Amazon Great Indian Festival 2022: ಆಕರ್ಷಕ ಬೆಲೆಯಲ್ಲಿ, ನಿಮ್ಮಿಷ್ಟದ ವಸ್ತುಗಳನ್ನು ಕೊಳ್ಳಲು ನಿಮಗಿದು ಬೆಸ್ಟ್​ ಚಾನ್ಸ್​

‘ಅಮೆಝಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2022 ಲಕ್ಷಾಂತರ ಮಾರಾಟಗಾರರ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳ (ಎಸ್‌ಎಮ್‌ಬಿ), ಹಾಗೂ ಜನಪ್ರಿಯ ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೆ ಬಹುಸಂಖ್ಯೆಯ ಉತ್ತಮ ವ್ಯವಹಾರಗಳನ್ನು ಹಾಗೂ ಕೊಡುಗೆಗಳನ್ನು ನಿಮಗಾಗಿ ತಂದಿದೆ.

Amazon Great Indian Festival 2022: ಆಕರ್ಷಕ ಬೆಲೆಯಲ್ಲಿ, ನಿಮ್ಮಿಷ್ಟದ ವಸ್ತುಗಳನ್ನು ಕೊಳ್ಳಲು ನಿಮಗಿದು ಬೆಸ್ಟ್​ ಚಾನ್ಸ್​
Amazon Great Indian Festival 2022
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2022 | 5:42 PM

ಬೆಂಗಳೂರು : ಅಮೆಝಾನ್‌.ಇನ್‌ನ ಬೃಹತ್‌ ಹಬ್ಬದ ಸಂಭ್ರಮಾಚರಣೆಯಾದ ‘ಅಮೆಝಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2022 ಲಕ್ಷಾಂತರ ಮಾರಾಟಗಾರರ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳ (ಎಸ್‌ಎಮ್‌ಬಿ), ಹಾಗೂ ಜನಪ್ರಿಯ ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೆ ಬಹುಸಂಖ್ಯೆಯ ಉತ್ತಮ ವ್ಯವಹಾರಗಳನ್ನು ಹಾಗೂ ಕೊಡುಗೆಗಳನ್ನು ನಿಮಗಾಗಿ ತಂದಿದೆ. ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ಸಾಧನಗಳು, ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್‌ ಸಾಧನಗಳು, ಫ್ಯಾಷನ್‌ ಮತ್ತು ಸೌಂದರ್ಯ, ನಿತ್ಯಬಳಕೆಯ ಆಹಾರ ಪದಾರ್ಥಗಳು, ಅಮೆಝಾನ್‌ ಸಾಧನಗಳು, ಗೃಹಬಳಕೆಯ ಮತ್ತು ಅಡುಗೆಮನೆಗಳಲ್ಲಿ ಬಳಸುವ ಸಾಧನಗಳ ವ್ಯಾಪಕ ಶ್ರೇಣಿಯಲ್ಲಿ ಅಗ್ರಗಣ್ಯ ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೆ ಉತ್ಸಾಹದಾಯಕ ವ್ಯವಹಾರಗಳನ್ನು ಹಾಗೂ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಇಷ್ಟು ಮಾತ್ರವಲ್ಲದೇ, ಗ್ರಾಹಕರು ಅಮೆಝಾನ್‌ ಮಾರಾಟಗಾರರ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಅಮೆಝಾನ್‌ ಲಾಂಚ್‌ಪ್ಯಾಡ್‌ (Amazon Launchpad), ಅಮೆಝಾನ್‌ ಸಹೇಲಿ (Amazon Saheli), ಹಾಗೂ ಅಮೆಝಾನ್‌ ಕಾರೀಗಾರ್‌ (Amazon Karigar) ರೀತಿಯ ವಿವಿಧ ಇತರ ಕಾರ್ಯಕ್ರಮಗಳ ಅಡಿಯಲ್ಲಿಯೂ ಕೊಳ್ಳುವ ಅವಕಾಶವನ್ನು ಹೊಂದಿರುವುದರ ಜೊತೆಗೆ ಪ್ರಮುಖ ಭಾರತೀಯ ಹಾಗೂ ಜಾಗತಿಕ ಬ್ರ್ಯಾಂಡ್‌ಗಳ ವಿವಿಧ ವರ್ಗಗಳಿಗೆ ಸೇರಿದ ಉತ್ಪನ್ನಗಳನ್ನು ಹಾಗೂ ಲಕ್ಷಾಂತರ ಸಣ್ಣಗಾತ್ರದ ವ್ಯವಹಾರಗಳಿಂದ ಒದಗಿಸಲ್ಪಟ್ಟಿರುವ ಕೊಡುಗೆಗಳನ್ನು ಪಡೆಯುವ ಅವಕಾಶವನ್ನೂ ಹೊಂದಿರುತ್ತಾರೆ.

ದಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನ ಸಮಯದಲ್ಲಿ ವಿವಿಧ ಉತ್ಪನ್ನಗಳನ್ನು ಕೊಳ್ಳುವಂತಹ ಗ್ರಾಹಕರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಂತಹ ಅಮೆಝಾನ್‌ನ ಪ್ರಮುಖ ಪಾಲುದಾರ ಬ್ಯಾಂಕ್‌ಗಳಿಂದ ಹಾಗೂ ಇತರ ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮೂಲಕ ಅತ್ಯಾಕರ್ಷಕ ಕೊಡುಗೆಗಳನ್ನು ಹಾಗೂ ರಿಯಾಯತಿಗಳನ್ನು ಪಡೆಯಬಹುದಾಗಿದೆ. ಎಸ್‌ಬಿಐ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು ಹಾಗೂ ಇಎಮ್‌ಐ ವ್ಯವಹಾರಗಳ ಮೇಲೆ ಶೇ 10ರಷ್ಟು ತಕ್ಷಣದ ರಿಯಾಯಿತಿ ಹಾಗೂ ಡೆಬಿಟ್‌ ಮತ್ತು ಕ್ರೆಡೆಟ್‌ ಕಾರ್ಡ್‌ಗಳ ಮೂಲಕ ಶುಲ್ಕರಹಿತ ಇಎಮ್‌ಐ ಸೌಲಭ್ಯವನ್ನೂ ಹಾಗೂ ಇನ್ನಿತರ ಸೌಲಭ್ಯಗಳನ್ನೂ ಪಡೆಯಬಹುದಾಗಿದೆ.

ಉತ್ಪನ್ನಗಳನ್ನು 11 ಲಕ್ಷ ಮಾರಾಟಗಾರರಿಂದ ಮತ್ತು 2 ಲಕ್ಷ ಸ್ಥಳೀಯ ಮಳಿಗೆಗಳಿಂದ ಕೊಳ್ಳುವ ಅವಕಾಶ

ದಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ (ಜಿಐಎಫ್‌) ಅಮೇಝಾನ್‌ನ ಗ್ರಾಹಕರಿಗೆ ಭಾರತದ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಹಾಗೂ ಸ್ಥಳೀಯ ಮಳಿಗೆಗಳ ವಿಶಿಷ್ಟ ಉತ್ಪನ್ನಗಳು ಸೇರಿದಂತೆ ಕೋಟ್ಯಂತರ ಉತ್ಪನ್ನಗಳನ್ನು ಒದಗಿಸುವ 11 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮಾರಾಟಗಾರರನ್ನು ಸಂಭ್ರಮಿಸುತ್ತದೆ.

ಪ್ರಮುಖ ಹಾಗೂ ಅತಿ ದೊಡ್ಡ ಬ್ರ್ಯಾಂಡ್‌ಗಳ ಉತ್ಪನ್ನಗಳ ವ್ಯಾಪಕ ಶ್ರೇಣಿಗಳಿಂದ ಬೇಕಾದದ್ದನ್ನು ಆಯ್ದುಕೊಳ್ಳಿ

ದಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸಂಭ್ರಮಾಚರಣೆಯು 2000ಕ್ಕೂ ಹೆಚ್ಚಿನ ಸಂಖ್ಯೆಯ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಮಾತ್ರವಲ್ಲದೇ ಪ್ರಮುಖ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್‌, ಐಕ್ಯೂಓಓ, ಎಮ್‌ಐ, ರೆಡ್‌ಮಿ, ಆಪಲ್‌, ಒನ್‌ಪ್ಲಸ್‌, ಎಲ್‌ಜಿ, ಸೋನಿ, ಕೋಲ್‌ಗೇಟ್‌, ಬೋಟ್‌ (boAt), ಎಚ್‌ಪಿ, ಲೆನೋವೋ, ಫೈರ್‌-ಬೋಲ್ಟ್‌, ನಾಯ್ಸ್‌, ಹೈಸೆನ್ಸ್‌, ವು (Vu), ಟಿಸಿಎಲ್‌, ಅಲೆನ್‌ ಸೋಲಿ, ಬಿಬಾ (Biba), ಮ್ಯಾಕ್ಸ್‌, ಪ್ಯೂಮಾ, ಅಡಿಡಾಸ್‌, ಅಮೆರಿಕನ್‌ ಟೂರಿಸ್ಟರ್‌, ಸಫಾರಿ, ಮೇಬೆಲ್ಲೈನ್‌, ಷುಗರ್‌ ಕಾಸ್ಮೆಟಿಕ್ಸ್‌, ಲೋರಿಯಾಲ್‌, ಬಾತ್‌ ಅಂಡ್‌ ಬಾಡಿ ವರ್ಕಸ್‌, ಫಾರೆಸ್ಟ್‌ ಎಸೆನ್‌ಷಿಯಲ್ಸ್‌, ನಿವಿಯಾ (Nivea), ಜಿಲೆಟ್‌, ಟಾಟಾ ಟೀ, ಹಗೀಸ್‌, ಪೆಡಿಗ್ರೀ, ಹಿಮಾಲಯ, ಹಾಸ್‌ಬ್ರೊ, ಓಮ್ರಾನ್‌, ಫಿಲಿಪ್ಸ್‌, ದಾವತ್‌, ಆಶೀರ್ವಾದ್‌, ಟಾಟಾ ಸಂಪನ್‌, ಸರ್ಫ್‌ ಎಕ್ಸೆಲ್‌, ಯುರೇಕಾ ಫೋರ್ಬ್ಸ್‌, ಹ್ಯಾವೆಲ್ಸ್‌, ಸ್ಟೋರಿ@ಹೋಮ್‌, ಅಜಂತಾ, ವಿಪ್ರೋ, ಪ್ರೆಸ್ಟಿಜ್‌, ಬಟರ್‌ಫ್ಲೈ, ಮಿಲ್ಟನ್‌, ಸೋಲಿಮೋ, ದಿ ಸ್ಲೀಪ್‌ ಕಂಪನಿ, ಯೋನೆಕ್ಸ್‌, ನಿವಿಯ (Nivia), ಹೀರೋ ಸೈಕಲ್ಸ್‌, ಬಾಷ್‌, ಬ್ಲ್ಯಾಕ್‌+ಡೆಕರ್‌, ಹಿಟ್‌, ಟ್ರಸ್ಟ್‌ ಬ್ಯಾಸ್ಕೆಟ್‌ ಮತ್ತು ಇನ್ನೂ ಅನೇಕ ಬ್ರ್ಯಾಂಡ್‌ಗಳ ವ್ಯಾಪಕ ಶ್ರೇಣಿಗಳ ಉತ್ಪನ್ನಗಳ ಆಯ್ಕೆಯ ಸೌಲಭ್ಯವನ್ನು ಒದಗಿಸಿದೆ.

ಅಮೆಝಾನ್‌ ಲೈವ್‌

ಗ್ರಾಹಕರು ಅಮೆಝಾನ್‌.ಇನ್‌ನಲ್ಲಿ ನೇರವಾಗಿ ಪರಿಣತರೊಂದಿಗೆ ವ್ಯವಹರಿಸಬಹುದು ಹಾಗೂ ಆಗ ಅವರು ಗ್ರಾಹಕರಿಗೆ ಉತ್ಪನ್ನಗಳನ್ನು ತೋರಿಸುವರು, ಉತ್ತಮ ವ್ಯವಹಾರಗಳ ಬಗ್ಗೆ ತಿಳಿಸಿಕೊಡುವರು, ತತ್ಕಾಲದಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುವರು, ಹಾಗೂ ಸೀಮಿತ ಅವಧಿಗೆ ಲಭ್ಯವಿರುವ ಉತ್ತಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವರು. ನಾವೀಗ 600 ಪ್ರತ್ಯಕ್ಷ ಸಹಾಯವಾಹಿನಿಗಳನ್ನು ನಿರ್ಮಿಸಿಕೊಳ್ಳುವತ್ತ ನಮ್ಮ ಗಮನ ಹರಿಸಿದ್ದು ಗ್ರಾಹಕರಿಗೆ ಮಾಹಿತಿಯುಕ್ತ ಖರೀದಿ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡಲು 150ಕ್ಕೂ ಹೆಚ್ಚಿನ ಸಂಖ್ಯೆಯ ಪ್ರಭಾವಶಾಲಿಗಳೊಂದಿಗೆ ಕೆಲಸ ಮಾಡಲು ಯೋಜಿಸಿದ್ದೇವೆ. ಗ್ರಾಹಕರು ಲೈವ್‌-ಓನ್ಲಿ ರಿಯಾಯಿತಿಗಳ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವಂತೆ ಸಕ್ರಿಯ ವಾಹಿನಿಗಳನ್ನೂ (livestreams) ಹೊಂದಿದ್ದೇವೆ.

ಹೆಚ್ಚು ಖರೀದಿಸಿ, ಹೆಚ್ಚು ಗಳಿಸಿ

ಗ್ರಾಹಕರು ಶಾಪಿಂಗ್‌ ಮಾಡಿದಾಗ, ಮಿನಿಟಿವಿಯಲ್ಲಿ (miniTV) ಉಚಿತ ಮನರಂಜನಾ ವಿಡಿಯೋಗಳನ್ನು ನೋಡಿದಾಗ, ಫನ್‌ಝೋನ್‌ನಲ್ಲಿ ಆಟಗಳನ್ನು ಆಡಿದಾಗ, ಹಾಗೂ ಅಮೆಝಾನ್‌ ಪೇ ಬಳಸಿದಾಗ ಪರೋಕ್ಷ ವಜ್ರಗಳನ್ನು (ಡೈಮಂಡ್ಸ್‌) ಗಳಿಸಬಹುದು ಹಾಗೂ ಅವುಗಳನ್ನು ಆಕರ್ಷಕ ನಗದು ಮರುಪಾವತಿಗಳಿಗೆ (ಕ್ಯಾಷ್‌ಬ್ಯಾಕ್‌) ಪರಿವರ್ತಿಸಿಕೊಳ್ಳಬಹುದು.

ಅಮೆಝಾನ್‌ ಪೇ ಜೊತೆಯಲ್ಲಿ ಹೆಚ್ಚು ಗೆಲ್ಲಿ , ಹೆಚ್ಚು ಖರೀದಿಸಿ

ದಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಅವಧಿಯಲ್ಲಿ ಗ್ರಾಹಕರು 7,500/= ರೂಪಾಯಿಗಳವರೆಗಿನ ಕೊಡುಗೆಗಳನ್ನು ಗೆಲ್ಲುವ ಅವಕಾಶ ಹೊಂದಿರುತ್ತಾರೆ. ಇದಕ್ಕಾಗಿ ಅವರು ಮಾಡಬೇಕಾಗಿರುವುದು ಇಷ್ಟೇ; ಅಮೆಝಾನ್‌.ಇನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸುವುದು, ಬಿಲ್‌ಗಳನ್ನು ಪಾವತಿಸುವುದು, ತಮ್ಮ ಫೋನ್‌ಗಳನ್ನು ರಿಚಾರ್ಚ್‌ ಮಾಡಿಸುವುದು, ಹಾಗೂ ಅಮೆಝಾನ್‌ ಪೇ ಮೂಲಕ ಹಣವನ್ನು ತಮ್ಮದೇ ಖಾತೆಗೆ ಜಮಾ ಮಾಡುವ ಅಥವಾ ಇನ್ನೊಬ್ಬರಿಗೆ ಕಳುಹಿಸುವ ಮೂಲಕ ವಿವಿಧ ಹಬ್ಬದ ಸಮಯದ ವ್ಯವಹಾರಗಳ ಸೌಲಭ್ಯವನ್ನು ಪಡೆದುಕೊಳ್ಳುವುದು ಹಾಗೂ ಅವುಗಳನ್ನು ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಅವಧಿಯಲ್ಲಿ ಶಾಪಿಂಗ್‌ ಮಾಡಿದಾಗ ಮರುನಗದೀಕರಿಸಿಕೊಳ್ಳುವುದು. ಇಷ್ಟು ಮಾತ್ರವಲ್ಲದೇ, ಬಿಲ್‌ ಪಾವತಿಸಲು, ಫೋನ್‌ ರಿಚಾರ್ಜ್‌ ಮಾಡಿಸಲು, ಹಾಗೂ ಇತರ ವ್ಯವಹಾರಗಳನ್ನು ಮಾಡಲು ಮೊಟ್ಟ ಮೊದಲ ಬಾರಿಗೆ ಅಮೆಝಾನ್‌ ಪೇ ಸೌಲಭ್ಯವನ್ನು ಬಳಸುವ ಗ್ರಾಹಕರು 50/= ರೂಪಾಯಿಗಳ ಕ್ಯಾಷ್‌ಬ್ಯಾಕ್‌ ಪಡೆಯುತ್ತಾರೆ. ಇಷ್ಟಲ್ಲದೇ, ಹಬ್ಬದ ಶಾಪಿಂಗ್‌ ಅನ್ನು ಮತ್ತಷ್ಟು ಸರಳಗೊಳಿಸಲು ಹಾಗೂ ಲಾಭದಾಯಕವನ್ನಾಗಿಸಲು, ಅಮೆಝಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ 2,500/= ರೂಪಾಯಿಗಳವರೆಗಿನ ಮೌಲ್ಯದ ಕೊಡುಗೆಗಳನ್ನು ಸ್ವಾಗತ ಕೊಡುಗೆಯ ರೂಪದಲ್ಲಿ ನೀಡಲಾಗುವುದು. ಹಾಗೂ, ಅಮೆಝಾನ್‌ ಪೇ ಸೌಲಭ್ಯವನ್ನು ನಂತರದ ಸಮಯದಲ್ಲಿ ಸಕ್ರಿಯಗೊಳಿಸಿಕೊಳ್ಳುವ ಗ್ರಾಹಕರಿಗೆ 150/= ರೂಪಾಯಿಗಳ ಕ್ಯಾಷ್‌ಬ್ಯಾಕ್‌ನೊಂದಿಗೆ 60,000/= ರೂಪಾಯಿಗಳವರೆಗಿನ ತಕ್ಷಣದ ಸಾಲಸೌಲಭ್ಯವನ್ನೂ ನೀಡಲಾಗುವುದು. ಅಮೆಝಾನ್‌ ಪೇ ಯುಪಿಐಗೆ ನೋಂದಾಯಿಸಿಕೊಳ್ಳುವವರು ಶೇ 10ರಷ್ಟು ಅಥವಾ 50/= ರೂಪಾಯಿಗಳವರೆಗಿನ ಕ್ಯಾಷ್‌ಬ್ಯಾಕ್‌ ಪಡೆದರೆ ಇತರರಿಗೆ ಗಿಫ್ಟ್‌ ಕೊಡಲು ಬಯಸುವವರು ಅಮೆಝಾನ್‌ ಪೇ ಗಿಫ್ಟ್‌ ಕಾರ್ಡ್‌ಗಳನ್ನು ಕೊಂಡಾಗ ಶೇ 10 ರಷ್ಟು ಕ್ಯಾಷ್‌ಬ್ಯಾಕ್‌ ಪಡೆಯಬಹುದು.

ಅಮೆಝಾನ್‌ ಬಿಸಿನೆಸ್‌ ಮೂಲಕ ವ್ಯಾಪಾರಕ್ಕಾಗಿ ಉತ್ಪನ್ನಗಳನ್ನು ಕೊಳ್ಳುವವರಿಗೆ ಜಿಎಸ್‌ಟಿ ಬಿಲ್‌ನೊಂದಿಗೆ ದೊಡ್ಡ ಪ್ರಮಾಣದ ರಿಯಾಯತಿಗಳು ಹಾಗೂ ಅತ್ಯುತ್ತಮ ವ್ಯವಹಾರಗಳು

ಈ ಹಬ್ಬದ ಸಂಭ್ರಮದ ಸಮಯದಲ್ಲಿ ಅಮೆಝಾನ್‌ ಬಿಸಿನೆಸ್‌ ಗ್ರಾಹಕರು ಜಿಎಸ್‌ಟಿ ಇನ್‌ವಾಯ್ಸ್‌ನೊಂದಿಗೆ ಶೇ 28ರಷ್ಟು ಹೆಚ್ಚುವರಿ ಉಳಿತಾಯ ಮಾಡಬಹುದು; ಹಾಗೂ ಎಬಿಸಿ ಸೇರಿದಂತೆ ಇನ್ನಿತರ ಪ್ರಮುಖ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಮಾನಿಟರ್‌ಗಳು, ಟೆಲಿವಿಷನ್‌ಗಳು, ಗೃಹಬಳಕೆಯ ಉಪಕರಣಗಳು, ವ್ಯಾಕ್ಯೂಮ್‌ ಕ್ಲೀನರ್‌ಗಳು, ಹಾಗೂ ಇತರ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಂಡಾಗ ಅವುಗಳ ಮೇಲೆ ಶೇ 40ರಷ್ಟು ಹೆಚ್ಚುವರಿ ರಿಯಾಯತಿಯನ್ನು ಪಡೆಯಬಹುದಾಗಿದೆ. ಇದರೊಂದಿಗೆ, ಗ್ರಾಹಕರು ಅಮೆಝಾನ್‌.ಇನ್‌ನಲ್ಲಿ 8000 ಉತ್ಪನ್ನಗಳ ಮೇಲೆ ಈಗ ಜಾರಿಯಲ್ಲಿರುವ ಆಕರ್ಷಕ ವ್ಯವಹಾರಗಳು/ಕೊಡುಗೆಗಳು, ಬ್ಯಾಂಕ್‌ ಕೊಡುಗೆಗಳು, ವ್ಯವಹಾರದ ಕೂಪನ್‌ಗಳ ಮೂಲಕ, ಹಾಗೂ ಪ್ರತ್ಯೇಕ ವ್ಯವಹಾರ ಒಪ್ಪಂದಗಳ ಮೂಲಕ ಶೇ 10ರಷ್ಟು ಹೆಚ್ಚುವರಿ ಉಳಿತಾಯವನ್ನು ಮಾಡಬಹುದು. ಅಮೆಝಾನ್‌ ಬಿಸಿನೆಸ್‌ಗಾಗಿ ಉಚಿತವಾಗಿ ನೋಂದಾಯಿಸಿಕೊಂಡು ವಿಶೇಷ ಕೊಡುಗೆಗಳನ್ನು ಪಡೆದುಕೊಳ್ಳಿ!

ನಿಮ್ಮ ಆದ್ಯತೆಯ ಭಾಷೆಯಲ್ಲೇ ವ್ಯವಹಾರ ನಡೆಸಿ

ಗ್ರಾಹಕರು ತಮ್ಮ ಆಯ್ಕೆಯ 8 ಭಾಷೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ (ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಲಯಾಳಮ್‌, ತಮಿಳು, ಮರಾಠಿ, ಹಾಗೂ ಬಾಂಗ್ಲಾ).

ದಿ ಅಮೆಝಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಅವಧಿಯ ಅತ್ಯಾಕರ್ಷಕ ವ್ಯವಹಾರಗಳು ಹಾಗೂ ಕೊಡುಗೆಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ . ಪತ್ರಿಕಾ ಪ್ರಕಟಣೆಗಳಿಗಾಗಿ, ಚಿತ್ರಗಳಿಗಾಗಿ, ಹಾಗೂ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮ ಪತ್ರಿಕಾ ಕೇಂದ್ರವನ್ನು ಸಂದರ್ಶಿಸಿ.

ಹಕ್ಕು ನಿರಾಕರಣೆ: ಮೇಲೆ ನೀಡಲಾಗಿರುವ ಮಾಹಿತಿ, ವ್ಯವಹಾರಗಳು, ಹಾಗೂ ರಿಯಾಯಿತಿಗಳನ್ನು ಮಾರಾಟಗಾರರಿಂದ ಮತ್ತು/ಅಥವಾ ಬ್ರ್ಯಾಂಡ್‌ಗಳಿಂದ ಒದಗಿಸಲ್ಪಟ್ಟಿದ್ದು ಅಮೆಝಾನ್‌ನಿಂದ “ಅವುಗಳು ಇರುವಂತೆಯೇ” ಪ್ರದರ್ಶಿಸಲಾಗಿದೆ. ಅಮೆಝಾನ್‌ ಇವುಗಳನ್ನು ಅನುಮೋದಿಸುವುದಿಲ್ಲ ಹಾಗೂ ಅವು ನೀಡಿರುವ ಮಾಹಿತಿಗಳ ನಿಖರತೆ, ಕ್ರಮಬದ್ಧತೆ, ವಿಶ್ವಾಸಾರ್ಹತೆ, ಅಥವಾ ಮಾನ್ಯತೆಗಳನ್ನು ಪ್ರತಿನಿಧಿಸುವುದಿಲ್ಲ ಹಾಗೂ ಯಾವುದೇ ಬಗೆಯ ಘೋಷಿತ ಅಥವಾ ಸೂಚಿತ ಗ್ಯಾರಂಟಿ ಅಥವಾ ವಾರಂಟಿಗಳನ್ನು ಇವುಗಳ ಸಂಬಂಧವಾಗಿ ಒದಗಿಸುವುದಿಲ್ಲ. ಕೊಡುಗೆಯು ದಾಸ್ತಾನು ಮುಗಿಯುವವರೆಗೆ ಮಾತ್ರ ಲಭ್ಯ. 挿ಅಮೆಝಾನ್‌.ಇನ್‌ (Amazon.in) ಒಂದು ಆನ್‌ಲೈನ್‌ ಮಾರಾಟಸ್ಥಳವಾಗಿದ್ದು ಮಳಿಗೆ (ಸ್ಟೋರ್‌) ಎಂದರೆ ಮಾರಾಟಗಾರರು ಒದಗಿಸಿರುವ ಆಯ್ಕೆಗಳೊಂದಿಗಿನ ಮಳಿಗೆಯ ಸೂಚಕವಾಗಿದೆ .

ಅಮೆಝಾನ್‌.ಇನ್‌ ಬಗ್ಗೆ:    ಅಮೆಝಾನ್‌ ನಾಲ್ಕು ತತ್ವಗಳಿಂದ ನಿರ್ದೇಶಿಸಲ್ಪಟ್ಟಿದೆ: ಸ್ಪರ್ಧಿಗಳ ಮೇಲೆ ಗಮನ ನೀಡುವ ಬದಲಿಗೆ ಗ್ರಾಹಕರ ಮೇಲಿನ ನಿಷ್ಠೆ, ಹೊಸ ಅನ್ವೇಷಣೆಯ ಆಸಕ್ತಿ, ಕಾರ್ಯಾಚರಣೆಯಲ್ಲಿ ಶ್ರೇಷ್ಠತೆ ಸಾಧಿಸುವ ಬದ್ಧತೆ, ಹಾಗೂ ದೀರ್ಘಾವಧಿಯ ಆಲೋಚನೆ. ಅಮೆಝಾನ್‌ ಭೂಮಿಯ ಮೇಲಿನ ಗರಿಷ್ಠ ಗ್ರಾಹಕ-ಕೇಂದ್ರಿತ ಕಂಪನಿಯಾಗಲು, ಭೂಮಿಯ ಮೇಲಿನ ಅತ್ಯುತ್ತಮ ಉದ್ಯೋಗದಾತ ಕಂಪನಿಯಾಗಲು, ಹಾಗೂ ಕೆಲಸ ಮಾಡಲು ಭೂಮಿಯ ಮೇಲಿನ ಅತ್ಯಂತ ಸುರಕ್ಷಿತ ಸ್ಥಳವಾಗಲು ಶ್ರಮಿಸುತ್ತಿದೆ. ಗ್ರಾಹಕರ ಅಭಿಪ್ರಾಯಗಳು, ಒನ್‌-ಕ್ಲಿಕ್‌ ಶಾಪಿಂಗ್, ವೈಯಕ್ತಿಕ ಶಿಫಾರಸುಗಳು/ಸಲಹೆಗಳು, ಪ್ರೈಮ್‌, ಫುಲ್‌ಪಿಲ್‌ಮೆಂಟ್‌ ಬೈ ಅಮೆಝಾನ್‌, ಎಡಬ್ಲ್ಯೂಎಸ್‌, ಕಿಂಡ್ಲ್‌ ಡೈರೆಕ್ಟ್‌ ಪಬ್ಲಿಷಿಂಗ್, ಕಿಂಡ್ಲ್. ಕರಿಯರ್‌ ಛಾಯ್ಸ್‌, ಫೈರ್‌ ಟ್ಯಾಬ್ಲೆಟ್ಸ್‌, ಫೈರ್‌ ಟಿವಿ, ಅಮೆಝಾನ್‌ ಎಕೋ, ಅಲೆಕ್ಸಾ, ಜಸ್ಟ್‌ ವಾಕ್‌ ಔಟ್‌ ಟೆಕ್ನಾಲಜಿ, ಅಮೆಝಾನ್‌ ಸ್ಟುಡಿಯೋಸ್‌, ಹಾಗೂ ಪರಿಸರ ವಾಗ್ದಾನಗಳು (ಕ್ಲೈಮೇಟ್‌ ಪ್ಲೆಡ್ಜ್‌) ಅಮೆಝಾನ್‌ನಿಂದ ಪ್ರವರ್ತಿಸಲ್ಪಟ್ಟ ಕೆಲ ಸಂಗತಿಗಳಾಗಿವೆ. ಹೆಚ್ಚಿನ ವಿವರಗಳಿಗಾಗಿ www.amazon.in/aboutus ಜಾಲತಾಣವನ್ನು ಸಂದರ್ಶಿಸಿ. ಅಮೆಝಾನ್‌ಗೆ ಸಂಬಂಧಿಸಿದ ಸುದ್ದಿಗಳಿಗಾಗಿ www.twitter.com/AmazonNews_IN ಜಾಲತಾಣವನ್ನು ಅನುಸರಿಸಿ.

ಅಮೆಝಾನ್‌.ಇನ್‌ (Amazon.in) ಒಂದು ಆನ್‌ಲೈನ್‌ ಮಾರಾಟಸ್ಥಳವಾಗಿದ್ದು ಮಳಿಗೆ (ಸ್ಟೋರ್‌) ಎಂದರೆ ಮಾರಾಟಗಾರರು ಒದಗಿಸಿರುವ ಆಯ್ಕೆಗಳೊಂದಿಗಿನ ಮಳಿಗೆಯ ಸೂಚಕವಾಗಿದೆ .

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಪರ್ಕಿಸಿ:

ಸ್ತುತಿ ಛಾಬ್ರ

AvianWE

stutic@avianwe.com

9873145222

ರಿತ್ವಿಕ್‌ ಶರ್ಮ

Amazon India

ritwiksh@amazon.com

Published On - 5:42 pm, Fri, 23 September 22

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ