನೆಯ ದಿನನಿತ್ಯದ ಕೆಲಸಗಳಿಗೂ ಸಹ ನಿರ್ದಿಷ್ಟ ದಿನಗಳು ಮತ್ತು ಸಮಯಗಳು ಮಹತ್ವ ಹೊಂದಿವೆ. ಅದರಲ್ಲೂ ಬಟ್ಟೆ ಒಗೆಯುವಂತಹ ಸಾಮಾನ್ಯ ಕೆಲಸವೂ ವಾರದ ಕೆಲ ದಿನಗಳಲ್ಲಿ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಇಂತಹ ದಿನಗಳಲ್ಲಿ ಬಟ್ಟೆ ಒಗೆಯುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದು ಹಾಗೂ ಆರ್ಥಿಕ ಮತ್ತು ಮಾನಸಿಕ ತೊಂದರೆಗಳು ಎದುರಾಗಬಹುದು ಎಂಬ ನಂಬಿಕೆಯಿದೆ.
ಗುರುವಾರವನ್ನು ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ ದಿನ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ಸಂತೋಷ, ಸಂಪತ್ತು, ಜ್ಞಾನ ಮತ್ತು ಮಕ್ಕಳ ಯೋಗದ ಸಂಕೇತವಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ದಿನ ಬಟ್ಟೆ ಒಗೆಯುವುದು ಅಥವಾ ಸೋಪು–ರಸಾಯನಿಕಗಳನ್ನು ಬಳಸುವುದರಿಂದ ಜಾತಕದಲ್ಲಿನ ಗುರು ಗ್ರಹ ದುರ್ಬಲಗೊಳ್ಳಬಹುದು. ಇದರಿಂದ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ ಎಂದು ನಂಬಲಾಗುತ್ತದೆ.
ಮಂಗಳವಾರವು ಶಕ್ತಿ, ಧೈರ್ಯ ಮತ್ತು ಉತ್ಸಾಹದ ದಿನ. ಈ ದಿನ ಬಟ್ಟೆ ಒಗೆಯುವುದರಿಂದ ಅನಗತ್ಯ ಸಂಘರ್ಷಗಳು ಉಂಟಾಗಬಹುದು ಹಾಗೂ ಮನೆಯವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತವೆ. ವಿಶೇಷವಾಗಿ ಕುಟುಂಬದಲ್ಲಿ ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆಲವರು ನಂಬುತ್ತಾರೆ.
ಶನಿವಾರವನ್ನು ಶನಿ ದೇವರ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಎಣ್ಣೆ ಸಂಬಂಧಿತ ಕೆಲಸಗಳು, ಹಳೆಯ ವಸ್ತುಗಳ ಬಳಕೆ ಅಥವಾ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಶನಿವಾರ ಹಳೆಯ ಬಟ್ಟೆಗಳನ್ನು ಒಗೆಯುವುದು ಅಥವಾ ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುವುದು ಶನಿ ದೋಷಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ನಂತರ ಬಟ್ಟೆಗಳನ್ನು ಹೊರಗೆ ಒಗೆಯುವುದು ಅಥವಾ ಒಣಗಿಸುವುದು ಅಶುಭ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ವಾತಾವರಣವು ನಕಾರಾತ್ಮಕ ಶಕ್ತಿಗೆ ಹೆಚ್ಚು ಒಳಗಾಗಿರುತ್ತದೆ ಎಂದು ನಂಬಲಾಗುತ್ತದೆ, ಮತ್ತು ಆ ಶಕ್ತಿ ಬಟ್ಟೆಗಳ ಮೂಲಕ ದೇಹಕ್ಕೆ ತಲುಪಬಹುದು ಎಂದು ಹೇಳುತ್ತಾರೆ. ಇದರ ಜೊತೆಗೆ, ವೈಜ್ಞಾನಿಕ ದೃಷ್ಟಿಯಿಂದಲೂ ಸೂರ್ಯನ ಬೆಳಕಿನ (UV ಕಿರಣಗಳ) ಕೊರತೆಯಿಂದ ಬಟ್ಟೆಗಳ ಮೇಲೆ ಸೂಕ್ಷ್ಮಜೀವಿಗಳು ಉಳಿಯುವ ಸಾಧ್ಯತೆ ಇರುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Tue, 27 January 26