Vastu tips: ಈ ವಿಗ್ರಹಗಳು ಮನೆಯಲ್ಲಿದ್ದರೆ ಎಂದಿಗೂ ಹಣದ ಕೊರತೆ ಬರುವುದಿಲ್ಲ
ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಲು ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಇಟ್ಟುಕೊಳ್ಳುವುದನ್ನು ನೋಡಿರಬಹುದು. ಅಂತೆಯೇ, ಜನರು ವಿಗ್ರಹಗಳನ್ನು ಅಲಂಕಾರವಾಗಿ ಮನೆಯಲ್ಲಿ ಇಡುತ್ತಾರೆ. ಈ ವಿಗ್ರಹಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕುಟುಂಬ ಸದಸ್ಯರ ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಕೆಲವು ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಿಗ್ರಹಗಳನ್ನು ಮನೆಗೆ ತನ್ನಿ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ, ಒಬ್ಬ ವ್ಯಕ್ತಿ ಕೆಲವೊಂದು ವಸ್ತುಗಳನ್ನು ಇಡುವ ಜಾಗದಲ್ಲಿ ಇಟ್ಟರೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಇನ್ನು, ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಲು ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಇಟ್ಟುಕೊಳ್ಳುವುದನ್ನು ನೋಡಿರಬಹುದು. ಅಂತೆಯೇ, ಜನರು ವಿಗ್ರಹಗಳನ್ನು ಅಲಂಕಾರವಾಗಿ ಮನೆಯಲ್ಲಿ ಇಡುತ್ತಾರೆ. ಈ ವಿಗ್ರಹಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕುಟುಂಬ ಸದಸ್ಯರ ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಕೆಲವು ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಿಗ್ರಹಗಳನ್ನು ಮನೆಗೆ ತನ್ನಿ.
ಆಮೆ
ವಾಸ್ತು ಪ್ರಕಾರ, ಲೋಹದ ಆಮೆಯನ್ನು ಮನೆಯ ಮೊದಲ ಕೋಣೆಯಲ್ಲಿ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ತುಂಬಾ ಮಂಗಳಕರವಾಗಿದೆ. ಈ ರೀತಿ ಮಾಡುವುದರಿಂದ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಜೊತೆಗೆ ನಿಮ್ಮ ಯಶಸ್ಸಿನ ಹಾದಿ ಸುಗಮವಾಗುತ್ತದೆ.
ಮೀನು
ವಾಸ್ತು ಪ್ರಕಾರ, ಮನೆಯಲ್ಲಿ ಲೋಹದ ಮೀನನ್ನು ಇಡುವುದು ತುಂಬಾ ಶುಭವಾಗಿದೆ. ಈ ರೀತಿ ಇಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ನಿಮ್ಮ ಸಂಪತ್ತನ್ನು ಹೆಚ್ಚಿಸಲು ನೀವು ಹಿತ್ತಾಳೆ ಅಥವಾ ಬೆಳ್ಳಿಯ ಮೀನಿನ ವಿಗ್ರಹವನ್ನು ಕೂಡ ಮನೆಯಲ್ಲಿ ಇಡಬಹುದು.
ಹಸು (ಕಾಮಧೇನು)
ಹಿಂದೂ ಧರ್ಮದಲ್ಲಿ ಹಸುವನ್ನು ದೇವರಂತೆ ಕಾಣಲಾಗುತ್ತದೆ. ಮನೆಯಲ್ಲಿ ಹಿತ್ತಾಳೆಯ ಕಾಮಧೇನುವಿನ ವಿಗ್ರಹವನ್ನು ಇಟ್ಟರೆ, ಇದು ನಕಾರಾತ್ಮಕ ಶಕ್ತಿಗೆ ಮುಕ್ತಿ ನೀಡುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ: ಹನುಮಂತ ತನ್ನ ಹೆಂಡತಿಯೊಂದಿಗೆ ಕುಳಿತಿರುವ ವಿಶಿಷ್ಟ ದೇವಾಲಯ ಎಲ್ಲಿದೆ ಗೊತ್ತಾ?
ಆನೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಆನೆಯ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರವಾಗಿದೆ. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಜೋಡಿ ಹಂಸಗಳು
ವಾಸ್ತು ಪ್ರಕಾರ, ನಿಮ್ಮ ಮನೆಯ ಮೊದಲ ಕೋಣೆಯಲ್ಲಿ ಒಂದು ಜೋಡಿ ಹಂಸಗಳ ಪ್ರತಿಮೆಯನ್ನು ಇಟ್ಟರೆ, ಅದು ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಜೊತೆಗೆ ಈ ರೀತಿ ಮಾಡುವುದರಿಂದ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ