Peace at Home : ಕುಟುಂಬದಲ್ಲಿ ನಿತ್ಯ ಜಗಳವಾ? ಈ ವಾಸ್ತು ದೋಷ ಸರಿಪಡಿಸಿಕೊಳ್ಳಿ ಸರಿಹೋಗುತ್ತೆ

| Updated By: ಸಾಧು ಶ್ರೀನಾಥ್​

Updated on: May 15, 2024 | 6:06 AM

Quarrels at home- Vastu Tips: ಕೆಲವು ಸಂದರ್ಭಗಳಲ್ಲಿ ವಾಸ್ತು ದೋಷಗಳು ಕುಟುಂಬ ಸದಸ್ಯರ ನಡುವೆ ಜಗಳಗಳನ್ನು ಉಂಟುಮಾಡಬಹುದು ಮತ್ತು ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡಬಹುದು ಎಂದು ವಾಸ್ತು ಪಂಡಿತರು ಹೇಳುತ್ತಾರೆ. ಮನೆಯಲ್ಲಿನ ಕೆಲವು ದೋಷಗಳಿಂದಾಗಿ ಈ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

Peace at Home : ಕುಟುಂಬದಲ್ಲಿ ನಿತ್ಯ ಜಗಳವಾ? ಈ ವಾಸ್ತು ದೋಷ ಸರಿಪಡಿಸಿಕೊಳ್ಳಿ ಸರಿಹೋಗುತ್ತೆ
ಕುಟುಂಬದಲ್ಲಿ ನಿತ್ಯ ಜಗಳವಾ? ಈ ವಾಸ್ತು ದೋಷ ಸರಿಪಡಿಸಿಕೊಳ್ಳಿ
Follow us on

ವಾಸ್ತುವನ್ನು ನಂಬುವವರು ನಮ್ಮಲ್ಲಿ ಬಹಳಷ್ಟು ಮಂದಿಯಿದ್ದಾರೆ. ಭಾರತೀಯರು ಮತ್ತು ವಾಸ್ತುವನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಆದುದರಿಂದಲೇ ಮನೆ ಕಟ್ಟುವುದರಿಂದ ಹಿಡಿದು ಮನೆಯಲ್ಲಿ ಜೋಡಿಸಿಡುವ ವಸ್ತುಗಳವರೆಗೆ ವಾಸ್ತುವಿನ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ತಿಳಿದೋ ತಿಳಿಯದೆಯೋ ಕೆಲವೊಂದು ವಾಸ್ತು ತಪ್ಪುಗಳನ್ನು (Vastu Remedies) ಮಾಡುತ್ತೇವೆ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿರ್ದಿಷ್ಟವಾಗಿ ವಾಸ್ತು ದೋಷಗಳು (Vastu Tips) ಆರೋಗ್ಯ ಸಮಸ್ಯೆಗಳನ್ನು ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳನ್ನು ಸಹ ಉಂಟುಮಾಡುತ್ತವೆ (Fights At Home).

ಕೆಲವು ಸಂದರ್ಭಗಳಲ್ಲಿ ವಾಸ್ತು ದೋಷಗಳು ಕುಟುಂಬ ಸದಸ್ಯರ ನಡುವೆ ಜಗಳಗಳನ್ನು ಉಂಟುಮಾಡಬಹುದು ಮತ್ತು ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡಬಹುದು ಎಂದು ವಾಸ್ತು ಪಂಡಿತರು ಹೇಳುತ್ತಾರೆ. ಮನೆಯಲ್ಲಿನ ಕೆಲವು ದೋಷಗಳಿಂದಾಗಿ ಈ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈಗ ಮನೆಯಲ್ಲಿ ಜಗಳ ಮತ್ತು ಮನಃಶಾಂತಿಯ ಕೊರತೆಯನ್ನು ಉಂಟುಮಾಡುವ ವಾಸ್ತು ದೋಷಗಳು ಯಾವುವು ಎಂದು ತಿಳಿದುಕೊಳ್ಳೋಣ.

* ಮನೆಯಲ್ಲಿ ಶುಚಿತ್ವವಿಲ್ಲದೇ ಮನೆಯಲ್ಲಿರುವವರ ಮನಸ್ಥಿತಿಗೆ ಧಕ್ಕೆಯಾಗುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು. ಅದರಲ್ಲೂ ಮನೆಯಲ್ಲಿ ಕಸ ತುಂಬಿದರೆ ಒಳ್ಳೆಯದಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಮನೆಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.

* ಮನೆಯ ಈಶಾನ್ಯ ಮೂಲೆಯ ಆದ್ಯತೆಯ ಬಗ್ಗೆ ಹೇಳಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲೂ ಈ ಸ್ಥಳವನ್ನು ಸ್ವಚ್ಛವಾಗಿಡಬೇಕು. ಈಶಾನ್ಯ ಮೂಲೆಯಲ್ಲಿ ಭಾರವಾದ ವಸ್ತುಗಳನ್ನು ಇಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹ ಸೂಚಿಸಲಾಗಿದೆ.

Also Read: ಕಾರವಾರ – ಗಂಡ ಹೆಂಡತಿ ಜಗಳಕ್ಕೆ ಮೊಸಳೆಗೆ ತುತ್ತಾದ ಮಗು

* ಜೇಡಗಳು ಮನೆಯಲ್ಲಿ ಗೂಡು ಕಟ್ಟಿದರೆ ತಕ್ಷಣ ತೆಗೆಯಲು ಹೇಳುತ್ತಾರೆ. ಇವು ಜಾಸ್ತಿಯಾದರೆ ಮನೆಯಲ್ಲಿ ಪದೇ ಪದೇ ಕಲಹ ಉಂಟಾಗಿ ಮನಃಶಾಂತಿ ತಪ್ಪುತ್ತದೆ ಎನ್ನುತ್ತಾರೆ. ಅದಕ್ಕಾಗಿ ಮನೆಯನ್ನು ಜೇಡಗಳಿಂದ ಮುಕ್ತವಾಗಿಡಬೇಕು. ಮನೆಯಲ್ಲಿ ನಿರ್ಮಾಣವಾಗಿರುವ ಧೂಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು.

* ಅಪ್ಪಿತಪ್ಪಿಯೂ ಈಶಾನ್ಯ ಮೂಲೆಯಲ್ಲಿ ಸ್ನಾನಗೃಹ ಇಲ್ಲದಂತೆ ನೋಡಿಕೊಳ್ಳಿ. ಇದ್ದರೆ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು. ಅದರಲ್ಲೂ ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಹಾವೇರಿ: ಮಗ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ ಮಹಿಳೆಯ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ

* ಕೆಲವರು ಅನಗತ್ಯ ಕಸದಿಂದ ಮನೆಗೆ ತುಂಬುತ್ತಾರೆ. ಹಳೆಯ ದಿನಪತ್ರಿಕೆಗಳು ಮತ್ತು ಹಾನಿಗೊಳಗಾದ ವಸ್ತುಗಳನ್ನು ಸಹ ಸಂಗ್ರಹಿಸಲಾಗಿದೆ. ಆದರೆ ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗಾಗಿ ಆದಷ್ಟು ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಇಡದಿರುವುದು ಉತ್ತಮ.

* ಮನೆಯಲ್ಲಿ ಮಾತ್ರವಲ್ಲದೇ ಮೆಟ್ಟಿಲುಗಳ ಕೆಳಗೆಯೂ ಸ್ವಚ್ಛವಾಗಿಡಿ. ಅನೇಕ ಜನರು ಮೆಟ್ಟಿಲುಗಳ ಕೆಳಗಿನ ಜಾಗವನ್ನು ಕಸದಿಂದ ತುಂಬುತ್ತಾರೆ. ಇದರಿಂದ ನೆಗೆಟಿವ್ ಎನರ್ಜಿ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ವಸ್ತುಗಳನ್ನು ತೆಗೆದುಹಾಕಬೇಕು.