Zodiac Sign: ಈ ಐದು ರಾಶಿಯ ಜನರಿಗೆ ಸದಾ ಪುಸ್ತಕ ಓದುವುದೆಂದರೆ ತುಂಬಾ ಇಷ್ಟ! ಯಾವ ರಾಶಿಯವರು ಅವರು?

| Updated By: ಸಾಧು ಶ್ರೀನಾಥ್​

Updated on: Nov 19, 2021 | 7:25 AM

ಯಾರೇ ಆಗಲಿ ತಮ್ಮ ರಾಶಿಯಲ್ಲಿ ಅಡಕವಾಗಿರುವ ಗುಣವಿಶೇಷಗಳಿಗೆ ಅನುಸಾರವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಯಾವುದೇ ರಾಶಿಯವರಲ್ಲಾಗಲಿ ಅವರಲ್ಲಿ ಅನೇಕ ಗುಣ, ಅವಗುಣಗಳು ಇರುತ್ತವೆ. ಇವುಗಳ ಆಧಾರದ ಮೇಲೆಯೇ ಅವರು ಜನರ ಮಧ್ಯೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕೆಲವು ಜನರು ತುಂಬಾ ಬುದ್ಧಿವಂತರು ಮತ್ತು ತಾರ್ಕಿಕ ಜನರೂ ಆಗಿರುತ್ತಾರೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 5 ರಾಶಿಯ ಜನ ಅಧ್ಯಯನಶೀಲರು, ಇವರಿಗೆ ಪುಸ್ತಕಗಳನ್ನು ಓದುವುದು ಅಂದ್ರೆ ತುಂಬಾ ಇಷ್ಟವಾಗಿರುತ್ತದೆ.

1 / 5
ಮಿಥುನ ರಾಶಿ (Gemini): ಈ ರಾಶಿಯವರು ತಿಳಿವಳಿಕೆಯುಳ್ಳವರಾಗಿರುತ್ತಾರೆ. ತಾರ್ಕಿಕವಾಗಿ ಯೋಚಿಸುವುದರಲ್ಲಿ ವಿಶ್ವಾಸ ಹೊಂದಿರುತ್ತಾರೆ. ಪುಸ್ತಕಗಳನ್ನು ಓದುವುದರ ಮೂಲಕವೇ ಜ್ಞಾನಾರ್ಜನೆ ಸಾಧ್ಯ ಎಂಬುದನ್ನು ಇವರು ಚೆನ್ನಾಗಿ ಬಲ್ಲರು. ತುಂಬಾ ಸ್ಮಾರ್ಟ್ ಆಗಿಯೂ ಇವರು ವ್ಯವಹರಿಸುತ್ತಾರೆ.

2 / 5
ಕನ್ಯಾ ರಾಶಿ (Virgo): ಕನ್ಯಾ ರಾಶಿಯವರ ಜೀವನದಲ್ಲಿ ಪುಸ್ತಕಗಳು ಬಹು ದೊಡ್ಡ ಭಾಗವಾಗಿರುತ್ತದೆ. ಪುಸ್ತಕಗಳನ್ನು ಓದುವುದು ಇವರಿಗೆ ಒಂದು ಹವ್ಯಾಸವಾಗಿರುತ್ತದೆ. ಇವರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ಕೊಡುವುದು ಒಳ್ಳೆಯ ವಿಚಾರ.

3 / 5
ಧನು ರಾಶಿ (Sagittarius): ಈ ರಾಶಿಯ ಜನ ತುಂಬಾ ತಿಳಿವಳಿಕೆಯುಳ್ಳವರಾಗಿರುತ್ತಾರೆ. ಆದರೆ ಇವರಿಗೆ ಒಂದೇ ಸ್ಥಳದಲ್ಲಿ ದೀರ್ಘ ಕಾಲದವರೆಗೂ ಕುಳಿತುಕೊಳ್ಳುವುದು ಕಠಿಣವಾಗಿರುತ್ತದೆ. ಆದರೆ ಇವರಿಗೆ ಕಲಿಕೆ ಎಂಬುದು ಕ್ಷಿಪ್ರವಾಗಿ ಕೈಗೂಡುತ್ತದೆ. ಕಡಿಮೆ ಸಮಯದಲ್ಲಿ ಅಗಾಧ ಪಾಂಡಿತ್ಯ ಸಾಧಿಸಬಲ್ಲವರಾಗಿರುತ್ತಾರೆ.

4 / 5
ಕುಂಭ ರಾಶಿ (Aquarius): ಈ ರಾಶಿಯವರು ಗಂಟೆಗಟ್ಟಲೆ ಒಂದೇ ಕಡೆ ಕುಳಿತು ವ್ಯಾಸಂಗದಲ್ಲಿ ತೊಡಗಬಲ್ಲರು. ಹೊಸ ಹೊಸ ವಿಷಯಗಳನ್ನು ಕಲೆಯುವುದರಲ್ಲಿ ಇವರಿಗೆ ಆಸಕ್ತಿಯಿರುತ್ತದೆ. ಹೆಚ್ಚು ಹೆಚ್ಚು ಜ್ಞಾನಾರ್ಜನೆ ಮಾಡಬೇಕು ಎಂಬುದೇ ಇವ್ರ ಮನಸ್ಸಿನಲ್ಲಿರುತ್ತದೆ.

5 / 5
ಮಕರ ರಾಶಿ (Capricorn): ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಅದಕ್ಕಾಗಿ ತುಂಬಾ ಶ್ರಮ ಹಾಕುತ್ತಾರೆ. ಯಾವುದೇ ಸಾಧನೆ ಮಾಡಬೇಕು ಎಂದರೂ ಅದಕ್ಕಾಗಿ ತುಂಬಾ ಶ್ರದ್ಧೆಯಿಂದ ತಯಾರಿ ನಡೆಸುತ್ತಾರೆ. ಬೇರೆಯವರಿಗಿಂತಾ ತುಂಬಾ ಮೊದಲೇ ವಿಷಯಗಳನ್ನು ಗ್ರಹಿಸುತ್ತಾರೆ.