Astrological Warning: ಮಾರ್ಚ್ 19 ರ ವರೆಗೆ ಈ ಮೂರು ರಾಶಿಯವರು ಕಪ್ಪು ಬಟ್ಟೆ ಧರಿಸಲೇಬೇಡಿ; ಅಪಾಯ ತಪ್ಪಿದ್ದಲ್ಲ!
ಬಣ್ಣಗಳು ನಮ್ಮ ಮನಸ್ಸು ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತವೆ. ಯುಗಾದಿಯ (ಮಾರ್ಚ್ 19) ತನಕ ಮೇಷ, ಕರ್ಕಾಟಕ, ಕನ್ಯಾ ರಾಶಿಯವರು ಕಪ್ಪು ಬಟ್ಟೆ ಧರಿಸುವುದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಶುಭವಲ್ಲ ಎಂದು ಹೇಳಲಾಗಿದೆ. ಇದು ಮಾನಸಿಕ ಒತ್ತಡ, ಅನಾರೋಗ್ಯ, ನಿರ್ಲಕ್ಷ್ಯ ಮತ್ತು ಕಾರ್ಯಗಳಲ್ಲಿ ಹಿನ್ನಡೆಗೆ ಕಾರಣವಾಗಬಹುದು. ಈ ಮೂರು ರಾಶಿಗಳಿಗೆ ಕಪ್ಪು ಬಣ್ಣದ ಪ್ರಭಾವ ಅಶುಭಕರ.

ಯುಗಾದಿ ಅಂದರೆ ಮಾರ್ಚ್ 19 ರ ತನಕ, 12 ರಾಶಿಗಳ ಪೈಕಿ ಈ ಮೂರು ರಾಶಿಯವರು ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ಅಷ್ಟಾಗಿ ಶುಭವಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ. ಕಪ್ಪು ಬಟ್ಟೆ ಉದ್ಯೋಗದ ಸಮವಸ್ತ್ರ ಅಥವಾ ಯಾವುದೇ ನಿರ್ದಿಷ್ಟ ಅಗತ್ಯಕ್ಕಾಗಿದ್ದರೆ ಅದು ಬೇರೆ ವಿಷಯ. ಆದರೆ, ಸಾಮಾನ್ಯ ದಿನಗಳಲ್ಲಿ ಕಪ್ಪು ಬಟ್ಟೆಯ ಬಳಕೆಯನ್ನು ಸೀಮಿತಗೊಳಿಸುವುದು ಉತ್ತಮ ಎಂದು ತಿಳಿಸಿದ್ದಾರೆ. ನಾವು ಧರಿಸುವ ಬಟ್ಟೆಗಳು ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ, ಕೆಲವೊಮ್ಮೆ ನಮ್ಮ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನೂ ಹೊಂದಿರಬಹುದು. ಕಪ್ಪು ಬಣ್ಣವು ಏಳು ಬಣ್ಣಗಳಲ್ಲಿ ಶನಿಯ ಪ್ರತೀಕವಾಗಿದೆ. ವಿಶ್ವದಲ್ಲಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಇರುವಂತೆ, ಬಟ್ಟೆ ಮತ್ತು ಬಣ್ಣಗಳಿಗೂ ತಮ್ಮದೇ ಆದ ಪ್ರಭಾವವಿದೆ. ಈ ಬಣ್ಣಗಳ ಪ್ರಭಾವವು 12 ರಾಶಿಗಳ ಮೇಲೂ ಇರುತ್ತದೆ.
ಕಪ್ಪು ಬಣ್ಣ ಎಲ್ಲರಿಗೂ ಶುಭವಲ್ಲ, ಕೆಲವರಿಗೆ ಶುಭಕರವಾಗಿದ್ದರೆ, ಇನ್ನು ಕೆಲವರಿಗೆ ಅಶುಭಕರವಾಗಿರುತ್ತದೆ. ಕಪ್ಪು ಬಣ್ಣದ ಅತಿಯಾದ ಬಳಕೆಯು ಮಾನಸಿಕ ಒತ್ತಡ, ಅನಾರೋಗ್ಯ, ಚಂಚಲತೆ ಮತ್ತು ನಿರ್ಲಕ್ಷ್ಯದಂತಹ ಸಮಸ್ಯೆಗಳನ್ನು ತರಬಹುದು. ಆದಾಗ್ಯೂ, ಅಯ್ಯಪ್ಪ ಸ್ವಾಮಿ ವ್ರತದಂತಹ ಸಂದರ್ಭಗಳಲ್ಲಿ ಕಪ್ಪು ಬಣ್ಣಕ್ಕೆ ಒಂದು ವಿಶೇಷ ಆಧ್ಯಾತ್ಮಿಕ ಮಹತ್ವವಿದೆ, ಅಲ್ಲಿ ಅದು ತ್ಯಾಗ ಮತ್ತು ಭಗವಂತನ ಕಡೆಗೆ ಗಮನ ಹರಿಸುವುದನ್ನು ಸಂಕೇತಿಸುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಮೂರು ನಿರ್ದಿಷ್ಟ ರಾಶಿಗಳಿಗೆ ಯುಗಾದಿಯ ತನಕ ಕಪ್ಪು ಬಣ್ಣದ ಬಳಕೆಯು ಅಷ್ಟು ಸೂಕ್ತವಲ್ಲ.
ಈ ಮೂರು ರಾಶಿಗಳು ಯಾವುವು:
ಮೇಷ ರಾಶಿ:
ಮೇಷ ರಾಶಿಯ ಅಧಿಪತಿ ಕುಜ (ಮಂಗಳ). ಕುಜ ಅಗ್ನಿ ತತ್ವದ ಗ್ರಹ. ಮೇಷ ರಾಶಿಯವರು ಸಾಮಾನ್ಯವಾಗಿ ಶಕ್ತಿವಂತರು, ಆತುರ ಮತ್ತು ಆವೇಶದಿಂದ ಕೂಡಿದ ನಿರ್ಧಾರಗಳನ್ನು ತೆಗೆದುಕೊಳ್ಳುವವರು. ಅವರಿಗೆ ಸಾಧನೆ ಮಾಡುವ ಛಲವಿರುತ್ತದೆ. ಯುಗಾದಿಯ ತನಕ ನೀವು ಕೈಗೊಳ್ಳುವ ಯಾವುದೇ ಕಾರ್ಯಗಳು ದ್ವಿಗುಣಗೊಳ್ಳುತ್ತವೆ ಮತ್ತು ಅದೃಷ್ಟವು ಕೂಡಿ ಬರುತ್ತದೆ. ಆದರೆ, ಈ ಸಮಯದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಿದರೆ ನಿಮ್ಮ ಸಂಕಲ್ಪಗಳು ಹಿನ್ನಡೆ ಅನುಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕೆಂಪು, ಗುಲಾಬಿ ಅಥವಾ ಕಿತ್ತಳೆ ಬಣ್ಣದಂತಹ ಶುಭಕರ ಬಣ್ಣಗಳನ್ನು ಧರಿಸುವುದು ಉತ್ತಮ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರನು ಮನಃಕಾರಕ. ಹಾಲು, ಅನ್ನ, ಅಕ್ಕಿ, ಮತ್ತು ಬಿಳಿ ವಸ್ತ್ರಗಳಿಗೆ ಚಂದ್ರನ ಅಂಶ ಇರುತ್ತದೆ. ಕರ್ಕಾಟಕ ರಾಶಿಯವರು ಯುಗಾದಿಯ ತನಕ ಹೆಚ್ಚು ಕಪ್ಪು ಬಟ್ಟೆಗಳನ್ನು ಧರಿಸುವುದು ಅಷ್ಟಾಗಿ ಶುಭವಲ್ಲ. ಇದು ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ
ಕನ್ಯಾ ರಾಶಿ:
ಕನ್ಯಾ ರಾಶಿಯ ಅಧಿಪತಿ ಬುಧ. ಕನ್ಯಾ ರಾಶಿಯವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಯುಗಾದಿಯ ತನಕ ಕಪ್ಪು ಬಟ್ಟೆಗಳನ್ನು ಧರಿಸಿದರೆ, ಅದು ಮಾನಸಿಕ ಫಲಿತಾಂಶಗಳನ್ನು ಕಡಿಮೆ ಮಾಡಬಹುದು. ವಿದ್ಯಾರ್ಥಿಗಳು, ಉದ್ಯೋಗಸ್ಥರು, ಅಥವಾ ಸರ್ಕಾರಿ ನೌಕರರಾಗಿರಲಿ, ಅವರಿಗೆ ಅಷ್ಟು ಶುಭಕರವಾಗಿರುವುದಿಲ್ಲ. ಇದರಿಂದ ಮನೆಯಲ್ಲಿ ಅಶಾಂತಿ, ಟೆನ್ಶನ್, ಮತ್ತು ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಹೊಂದಾಣಿಕೆಯ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಮಹಿಳೆಯರಿಗೆ ಅಥವಾ ಪುರುಷರಿಗೆ ಎಂದು ನಿರ್ದಿಷ್ಟವಾಗಿಲ್ಲ, ಎಲ್ಲರಿಗೂ ಅನ್ವಯಿಸುತ್ತದೆ.
ಹಾಗಾಗಿ, 12 ರಾಶಿಗಳಲ್ಲಿ ಮೇಷ ರಾಶಿ, ಕರ್ಕಾಟಕ ರಾಶಿ, ಮತ್ತು ಕನ್ಯಾ ರಾಶಿಯವರು ಯುಗಾದಿ ಮತ್ತು ಚೈತ್ರ ಮಾಸದ ತನಕ ಕಪ್ಪು ಬಟ್ಟೆಗಳನ್ನು ಹೆಚ್ಚಾಗಿ ಉಪಯೋಗಿಸುವುದನ್ನು ತಪ್ಪಿಸುವುದು ಶುಭಕರವೆಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
