ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಈ ನಾಲ್ಕು ವಸ್ತುಗಳು ಖಾಲಿಯಾಗಬಾರದು. ಖಾಲಿಯಾದರೆ ಅದರಿಂದ ಹಣಕ್ಕೆ ಕೊರತೆ ಎದುರಾಗುತ್ತದೆ, ಎಚ್ಚರವಿರಲಿ! ಯಾವುವು ಆ 4 ವಸ್ತುಗಳು, ಅವಗಳ ಪ್ರಾಮುಖ್ಯತೆ ಏನು ತಿಳಿಯೋಣ ಬನ್ನೀ. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾದರೆ ಅದರಿಂದ ನಕಾರಾತ್ಮಕತೆ ಎದುರಾಗುತ್ತದೆ (Vastu shastra). ವಾಸ್ತು ದೋಷದಿಂದ ಇಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಇದರಿಂದ ಬಹುತೇಕ ಬಾರಿ ಹಣಕಾಸು ಮುಗ್ಗಟ್ಟು ಕಾಣಿಸಿಕೊಳ್ಳುತ್ತದೆ.
ಅರಿಶಿಣ:
ಅರಿಶಿಣವನ್ನು ಶುಭ ಕಾರ್ಯಗಳಲ್ಲಿ ಬಳಸುತ್ತಾರೆ. ಅಡುಗೆಯಲ್ಲಿ ಬಣ್ಣ ತರುವುದರ ಜೊತೆಗೆ ಆರೋಗ್ಯವನ್ನೂ ತರುತ್ತದೆ. ಇದು ಶುಭಪ್ರದವೇ ಸರಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಅರಿಶಿಣ ಖಾಲಿಯಾಗುತ್ತಿದೆ ಎಂದರೆ ಅದು ಅಶುಭದ ಮುನ್ಸೂಚನೆಯೇ ಸರಿ. ಜಾತಕದಲ್ಲಿ ಗುರು ಗ್ರಹ ದೋಷದಿಂದ ಈ ಪ್ರಸಂಗ ಎದುರಾಗುತ್ತದೆ. ಇದರಿಂದ ತಾಪತ್ರಯಗಳು ಶುರುವಾಗಿಬಿಡುತ್ತವೆ. ಆದ್ದರಿಂದ ಅರಿಶಿನ ಪೂರ್ತಿ ಖಾಲಿ ಆಗುವವರೆಗೂ ಬಿಡಬಾರದು.
ಉಪ್ಪು:
ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ ಬಹಳ ಮಹತ್ವ ಇದೆ. ಇದರಿಂದ ವಾಸ್ತು ದೋಷ ನಿವಾರಣೆಗೆ ಬಹಳ ಉಪಾಯಗಳು ಇವೆ. ಅಡುಗೆ ಮನೆಯಲ್ಲಿ ಉಪ್ಪು ಖಾಲಿಯಾದರೆ ನಕಾರಾತ್ಮಕತೆ ಎದುರಾಗುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ. ಇದರಿಂದ ಹಣಕಾಸು ಕೊರತೆ ಎದುರಾಗುತ್ತದೆ. ಅಡುಗೆಯಲ್ಲಿ ಉಪ್ಪು ಕಡಿಮೆಯಾದರೆ ರುಚಿ ಹೇಗೆ ನಶಿಸುತ್ತದೋ ಅದೇ ರೀತಿ ವಾಸ್ತು ಶಾಸ್ತ್ರದ ಪಗ್ರಕಾರ ಮನೆಯಲ್ಲಿ ಉಪ್ಪು ಖಾಲಿಯಾದರೆ ವಾಸ್ತು ದೋಷ ಉದ್ಭವಿಸಿ, ಆರ್ಥಿಕತೆಯೂ ನಶಿಸುತ್ತದೆ.
ಗೋಧಿ ಹಿಟ್ಟು:
ಅಡುಗೆ ಮನೆಯಲ್ಲಿ ಹಿಟ್ಟು ಇರಲೇಬೇಕು. ಅದಿಲ್ಲದಿದ್ದರೆ ರೊಟ್ಟಿ ತಯಾರಾಗದು. ಆದರೆ ಅಗಾಗ್ಗೆ ತಿಂಗಳ ಅಂತ್ಯಕ್ಕೆ ಹಿಟ್ಟು ಖಾಲಿಯಾಗಿಬಿಡುತ್ತದೆ. ಹಾಗಾಗಿ ಹಿಟ್ಟನ್ನು ಸ್ವಲ್ಪ ಜಾಸ್ತಿಯೇ ತಂದಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಹಿಟ್ಟು ಖಾಲಿಯಾಗುವುದು ಅಶುಭದ ಸಂಕೇತ. ಇದರಿಂದ ಹಣಕಾಸು ಮುಗ್ಗಟ್ಟು ಎದುರಾಗುತ್ತದೆ.
ಅಕ್ಕಿ:
ಅಕ್ಕಿಯನ್ನು ದೇವತಾ ಪೂಜೆ ಕಾರ್ಯಗಳಲ್ಲಿ ಬಳಕೆಯಾಗುತ್ತದೆ. ಕೆಲವರು ಅಕ್ಕಿಯನ್ನು ತಿನ್ನುವುದಿಲ್ಲ ಎಂದು ಮನೆಗೆ ಅಕ್ಕಿಯನ್ನು ತರುವುದೇ ಇಲ್ಲ; ತಂದರೂ ಸ್ವಲ್ಪವೇ ತರುತ್ತಾರೆ. ಇದರಿಂದ ಶೀಘ್ರದಲ್ಲಿ ಅಕ್ಕಿ ಖಾಲಿಯಾಗಿಬಿಡುತ್ತದೆ. ಆದರೆ ನೀವು ಇಂತಹ ತಪ್ಪು ಮಾಡಬೇಡಿ. ಅಡುಗೆ ಮನೆಯಲ್ಲಿ ಅಕ್ಕಿ ಇರುವುದು ಅತ್ಯವಶ್ಯ. ಮನೆಯಲ್ಲಿ ಅಕ್ಕಿ ಇಲ್ಲಾಂದ್ರೆ ಶುಕ್ರ ಗ್ರಹದ ದೋಷ ಕಾಣಿಸುತ್ತದೆ. ಇದರಿಂದ ಹಣಕಾಸು ಮುಗ್ಗಟ್ಟು ಎದುರಾಗುತ್ತದೆ. ಹಾಗಾಗಿ ಮನಯೆಲ್ಲಿ ಅಕ್ಕಿಯ ಕೊರತೆ ಎದುರಾಗದಂತೆ ನೋಡಿಕೊಳ್ಳಿ ತನ್ಮೂಲಕ ನಿಮ್ಮ ಹಣಕಾಸನ್ನು ಸುಸ್ಥಿಯಲ್ಲಿಟ್ಟುಕೊಳ್ಳಿ.
(vastu tips there should not be shortage of 4 items in kitchen as it may cause money shortage)