Vijaya Ekadashi 2024: ಎಲ್ಲಾ ಕೆಲಸದಲ್ಲಿಯೂ ವಿಜಯ ತಂದು ಕೊಡುತ್ತೆ ಈ ವ್ರತ
ಈ ಬಾರಿಯ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ವಿಜಯ ಏಕಾದಶಿಯನ್ನು ಮಾ. 6 ರಂದು ಆಚರಿಸಲಾಗುತ್ತದೆ. ಈ ವ್ರತವು ಮನದ ಆಸೆಗಳನ್ನು ನೆರವೇರಿಸುತ್ತದೆ. ಅಲ್ಲದೆ, ಹೆಸರೇ ಸೂಚಿಸುವಂತೆ ಈ ತಿಂಗಳಿನ ವ್ರತವು ಪ್ರತಿಯೊಂದು ಕೆಲಸದಲ್ಲಿಯೂ ವಿಜಯ ತಂದು ಕೊಡುವುದರಿಂದ ಎಲ್ಲಾ ಉಪವಾಸ, ವ್ರತಗಳಲ್ಲಿ ಇದನ್ನು ಮುಖ್ಯವೆಂದು ಪರಿಗಣಿಸಲಾಗಿದೆ.
ಏಕಾದಶಿ ವ್ರತವು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಉಪವಾಸ ಮಾಡುವ ಮೂಲಕ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಬಾರಿಯ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ವಿಜಯ ಏಕಾದಶಿಯನ್ನು ಮಾ. 6 ರಂದು ಆಚರಿಸಲಾಗುತ್ತದೆ. ಈ ವ್ರತವು ಮನದ ಆಸೆಗಳನ್ನು ನೆರವೇರಿಸುತ್ತದೆ. ಅಲ್ಲದೆ, ಹೆಸರೇ ಸೂಚಿಸುವಂತೆ ಈ ತಿಂಗಳಿನ ವ್ರತವು ಪ್ರತಿಯೊಂದು ಕೆಲಸದಲ್ಲಿಯೂ ವಿಜಯ ತಂದು ಕೊಡುವುದರಿಂದ ಎಲ್ಲಾ ಉಪವಾಸ, ವ್ರತಗಳಲ್ಲಿ ಇದನ್ನು ಮುಖ್ಯವೆಂದು ಪರಿಗಣಿಸಲಾಗಿದೆ.
ವಿಜಯ ಏಕಾದಶಿ ವ್ರತಾಚರಣೆಯ ಸಮಯ;
ಮಾ. 6 ರಂದು ಬೆಳಿಗ್ಗೆ 06:30 ಕ್ಕೆ ಏಕಾದಶಿ ತಿಥಿ ಪ್ರಾರಂಭವಾಗುತ್ತದೆ, ಮಾ. 7 ರಂದು ಬೆಳಿಗ್ಗೆ 04:13 ಕ್ಕೆ ಏಕಾದಶಿ ತಿಥಿ ಕೊನೆಗೊಳ್ಳುತ್ತದೆ. ಹಾಗಾಗಿ ಏಕಾದಶಿ ವ್ರತವನ್ನು ಮಾ. 6 ರಂದು ಆಚರಣೆ ಮಾಡಲಾಗುತ್ತದೆ.
ವಿಜಯ ಏಕಾದಶಿ ಮಹತ್ವ;
ವಿಷ್ಣು ಭಕ್ತರು ಈ ದಿನ ಅಪಾರ ಭಕ್ತಿಯಿಂದ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಬಳಿಕ ದ್ವಾದಶಿ ತಿಥಿಯಂದು ಅಂದರೆ ಮರುದಿನ ಈ ಉಪವಾಸವನ್ನು ಮುಕ್ತಾಯಗೊಳಿಸಲಾಗುತ್ತದೆ. ಈ ದಿನ ವ್ರತಾಚರಣೆ ಮಾಡುವುದರಿಂದ ಅದೃಷ್ಟ, ವಿಜಯ, ಸಂಪತ್ತು ಮತ್ತು ಸಂತೋಷ ಎಲ್ಲವೂ ಪ್ರಾಪ್ತಿಯಾಗುತ್ತದೆ. ಇನ್ನು ವಿಜಯ ಏಕಾದಶಿ ದಿನದಂದು ಎಲ್ಲಾ ಆಚರಣೆಗಳನ್ನು ಅನುಸರಿಸುವ ಮೂಲಕ ಪೂಜೆ ಮಾಡುವ ವ್ಯಕ್ತಿಯು ತನ್ನ ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳ ಮೇಲೆ ಜಯ ಸಾಧಿಸುವಲ್ಲಿ ಸಫಲನಾಗುತ್ತಾನೆ. ಅಲ್ಲದೆ ಕೆಲವು ನಂಬಿಕೆಗಳ ಪ್ರಕಾರ ಹಿಂದೆ ಈ ಉಪವಾಸವನ್ನು ಆಚರಿಸಿದ ರಾಜರು ಮತ್ತು ಚಕ್ರವರ್ತಿಗಳು ಯುದ್ಧಗಳನ್ನು ಗೆದ್ದಿದ್ದಾರೆ.
ಪುರಾಣಗಳ ಪ್ರಕಾರ, ಅತ್ಯಂತ ಕಷ್ಟದ ಸಂದರ್ಭಗಳಲ್ಲಿಯೂ, ಈ ಉಪವಾಸ ಮಾಡುವುದರಿಂದ ಎಲ್ಲಾ ದುಃಖದಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಸಂಪತ್ತು, ಅದೃಷ್ಟ, ಸಮೃದ್ಧಿ ಮತ್ತು ಯೋಗಕ್ಷೇಮ ಎಲ್ಲವೂ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ವಿಷ್ಣುವಿನ ಆಶೀರ್ವಾದ ಪಡೆಯಲು ಭಕ್ತರು ಏಕಾದಶಿ ಉಪವಾಸವನ್ನು ಆಚರಿಸುತ್ತಾರೆ.
ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸುವ ಹೊಸಂಗಡಿ ಬಳಿಯ ಮೆಟ್ಕಲ್ ಗುಡ್ಡೆ ಮಹಾಗಣಪ, ಇದರ ವಿಶೇಷತೆಗಳೇನು ಗೊತ್ತಾ?
ವಿಜಯ ಏಕಾದಶಿ ಪೂಜಾ ಆಚರಣೆಗಳು;
1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.
2. ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
3. ಭಗವಾನ್ ವಿಷ್ಣುವಿನ ಫೋಟೋ ಅಥವಾ ವಿಗ್ರಹವನ್ನು ಪೂಜಾ ಕೋಣೆಯಲ್ಲಿ ಇರಿಸಿ.
4. ತುಪ್ಪದ ದೀಪ ಹಚ್ಚಿ, ತುಳಸಿ ಮತ್ತು ಹೂವಿನ ಹಾರದಿಂದ ವಿಗ್ರಹವನ್ನು ಅಲಂಕರಿಸಿ.
5. ವಿಜಯ ಏಕಾದಶಿ ವ್ರತ ಕಥೆಯನ್ನು ಪಠಿಸಿ.
6. ವಿಷ್ಣು ಮಹಾ ಮಂತ್ರವನ್ನು ಪಠಿಸಿ.
8. ಖಾಲಿ ಹೊಟ್ಟೆಯಲ್ಲಿ ಇರಲು ಸಾಧ್ಯವಾಗದವರು ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು.
ಯಾವ ಮಂತ್ರ ಪಠಿಸಬೇಕು?
-ಓಂ ನಮೋ ಭಗವತೇ ವಾಸುದೇವಾಯ
-ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ