Garuda Purana: ಜೀವನ ಸಂಗಾತಿ ಹೀಗಿದ್ದರೆ ನಿಮ್ಮ ಬದುಕು ನರಕಕ್ಕಿಂತ ಕೆಟ್ಟದ್ದಾಗಿರುತ್ತದೆ, ಎಚ್ಚರವಹಿಸಿ!

ಗರುಡ ಪುರಾಣದ ಅನುಸಾರ ನಿಮ್ಮ ಜೀವನ ಸಂಗಾತಿ ಎಲ್ಲರ ಎದುರೂ ನಿಮ್ಮನ್ನು ನಿರಂತರವಾಗಿ ಹೀಯಾಳಿಸುತ್ತಿದ್ದರೆ, ಅಪಮಾನ ಮಾಡುತ್ತಿದ್ದರೆ, ತುಚ್ಛವಾಗಿ ಕಾಣುತ್ತಿದ್ದರೆ ಇದರ ಜೊತೆಗೆ ತನ್ನ ಜವಾಬ್ದಾರಿಗಳನ್ನೂ ನಿರ್ವಹಿಸದೇ ಇದ್ದರೆ, ನಿಮಗೆ ಸಂಕಷ್ಟಗಳನ್ನೇ ತಂದಿಡುತ್ತಿದ್ದರೆ... ಅಂತಹ ಸಂಗಾತಿಯ ಜೊತೆ ನೀವು ಜೀವನ ನಡೆಸುವುದು ನರಕಕ್ಕಿಂತ ಹೀನಾಯವಾಗಿರುತ್ತದೆ.

Garuda Purana: ಜೀವನ ಸಂಗಾತಿ ಹೀಗಿದ್ದರೆ ನಿಮ್ಮ ಬದುಕು ನರಕಕ್ಕಿಂತ ಕೆಟ್ಟದ್ದಾಗಿರುತ್ತದೆ, ಎಚ್ಚರವಹಿಸಿ!
ಜೀವನ ಸಂಗಾತಿ ಹೀಗಿದ್ದರೆ ನಿಮ್ಮ ಬದುಕು ನರಕಕ್ಕಿಂತ ಕೆಟ್ಟದ್ದಾಗಿರುತ್ತದೆ, ಎಚ್ಚರವಹಿಸಿ!
Follow us
TV9 Web
| Updated By: ಆಯೇಷಾ ಬಾನು

Updated on: Sep 24, 2021 | 7:26 AM

ಗರುಡ ಪುರಾಣದಲ್ಲಿ ಲೈಫ್​ ಮ್ಯಾನೇಜ್ಮೆಂಟ್ ಅಂದರೆ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಅಷ್ಟೂ ತಿಳಿವಳಿಕೆ ನೀಡಲಾಗಿದೆ. ಯಾರೇ ಆಗಲಿ ತಿಳಿವಳಿಕೆಯುಳ್ಳ ಈ ಮಾತುಗಳನ್ನು ಪಾಲಿಸಿದರೆ ಜೀವನವನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ಯಾವ ಪರಿಸ್ಥಿತಿಗಳಲ್ಲಿ ಜೀವನ ಸಾಥಿಯ ಜೊತೆ ಇರಬಾರದು ಎಂಬುದನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಮದುವೆ ಎಂಬುದು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣದ್ದಾಗಿರುತ್ತದೆ. ಏಕೆಂದರೆ ವಿವಾಹವೆಂಬ ಮಹತ್ವ ಪೂರ್ಣ ಘಟ್ಟ ದಾಟಿದ ಬಳಿಕ ಹುಡುಗ ಹುಡುಗಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಕಾಣಬಿಡುತ್ತವೆ. ಮದುವೆಯ ನಂತರ ಜೀವನದ ಬಂಡಿಯ ಎರಡು ಚಕ್ರಗಳಂತೆ ಗಂಡ-ಹೆಂಡತಿ ಜೀವನವನ್ನು ಮುನ್ನಡೆಸಬೇಕು.

ಅವರವರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮದುವೆಯ ಬಳಿಕ ಇಬ್ಬರೂ ರಥವನ್ನು ಗೃಹಸ್ಥಾಶ್ರಮದತ್ತ ಸುಸೂತ್ರವಾಗಿ ಎಳೆದುಕೊಂಡು ಹೋಗಬೇಕಾಗುತ್ತದೆ. ಇಬ್ಬರಲ್ಲಿ ಯಾರೊಬ್ಬರಾದರೂ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಎಡವಿದರೆ ಅದು ಅವರ ವೈವಾಹಿಕ ಜೀವನದಲ್ಲಿ ಎದ್ದುಕಾಣುತ್ತದೆ.

ಗರುಡ ಪುರಾಣದಲ್ಲಿ (Garuda Purana) ಜೀವನ ಸಂಗಾತಿಯ ಕರ್ತವ್ಯಗಳು ಮತ್ತು ಉತ್ತರದಾಯಿತ್ವಗಳ ಬಗ್ಗೆ ಅಷ್ಟನ್ನೂ ವಿವರಿಸಿ ಹೇಳಲಾಗಿದೆ. ದಂಪತಿಯ ಪೈಕಿ ಯಾರೊಬ್ಬರೇ ಆದರೂ ಎಡವಿದರೂ ಜೀವನದಲ್ಲಿ ದುರ್ಭರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಜೀವನಸಾಥಿ ತ್ಯಾಗ ಜೀವನ ನಡೆಸಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬೇರೆ ಬೇರೆಯಾಗುವುದೇ ಕ್ಷೇಮ: ಗರುಡ ಪುರಾಣದ ಅನುಸಾರ ನಿಮ್ಮ ಜೀವನ ಸಂಗಾತಿ ಎಲ್ಲರ ಎದುರೂ ನಿಮ್ಮನ್ನು ನಿರಂತರವಾಗಿ ಹೀಯಾಳಿಸುತ್ತಿದ್ದರೆ, ಅಪಮಾನ ಮಾಡುತ್ತಿದ್ದರೆ, ತುಚ್ಛವಾಗಿ ಕಾಣುತ್ತಿದ್ದರೆ ಇದರ ಜೊತೆಗೆ ತನ್ನ ಜವಾಬ್ದಾರಿಗಳನ್ನೂ ನಿರ್ವಹಿಸದೇ ಇದ್ದರೆ, ನಿಮಗೆ ಸಂಕಷ್ಟಗಳನ್ನೇ ತಂದಿಡುತ್ತಿದ್ದರೆ… ಅಂತಹ ಸಂಗಾತಿಯ ಜೊತೆ ನೀವು ಜೀವನ ನಡೆಸುವುದು ನರಕಕ್ಕಿಂತ ಹೀನಾಯವಾಗಿರುತ್ತದೆ. ಹಾಗಾಗಿ ಅಂತಹ ಜೀವನಸಂಗಾತಿಯಿಂದ ದೂರವುಳಿಯುವುದೇ ಕ್ಷೇಮ.

ಇದಲ್ಲದೆ ನಿಮ್ಮ ಬಂಧುಗಳನ್ನೂ ಅಪಮಾನಕ್ಕೀಡುಮಾಡುತ್ತಿದ್ದರೆ, ಪರಿವಾರದಲ್ಲಿ ಸದಾ ಕ್ಲೀಷೆ ತಂದಿಡುತ್ತಿದ್ದರೆ, ಅಡ್ಡ ಮಾತುಗಳನ್ನೇ ಹೇಳುತ್ತಿದ್ದರೆ, ನಿಮ್ಮ ಪರಿವಾರವನ್ನು ಒಗ್ಗೂಡಿಸಿಕೊಂಡು ಹೋಗುವುದರಲ್ಲಿ ಆಸಕ್ತಿ ತೋರದಿದ್ದರೆ… ಅಂತಹ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳುವುದೇ ನಿಮಗೆ ಕ್ಷೇಮ. ಇಲ್ಲವಾದಲ್ಲಿ ನಿಮ್ಮ ಜೀವನ ನರಕಸದೃಶವಾಗಿಬಿಡುತ್ತದೆ.

ಇಂತಹ ಜೀವನಸಾಥಿಯ ಬಗ್ಗೆ ಕಾಳಜಿ ವಹಿಸುವುದು ಸೂಕ್ತವಲ್ಲ:

ಹೌದು ಗರುಡ ಪುರಾಣದಲ್ಲಿ ಮನಸ್ಸಿಗೆ ಕ್ಷೋಭೆತರುವ ಇಂತಹ ಜೀವನಸಾಥಿಯ ಬಗ್ಗೆ ಕಾಳಜಿ ವಹಿಸುವುದು ಸೂಕ್ತವಲ್ಲ ಎನ್ನಲಾಗಿದೆ. ಇನ್ನು ದಂಪತಿಯಲ್ಲಿ ಯಾರೊಬ್ಬರೇ ಆಗಲಿ ಬೇರೊಬ್ಬ ವ್ಯಕ್ತಿಯ ಜೊತೆ ಆಕರ್ಷಣೆಗೊಂಡು ನಿಮ್ಮಿಂದ ದೂರವಾಗುತ್ತಿದ್ದರೆ ಮೊದಲು ನೀವು ಮಾಡಬೇಕಾದ ಕೆಲಸವೆಂದರೆ ಅವರಿಗೆ ಜೀವನದಲ್ಲಿ ಸುಧಾರಣೆ ಕಾಣಲು ಅವಕಾಶ ಕಲ್ಪಿಸಬೇಕು.

ಅದು ಯಾವ ಮಟ್ಟಿಗೆ ಅಂದರೆ ಅವರು ಮತ್ತೆ ನಿಮ್ಮ ಬಳಿಯೇ ಸಾಗಿಬರಬೇಕು. ಅಷ್ಟರಮಟ್ಟಿಗೆ ನೀವು ಅವರನ್ನು ಸುಧಾರಣೆ ಮಾಡಬೇಕು. ಇಲ್ಲದೆ ಇದ್ದರೆ ಅವರನ್ನು ಹಾಗೆಯೇ ಬಿಟ್ಟುಬಿಡುವುದು ಒಳಿತು. ಅವರ ಬಗ್ಗೆ ನೀವು ಕಾಳಜಿ ವಹಿಸದೆ ನಿಮ್ಮ ಜೀವನ, ಸಂಸಾರವನ್ನು ಸುಧಾರಿಸಿಕೊಂಡು ಜೀವನ ಮುನ್ನಡೆಸಬೇಕು. ಇಲ್ಲವಾದಲ್ಲಿ ಅಂತಹ ವ್ಯಕ್ತಿ ನಿಮ್ಮ ಜೀವ-ಜೀವನವನ್ನು ಅಪಾಯಕ್ಕೆ ಸಿಲುಕಿಸುವುದಕ್ಕೆ ಹಿಂಜರಿಯುವುದಿಲ್ಲ. ಎಚ್ಚರವಿರಲಿ.

(According to garuda purana living with life partner in these circumstances is worse than hell)

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ