Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?

|

Updated on: Jan 05, 2025 | 10:10 AM

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬೀರುಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಶುಭ. ಈಶಾನ್ಯ ದಿಕ್ಕು ತಪ್ಪಿಸಬೇಕು. ಬೀರು ಸ್ವಚ್ಛವಾಗಿರಬೇಕು ಮತ್ತು ಖಾಲಿ ಇರಬಾರದು. ಕಬ್ಬಿಣ ಅಥವಾ ಮರದ ಬೀರು ಉತ್ತಮ. ಬೀರು ಮೇಲೆ ಕನ್ನಡಿ ಇಡಬಾರದು. ಸರಿಯಾದ ದಿಕ್ಕಿನಲ್ಲಿ ಬೀರು ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
Cupboards In Your Home
Follow us on

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬೀರು ಇಡುವ ದಿಕ್ಕಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ನೀಡಲಾಗಿದೆ. ಇವುಗಳನ್ನು ನಂಬುವುದರಿಂದ ನಿಮ್ಮ ಜೀವನದಲ್ಲಿ ಅನೇಕ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಬೀರುವನ್ನು ತಪ್ಪು ದಿಕ್ಕಿನಲ್ಲಿ ಇಟ್ಟುಕೊಂಡಿದ್ದರೆ, ಆ ಮನೆಯಲ್ಲಿ ವಾಸಿಸುವ ಜನರು ದುಃಖ ಮತ್ತು ನಕಾರಾತ್ಮಕತೆಯನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ಪ್ರಕಾರ, ಬೀರು ಯಾವ ದಿಕ್ಕಿನಲ್ಲಿರಬೇಕು ?

ಮನೆಯಲ್ಲಿ ಯಾವಾಗಲೂ ಬೀರುವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದನ್ನು ಸಾಮಾನ್ಯವಾಗಿ ಮಂಗಳಕರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಮನೆಯಲ್ಲಿ ನಡೆಯುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ. ಇದಲ್ಲದೇ ಬೀರು ಮೇಲೆ ಕನ್ನಡಿ ಇರಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ವ್ಯಕ್ತಿಯ ಆದಾಯವನ್ನು ಕಡಿಮೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಅಪ್ಪಿತಪ್ಪಿಯೂ ಕಪಾಟನ್ನು ಇಡಬಾರದು. ಈ ರೀತಿ ಇಡುವುದು ಹಣದ ಕೊರತೆಗೆ ಕಾರಣವಾಗಬಹುದು. ನೀವು ನಿಮ್ಮ ಲಾಕರ್ ಅಥವಾ ಬೀರುವಿನ ಮುಖವನ್ನ ಉತ್ತರ ಅಥವಾ ಪಶ್ಚಿಮದ ಕಡೆಗೆ ತೆರೆದಿಡಬೇಕು. ಇದರಿಂದ ತಿಜೋರಿಯ ಬಾಗಿಲು ಪೂರ್ವಕ್ಕೆ ಓಪನ್ ಆಗುತ್ತದೆ. ಈ ರೀತಿ ಮಾಡುವುದರಿಂದ ಅದೃಷ್ಟ ಒಲಿಯುತ್ತದೆ.

ಇದನ್ನೂ ಓದಿ: ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಬೆಳ್ಳಿ ಧರಿಸಬಾರದು; ಜೀವನ ದುಃಖದಿಂದಲೇ ಸಾಗುತ್ತದೆ!

ಮನೆಯಲ್ಲಿ ಬೀರುಗಳನ್ನು ಎಲ್ಲಿ ಇಡಬಹುದು?

  • ಮಲಗುವ ಕೋಣೆಯಲ್ಲಿ ವಾರ್ಡ್ರೋಬ್ ಅನ್ನು ಇರಿಸುವಾಗ, ಗೋಡೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರದಂತಹ ಸ್ಥಳದಲ್ಲಿ ಇಡಬೇಕು.
  • ಬೀರು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು.
  • ಬೀರುವನ್ನು ಎಂದಿಗೂ ಖಾಲಿ ಇಡಬಾರದು ಅದು ಅಶುಭಕರವಾಗಿರುತ್ತದೆ. ಸ್ವಲ್ಪ ಹಣ ಅಥವಾ ಚಿನ್ನಾಭರಣಗಳನ್ನು ಇಟ್ಟುಕೊಳ್ಳಬೇಕು.
  • ವಾಸ್ತು ಪ್ರಕಾರ, ಕಬ್ಬಿಣ ಅಥವಾ ಮರದಿಂದ ಮಾಡಲ್ಪಟ್ಟ ಬೀರು ಬಳಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:09 am, Sun, 5 January 25