Hanuman Jayanti 2024: ಹನುಮಂತ ತನ್ನ ಹೆಂಡತಿಯೊಂದಿಗೆ ಕುಳಿತಿರುವ ವಿಶಿಷ್ಟ ದೇವಾಲಯ ಎಲ್ಲಿದೆ ಗೊತ್ತಾ?
ಇಡೀ ವಿಶ್ವವು ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಹೇಳುತ್ತದೆ. ಆದರೆ ಹನುಮನು ಕೂಡ ವಿವಾಹವಾಗಿದ್ಧ ಎಂದು ಸಾಬೀತುಪಡಿಸುವ ದೇವಾಲಯ ಒಂದಿದೆ. ಜೊತೆಗೆ ಭಾರತದ ಕೆಲವು ಭಾಗಗಳಲ್ಲಿ, ಹನುಮಂತನನ್ನು ವಿವಾಹಿತ ಎಂದು ನಂಬಲಾಗಿದೆ. ಹಾಗಾದರೆ ಆಂಜನೇಯ ತನ್ನ ಹೆಂಡತಿಯೊಂದಿಗಿರುವ ದೇವಾಲಯ ಎಲ್ಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಮಾಯಣದ ಪ್ರಕಾರ, ಈ ಭೂಮಿಯ ಮೇಲೆ ಅಮರತ್ವ ಪಡೆದ ಏಳು ಋಷಿಗಳಲ್ಲಿ ಭಜರಂಗಬಲಿಯೂ ಒಬ್ಬ. ಇಡೀ ವಿಶ್ವವು ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಹೇಳುತ್ತದೆ. ಆದರೆ ಹನುಮನು ಕೂಡ ವಿವಾಹವಾಗಿದ್ಧ ಎಂದು ಸಾಬೀತುಪಡಿಸುವ ದೇವಾಲಯ ಒಂದಿದೆ. ಜೊತೆಗೆ ಭಾರತದ ಕೆಲವು ಭಾಗಗಳಲ್ಲಿ, ಹನುಮಂತನನ್ನು ವಿವಾಹಿತ ಎಂದು ನಂಬಲಾಗಿದೆ. ಹಾಗಾದರೆ ಆಂಜನೇಯ ತನ್ನ ಹೆಂಡತಿಯೊಂದಿಗಿರುವ ದೇವಾಲಯ ಎಲ್ಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಜರಂಗಬಲಿ ತನ್ನ ಹೆಂಡತಿಯ ಜೊತೆಗಿರುವ ದೇವಾಲಯ ಎಲ್ಲಿದೆ ಗೊತ್ತಾ?
ತೆಲಂಗಾಣದಲ್ಲಿ ಭಗವಾನ್ ಹನುಮಂತ ಮದುವೆಯಾಗಿದ್ದ ಎಂದು ಪರಿಗಣಿಸಲಾದ ದೇವಾಲಯವಿದೆ. ಹೈದರಾಬಾದ್ ನಿಂದ 220 ಕಿ.ಮೀ ದೂರದಲ್ಲಿರುವ ಖಮ್ಮಮ್ ಜಿಲ್ಲೆಯಲ್ಲಿ ಹನುಮಂತ ಮತ್ತು ಪತ್ನಿ ಸುವರ್ಚಲಾ ದೇವಿಯ ದೇವಾಲಯವಿದೆ. ಇದು ಪ್ರಾಚೀನ ಮಂದಿರವಾಗಿದ್ದು, ಇಲ್ಲಿ ಹನುಮಂತ ಮತ್ತು ಅವನ ಪತ್ನಿಯ ವಿಗ್ರಹವಿದೆ. ಈ ದೇವಾಲಯಕ್ಕೆ ಬಂದು ದೇವರನ್ನು ಭಕ್ತಿಯಿಂದ ಪೂಜಿಸಿದಲ್ಲಿ ಭಕ್ತರ ವೈವಾಹಿಕ ಜೀವನದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಸದಾಕಾಲ ಗಂಡ, ಹೆಂಡತಿಯ ನಡುವೆ ಪ್ರೀತಿ ಇರುತ್ತದೆ ಎಂದು ನಂಬಲಾಗಿದೆ.
ಹನುಮಂತನ ಪತ್ನಿ ಯಾರು?
ಈ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ನಂಬಿಕೆಗಳ ಪ್ರಕಾರ, ಹನುಮಂತನ ಹೆಂಡತಿಯ ಹೆಸರು ಸುವರ್ಚಲಾ. ಅವಳು ಸೂರ್ಯ ದೇವನ ಮಗಳು. ಇದಲ್ಲದೆ, ಪರಾಶರ್ ಸಂಹಿತೆಯಲ್ಲಿ ಹನುಮಂತ ಮತ್ತು ಸುವರ್ಚಲಾ ದೇವಿ ಅವರ ವಿವಾಹದ ಕಥೆಯೂ ಇದೆ.
ಇದನ್ನೂ ಓದಿ: ಹನುಮಾನ್ ಜಯಂತಿಯಂದು ಈ ಮಂತ್ರ ಪಠಿಸಿ! ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತೆ
ಭಗವಾನ್ ಹನುಮಂತನ ಮದುವೆ ನಡೆದದ್ದು ಹೇಗೆ?
ದಂತಕಥೆಯ ಪ್ರಕಾರ, ಹನುಮಂತ ಸೂರ್ಯ ದೇವನಿಂದ ಎಲ್ಲಾ ರೀತಿಯ ಶಕ್ತಿಗಳನ್ನು ಪಡೆದಿದ್ದ. ಆದರೆ ಆತ 9 ರಲ್ಲಿ 5 ವಿದ್ಯೆಗಳನ್ನು ಮಾತ್ರ ಕಲಿತಿದ್ದ ಕಾರಣ ಇನ್ನುಳಿದಂತಹ ವಿದ್ಯೆ, ಮತ್ತು ಶಕ್ತಿಯನ್ನು ಪಡೆಯಲು, ಮದುವೆಯಾಗುವುದು ಅನಿವಾರ್ಯವಾಗಿತ್ತು. ಆದರೆ ಆಂಜನೇಯ ಬಾಲ ಬ್ರಹ್ಮಚಾರಿಯಾಗಿರುವುದರಿಂದ, ಸೂರ್ಯದೇವನು ಈ ಸಮಸ್ಯೆಗೆ ಪರಿಹಾರವಾಗಿ ತನ್ನ ಶಕ್ತಿಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದನು. ಆಕೆಯ ಹೆಸರು ಸುವರ್ಚಲಾ. ಆಕೆಯ ಜೊತೆ ಹನುಮಂತನಿಗೆ ವಿವಾಹ ಮಾಡಿಸುತ್ತಾನೆ. ಆದರೆ ಮದುವೆಯಾದ ನಂತರವೂ ಹನುಮಂತ ಬ್ರಹ್ಮಚಾರಿಯಾಗಿ ಉಳಿಯುತ್ತಾನೆ. ಏಕೆಂದರೆ ಆಂಜನೇಯನನ್ನು ಮದುವೆಯಾದ ನಂತರ ಸುವರ್ಚಲಾ ತಪಸ್ಸಿನಲ್ಲಿ ಮಗ್ನಳಾಗುತ್ತಾಳೆ. ಈ ರೀತಿಯಾಗಿ ಶ್ರೀ ರಾಮ ಭಕ್ತನ ಬ್ರಹ್ಮಚರ್ಯಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ