Chanakya Niti: ಪತ್ನಿಯ ಚಲನವಲನ ಮತ್ತು ಹಣಕ್ಕೆ ಸಂಬಂಧಪಟ್ಟಂತೆ ಈ ವಿಷಯ ಯಾರ ಬಳಿಯೂ ಹೇಳಬೇಡಿ, ಇಲ್ಲಾಂದ್ರೆ!?
ಚಾಣಕ್ಯ ನೀತಿಯ ಅನುಸಾರ ಯಾರ ಬಳಿಯೂ ಅಪಮಾನಿತರಾಗಬಾರದೆಂದರೆ ಯಾವುದೇ ನೀಚ ಮನುಷ್ಯ, ಮೂರ್ಖ ವ್ಯಕ್ತಿ ನಿಮ್ಮ ಬಗ್ಗೆ ಹೇಳಿದ ಕೆಟ್ಟ ಮಾತುಗಳನ್ನು ಬೇರೆ ಯಾರ ಬಳಿಯೂ ಹೇಳಬಾರದು. ಪತ್ನಿಯ ಚಲನವಲನ ಮತ್ತು ಹಣಕ್ಕೆ ಸಂಬಂಧಪಟ್ಟಂತೆ ಈ ವಿಷಯಗಳನ್ನು ಯಾರ ಬಳಿಯೂ ಹೇಳಬೇಡಿ, ಬನ್ನೀ ಆಚಾರ್ಯ ಚಾಣಿಕ್ಯ ಹೇಳಿರುವ ಆಪ್ತ ಮಾತುಗಳನ್ನು ಕೇಳಿ ತಿಳಿದುಕೊಳ್ಳೋಣ:
ಚಾಣಕ್ಯ ನೀತಿಯ ಅನುಸಾರ ಯಾರ ಬಳಿಯೂ ಅಪಮಾನಿತರಾಗಬಾರದೆಂದರೆ ಯಾವುದೇ ನೀಚ ಮನುಷ್ಯ, ಮೂರ್ಖ ವ್ಯಕ್ತಿ ನಿಮ್ಮ ಬಗ್ಗೆ ಹೇಳಿದ ಕೆಟ್ಟ ಮಾತುಗಳನ್ನು ಬೇರೆ ಯಾರ ಬಳಿಯೂ ಹೇಳಬಾರದು. ಪತ್ನಿಯ ಚಲನವಲನ ಮತ್ತು ಹಣಕ್ಕೆ ಸಂಬಂಧಪಟ್ಟಂತೆ ಈ ವಿಷಯಗಳನ್ನು ಯಾರ ಬಳಿಯೂ ಹೇಳಬೇಡಿ, ಬನ್ನೀ ಆಚಾರ್ಯ ಚಾಣಿಕ್ಯ ಹೇಳಿರುವ ಆಪ್ತ ಮಾತುಗಳನ್ನು ಕೇಳಿ ತಿಳಿದುಕೊಳ್ಳೋಣ:
ಆಚಾರ್ಯ ಚಾಣಕ್ಯ ಮಹಾಶಯ ತನ್ನ ನೀತಿ ಗ್ರಂಥದ 7ನೆಯ ಅಧ್ಯಾಯದ ಮೊದಲ ಶ್ಲೋಕದಲ್ಲಿ ಮಹಿಳೆ (Woman) ಮತ್ತು ಹಣದ (Money) ಬಗ್ಗೆ ಹೇಳಿದ್ದಾರೆ. ಚಾಣಕ್ಯನ ಪ್ರಕಾರ ಕೆಲವು ವಿಷಯ, ಮಾತುಗಳನ್ನು ಗುಪ್ತವಾಗಿಡುವುದು ಅಥವಾ ರಹಸ್ಯವಾಗಿಟ್ಟುಕೊಳ್ಳುವುದೇ ಜಾಣತನವಾಗಲಿದೆ. ಪತ್ನಿ ಮತ್ತು ಹಣಕ್ಕೆ ಸಂಬಂಧಪಟ್ಟಂತೆ ಕೆಲವು ಸಂಗತಿಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಚಾಣಕ್ಯ ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಹೇಳಿದ್ದು, ದುಃಖದಲ್ಲಿದ್ದಾಗ ಅದನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು. ಇದರಿಂದ ನಿಮಗೇ ನಷ್ಟ ಸಂಭವಿಸುತ್ತದೆ. ಅದರಿಂದ ನೀವೇ ಕಷ್ಟಕ್ಕೆ ಸಿಲುಕುವಿರಿ.
ಚಾಣಕ್ಯ ಶ್ಲೋಕ: ಅರ್ಥನಾಶಃ ಮನಸ್ತಾಪಃ ಗೃಹೆ ದುಶ್ಚರಿತನಿ ಚ ವಂಚನಃ ಚಾಪಮಾನಃ ಚ ಮತಿಮಾತ್ರ ಪ್ರಕಾಶಯೇತ್
ಯಾವ ಮಾತುಗಳು ಕಷ್ಟಕಾರ್ಪಣ್ಯಗಳನ್ನು ತಂದಿಡುತ್ತವೆ ಗೊತ್ತಾ?: ಹಣ ಕಳೆದುಕೊಂಡಾಗ, ಮನಸ್ಸಿಗೆ ದುಃಖವಾದಾಗ, ಪತ್ನಿಯ ಚಲನವಲನ ಗೊತ್ತಾದಾಗ, ನೀಚ ವ್ಯಕ್ತಿಯ ಕೆಲವು ನೀಚ ಮಾತುಗಳು ಕಿವಿಗೆ ಬಿದ್ದಾಗ, ಸ್ವಯಂ ಅವಮಾನಿತನಾದಾಗ ಅದನ್ನು ಯಾರ ಬಳಿಯಾದರೂ ಹೇಳಿಕೊಳ್ಳಬಾರದು.
ಹಣ ಕಳೆದುಕೊಂಡಾಗ ಹತ್ತರಿದವರ ಬಳಿಯೂ ಹೇಳಿಕೊಳ್ಳಬಾರದು: ಚಾಣಕ್ಯನ ಪ್ರಕಾರ ಯಾವ ಸಂಗತಿಗಳಲ್ಲಿ ವಿವೇಕ ಇರಬೇಕು ಅಂದರೆ ಕೃಷಿ, ಉದ್ಯೋಗ, ಅಥವಾ ಕೊಟ್ಟು-ತೆಗೆದುಕೊಳ್ಳುವಲ್ಲಿ ನಷ್ಟವುಂಟಾದಾಗ ಅಥವಾ ನಿಗೆ ಯಾರಾದರೂ ನಷ್ಟವನ್ನುಂಟು ಮಾಡಿದರೆ ಅದನ್ನು ಯಾರ ಬಳಿಯೂ ಚರ್ಚಿಸಬಾರದು. ಏಕೆಂದರೆ ಆ ನಷ್ಟವನ್ನು ಸರಿದೂಗಿಸಿಕೊಳ್ಳಲು ನೀವು ಎದುರಿಗಿನ ವ್ಯಕ್ತಿಯಿಂದ ಏನನ್ನೋ ಆಶಿಸುತ್ತಿದ್ದೀರಿ ಎಂದು ಬಗೆಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದರಿಂದ ನಿಮ್ಮ ಘನೆತೆಗೆ ಮುಕ್ಕಾಗುತ್ತದೆ.
ನೀವು ದುಃಖದಲ್ಲಿದ್ದಾಗ ಯಾರ ಬಳಿಯೂ ಅದನ್ನು ಪ್ರದರ್ಶಿಸಬೇಡಿ: ನೀವು ದುಃಖದಲ್ಲಿದ್ದಾಗ ಅಥವಾ ಯಾವುದೇ ಕೆಲಸದಲ್ಲಿ ನಿಮಗೆ ಮನಸ್ಸಿಲ್ಲ ಎಂತಾದರೆ ಅದನ್ನು ಯಾರ ಬಳಿಯೂ ಪ್ರದರ್ಶಿಸಬೇಡಿ. ಒಂದು ವೇಳೆ ಹಾಗೆ ಬಹಿರಂಗವಾಗಿ ಹೇಳಿಕೊಂಡರೆ ಅದರಿಂದ ನಿಮಗೆ ನಷ್ಟವೇ ಹೆಚ್ಚು. ನಿಮ್ಮ ದುಃಸ್ಥಿತಿಯನ್ನು ಅಳೆದು ಅದರಿಂದ ಏನು ಲಾಭ, ಪಗ್ರಯೋಜನ ಪಡೆಯಬೇಕು ಎಂಬ ಎಣಿಕೆಯಲ್ಲಿ ತೊಡಗುತ್ತಾರೆ. ಹಾಗಾಗಿ ನಿಮ್ಮ ಮನಸ್ಸಿನಲ್ಲಿರುವ ದುಃಖವನ್ನು ಯಾರ ಮುಂದೆಯೂ ಬಹಿರಂಗಪಡಿಸಬೇಡಿ.
ಪತ್ನಿಯ ಮೇಲೆ ಶಂಕೆ ಮೂಡಿದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ: ಆಚಾರ್ಯ ಚಾಣಕ್ಯ ಪತ್ನಿಯ ಬಗ್ಗೆಯೂ ಇಂತಹುದೇ ಮಹತ್ವಪೂರ್ಣ ತಿಳಿವಳಿಕೆಯ ಮಾತುಗಳನ್ನು ಹೇಳಿದ್ದಾನೆ. ಯಾರ ಬಳಿಯೂ ನಿಮ್ಮ ಪತ್ನಿಯ ಚರಿತ್ರೆ ಬಗ್ಗೆ ಶಂಕೆ ವ್ಯಕ್ತಪಡಿಸಬೇಡಿ. ಪತ್ನಿಯ ಕೆಟ್ಟ ಹವ್ಯಾಸ, ಕೆಟ್ಟ ಅಭ್ಯಾಸಗಳ ಬಗ್ಗೆ ಅಪ್ಪಿತಪ್ಪಿಯೂ ಹೇಳಿಕೊಳ್ಳಬೇಡಿ. ಪತಿ ಮತ್ತು ಪತ್ನಿ ನಡುವಣ ಸಂಬಂಧದ ಒಂದಂಶವೂ ಮನೆಯ ಹೊಸಿಲು ದಾಟಿ ಹೋಗಬಾರದು. ಒಮ್ಮೆ ಅದು ಹೊರ ಹೆಜ್ಜೆ ಇಟ್ಟುಬಿಟ್ಟರೆ ಅದನ್ನು ಸಂಭಾಳಿಸುವುದು ಕಷ್ಟಕಷ್ಟವಾದೀತು. ಸಮಾಜದಲ್ಲಿ ಪ್ರತಿ ಹೆಜ್ಜೆಯಲ್ಲೂ ಅಪಮಾನ ಅನುಭವಿಸಬೇಕಾದೀತು. ಎಚ್ಚರಾ!
(According to Chanakya Niti Dont tell about bad things of wife and money to any body)
Published On - 8:02 am, Thu, 23 September 21