Nitya Bhavishya: ಈ ರಾಶಿಯವರಿಗೆ ಇಂದು ಹಣದ ವಿಚಾರದಲ್ಲಿ ಹಿನ್ನಡೆಯಾಗುವುದು-ಎಚ್ಚರ
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ 09) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವ್ಯತಿಪಾತ್, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:07 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:27 ರಿಂದ 09:54ರ ವರೆಗೆ.
ಸಿಂಹ ರಾಶಿ : ನೀವು ಕೆಲಸದ ನಿಯಮಗಳ ಬಗ್ಗೆ ಗಮನ ಹರಿಸಬೇಕು. ಆಗ ಕ್ರಮಬದ್ಧವಾಗಲು ಸಾಧ್ಯ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮ ಮಾಡಲು ಬಯಸುವಿರಿ. ಯಾರ ಕಡೆಯಿಂದಲಾದರೂ ಸಾಲ ಪಡೆಯುವುದನ್ನು ತಪ್ಪಿಸಿ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ಅಕಾರಣವಾಗಿ ಸಂತೋಷಪಡುವಿರಿ. ಈ ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ನೇರ ನಡೆಗೆ ನೀವು ಪ್ರಸಿದ್ಧರಾಗಿರುವಿರಿ. ತಾಯಿಯ ವಾತ್ಸಲ್ಯವು ಸಿಗುವುದು. ಅಸೂಯೆಯಿಂದ ನಿಮ್ಮ ಇತರ ಕೆಲಸಗಳನ್ನು ಹಾಳುಮಾಡಿಕೊಳ್ಳುವಿರಿ. ಬರುವ ಹಣವನ್ನು ನೀವು ತದೇಕ ಚಿತ್ತದಿಂದ ನಿರೀಕ್ಷಿಸಬಹುದು. ಸ್ನೇಹಿತರ ಸಹಾಯದಿಂದ ನಿಮಗೆ ಬಲವು ಬರುವುದು. ನಿಮ್ಮವರಲ್ಲಿ ಯಾರನ್ನಾದರೂ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕನ್ಯಾ ರಾಶಿ : ಇಂದು ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಗಮನ ಕೊಡುವಿರಿ. ನಿಮ್ಮ ಭೇಟಿಯ ಸಮಯದಲ್ಲಿ ಅಪರಿಚಿತರು ಕೆಲವು ಪ್ರಮುಖ ಮಾಹಿತಿಯನ್ನು ನಿಮ್ಮಿಂದ ಪಡೆಯಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸುವ ಅವಶ್ಯಕತೆ ಇದೆ. ಸ್ನೇಹಿತರ ಜೊತಗೆ ಸ್ವಲ್ಪ ಸಮಯ ಮೋಜಿನಿಂದ ಕಳೆಯುತ್ತೀರಿ. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡಬಹುದು. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ನಿಮ್ಮ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸವನ್ನು ಮಾಡುವರು. ಕೈಗೆ ಸಿಕ್ಕ ಭೂಮಿಯು ತಪ್ಪಿ ಹೋಗಬಹುದು. ನಿಮ್ಮ ಮಾತನಾಡುವ ಸ್ವಭಾವವು ಇತರರಿಗೆ ಕಿರಿಕಿರಿ ಉಂಟಾದೀತು. ಮಾತು ಸರಳವಾಗಿರಲಿ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ ಜೊತೆ ತೆರಳುವಿರಿ.
ತುಲಾ ರಾಶಿ : ಇಂದು ನೀವು ಹೆಚ್ಚು ಭೌತಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಿರಿ. ನೀವು ಎಲ್ಲದರಲ್ಲಿಯೂ ಆಸಕ್ತಿಯನ್ನು ಉಳಿಸಿಕೊಳ್ಳುವಿರಿ. ನಿಮ್ಮ ಕಾರ್ಯದ ತಪ್ಪಿನಿಂದ ಅಧಿಕಾರಿಗಳು ನಿಮ್ಮನ್ನು ನಿಂದಿಸಬಹುದು. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಯಾವುದೇ ಕೆಲಸದ ಬಗ್ಗೆ ಮೊಂಡುತನ ಮತ್ತು ದುರಹಂಕಾರವನ್ನು ತೋರಿಸಬೇಡಿ. ಪ್ರತಿಕೂಲ ಪರಿಸ್ಥಿತಿಯಲ್ಲೂ ನಿಮ್ಮ ಧೈರ್ಯವನ್ನು ಕಾಪಾಡಿಕೊಳ್ಳಬೇಕು. ಇದು ಜಾಣತನವೂ ಹೌದು. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತುಗಳು ನಿಖರವಾಗಿ ಇರಲಿ. ಖರ್ಚಿನ ನಿಯಂತ್ರಣವನ್ನು ಮಾಡುವುದು ಕಷ್ಟವಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ.
ವೃಶ್ಚಿಕ ರಾಶಿ : ಇಂದು ನಿಮಗೆ ಸಾಹಸದಲ್ಲಿ ಅತಿಯಾದ ಆಸಕ್ತಿ ಇರುವುದು. ನೀವು ಸಣ್ಣ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಸಹೋದರರ ಸಂಪೂರ್ಣ ಸಹಕಾರವಿರುತ್ತದೆ. ಸಾಮಾಜಿಕ ಕಾರ್ಯಗಳನ್ನು ನೀವು ಹೆಚ್ಚು ಮಾಡುವಿರಿ. ನೀವು ಹೊಸದನ್ನು ಪ್ರಾರಂಭಿಸುವುದು ಒಳ್ಳೆಯದೇ. ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಸ್ವೀಕರಿಸಲು ಆಲೋಚಿಸುವಿರಿ. ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ಆಲಸ್ಯವನ್ನು ಬಿಟ್ಟು ಪ್ರಯತ್ನಿಸಿ. ಹಳೆಯ ಹೂಡಿಕೆಯಿಂದ ಉತ್ತಮ ಹಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ವಿರೋಧಿಗಳು ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ನಿಮ್ಮ ಪಾಲಿನದ್ದಷ್ಟನ್ನು ಜೋಪಾನವಾಗಿ ಇರಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ.