AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vat Savitri Vrat 2024: ವಟ ಸಾವಿತ್ರಿ ವ್ರತ 2024 ರ ಶುಭ ಸಮಯ, ಪೂಜೆ ವಿಧಾನ, ಮಹತ್ವ

ಈ ದಿನವನ್ನು ಪ್ರತಿ ವರ್ಷ ವೈಶಾಖ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಸತ್ಯವಾನ್ ಸಾವಿತ್ರಿಯ ಪೌರಾಣಿಕ ಕಥೆಯು ಇದಕ್ಕೆ ಸಂಬಂಧಿಸಿದೆ. ಇದರಲ್ಲಿ ಸಾವಿತ್ರಿ ತನ್ನ ಬುದ್ಧಿವಂತಿಕೆ ಮತ್ತು ಗಂಡನ ಮೇಲಿನ ಪ್ರೀತಿಯಿಂದ ಯಮರಾಜನನ್ನು ಭಕ್ತಿಯಿಂದ ಬೇಡಿ ತನ್ನ ಪತಿ ಸತ್ಯವಾನನ ಜೀವನವನ್ನು ಮರಳಿ ಪಡೆದುಕೊಂಡಳು ಹಾಗಾಗಿಯೇ ಈ ವ್ರತಕ್ಕೆ ಹೆಚ್ಚಿನ ಮಹತ್ವವಿದೆ.

Vat Savitri Vrat 2024: ವಟ ಸಾವಿತ್ರಿ ವ್ರತ 2024 ರ ಶುಭ ಸಮಯ, ಪೂಜೆ ವಿಧಾನ, ಮಹತ್ವ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 16, 2024 | 2:55 PM

Share

ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ವಿವಿಧ ರೀತಿಯ ಉಪವಾಸಗಳನ್ನು ಆಚರಿಸುತ್ತಾರೆ. ಅದರಲ್ಲಿ ಮುಖ್ಯವಾದದ್ದು ವಟ ಸಾವಿತ್ರಿ ವ್ರತ. ಈ ದಿನವನ್ನು ಪ್ರತಿ ವರ್ಷ ವೈಶಾಖ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಸತ್ಯವಾನ್ ಸಾವಿತ್ರಿಯ ಪೌರಾಣಿಕ ಕಥೆಯು ಇದಕ್ಕೆ ಸಂಬಂಧಿಸಿದೆ. ಇದರಲ್ಲಿ ಸಾವಿತ್ರಿ ತನ್ನ ಬುದ್ಧಿವಂತಿಕೆ ಮತ್ತು ಗಂಡನ ಮೇಲಿನ ಪ್ರೀತಿಯಿಂದ ಯಮರಾಜನನ್ನು ಭಕ್ತಿಯಿಂದ ಬೇಡಿ ತನ್ನ ಪತಿ ಸತ್ಯವಾನನ ಜೀವನವನ್ನು ಮರಳಿ ಪಡೆದುಕೊಂಡಳು ಹಾಗಾಗಿಯೇ ಈ ವ್ರತಕ್ಕೆ ಹೆಚ್ಚಿನ ಮಹತ್ವವಿದೆ.

ವಟ ಸಾವಿತ್ರಿ ವ್ರತದ ದಿನಾಂಕ ಮತ್ತು ಸಮಯ;

ಪಂಚಾಂಗದ ಪ್ರಕಾರ, ಈ ವ್ರತವನ್ನು ವೈಶಾಖ ಮಾಸದ ಅಮಾವಾಸ್ಯೆಯಂದು ಅಂದರೆ ಜೂ. 6 ರ ಗುರುವಾರ ಆಚರಿಸಲಾಗುವುದು. ವ್ರತ ಮುಹೂರ್ತವು ಜೂ. 05 ರಂದು ಸಂಜೆ 07:54 ಕ್ಕೆ ಪ್ರಾರಂಭವಾಗುತ್ತದೆ ಬಳಿಕ ಜೂ. 06 ರಂದು ಸಂಜೆ 06:07 ಕ್ಕೆ ಕೊನೆಗೊಳ್ಳುತ್ತದೆ.

ಪೂಜಾ ವಿಧಾನ;

-ವಟ ಸಾವಿತ್ರಿಯನ್ನು ಪೂಜಿಸಲು, ವಿವಾಹಿತ ಮಹಿಳೆಯರು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ.

-ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ, ಬಳೆಗಳನ್ನು ಧರಿಸಿ, ಹಣೆಗೆ ಸಿಂದೂರವನ್ನಿಟ್ಟು ಸಿದ್ಧರಾಗಬೇಕು.

-ಭೋಗ ಪ್ರಸಾದಕ್ಕಾಗಿ ಸಾತ್ವಿಕ ಆಹಾರವನ್ನು ತಯಾರಿಸಿ ಎಲ್ಲಾ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಳ್ಳಿ.

-ಆಲದ ಮರದ ಬೇರಿಗೆ ನೀರನ್ನು ಅರ್ಪಿಸಿ. ಬೆಲ್ಲ, ಬೇಳೆ, ಹಣ್ಣುಗಳು, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.

-ನೆನೆಸಿಟ್ಟ ಕಡಲೆಯನ್ನು ದೇವರಿಗೆ ಅರ್ಪಿಸಬೇಕು.

-ನಂತರ ಹಳದಿ ಅಥವಾ ಕೆಂಪು ಬಣ್ಣದ ದಾರವನ್ನು ಆಲದ ಮರಕ್ಕೆ 7 ಬಾರಿ ಸುತ್ತಿ ಪ್ರದಕ್ಷಿಣೆಯನ್ನು ಹಾಕಬೇಕು.

-ಇದರ ಬಳಿಕ ವಟ ಸಾವಿತ್ರಿ ವ್ರತ ಕಥೆಯನ್ನು ಓದಿ ಅಥವಾ ಕೇಳಿ.

-ಬಳಿಕ ಆರತಿ ಮಾಡುವ ಮೂಲಕ ಪೂಜೆ ಮಾಡಿ. ದೇವರ ಆಶೀರ್ವಾದ ಪಡೆಯಿರಿ ಮತ್ತು ನಿಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ. ಹಿರಿಯರಿಂದ, ವಿವಾಹಿತ ಮಹಿಳೆಯರಿಂದ ಆಶೀರ್ವಾದ ಪಡೆಯಿರಿ.

ಇದನ್ನೂ ಓದಿ: ಈ ವಿಷಯಗಳನ್ನು ಯಾರಿಗೂ ಹೇಳಬೇಡಿ! ಜೀವನ ಪ್ರಗತಿಗೆ ಅಡ್ಡಿಯಾಗಬಹುದು

ವಟ ಸಾವಿತ್ರಿ ಉಪವಾಸದ ಮಹತ್ವ;

ಆಲದ ಮರವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜನೀಯವೆಂದು ಪರಿಗಣಿಸಲಾಗಿದೆ. ಅಲ್ಲದೆ ಆಲದ ಮರವು ದೀರ್ಘಕಾಲ ಬದುಕುವ, ದೊಡ್ಡ ಮರವಾಗಿದೆ. ಅದಕ್ಕಾಗಿಯೇ ಇದನ್ನು ಅಕ್ಷಯ ಮರ ಎಂದೂ ಕೂಡ ಕರೆಯುತ್ತಾರೆ. ಪುರಾಣಗಳ ಪ್ರಕಾರ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಆಲದ ಮರದಲ್ಲಿ ವಾಸಿಸುತ್ತಾರೆ. ಹಾಗಾಗಿ ಅದರ ಕೆಳಗೆ ಕುಳಿತು ಪೂಜಿಸುವ ಮೂಲಕ ಮತ್ತು ಉಪವಾಸದ ಕಥೆಯನ್ನು ಕೇಳುವ ಮೂಲಕ, ಎಲ್ಲಾ ಆಸೆಗಳು ಈಡೇರುತ್ತವೆ. ಪ್ರತಿಯೊಬ್ಬ ವಿವಾಹಿತ ಮಹಿಳೆ ವಟ ಸಾವಿತ್ರಿ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗಿ, ದೀರ್ಘಾಯುಷ್ಯ ಪ್ರಾಪ್ತವಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ