Garuda Purana: ನೀವು ಜೀವನದಲ್ಲಿ ಜಯ ಸಾಧಿಸಬೇಕೆಂದರೆ ಈ 5 ದುರ್ಗುಣ ಇಂದೇ ಬಿಟ್ಟುಬಿಡಿ!
ಎರಡನೆಯ ಕಾರಣವೆಂದರೆ ಗರುಡ ಪುರಾಣವನ್ನು ಮೃತ್ಯು ಹೊಂದಿದ ವ್ಯಕ್ತಿಯ ಪರಿವಾರದವರು ಆಲಿಸುವುದರಿಂದ ಜೀವನ ಕ್ರಮದಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ಮನದಟ್ಟಾಗುತ್ತದೆ. ಇದರಿಂದ ಜೀವನದಲ್ಲಿ ಮುಂದೆ ಸರಿಯಾದ ಜೀವನ ಧರ್ಮ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾದರೆ ನೀವು ಜೀವನದಲ್ಲಿ ಯಶಸ್ಸಿನ ಮಾರ್ಗದಲ್ಲಿ ಸಾಗಬೇಕು ಅಂತಾದರೆ ಈ ಹವ್ಯಾಸ, ಸದ್ಗುಣಗಳನ್ನು ಪಾಲಿಸುವವರಂತಾಗಿ.
ಯಾವುದೇ ಮನುಷ್ಯನಿಗೆ ಜೀವನದಲ್ಲಿ ಜಯ ಸಾಧಿಸಲು ಈ 5 ದುರ್ಗುಣಗಳು ಅಡ್ಡಿಯಾಗುತ್ತವೆ ಅನ್ನುತ್ತದೆ ಗರುಡ ಪುರಾಣ. ಹಾಗಾಗಿ ಇಂದೇ ಅವುಗಳನ್ನು ಬಿಟ್ಟುಬಿಡಿ. ಯಾವುದೇ ಮನುಷ್ಯನ ಸಾಫಲ್ಯತೆ ಆತನ ಪ್ರತಿಭೆಯಿಂದಲೇ ಸಿದ್ಧಿಸುತ್ತದೆ ಅನ್ನಲಾಗದು. ಪ್ರತಿಭೆಯ ಜತೆಗೆ ಒಳ್ಳೆಯ ಗುಣಗಳೂ ಮೇಳೈಸಿರಬೇಕು. ಒಂದೊಮ್ಮೆ ನಿಮ್ಮಲ್ಲಿ ಕೆಲವು ದುರ್ಗುಣಗಳು ಇವೆ ಎಂದಾದರೆ ಅವು ನಿಮ್ಮ ಯಶಸ್ಸಿಗೆ ಬಾಧಕವಾಗಲಿದೆ. ಗರುಡ ಪುರಾಣದಲ್ಲಿ ಇಂತಹುದೇ ಕೆಲವು ಕೆಟ್ಟ ಚಟಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದನ್ನು ತಿಳಿದುಕೊಳ್ಳಿ.
ಗರುಡ ಪುರಾಣದಲ್ಲಿ ಒಟ್ಟು 19 ಸಾವಿರ ಶ್ಲೋಕಗಳು ಇವೆ. 7 ಸಾವಿರ ಶ್ಲೋಕಗಳಲ್ಲಿ ಕೇಲವ ಜ್ಞಾನ, ಧರ್ಮ, ಯಕ್ಷ, ತಪ, ನೀತಿ, ರಹಸ್ಯ ಇವೇ ಮುಂತಾದ ವಿಷಯಗಳ ಬಗ್ಗೆ ಮಾರ್ಮಿಕವಾಗಿ ಮನದಟ್ಟುಪಡಿಸಲಾಗಿದೆ. ಹಾಗಾಗು ಗರುಡ ಪುರಾಣವೆಂದರೆ ಕೇವಲ ಸಾವಿನ ರಹಸ್ಯದ ಬಗ್ಗೆ ಹೇಳುವುದಷ್ಟೇ ಅಲ್ಲ. ಜನರ ಜೀವನದ ಗತಿಯ ಬಗ್ಗೆಯೂ ವ್ಯಾವಹಾರಿಕ ಜೀವನದ ಬಗ್ಗೆಯೂ ಹೇಳಲಾಗಿದೆ ಎಂಬುದನ್ನು ಗಮನಿಸಬೇಕು. ಮೃತ್ಯುವಿನ ಬಳಿಕ ಇದನ್ನು ಓದುವುದರಿಂದ ಅಥವಾ ಕೇಳುವುದರಿಂದ ಎರಡು ಉದ್ದೇಶಗಳು ಇವೆ.
ಧಾರ್ಮಿಕ ಮಾನ್ಯತೆಯ ಪ್ರಕಾರ ಮೊದಲ ಉದ್ದೇಶ ಏನೆಂದರೆ ಮೃತ್ಯು ಸಂಬಂಧಿ ಗರುಡ ಪುರಾಣವನ್ನು ಕೇಳುವುದರಿಂದ ಮೃತ್ಯುವಿನ ಬಳಿಕ ಆತ್ಮಕ್ಕೆ ಮುಕ್ತಿ ಮಾರ್ಗ ದಕ್ಕಿ, ಸದ್ಗತಿ ಪ್ರಾಪ್ತಿಯಾಗುತ್ತದೆ ಎಂಬುದು. ಅದರಿಂದ ಆತ್ಮಕ್ಕೆ ಇರುವ ಮೋಹ ಪಾಶ ಕಳಚಿಕೊಳ್ಳುತ್ತದೆ.
ಎರಡನೆಯ ಕಾರಣವೆಂದರೆ ಗರುಡ ಪುರಾಣವನ್ನು ಮೃತ್ಯು ಹೊಂದಿದ ವ್ಯಕ್ತಿಯ ಪರಿವಾರದವರು ಆಲಿಸುವುದರಿಂದ ಜೀವನ ಕ್ರಮದಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ಮನದಟ್ಟಾಗುತ್ತದೆ. ಇದರಿಂದ ಜೀವನದಲ್ಲಿ ಮುಂದೆ ಸರಿಯಾದ ಜೀವನ ಧರ್ಮ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾದರೆ ನೀವು ಜೀವನದಲ್ಲಿ ಯಶಸ್ಸಿನ ಮಾರ್ಗದಲ್ಲಿ ಸಾಗಬೇಕು ಅಂತಾದರೆ ಈ ಹವ್ಯಾಸ, ಸದ್ಗುಣಗಳನ್ನು ಪಾಲಿಸುವವರಂತಾಗಿ.
ನಕಾರಾತ್ಮಕ ಭಾವ ಚಿಂತನೆ:
ಗರುಡ ಪುರಾಣ ಅನುಸಾರ ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಅಂತಾದರೆ ಸಕಾರಾತ್ಮಕ ಜೀವಭಾವ ಚಿಂತನೆ ಅಳವಡಿಸಿಕೊಳ್ಳಬೇಕು. ಯಾರು ಸದಾ ನಕಾರಾತ್ಮಕ ಚಿಂತನಾಲಹರಿಯಲ್ಲಿ ಇರುತ್ತಾರೋ ಅವರು ಸಫಲತೆ ಸಾಧಿಸುವುದು ಬಹಳ ಕಷ್ಟ ಕಷ್ಟ. ಇಂತಹವರು ಬೇರೊಬ್ಬರ ಯಶಸ್ಸಿನ ಬಗ್ಗೆ ಅಡ್ಡ ಮಾತುಗಳನ್ನು ಹೇಳುತ್ತಿರುತ್ತಾರೆ. ಒಳಗೊಳಗೇ ಕುಬ್ಜರಾಗುತ್ತಾ ಸಾಗುತ್ತಾರೆ. ಹಾಗಾಗಿ ಸಫಲತೆಯ ಮೊದಲ ಬೀಜ ಮಂತ್ರವೆಂದರೆ ಸಕಾರಾತ್ಮಕ ಆಲೋಚನೆ ಹೊಂದುವುದು. ಇದರಿಂದ ನಿಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು.
ಸಮಯದ ಮೌಲ್ಯ ಅರಿಯದಿದ್ದರೆ ವೈಫಲ್ಯತೆ ಎದುರಿಸಬೇಕಾಗುತ್ತದೆ…
ಎಲ್ಲರ ಬಳಿಯೂ 24 ಗಂಟೆಯಷ್ಟೇ ಸಮಯ ಇರುವುದು. ಯಾರು ಆ ಅಮೂಲ್ಯ ಸಮಯದ ಶಕ್ತಿಯನ್ನು ಅರಿಯುವುದಿಲ್ಲವೋ ಅವರು ವೈಫಲ್ಯತೆ ಎದುರಿಸಬೇಕಾಗುತ್ತದೆ. ನೀವು ಸಮಯದ ತಾಕತ್ತನ್ನು ಅರಿತಿದ್ದರೆ ಒಂದೊಂದು ಘಳಿಗೆಯನ್ನೂ ಸದುಪಯೋಗ ಪಡಿಸಿಕೊಳ್ಳುತ್ತೀರಿ. ಪ್ರತಿ ಘಳಿಗೆಯೂ ಸಾಫಲ್ಯದತ್ತ ಹೆಜ್ಜೆ ಹಾಕಲು ವಿನಿಯೋಗಿಸಿಕೊಳ್ಳುತ್ತೀರಿ. ಆದರೆ ನಿಮಗೆ ಸಮಯದ ಪರಿವೆಯೆ ಇಲ್ದಿದ್ರೆ ಏನನ್ನೂ ಸಾಧಿಸಲಾರಿರಿ. ಜಯ ಸಾಧಿಸಲು ಬಹಳ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ.
ಅದೃಷ್ಟ ಭಾಗ್ಯದ ಬಗ್ಗೆ ನಂಬಿಕೆಯಿಡಬೇಕು:
ಯಾರು ಸಾಫಲ್ಯತೆ ಎಂಬುದನ್ನು ಅದೃಷ್ಟವೆಂದು ಪರಿಗಣಿಸುತ್ತಾರೋ ಅವರು ಹೆಚ್ಚು ಯಶ ಸಾಧಿಸಲಾರರು. ಸಫಲತೆಯ ಗಡಿಯಿಂದ ಗಾವುದ ದೂರ ಉಳಿದುಬಿಡುತ್ತಾರೆ. ಹಾಗಾಗಿ ಜಯ ಸಾಧಿಸಬೇಕು ಅನ್ನುವಂತಿದ್ದರೆ ನಿಮ್ಮ ಪರಿಶ್ರಮ ಮತ್ತು ಕರ್ಮದ ಮೇಲೆ ಭರವಸೆಯಿಟ್ಟು ಭಾಗ್ಯವನ್ನು ನಿಮ್ಮದಾಗಿಸಿಕೊಳ್ಳಿ.
ತೋರಿಕೆಯ ಜನ:
ಯಾರು ತಮ್ಮ ಪ್ರತಿ ನಡೆ ನುಡಿಯಲ್ಲಿ ತೋರಿಕೆಯನ್ನಷ್ಟೇ ತೋರುತ್ತಾರೋ ಅವರು ಬೇರೆಯವರಿಗೆ ತೊಂದರೆಯನ್ನುಂಟುಮಾಡಿ ಸ್ವತಃ ತಾವಷ್ಟೇ ಸಂತುಷ್ಟರಾಗಲು ಬಯಸುತ್ತಾರೆ. ಇಂತಹ ಜನ ಯಾವತ್ತಿಗೂ ತಮ್ಮ ಗುರಿಯನ್ನು ತಲುಪಲಾರರು. ಇಂತಹವರು ಸದಾ ತಾವೇ ಶ್ರೇಷ್ಠರು ಎಂದು ಹಲಬುತ್ತಿರುತ್ತಾರೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂತಾದರೆ ಪರಿಶ್ರಮ ಹಾಕಿ. ಪರಿಶ್ರಮವಷ್ಟೇ ನಿಮ್ಮ ವಿಜಯದ ತುತ್ತೂರಿ ಆಗಬೇಕು.
ಅಸಲೀ ಮನುಷ್ಯರು:
ಅಸಲಿಗೆ ಮನುಷ್ಯರು ಆಲಸ್ಯದಿಂದ ಹೆಜ್ಜೆ ಹಾಕಿದರೆ ಯಶೋಮಾರ್ಗದಲ್ಲಿ ಬಳಲಿ ಬೆಂಡಾಗುವುದು ಖಚಿತ. ತಮ್ಮ ಅಮೂಲ್ಯ ಸಮಯವನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ. ಅಂತಹವರ ಬಳಿ ಸಾಫಲ್ಯತೆ ಎಂಬುದು ನುಸುಳುವುದಿಲ್ಲ. ತ್ಯಾಗ ಮಾಡಿ, ಶ್ರಮ ಹಾಕಿದರೆ ಮಾತ್ರ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ: ಕೊರೊನಾ ಗ್ಯಾಪ್ ಬಳಿಕ ವಾಷಿಂಗ್ಟನ್ಟ್ಗೆ ಬಂದಿಳಿದ ಪ್ರಧಾನಿ ಮೋದಿ: ಯಾವುದೇ ಗ್ಯಾಪ್ ಇಲ್ಲದೆ ಜನರೊಂದಿಗೆ ಮುಕ್ತವಾಗಿ ಬೆರೆತರು ಇದನ್ನೂ ಓದಿ: ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?
(according to Garuda Purana stop these 5 habits to become successful person)