ತಿರುಪತಿ ತಿಮ್ಮಪ್ಪನಿಗೆ ಕಲಿಯುಗದ ಭಕ್ತರು ಮುಡಿ ಕೊಡುತ್ತಾರೆ, ಏಕೆ? ಪುರಾಣ ಐತಿಹ್ಯ ಏನು?

Devotees of Kaliyuga tonsure heads to Tirupati: ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದು ಬಂದಿದೆ! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ... ಭಗವಂತ ನೆಲೆಸಿರುವ ವೈಕುಂಠ ನಿವಾಸವೇ ಒಂದು ದೊಡ್ಡ ಅಚ್ಚರಿ.

ತಿರುಪತಿ ತಿಮ್ಮಪ್ಪನಿಗೆ ಕಲಿಯುಗದ ಭಕ್ತರು ಮುಡಿ ಕೊಡುತ್ತಾರೆ, ಏಕೆ? ಪುರಾಣ ಐತಿಹ್ಯ ಏನು?
ತಿಮ್ಮಪ್ಪನಿಗೆ ಭಕ್ತರು ಮುಡಿ ಸಮರ್ಪಣೆ ಯಾಕೆ ಮಾಡುತ್ತಾರೆ?
Follow us
ಸಾಧು ಶ್ರೀನಾಥ್​
|

Updated on: Oct 05, 2024 | 2:02 AM

Miracle of Tirupati temple: ಅಪಾರ ಸ್ಥಳ ಮಹಾತ್ಮೆ ಹೊಂದಿರುವ ತಿರುಪತಿ ಬಳಿಯ ತಿರುಮಲ ಬೆಟ್ಟದಲ್ಲಿ ನೆಲೆಗೊಂಡಿರುವ ವೆಂಕಟರಮಣ ಸ್ವಾಮಿಯ ವಿಗ್ರಹ ಸಂಪೂರ್ಣವಾಗಿ ಸ್ವಯಂ ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆ ಮಾಡಿಲ್ಲ. ಈ ಹಿಂದೆ ತಿರುಪತಿ ತಿಮ್ಮಪ್ಪ ಹುತ್ತದಲ್ಲಿರುವಾಗ, ಸಾಕ್ಷಾತ್ ಈಶ್ವರನೇ ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ.

ರಾಜಾ ಚೋಳನ ಅರಮನೆ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದು ಅನುಮಾನಕ್ಕೆ ಕಾರಣವಾಗುತ್ತದೆ. ಒಂದು ದಿನ, ಆ ಹಸುವನ್ನು ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ. ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ!

Also Read: ದಸರಾ ಶಬ್ದದ ಉತ್ಪತ್ತಿ: ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರ ಏನು ಹೇಳುತ್ತದೆ? ಈ ಹಿಂದೆ ಒಟ್ಟು ಎಷ್ಟು ನವರಾತ್ರಿಗಳನ್ನು ಆಚರಿಸುತ್ತಿದ್ದರು?

ಅನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ ಭಕ್ತರು, ನನ್ನ ಕ್ಷೇತ್ರಕ್ಕೆ ಬಂದು ಮುಡಿ ಸಮರ್ಪಣೆ ಮಾಡಲಿ. ಅವರು ಕೊಡುವ ತಲೆ ಕೂದಲಿನ ಮುಡಿ, ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು.

ಈಗಲೂ, ಭಕ್ತರು ಕೊಡುವ ತಲೆ ಮುಡಿ, ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಸಮರ್ಪಣೆ ಆಗುತ್ತದೆ ಎಂಬುದು ಪುರಾಣ ಐತಿಹ್ಯ. ಹೀಗೆ ನೀಲಾದೇವಿ, ಜೋಡಿಸಿದ ತಲೆಕೂದಲು ಈಗಲೂ, ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ…

Also Read: Dasara 2024 – ದುರ್ಗಾ ದೇವಿಯನ್ನು ಶಮಿ ಎಲೆ-ಹೂವಿನಿಂದ ಪೂಜಿಸುತ್ತಾರೆ ಏಕೆ? ಬನ್ನಿ ಬನ್ನೀ ಮರದ ಮಹತ್ವ ತಿಳಿಯೋಣ

ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದು ಬಂದಿದೆ! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ… ಭಗವಂತ ನೆಲೆಸಿರುವ ವೈಕುಂಠ ನಿವಾಸವೇ ಒಂದು ದೊಡ್ಡ ಅಚ್ಚರಿ. ಇನ್ನೂ ಎಷ್ಟೊಂದು ಅಚ್ಚರಿಗಳು ಆ ಬೆಟ್ಟಗಳಲ್ಲಿ ಅಡಗಿದೆಯೋ ಆ ತಿಮ್ಮಪ್ಪನೇ ಬಲ್ಲ!

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು