Vastu Tips: ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2024 | 10:17 AM

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯನ್ನು ಬಹಳ ಮುಖ್ಯವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ, ಕುಟುಂಬದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ, ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಯಾವ ದಿಕ್ಕಿಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು
ಸಾಂದರ್ಭಿಕ ಚಿತ್ರ
Follow us on

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಕೋಣೆಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅದೇ ರೀತಿಯಲ್ಲಿ ಅಡುಗೆ ಮನೆ ಕೂಡ ಶಾಸ್ತ್ರ ಬದ್ಧವಾಗಿರಬೇಕು ಎನ್ನುತ್ತಾರೆ. ಏಕೆಂದರೆ ಅದು ಇಡೀ ಕುಟುಂಬಕ್ಕೆ ಆಹಾರ ಬೇಯಿಸುವ ಸ್ಥಳವಾಗಿರುತ್ತದೆ. ಹಾಗಾಗಿ ಸ್ಥಳ ದೋಷವಿದ್ದರೆ ಅದು ಕುಟುಂಬದ ಸದಸ್ಯರ ಮೇಲೆ ಮತ್ತು ಅವರ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು. ಜೊತೆಗೆ ಅಡುಗೆಮನೆ ಇರಬೇಕಾದ ದಿಕ್ಕಿನಲ್ಲಿ ಇರದೇ ಹೋದಲ್ಲಿ, ಮನೆಯಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗಬಹುದು. ಆದ್ದರಿಂದ, ಅಡುಗೆ ಮನೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸುವ ಮೂಲಕ, ನಾವು ನಮ್ಮ ಮನೆಯ ವಾಸ್ತು ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

ಈ ದಿಕ್ಕಿನಲ್ಲಿ ಅಡುಗೆಮನೆಯನ್ನು ಮಾಡಬೇಡಿ!

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯನ್ನು ಉತ್ತರ, ನೈಋತ್ಯ ಮತ್ತು ಈಶಾನ್ಯ ದಿಕ್ಕಿಗೆ ಮಾಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಗೆ ಉತ್ತಮ ದಿಕ್ಕು ಆಗ್ನೇಯ ಅಥವಾ ವಾಯುವ್ಯ ಎಂದು ಹೇಳಲಾಗುತ್ತದೆ, ಇದರ ಹಿಂದಿನ ಕಾರಣವೆಂದರೆ ದಕ್ಷಿಣದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ಪೂರ್ವಕ್ಕೆ ಬೀಸುವ ಗಾಳಿ ಎಂದಿಗೂ ಬೆಂಕಿಗೆ ಹಾನಿ ಮಾಡುವುದಿಲ್ಲ.

ಮನೆಯ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು!

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಗೆ ಮತ್ತು ಬೆಂಕಿಗೆ ಸಂಬಂಧವಿರುತ್ತದೆ. ಬೆಂಕಿಯು ಪಂಚಭೂತಗಳಲ್ಲಿ ಒಂದಾಗಿದೆ, ಆದ್ದರಿಂದ ಮನೆಯ ಅಡುಗೆಮನೆ ಸರಿಯಾದ ದಿಕ್ಕಿನಲ್ಲಿರಬೇಕು. ಬೆಂಕಿಯ ಮೂಲ ಆಗ್ನೇಯ ದಿಕ್ಕು. ಆದ್ದರಿಂದ, ಅಡುಗೆಮನೆಯನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯ ದಿಕ್ಕು ಸರಿಯಾಗಿದ್ದರೆ ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡುತ್ತದೆ. ಜೊತೆಗೆ ಆಹಾರವನ್ನು ತಯಾರಿಸುವಾಗ, ನಿಮ್ಮ ಮುಖ ಪೂರ್ವ ದಿಕ್ಕಿಗೆ ಇರಬೇಕು ಎಂಬುದನ್ನು ಸಹ ನೀವು ನೆನಪಿನಲ್ಲಿಡಿ.

ಇದನ್ನೂ ಓದಿ: ಈ ವಿಗ್ರಹಗಳು ಮನೆಯಲ್ಲಿದ್ದರೆ ಎಂದಿಗೂ ಹಣದ ಕೊರತೆ ಬರುವುದಿಲ್ಲ

ಒಲೆ, ಸಿಂಕ್ ಮತ್ತು ಡೈನಿಂಗ್ ಟೇಬಲ್ ಯಾವ ದಿಕ್ಕಿನಲ್ಲಿರಬೇಕು?

ವಾಸ್ತು ಪ್ರಕಾರ, ಅಡುಗೆ ಮನೆಯನ್ನು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಿದರೆ, ಯಾವಾಗಲೂ ಒಲೆಯನ್ನು ಪೂರ್ವ ದಿಕ್ಕಿನಲ್ಲಿ ಇರಿಸಿ. ಇದರೊಂದಿಗೆ, ಪಾತ್ರೆಗಳನ್ನು ತೊಳೆಯುವ ಜಾಗ ಯಾವಾಗಲೂ ವಾಯುವ್ಯ ದಿಕ್ಕಿನಲ್ಲಿರಬೇಕು. ವಾಸ್ತವದಲ್ಲಿ ಡೈನಿಂಗ್ ಟೇಬಲ್ ಅನ್ನು ಅಡುಗೆ ಮನೆಯಲ್ಲಿ ಇಡಬಾರದು. ಅಷ್ಟು ಅಗತ್ಯವಿದ್ದರೆ, ನೀವು ಅದನ್ನು ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಮಾತ್ರ ಇಡಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ