Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ
ಹೇಳಿ ಕೇಳಿ ಭಾರತ ದೇವಾಲಯಗಳ ನೆಲವೀಡು. ದೇವಾನುದೇವತೆಗಳಿಗೆ ಅಸಂಖ್ಯಾತ ದೇಗುಲಗಳಿವೆ. ಇತ್ತೀಚೆಗೆ ಮನುಷ್ಯರಿಗೂ ಮಂದಿರಗಳನ್ನು ಕಟ್ಟಲಾಗುತ್ತಿದೆ! ಇವುಗಳ ಸಮ್ಮುಖದಲ್ಲಿ ಸ್ವಾಮಿ ನಿಷ್ಠೆ ಮತ್ತು ನಿಯತ್ತಿಗೆ ಮತ್ತೊಂದು ಹೆಸರು ಶ್ವಾನ ಎಂಬುದು ನಿರ್ವಿವಾದ. ಮನುಷ್ಯರೂ ಸಹ ಇಂತಹ ನಾಯಿಗಳ ಬಗ್ಗೆ ನಿಷ್ಠೆ ಹೊಂದಿದ್ದು, ನಿಯತ್ತಿನಿಂದ ಬಹುತೇಕ ಕಡೆಗಳಲ್ಲಿ ನಾಯಿಗಳನ್ನು ಪೂಜಿಸುತ್ತಾರೆ. ಹೀಗೆ ನಾಯಿಗಳನ್ನು ಪೂಜಿಸಲು ಭಾರತದಲ್ಲಿ ಅನೇಕ ಕಡೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಗಮನಾರ್ಹವೆಂದರೆ ನಾಯಿಗಳಿಗಾಗಿ ಸ್ಥಾಪಿಸಲಾಗಿರುವ ಈ ದೇವಾಲಯಗಳು ಜನರ ನಂಬಿಕೆ ಗೌರವದ ಸಂಕೇತವಾಗಿದ್ದು ಶ್ರದ್ಧಾ ಭಕ್ತಿಯಿಂದ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಹೇಳಿ ಕೇಳಿ ಭಾರತ ಮಂದಿರಗಳ ನೆಲವೀಡು. ದೇವಾನುದೇವತೆಗಳಿಗೆ ಅಸಂಖ್ಯಾತ ದೇಗುಲಗಳಿವೆ. ಇತ್ತೀಚೆಗೆ ಮನುಷ್ಯರಿಗೂ ಮಂದಿರಗಳನ್ನು ಕಟ್ಟಲಾಗುತ್ತಿದೆ! ಇವುಗಳ ಸಮ್ಮುಖದಲ್ಲಿ ಸ್ವಾಮಿ ನಿಷ್ಠೆ ಮತ್ತು ನಿಯತ್ತಿಗೆ ಮತ್ತೊಂದು ಹೆಸರು ಶ್ವಾನ ಎಂಬುದು ನಿರ್ವಿವಾದ. ಮನುಷ್ಯರೂ ಸಹ ಇಂತಹ ನಾಯಿಗಳ ಬಗ್ಗೆ ನಿಷ್ಠೆ ಹೊಂದಿದ್ದು, ನಿಯತ್ತಿನಿಂದ ಬಹುತೇಕ ಕಡೆಗಳಲ್ಲಿ ನಾಯಿಗಳನ್ನು ಪೂಜಿಸುತ್ತಾರೆ. ಹೀಗೆ ನಾಯಿಗಳನ್ನು ಪೂಜಿಸಲು ಭಾರತದಲ್ಲಿ ಅನೇಕ ಕಡೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಗಮನಾರ್ಹವೆಂದರೆ ನಾಯಿಗಳಿಗಾಗಿ ಸ್ಥಾಪಿಸಲಾಗಿರುವ ಈ ದೇವಾಲಯಗಳು ಜನರ ನಂಬಿಕೆ ಗೌರವದ ಸಂಕೇತವಾಗಿದ್ದು ಶ್ರದ್ಧಾ ಭಕ್ತಿಯಿಂದ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಇಲ್ಲಿಗೆ ಬರುವ ಸಾವಿರಾರು ಜನರು ಯಾವುದೇ ಧಾರ್ಮಿಕ ಸ್ಥಳದಲ್ಲಿನ ಸಂಪ್ರದಾಯದಂತೆ ತಲೆಬಾಗಿ ಶ್ವಾನಗಳಿಗೆ ನಮಿಸುತ್ತಾರೆ. ನಾಯಿಗಳ ಈ ದೇವಾಲಯಗಳಿಗೆ ಸಂಬಂಧಿಸಿದಂತೆ ಅನೇಕ ಆಸಕ್ತಿದಾಯಕ, ರೋಚಕ ಕಥೆಗಳು ಮತ್ತು ಪುರಾಣಗಳು ಇವೆ. ನೀವು ಕೂಡ ಕೇಳಿರಬಹುದು. ಆದರೆ ನೀವು ಇಲ್ಲಿಯವರೆಗೆ ಅಂತಹ ದೇವಾಲಯಗಳ ಬಗ್ಗೆ ತಿಳಿದಿಲ್ಲದಿದ್ದರೆ, ಅದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. 1. ಶತಮಾನದಷ್ಟು ಹಳೆಯ ಶ್ವಾನ ಮಂದಿರ ಇಲ್ಲಿದೆ – Laturiya Baba dog Sikandrabad Bulandshahr district Uttar Pradesh ಉತ್ತರ ಪ್ರದೇಶದ ಸಿಕಂದರಾಬಾದ್‌ನಿಂದ 15 ಕಿ.ಮೀ. ದೂರದಲ್ಲಿರುವ ಬುಲಂದ್‌ಶಹರದಲ್ಲಿ (Sikandrabad town of Uttar Pradesh’s Bulandshahr district) ಸುಮಾರು 100 ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ. ಇಲ್ಲಿ ನಾಯಿಯ ಸಮಾಧಿಗೆ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಹೋಳಿ, ದೀಪಾವಳಿಯಂದು ಇಲ್ಲಿ ಜಾತ್ರೆಯಂತೆ ನಡೆಯುತ್ತದೆ. ಶ್ರಾವಣ ಮತ್ತು ನವರಾತ್ರಿಗಳಲ್ಲಿ ಉಚಿತ ಆಹಾರ ಸೇವೆ ಸಹ ಆಯೋಜಿಸಲಾಗುತ್ತದೆ. ಇಲ್ಲಿ ಜನರ ಕೋರಿಕೆಗಳು ಈಡೇರುತ್ತದೆ ಎಂಬ...
Published On - 3:58 pm, Fri, 9 August 24