ವಾಸ್ತು ಶಾಸ್ತ್ರದಲ್ಲಿ ಶಮಿ ಸಸ್ಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಿಂದಿನ ಕಾಲದಿಂದಲೂ ತುಳಸಿ ಗಿಡದಂತೆ, ಶಮಿ ಸಸ್ಯವನ್ನು ಕೂಡ ಪೂಜಿಸುವುದು ರೂಢಿಯಲ್ಲಿದೆ. ಆದ್ದರಿಂದ, ಮನೆಯಲ್ಲಿ ಶಮಿ ಗಿಡವನ್ನು ನೆಡುವುದು ತುಂಬಾ ಶುಭವೆಂದು ಹೇಳಲಾಗುತ್ತದೆ. ಏಕೆಂದರೆ ಈ ಸಸ್ಯವು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ, ಹಾಗಾಗಿ ಇದನ್ನು ಮನೆಯಲ್ಲಿ ನೆಡುವುದು ಅದೃಷ್ಟ ಸಂಕೇತವಾಗಿದೆ. ಹಾಗಾದರೆ ಈ ಗಿಡವನ್ನು ನೆಡುವುದರ ಹಿಂದಿರುವ ಮಹತ್ವವೇನು? ಮನೆಯ ಯಾವ ಭಾಗದಲ್ಲಿ ಈ ಗಿಡವನ್ನು ನೆಡಬೇಕು? ಈ ಬಗ್ಗೆ ಮಾಹಿತಿ ಇಲ್ಲಿದೆ.
ತುಳಸಿಯಂತೆ, ಶಮಿಯೂ ಕೂಡ ತನ್ನದೇ ಆದ ಧಾರ್ಮಿಕ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಅಲ್ಲದೆ ಈ ಗಿಡ ತನ್ನ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವುದರ ಮೂಲಕ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಪುರಾಣಗಳ ಪ್ರಕಾರ, ಭಗವಾನ್ ರಾಮನು ಲಂಕಾ ಮೇಲೆ ದಾಳಿ ಮಾಡುವ ಮೊದಲು ಶಮಿ ಮರವನ್ನು ಪೂಜಿಸಿದ್ದನು ಮತ್ತು ಮಹಾಭಾರತದಲ್ಲಿ, ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಶಮಿ ಮರದಲ್ಲಿ ತಮ್ಮ ಆಯುಧಗಳನ್ನು ಅಡಗಿಸಿಟ್ಟಿದ್ದರು ಎಂಬ ಉಲ್ಲೇಖಗಳಿವೆ.
ಮನೆಯಲ್ಲಿ ಶಮಿ ಗಿಡವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಶಮಿ ಗಿಡವನ್ನು ನೆಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುವುದರ ಜೊತೆಗೆ ಶನಿ ದೇವನ ವಕ್ರ ಪ್ರಭಾವ ಕಡಿಮೆಯಾಗುತ್ತದೆ. ಇನ್ನು ಪುರಾಣಗಳ ಪ್ರಕಾರ ಶಿವನು ಶಮಿ ಮರದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ, ಆದ್ದರಿಂದ ಶಮಿ ಮರವನ್ನು ಪೂಜಿಸುವ ಮೂಲಕ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಶಮಿ ಎಲೆಗಳನ್ನು ಗಣೇಶ ಮತ್ತು ದುರ್ಗಾ ಮಾತೆಯ ಪೂಜೆಯಲ್ಲಿ ಬಳಸಲಾಗುತ್ತದೆ.
ವಾಸ್ತು ಪ್ರಕಾರ, ಶಮಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು. ಆದರೆ ಎಂದಿಗೂ ಮನೆಯ ಒಳಗೆ ನೆಡಬಾರದು. ಬದಲಿಗೆ ಶಮಿ ಗಿಡವನ್ನು ಮನೆಯ ಮುಖ್ಯ ದ್ವಾರ, ಉದ್ಯಾನ, ಟೆರೇಸ್ ಅಥವಾ ಬಾಲ್ಕನಿಯಂತಹ ತೆರೆದ ಸ್ಥಳದಲ್ಲಿ ನೆಡಬೇಕು. ಮನೆಯ ಮುಖ್ಯ ದ್ವಾರದ ಬಲ ಭಾಗದಲ್ಲಿ ಶಮಿ ಗಿಡವನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ನೀವು ಮನೆಯಿಂದ ಹೊರಗೆ ಹೋದಾಗಲೆಲ್ಲಾ, ಶಮಿ ಸಸ್ಯ ನಿಮ್ಮ ಬಲಭಾಗದಲ್ಲಿರುವ ರೀತಿಯಲ್ಲಿ ಅದನ್ನು ಮುಖ್ಯ ದ್ವಾರದಲ್ಲಿ ನೆಡಬೇಕು.
ಇದನ್ನೂ ಓದಿ: ಈ ದೇವಾಲಯಕ್ಕೆ ಹನುಮಾನ್ ಚಾಲೀಸ್ ಕೇಳಲು ವಿಶೇಷ ಭಕ್ತರು ಬರುತ್ತಾರೆ
ನೀವು ಟೆರೇಸ್ ನಲ್ಲಿ ಶಮಿ ಗಿಡವನ್ನು ನೆಡುತ್ತಿದ್ದರೆ ಅದನ್ನು ದಕ್ಷಿಣ ದಿಕ್ಕಿನಲ್ಲಿಯೇ ನೆಡಬೇಕು, ಇದು ಸಾಧ್ಯವಾಗದಿದ್ದರೆ ನೀವು ಶಮಿ ಸಸ್ಯವನ್ನು ಪೂರ್ವ ದಿಕ್ಕಿನಲ್ಲಿಯೂ ನೆಡಬಹುದು. ಶನಿವಾರ ಶಮಿ ಸಸಿಯನ್ನು ತಂದು ನೆಡುವುದು ಶುಭವೆಂದು ಪರಿಗಣಿಸಲಾಗಿದೆ. ತುಳಸಿಯಂತೆ, ಶಮಿ ಸಸ್ಯವನ್ನು ಪ್ರತಿದಿನ ಪೂಜಿಸುವುದು ಮತ್ತು ಅದರ ಮುಂದೆ ದೀಪ ಹಚ್ಚುವುದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಪ್ರತಿದಿನ ದೀಪವನ್ನು ಬೆಳಗಿಸಲು ಸಾಧ್ಯವಾಗದಿದ್ದರೆ, ಪ್ರತಿ ಶನಿವಾರ ಶಮಿ ಮರದ ಕೆಳಗೆ ದೀಪ ಬೆಳಗಿಸಿ. ಇದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ