Zodiac signs: ಈ ರಾಶಿಯವರು ಮನೆಯಲ್ಲಿಯೆ ಇರುವುದಕ್ಕೆ ಇಚ್ಛಿಸುತ್ತಾರೆ, ಅಲ್ಲೇ ಆನಂದ ಕಂಡುಕೊಳ್ಳುತ್ತಾರೆ
ವಾರಾಂತ್ಯದಲ್ಲಿ ಕೆಲವರು ಸಾಹಸ ಮಾಡುವುದನ್ನು ಬಯಸುತ್ತಾರೆ. ಇನ್ನು ಇತರರು ವಿಶ್ರಾಂತಿ ಬಯಸುತ್ತಾರೆ. ಮುಂದಿನ ಬಾರಿ ನೀವು ಸಹ ವಾರಾಂತ್ಯದಲ್ಲಿ ಹೀಗೆಲ್ಲಾ ಉಳಿಯ ಬಯಸುತ್ತೀರಿ ಅನ್ನುವುದಾದರೆ ನಿಮ್ಮ ಮನೆಯಲ್ಲಿ ಲಭ್ಯವಾಗುವ ಸೌಕರ್ಯದಲ್ಲಿ, ಅರ್ಹವಾದ ವಿಶ್ರಾಂತಿಯನ್ನು ಪಡೆಯಿರಿ.
ವಾರಾಂತ್ಯದಲ್ಲಿ (weekends) ಕೆಲವರು ಸಾಹಸ ಮಾಡುವುದನ್ನು ಬಯಸುತ್ತಾರೆ. ಇನ್ನು ಇತರರು ವಿಶ್ರಾಂತಿ ಬಯಸುತ್ತಾರೆ (relaxation). ವೃಷಭ, ಕರ್ಕ, ಕನ್ಯಾ, ಮಕರ ಮತ್ತು ಮೀನ ರಾಶಿ ಚಕ್ರದ (zodiac signs) ಚಿಹ್ನೆಯವರಿಗೆ ಮನೆಯೊಳಗೆಯೇ ಇರುವುದರಲ್ಲಿ ಆನಂದ ಕಾಣುತ್ತವೆ. ವೃಷಭ ರಾಶಿಯವರು ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾರೆ. ಕರ್ಕಾಟಕ ರಾಶಿಯವರು ಪ್ರೀತಿಪಾತ್ರರ ಜೊತೆ ಇರುವುದನ್ನು ಬಯಸುತ್ತಾರೆ. ಕನ್ಯಾ ರಾಶಿಯವರು ತಮ್ಮ ಮನೆಯ ವಾತಾವರಣವನ್ನು ಪರಿಪೂರ್ಣವಾಗಿಸಿಕೊಳ್ಳುತ್ತಾರೆ. ಮಕರ ರಾಶಿಯವರು ಮರೋತ್ಸಾಹ ತುಂಬಿಕೊಳ್ಳುತ್ತಾರೆ. ಮೀನ ರಾಶಿವರು ಶಾಂತಿಯನ್ನು ಬಯಸುತ್ತಾರೆ (Astrology). ವೃಶ್ಚಿಕ ರಾಶಿ ಜನ ಸ್ಥಿತಪ್ರಜ್ಞತೆಯನ್ನು ಗೌರವಿಸುತ್ತಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ:
ವೃಷಭ ರಾಶಿಯವರು ಮನೆಯಲ್ಲಿ ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸುತ್ತಾರೆ. ಅವರು ವಾರಾಂತ್ಯವನ್ನು ಬೆಚ್ಚಗೆ ಸ್ನಾನ ಮಾಡಿ, ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಅಡುಗೆ ಸ್ವಾದಗಳು ಅಥವಾ ಉತ್ತಮ ಪುಸ್ತಕದಲ್ಲಿ ಮುಳುಗುತ್ತಾರೆ.
ಮನೆಯಲ್ಲಿ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದನ್ನು ಕರ್ಕಾಟಕ ರಾಶಿಯವರು ಪ್ರೀತಿಸುತ್ತಾರೆ. ಅದು ರಾತ್ರಿ ವೇಳೆ ಸಿನಿಮಾ ನೋಡೋದು ಅಥವಾ ಬೋರ್ಡ್ ಆಟಗಳು ಆಡುವುದಾಗಿರುತ್ತೆ. ಅವರು ವಾರಾಂತ್ಯದಲ್ಲಿ ಹೃದಯ ಪೂರ್ವಕ ಸ್ನೇಹ ಸಂಪರ್ಕಗಳನ್ನು ಆನಂದಿಸುತ್ತಾರೆ.
ಕನ್ಯಾ ರಾಶಿಯವರು ತಮ್ಮ ಮನೆಯ ವಾತಾವರಣವನ್ನು ಪರಿಪೂರ್ಣವಾಗಿಡುವುದರಲ್ಲಿ ತೃಪ್ತಿ ಕಾಣುತ್ತಾರೆ. ಅವರು ವಾರಾಂತ್ಯದಲ್ಲಿ ಎಲ್ಲವನ್ನೂ ಸುವ್ಯವಸ್ತಗೊಳಿಸಬಹುದು, ಹೊಸ ಪಾಕ ವಿಧಾನಗಳನ್ನು ಪ್ರಯತ್ನಿಸಬಹುದು ಅಥವಾ ಸೃಜನಶೀಲ ಹವ್ಯಾಸಗಳನ್ನು ಅನ್ವೇಷಿಸಬಹುದು.
ಮಕರ ರಾಶಿಯವರು ಬಿಡುವಿಲ್ಲದ ವಾರದ ನಂತರ ರೀಚಾರ್ಜ್ ಆಗಲು ವಾರಾಂತ್ಯದ ಸಮಯವನ್ನು ವ್ಯಯಿಸಲು ಬಯಸುತ್ತಾರೆ. ಅವರು ಚೆನ್ನಾಗಿ ನಿದ್ರಿಸುವುದನ್ನು ಆನಂದಿಸುತ್ತಾರೆ, ಮುಂದಿನ ವಾರದ ಕಾರ್ಯಯೋಜನೆ ಬಗ್ಗೆ ಯೋಜಿಸುತ್ತಾರೆ ಅಥವಾ ವಾರಾಂತ್ಯದಲ್ಲಿ ಶಾಂತವಾಗಿ ಸಮಯವನ್ನು ಕಳೆಯುತ್ತಾರೆ.
Also Read: ಜನರು ಸಾಮಾನ್ಯವಾಗಿ ನಂಬುವ ಜನಪ್ರಿಯ ವಾಸ್ತು ಶಾಸ್ತ್ರಗಳು ಮತ್ತು ಅದರ ಮಿಥ್ಯಗಳು ಹೀಗಿವೆ
ಮೀನ ರಾಶಿಯವರು ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತಾರೆ. ಅವರು ವಾರಾಂತ್ಯವನ್ನು ಧ್ಯಾನಿಸುತ್ತಾ ಕಳೆಯಬಹುದು, ಕಲಾತ್ಮಕ ಚಟುವಟಿಕೆಗಳನ್ನು ಮುಂದುವರಿಸಬಹುದು ಅಥವಾ ತಮ್ಮ ಆಂತರ್ಯದ ಸ್ವಭಾವವನ್ನು ಪೋಷಿಸಲು ಕನಸು ಕಾಣಬಹುದು.
ಅವರ ತೀವ್ರವಾದ ಸ್ವಭಾವದ ಹೊರತಾಗಿಯೂ, ವೃಶ್ಚಿಕ ರಾಶಿಯವರು ತಮ್ಮನ್ನು ತಾಉ ಅನ್ವೇಷಿಸಿಕೊಳ್ಳುವುದನ್ನು ಗೌರವಿಸುತ್ತಾರೆ. ಅವರು ವಾರಾಂತ್ಯದಲ್ಲಿ ಪುಸ್ತಕಗಳ ಓದುವುದನ್ನು ಮಾಡಬಹುದು. ಅವರ ಭಾವನೆಗಳನ್ನು ಅನ್ವೇಷಿಸಬಹುದು ಅಥವಾ ವೈಯಕ್ತಿಕ ಬೆಳವಣಿಗೆಗಾಗಿ ತಾತ್ವಿಕ ವಿಷಯಗಳತ್ತ ಹೊರಳಬಹುದು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:33 pm, Thu, 8 February 24