Spiritual: ಪತಿ – ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 27, 2022 | 7:05 AM

ಆಷಾಢಮಾಸದ ಕೃಷ್ಣಪಕ್ಷದ ಬಿದಿಗೆಯ ದಿನ “ಅಶೂನ್ಯಶಯನ” ಎಂಬ ವ್ರತವನ್ನು ಆಚರಿಸಬೇಕು. ಸೂರ್ಯೋದಯಕ್ಕೆ ಮುನ್ನ ಸ್ನಾನ ಮುಗಿಸಿ ದೇವರ ಮನೆಯಲ್ಲಿ ಕಲಶವನ್ನಿಟ್ಟು ಸಾಯಂಕಾಲದಲ್ಲಿ ಪೂಜೆಯನ್ನು ಮಾಡುವುದು. ಲಕ್ಷ್ಮೀ ಸಮೇತನಾದ ನಾರಾಯಣನನ್ನು ಪಲ್ಲಂಗದಲ್ಲಿಟ್ಟು ಪೂಜಿಸಬೇಕು. ಪೂಜಾಕಾಲದಲ್ಲಿ ಲಕ್ಷ್ಮೀನಾರಾಯಣ ಹೃದಯದ ಪಾರಾಯಣ ಮಾಡಬೇಕು.

Spiritual: ಪತಿ - ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಜಗತ್ತು ಎನ್ನುವುದು ಬದಲಾಗುತ್ತಿರುತ್ತದೆ. ಮನುಷ್ಯನೂ ಅದರಂತೆ ಬದಲಾಗುವುದು ಮತ್ತು ಬದಲಾಗಬೇಕಾದುದು ಸಹಜ. ಆದರೆ ನಾವಿಂದು ಯಾವುದರಲ್ಲಿ ಹೇಗೆ ಬದಲಾಗುತ್ತಿದ್ದೇವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪುರಾತನ ಕಾಲದಲ್ಲಿ ಸ್ತ್ರೀಯರು ಅಧ್ಯಯನ ಮಾಡಿ ಉತ್ತಮ ವಿದ್ಯೆಯನ್ನು ಹೊಂದಿ ತಮ್ಮ ಕರ್ತವ್ಯದಲ್ಲಿ ತತ್ಪರರಾಗುತ್ತಿದ್ದ ಉದಾಹರಣೆಗಳು ಬ್ರಹ್ಮವಾದಿನಿಯರ ಕಥೆಯನ್ನು ಓದಿದಾಗ ತಿಳಿಯುತ್ತದೆ. ಆದರೆ ಬರು ಬರುತ್ತಾ ಅದು ಹ್ರಾಸವಾಗಿ ಒಂದು ಕಾಲದಲ್ಲಿ ಸ್ತ್ರೀಯರ ಅಧ್ಯಯನಕ್ಕೆ ಸಂಪೂರ್ಣ ನಿಷೇಧವಿತ್ತೋ ಎಂಬ ಸಂದರ್ಭ ಇದ್ದಂತೆ ಭಾಸವಾಯಿತು. ಕ್ರಮೇಣ ಅದು ಬದಲಾಗಿ ಈಗ ಪುನಃ ಉತ್ತಮ ಅಧ್ಯಯನದ ಕಾಲ ಬಂದಿದೆ.

ಇವುಗಳ ಮಧ್ಯೆ ಒಂದಷ್ಟು ಜನರು ತಮಗೇ ಅರಿವಿಲ್ಲದಂತೆ ತಮ್ಮ ವಿದ್ಯಾರ್ಹತೆಯನ್ನು ಜ್ಞಾನವಾಗಿ ಸ್ವ (ತನ್ನ) ಮತ್ತು ಪರರ ಹಿತಕ್ಕಾಗಿ ಬಳಸದೇ.. ಕೇವಲ ಅಹಂಕಾರವಾಗಿಸಿಕೊಂಡು ತಮ್ಮವರೊಡನೆಯೇ ವಿರೋಧ ಮನೋಭೂಮಿಕೆಯನ್ನು ಹೊಂದಿ ಒಂಟಿಯಾಗುತ್ತಿದ್ದಾರೆ. ಕಾರಣವಿಷ್ಟೇ ಸ್ವಪ್ರತಿಷ್ಠೆ ಮತ್ತು ಅಹಂಕಾರ. ಸ್ವಪ್ರತಿಷ್ಠೆ ಮತ್ತು ಅಹಂಕಾರವೆಂಬುದು ಯಾವ ಹೊಂದಾಣಿಕೆಗೂ ಬಾರದ ಒಂದು ಸ್ಥಿತಿ. ಇದು ಹೆಚ್ಚಾಗಿ ಗೋಚರಿಸುವುದು ವಿವಾಹಿತ ವಧೂ ವರರಲ್ಲಿ . ಇದರ ಮುಖ್ಯ ಪರಿಣಾಮವೇ ಇಂದಾಗುತ್ತಿರುವ ವಿಚ್ಛೇದನ. ಇದನ್ನು ಸರಿ ಪಡಿಸಲು ಅದೆಷ್ಟೋ ಸಂಪತ್ತು ವ್ಯಯ ಮಾಡಿರುತ್ತೀರಿ. ಇದಕ್ಕೊಂದು ಸುಲಭ ಉಪಾಯವಿದೆ. ಅದೇ “ಅಶೂನ್ಯಶಯನ ವ್ರತ” . ಇದನ್ನು ಕೇವಲ ಸಮಸ್ಯೆ ಇರುವವರು ಮಾತ್ರವಲ್ಲ ಎಲ್ಲರೂ ಆಚರಿಸಬಹುದು. ಈ ವ್ರತವೇನು? ಹೇಗೆ ಆಚರಿಸಬೇಕು? ಯಾವಾಗ ಆಚರಿಸಬೇಕು ? ಎಂಬ ಕುರಿತಾಗಿ ಇಲ್ಲಿದೆ ಮಾಹಿತಿ..

ಆಷಾಢಮಾಸದ ಕೃಷ್ಣಪಕ್ಷದ ಬಿದಿಗೆಯ ದಿನ “ಅಶೂನ್ಯಶಯನ” ಎಂಬ ವ್ರತವನ್ನು ಆಚರಿಸಬೇಕು. ಸೂರ್ಯೋದಯಕ್ಕೆ ಮುನ್ನ ಸ್ನಾನ ಮುಗಿಸಿ ದೇವರ ಮನೆಯಲ್ಲಿ ಕಲಶವನ್ನಿಟ್ಟು ಸಾಯಂಕಾಲದಲ್ಲಿ ಪೂಜೆಯನ್ನು ಮಾಡುವುದು. ಲಕ್ಷ್ಮೀ ಸಮೇತನಾದ ನಾರಾಯಣನನ್ನು ಪಲ್ಲಂಗದಲ್ಲಿಟ್ಟು ಪೂಜಿಸಬೇಕು. ಪೂಜಾಕಾಲದಲ್ಲಿ ಲಕ್ಷ್ಮೀನಾರಾಯಣ ಹೃದಯದ ಪಾರಾಯಣ ಮಾಡಬೇಕು. ದಂಪತಿಗಳಿಗೆ ಉಡಿ ತುಂಬಿ ಆಶೀರ್ವಾದ ಪಡೆಯುವುದು. ಮಹಾವಿಷ್ಣುವಿನ ನಾಮಸ್ಮರಣೆ ಮಾಡಿ ದೇವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ, ಮಂಗಲಾರತಿಯ ನಂತರ ಚಂದ್ರನನ್ನು ಪ್ರಾರ್ಥಿಸಿ ಕಲಶದ ನೀರಿಂದ ಅರ್ಘ್ಯೆಯನ್ನು ಕೊಡುವುದು. ಅಲಂಕರಿಸಲ್ಪಟ್ಟ ಲಕ್ಷ್ಮೀನಾರಾಯಣರ ಮುಂದೆ ಪುರೋಹಿತರನ್ನು ಕುಳ್ಳಿರಿಸಿ ಅವರಿಗೆ ಶಯ್ಯಾ(ಬೆಡ್ ಶೀಟ್) ದಾನ ಮಾಡುವುದು. ಆಮೇಲೆ ದಾಂಪತ್ಯ ಅವಿಚ್ಛೇದಕ ಮಂತ್ರವನ್ನು 108 ಬಾರಿ ಜಪಿಸಬೇಕು.

ಇದನ್ನೂ ಓದಿ
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಪತ್ನೀಭರ್ತುವಿಯೋಗಂಚ ಭರ್ತಾಭಾರ್ಯಾ ಸಮುದ್ಭವಂ |

ನಾಘ್ನವಂತಿಯಥಾ ದುಃಖಂ ದಂಪತ್ಯಾನಿ ತಥಾಕುರು || .

ಈ ರೀತಿಯಾಗಿ ಮಾಡುವುದರಿಂದ ದಾಂಪತ್ಯ ಕಲಹಗಳೇನಿವೆ ಅದು ನಿವಾರಣೆ ಆಗುತ್ತದೆ. ಪ್ರತೀ ಆಷಾಢಮಾಸದಲ್ಲಿ ಈ ವೃತವನ್ನು ಆಚರಿಸುವುದರಿಂದ ಏಳು ಜನ್ಮಪರ್ಯಂತ ಅಕ್ಷಯ್ಯ ದಾಂಪತ್ಯ ದೊರಕುವುದು ಎಂದು ಹೇಳಿದೆ. ಅಲ್ಲದೇ ಉತ್ತಮ ಸಂತತಿ ಮತ್ತು ಲಕ್ಷ್ಮೀದೇವಿಯ ಅನುಗ್ರಹದಿಂದ ಸಂಪತ್ತಿನ ವ್ರದ್ಧಿಯಾಗುತ್ತದೆ. ಹಾಗೆಯೇ ಈ ವ್ರತದ ಫಲದಿಂದ ನೆಮ್ಮದಿಯ ಆನಂದಮಯ ಗೃಹಸ್ಥ ಜೀವನವು ಯಾವುದೇ ಚ್ಯುತಿಯಿಲ್ಲದೆ ಸಾಗುವುದು. ಈ ವ್ರತವನ್ನು ದಂಪತಿಗಳು ಮತ್ತು ವಿವಾಹಾಪೇಕ್ಷಿತ ಕನ್ಯೆಯೂ ಮಾಡಬಹುದಾಗಿದೆ. ಮಾಡುವ ವ್ರತವನ್ನು ಭಕ್ತಿ,ಶ್ರದ್ಧೆಯಿಂದ ಮಾಡಿರಿ. ಮಂಗಲವಾಗಲಿ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ

kkmanasvi@gamail.com