ನವ ದಂಪತಿ ಆರು ತಿಂಗಳವರೆಗೆ ತಿರುಪತಿಗೆ ಹೋಗಬಾರದು, ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಈ ನಾಲ್ಕಾರು ತಪ್ಪು ಮಾಡಬೇಡಿ

ಲೌಕಿಕ ಸುಖಕ್ಕಾಗಿ ಪವಿತ್ರ ತಿರುಮಲಕ್ಕೆ ಹೋಗಬಾರದು. ಆದ್ದರಿಂದಲೇ ಮದುವೆಯಾದ ಆರು ತಿಂಗಳವರೆಗೆ ನವ ಜೋಡಿ ಬೆಟ್ಟಕ್ಕೆ ಹೋಗಬಾರದು ಎಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಮದುವೆಯ ನಂತರ ಆ ವ್ಯಾಮೋಹದಿಂದ ಹೊರಬರಲು ಕನಿಷ್ಠ ಆರು ತಿಂಗಳಾದರೂ ಬೇಕು. ಆದ್ದರಿಂದಲೇ ಈ ನಿಯಮವಿದೆ. ಇದು ಭಕ್ತರಿಗೆ ಮಾತ್ರವಲ್ಲ..

ನವ ದಂಪತಿ ಆರು ತಿಂಗಳವರೆಗೆ ತಿರುಪತಿಗೆ ಹೋಗಬಾರದು, ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಈ ನಾಲ್ಕಾರು ತಪ್ಪು ಮಾಡಬೇಡಿ
ತಿರುಪತಿಗೆ ಹೋದಾಗ ಅಪ್ಪಿತಪ್ಪಿಯೂ ಈ ನಾಲ್ಕಾರು ತಪ್ಪು ಮಾಡಬೇಡಿ
Follow us
|

Updated on: Aug 17, 2024 | 11:00 AM

ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಜಗತ್ತಿನಾದ್ಯಂತ ಭಕ್ತರು ಬರುತ್ತಾರೆ. ಕೆಲವರು ಭಕ್ತಿಯಿಂದ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಇನ್ನು ಕೆಲವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಬಾಲಾಜಿಯ ದರ್ಶನ ಪಡೆಯುತ್ತಾರೆ. ಇನ್ನು ಕೆಲವರು ಗೋವಿಂದುವಿನ ದರ್ಶನಕ್ಕೆ ಹೋಗಿ ಪುಳಕಿತರಾಗುತ್ತಾರೆ. ಯಾವುದೇ ಕಾರಣಕ್ಕೂ ತಿಮ್ಮಪ್ಪನ ಸನ್ನಿಧಿ ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ವಿಶೇಷವಾಗಿ ನೀವು ಪವಿತ್ರ ತಿರುಮಲದಲ್ಲಿರುವ ವೆಂಕಟೇಶ್ವರನ ಕೃಪಕಟಾಕ್ಷವನ್ನು ಹೊಂದಲು ಬಯಸಿದರೆ, ಈ ನಾಲ್ಕು ತಪ್ಪುಗಳನ್ನು ಮಾಡಬೇಡಿ. ಆಗ ಮಾತ್ರ ಕಲಿಯುಗ ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎನ್ನುತ್ತಾರೆ ಪಂಡಿತರು.. ಆ ನಾಲ್ಕು ದೋಷಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ತಿರುಮಲ ಕ್ಷೇತ್ರದಲ್ಲಿ ವರಾಹಸ್ವಾಮಿಗೆ ಮೊದಲ ಪೂಜೆ:

ಸಾಮಾನ್ಯವಾಗಿ ತಿರುಮಲಕ್ಕೆ ಹೋಗುವ ಅನೇಕ ಭಕ್ತರು ಮಾಡುವ ಮೊದಲ ತಪ್ಪು ಶ್ರೀವಾರಿಯ ದರ್ಶನಕ್ಕೆ ನೇರವಾಗಿ ಹೋಗುವುದು. ವಾಸ್ತವವಾಗಿ ವರಾಹಸ್ವಾಮಿಯನ್ನು ಭೇಟಿ ಮಾಡದೆ ಶ್ರೀವೆಂಕಟೇಶ್ವರನ ದರ್ಶನ ಮಾಡಬಾರದು ಎಂದು ಹೇಳಲಾಗುತ್ತದೆ.. ಏಕೆಂದರೆ ತಿರುಮಲ ವರಾಹಸ್ವಾಮಿಗೆ ಸೇರಿದೆ. ಅಲ್ಲಿಗೆ ಬಂದ ವೆಂಕಟೇಶ್ವರ ಸ್ವಾಮಿಗೆ ವರಾಹಸ್ವಾಮಿಯು ಸ್ಥಳಾವಕಾಶ ನೀಡುತ್ತಾರೆ. ಜೊತೆಗೆ ಮೂರು ವಾಗ್ದಾನಗಳನ್ನು ಮಾಡಿಸಿಕೊಳ್ಳುತ್ತಾರೆ. ನಿನಗೆ ( ವರಾಹಸ್ವಾಮಿಗೆ) ಮೊದಲ ದರ್ಶನ, ಮೊದಲ ಪೂಜೆ ಮತ್ತು ಮೊದಲ ನೈವೇದ್ಯ ಕಲ್ಪಿಸುತ್ತೇನೆ ಎಂದು ತಿಮ್ಮಪ್ಪ ಶಾಸನಬದ್ಧ ಪ್ರಮಾಣಪತ್ರವನ್ನೂ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ತಿರುಮಲದ ಅರ್ಚಕರು ವರಾಹಸ್ವಾಮಿಗೆ ಮೊದಲ ಪೂಜೆ ಮತ್ತು ಮೊದಲ ನೈವೇದ್ಯವನ್ನು ಅರ್ಪಿಸುತ್ತಾನೆ. ಆದರೆ, ಅನೇಕ ಭಕ್ತರು ವರಾಹಸ್ವಾಮಿಯ ದರ್ಶನ ಮಾಡದೆ ನೇರವಾಗಿ ಶ್ರೀನಿವಾಸನ ದರ್ಶನ ಮಾಡುತ್ತಾರೆ. ನೀವೂ ಆ ತಪ್ಪುಮಾಡಬೇಡಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. 

ಲೌಕಿಕ ಸುಖಕ್ಕಾಗಿ ತಿರುಮಲಕ್ಕೆ ಹೋಗಬೇಡಿ:

Also Read: God Shiva-Shani Pradosha Vrat ಶನಿ ಪ್ರದೋಷ ವ್ರತ ಶುಭ ಯೋಗ​, ಮಹತ್ವ ತಿಳಿಯಿರಿ -​ ಈ 6 ರಾಶಿಯವರಿಗೆ ಅತ್ಯಂತ ವಿಶೇಷ​

ಲೌಕಿಕ ಸುಖಕ್ಕಾಗಿ ಪವಿತ್ರ ತಿರುಮಲಕ್ಕೆ ಹೋಗಬಾರದು. ಆದ್ದರಿಂದಲೇ ಮದುವೆಯಾದ ಆರು ತಿಂಗಳವರೆಗೆ ನವ ಜೋಡಿ ಬೆಟ್ಟಕ್ಕೆ ಹೋಗಬಾರದು ಎಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಮದುವೆಯ ನಂತರ ಆ ವ್ಯಾಮೋಹದಿಂದ ಹೊರಬರಲು ಕನಿಷ್ಠ ಆರು ತಿಂಗಳಾದರೂ ಬೇಕು. ಆದ್ದರಿಂದಲೇ ಈ ನಿಯಮವಿದೆ. ಇದು ಭಕ್ತರಿಗೆ ಮಾತ್ರವಲ್ಲ.. ವೆಂಕಟೇಶ್ವರನೂ ಪದ್ಮಾವತಿಯನ್ನು ಮದುವೆಯಾಗಿ ಬೆಟ್ಟದ ಕೆಳಗಿರುವ ಅಗಸ್ತ್ಯ ಮಹರ್ಷಿಗಳ ಆಶ್ರಮದಲ್ಲಿ ಆ ಆರು ತಿಂಗಳು ಕಳೆದಿರುವುದೇ ಸಾಕ್ಷಿಯಾಗಿದೆ.

ಪ್ರಭಾವ ಬಳಸಿ ದರ್ಶನ ಪಡೆಯಬೇಡಿ:

ತಿರುಮಲದಲ್ಲಿ ಅನೇಕರು ಮಾಡುವ ಮೂರನೇ ತಪ್ಪು ಎಂದರೆ ಪ್ರಭಾವ ಬಳಸಿ, ಗುಟ್ಟಾಗಿ ತಿಮ್ಮಪ್ಪನ ದರ್ಶನ ಮಾಡುವುದು. ಇದರೊಂದಿಗೆ ಟಿಟಿಡಿ ಆಡಳಿತ ಮಂಡಳಿ ದೇವಸ್ಥಾನದ ಕುರಿತು ರೂಪಿಸಿರುವ ನಿಯಮಗಳನ್ನು ಗಾಳಿಗೆ ತೂರುವುದು ನಡೆಯುತ್ತದೆ. ಪ್ರಭಾವಿಗಳಿಂದ ನಾನಾ ರೀತಿಯ ಪತ್ರಗಳನ್ನು (ರೆಕಮೆಂಡೇಶನ್​) ತಂದು ಆಡಳಿತ ಮಂಡಳಿಗೆ ತೋರಿಸಲಾಗುತ್ತದೆ. ಇದರಿಂದ ತಿಮ್ಮಪ್ಪನ ದರ್ಶನದ ಯಾವುದೇ ಪುಣ್ಯಫಲ ಲಭಿಸುವುದಿಲ್ಲ. ಶುದ್ಧ ಮನಸ್ಸಿನಿಂದ ತಿಮ್ಮಪ್ಪನ ದರ್ಶನ ಪಡೆಯುವುದು ಮುಖ್ಯ.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

ತಿರುಮಲದ ಬೀದಿಗಳಲ್ಲಿ ಚಪ್ಪಲಿ ಧರಿಸಿ ನಡೆಯಬೇಡಿ:

ರಾಮಾನುಜರ ಪ್ರಕಾರ ಮುಖ್ಯವಾಗಿ ತಿರುಮಲದ ಬೀದಿಗಳಲ್ಲಿ ವಿಶೇಷವಾಗಿ ಚಪ್ಪಲಿ ಧರಿಸಿ ನಡೆಯಬೇಡಿ. ಇಡೀ ಬೆಟ್ಟವೇ ಒಂದು ಹಳ್ಳಿ. ಇಡೀ ಬೆಟ್ಟವು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದಿದ್ದರೂ, ಕೆಲವು ಬೀದಿಗಳಲ್ಲಿ ಚಪ್ಪಲಿಯನ್ನು ಧರಿಸಬಾರದು. ಯಾಕೆಂದರೆ ಬೆಟ್ಟದಲ್ಲಿ ಬೆಳೆಯುವ ಪ್ರತಿ ಹೂವೂ ದೇವರಿಗೆ ಮುಡಿಪಾಗಿದೆ.. ಅದನ್ನು ಚಪ್ಪಲಿ ಮೆಟ್ಟಿದ ಕಾಲಿಂದ ತುಳಿಯುವುದು ಸರಿಯಲ್ಲ… ಈ ಎಲ್ಲಾ ತಪ್ಪುಗಳನ್ನು ಮಾಡದೇ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಶ್ರೀವೆಂಕಟೇಶ್ವರನ ದರ್ಶನ ಪಡೆದರೆ ಎಲ್ಲವೂ ಸಿದ್ಧಿಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)