SmartCare Hydroloc Xtreme: ಗೋಡೆ ಒಳಭಾಗಕ್ಕೆ ನೀರು ಸೋರಿಕೆ ತಡೆಯಲು ಏಷ್ಯನ್‌ ಪೇಂಟ್‌ನ ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌ ತಂತ್ರಗಾರಿಕೆ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Sep 01, 2023 | 1:28 PM

Asian Paints Product: ನಿಮ್ಮ ಮನೆಗಳೊಳಗಿನ ಸೋರುವಿಕೆಯ ಚಿಂತೆಗಳನ್ನು ಕೊನೆಗಾಣಿಸಲು, ಏಷ್ಯನ್‌ ಪೇಂಟ್ಸ್‌ ಹೊಸದೊಂದು ಉತ್ಪನ್ನವನ್ನು ಪರಿಚಯಿಸಿದೆ. “ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌” ಎಂಬ ಹೆಸರಿನ ಹೊಸ ಉತ್ಪನ್ನವೊಂದನ್ನು ಕಂಪನಿಯು ಹೊರತಂದಿದ್ದು, ಇದು ಆಂತರಿಕ ವಾಟರ್‌ಪ್ರೂಫಿಂಗ್ ಸಮಸ್ಯೆಗಳಿಗೆ ಸರಿಸಾಟಿಯಿಲ್ಲದ ಪರಿಹಾರವಾಗಿದೆ.

SmartCare Hydroloc Xtreme: ಗೋಡೆ ಒಳಭಾಗಕ್ಕೆ ನೀರು ಸೋರಿಕೆ ತಡೆಯಲು ಏಷ್ಯನ್‌ ಪೇಂಟ್‌ನ ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌ ತಂತ್ರಗಾರಿಕೆ
ಏಷ್ಯನ್‌ ಪೇಂಟ್‌ನ ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌
Follow us on

ಒದ್ದೆಯಾಗುವಿಕೆ ಮತ್ತು ಹರಳುಗಟ್ಟುವಿಕೆಗಳ ವಿರುದ್ಧ ಐದು ವರ್ಷಗಳ ವಾರಂಟಿಯೊಂದಿಗೆ ಸುಲಭವಾಗಿ ಹಚ್ಚಬಲ್ಲ ಆಂತರಿಕ ವಾಟರ್‌ಪ್ರೂಫಿಂಗ್‌ ಪರಿಹಾರವನ್ನು ನೀಡುವ ಮೂಲಕ, “ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್” (SmartCare Hydroloc Xtreme) ತನ್ನ ಉತ್ಕೃಷ್ಟತೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

ನಿಮ್ಮ ಮನೆಗಳೊಳಗಿನ ಸೋರುವಿಕೆಯ ಚಿಂತೆಗಳನ್ನು ಕೊನೆಗಾಣಿಸಲು, ಏಷ್ಯನ್‌ ಪೇಂಟ್ಸ್‌ ಹೊಸದೊಂದು ಉತ್ಪನ್ನವನ್ನು ಪರಿಚಯಿಸಿದೆ. “ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌” ಎಂಬ ಹೆಸರಿನ ಹೊಸ ಉತ್ಪನ್ನವೊಂದನ್ನು ಕಂಪನಿಯು ಹೊರತಂದಿದ್ದು, ಇದು ಆಂತರಿಕ ವಾಟರ್‌ಪ್ರೂಫಿಂಗ್ ಸಮಸ್ಯೆಗಳಿಗೆ ಸರಿಸಾಟಿಯಿಲ್ಲದ ಪರಿಹಾರವಾಗಿದೆ. ರಣಬೀರ್‌ ಕಪೂರ್‌ ಮತ್ತು ಪಿ.ವಿ. ಸಿಂಧು ಇದರ ಲಾಂಛನ ರಾಯಭಾರಿಗಳಾಗಿದ್ದಾರೆ (ಬ್ರ್ಯಾಂಡ್‌ ಅಂಬಾಸಡರ್‌).

ಬಹುಮುಖ ಕಾರ್ಯನಿರ್ವಹಣೆಯ ಗುಣಗಳೊಂದಿಗೆ, “ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌” ವಾಟರ್‌ಪ್ರೂಫಿಂಗ್‌ನ ಸಮಸ್ಯೆಗಳ ವಿರುದ್ಧ ಎಣೆಯಿಲ್ಲದ ರಕ್ಷಣೆಯನ್ನು ಒದಗಿಸುತ್ತದೆ.

ಕಂಪನಿಯ ಹೇಳಿಕೆಯ ಪ್ರಕಾರ, “ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌” ಉತ್ಪನ್ನವು, ವಾಟರ್‌ಪ್ರೂಫಿಂಗ್‌ನ ಎಲ್ಲಾ ಅವಶ್ಯಕತೆಗಳನ್ನೂ ನಿರಾಯಾಸವಾಗಿ ಪೂರೈಸುವಂತೆ ಸಿದ್ಧಪಡಿಸಲಾಗಿರುವ ಹಾಗೂ ಸುಲಭವಾಗಿ ಹಚ್ಚಬಹುದಾದ ಆಂತರಿಕ ವಾಟರ್‌ಪ್ರೂಫಿಂಗ್‌ ಪರಿಹಾರ ಆಗಿದೆ.

ದೇಶಾದ್ಯಂತ ಇರುವ ತೀವ್ರ ವಾತಾವರಣದ ಪರಿಸ್ಥಿತಿಗಳ ಕಾರಣದಿಂದ, ಮನೆಗಳ ಮಾಲೀಕರುಗಳಿಗೆ, ಒದ್ದೆಯಾಗುವಿಕೆ ಮತ್ತು ಹರಳುಗಟ್ಟುವಿಕೆಗಳಂತಹ ತೀವ್ರ ವಾಟರ್‌ಪ್ರೂಫಿಂಗ್‌ ಸಮಸ್ಯೆಗಳಿಗೆ ಒಂದು ಅನುಕೂಲಕರವಾದ ಮತ್ತು ಪರಿಣಾಮಕಾರಿಯಾದ ಪರಿಹಾರವನ್ನು ಒದಗಿಸಲು ತಾನೊಂದು ದಿಟ್ಟ ಹೆಜ್ಜೆಯನ್ನು ಮುಂದಿಡುತ್ತಿರುವುದಾಗಿ ಕಂಪನಿಯು ಹೇಳಿತ್ತು.

ಅದರ ಸುಲಭ ಬಳಕೆ ಮತ್ತು ಶ್ರೇಷ್ಠ ಸಾಧನೆಯಿಂದ, “ಏಷ್ಯನ್‌ ಪೇಂಟ್ಸ್‌ ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌” ಉತ್ಪನ್ನವು ಆಂತರಿಕ ವಾಟರ್‌ಪ್ರೂಫಿಂಗ್‌ನ ಒಂದು ಅತ್ಯುತ್ಕೃಷ್ಟ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಉತ್ಪನ್ನವು ಒದ್ದೆಯಾಗುವಿಕೆ ಮತ್ತು ಹರಳುಗಟ್ಟುವಿಕೆಗಳ ವಿರುದ್ಧದ ರಕ್ಷಣೆಯನ್ನು ಖಚಿತಪಡಿಸುವುದರೊಂದಿಗೆ, 5 ವರ್ಷಗಳ ಪ್ರಭಾವಶಾಲಿ ವಾರಂಟಿಯೊಂದಿಗೆ ಬರುತ್ತದೆ ಎಂದೂ ತನ್ನ ಹೇಳಿಕೆಯಲ್ಲಿ ತಿಳಿಸುವ ಮೂಲಕ ಕಂಪನಿಯು ಇದನ್ನು ಮನೆ ಮಾಲೀಕರುಗಳ ಆದರ್ಶಪ್ರಾಯ ಆಯ್ಕೆಯನ್ನಾಗಿ ಮಾಡಿದೆ.

ಗ್ರಾಹಕರಿಗೆ ಅವರ ಮನೆಯಲ್ಲಿ ಒಂದು ಒತ್ತಡರಹಿತ ಜೀವನವನ್ನು ಒದಗಿಸುವುದೇ ತನ್ನ ಪ್ರಧಾನ ಆದ್ಯತೆ ಆಗಿದೆ ಎಂದು ಏಷ್ಯನ್‌ ಪೇಂಟ್ಸ್‌ ಹೇಳಿದೆ.

ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌ನ ಹಲವು ಪ್ರಮುಖ ಪ್ರಯೋಜನಗಳಲ್ಲಿ, ಅದರ ತೊಂದರೆ-ರಹಿತ ಮತ್ತು ಗ್ರಾಹಕ-ಸ್ನೇಹಿ ಗುಣವೂ ಒಂದು ಎಂದು ಕಂಪನಿಯು ಹೇಳಿದೆ.

(ಗಮನಿಸಿ: ಇದು ಪ್ರಾಯೋಜಿತ ಲೇಖನ)