Sita Navami 2024: ಸೀತಾ ನವಮಿಯ ದಿನ ಈ ರೀತಿ ಜಾನಕಿ ದೇವಿಯನ್ನು ಪೂಜಿಸಿ
ರಾಮ ಭಕ್ತರು ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಸೀತಾ ನವಮಿಯನ್ನು ಮೇ 16 ರಂದು ಆಚರಿಸಲಾಗುತ್ತದೆ. ಮನೆಯಲ್ಲಿಯೇ ಸೀತಾ ಮಾತೆಯನ್ನು ಪೂಜಿಸುವವರು ಆ ದಿನದ ಪೂಜಾ ವಿಧಾನ, ಶುಭ ಸಮಯ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು.
ಉಪವಾಸ ಮತ್ತು ಹಬ್ಬಗಳ ದೃಷ್ಟಿಯಿಂದ ವೈಶಾಖ ಮಾಸವನ್ನು ಬಹಳ ವಿಶೇಷ ಎನ್ನಲಾಗುತ್ತದೆ. ಅದೇ ರೀತಿ ಈ ತಿಂಗಳಲ್ಲಿ ಸೀತಾ ನವಮಿಯನ್ನು ಕೂಡ ಆಚರಣೆ ಮಾಡಲಾಗುತ್ತದೆ. ಇದನ್ನು ಜಾನಕಿ ನವಮಿ ಎಂದೂ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನದಂದು ಸೀತಾ ದೇವಿ ಜನಿಸಿದಳು ಎಂಬ ನಂಬಿಕೆ ಇದೆ. ಜೊತೆಗೆ ಈ ದಿನ ಸೀತಾ ಮಾತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ರಾಮ ಭಕ್ತರು ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಸೀತಾ ನವಮಿಯನ್ನು ಮೇ 16 ರಂದು ಆಚರಿಸಲಾಗುತ್ತದೆ. ಮನೆಯಲ್ಲಿಯೇ ಸೀತಾ ಮಾತೆಯನ್ನು ಪೂಜಿಸುವವರು ಆ ದಿನದ ಪೂಜಾ ವಿಧಾನ, ಶುಭ ಸಮಯ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪಂಚಾಗದ ಪ್ರಕಾರ, ಮೇ 16 ರ ಮಧ್ಯಾಹ್ನದ ಅವಧಿ ಅಂದರೆ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 1:40 ರವರೆಗೆ ಸೀತಾ ಮಾತೆಯ ಆರಾಧನೆ ಮಾಡುವುದಕ್ಕೆ ಬಹಳ ಶುಭ ಸಮಯವಾಗಿದೆ. ಈ ಸಮಯದಲ್ಲಿ ಜಾನಕಿ ದೇವಿಯನ್ನು ಪೂಜಿಸುವವರು ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತಾರೆ ಜೊತೆಗೆ ಅವರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾಕಾಲ ಇರುತ್ತದೆ.
ಇದನ್ನೂ ಓದಿ: ತೀರಿ ಹೋದ ಮಗಳಿಗೆ ವರ ಬೇಕಾಗಿದ್ದಾನೆ! ಹುಡುಗ ಸಿಗದೆ ಜಾಹೀರಾತಿನ ಮೊರೆ ಹೋದ ಕುಟುಂಬಸ್ಥರು
ಸೀತಾ ಮಾತೆಯನ್ನು ಪೂಜಿಸುವ ವಿಧಾನ;
ಈ ದಿನವನ್ನು ರಾಮನವಮಿಯಂತೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಭಗವಾನ್ ರಾಮ ಮತ್ತು ತಾಯಿ ಸೀತಾ ಮಾತೆಯನ್ನು ಆಚರಣೆಗಳನ್ನು ಕ್ರಮಬದ್ಧವಾಗಿ ಮಾಡಲಾಗುತ್ತದೆ. ಹಾಗಾಗಿ ಸೀತಾ ನವಮಿಯ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ನಂತರ ಕೆಂಪು ಬಟ್ಟೆಯ ಮೇಲೆ ಭಗವಾನ್ ರಾಮ ಮತ್ತು ಸೀತಾ ಮಾತೆಯ ವಿಗ್ರಹಗಳನ್ನು ಇಟ್ಟು ಪಂಚಾಮೃತ, ಗಂಗಾ ಜಲದಿಂದ ಅಭಿಷೇಕ ಮಾಡಿ. ಬಳಿಕ ಸೀತಾ ಮಾತೆಗೆ ಕುಂಕುಮ ಮತ್ತು ತಿಲಕ ಇಟ್ಟು. ತುಪ್ಪದ ದೀಪವನ್ನು ಹಚ್ಚಿರಿ ಬಳಿಕ ಹಳದಿ ಹೂವಿನ ಹಾರವನ್ನು ಹಾಕಿ, ಫಲತಾಂಬೂಲಗಳನ್ನು ದೇವಿಗೆ ಅರ್ಪಣೆ ಮಾಡಿ. ಇದಲ್ಲದೆ, ದೇವರ ನೈವೇದ್ಯಕ್ಕೆ ಪಾಯಸ, ಹಣ್ಣು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ನಂತರ ದೀಪ ಮತ್ತು ಧೂಪದ್ರವ್ಯಗಳಿಂದ ಪೂಜಿಸಿ. ಇದರ ಜೊತೆಗೆ ಈ ದಿನ ರಾಮಾಯಣವನ್ನು ಪಠಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:27 pm, Wed, 15 May 24