Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್

| Updated By: Srinivas Mata

Updated on: May 23, 2022 | 11:48 AM

ಭಾರತೀಯ ನೃತ್ಯ ಪರಂಪರೆಯನ್ನು ಆಭರಣಗಳ ಮೇಲೆ ಮೂಡಿಸುವಂಥ ಸಂಗ್ರಹ ನೃತ್ಯಾಂಜಲಿಯನ್ನು ಮಲಬಾರ್ ಗೋಲ್ಡ್​ನಿಂದ ಅನಾವರಣಗೊಳಿಸಲಾಗಿದೆ.

 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ನ ನೃತ್ಯಾಂಜಲಿ ಆಭರಣ ಸಂಗ್ರಹ
Follow us on

ಬೆಂಗಳೂರು: ಆಭರಣಪ್ರಿಯರಿಗೆ ಮತ್ತೊಮ್ಮೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಖರೀದಿ ಅವಕಾಶ ನೀಡಿದೆ. ಆಭರಣದ ಸಂಗ್ರಹ ಸರಣಿಯಲ್ಲಿ ಈ ಬಾರಿ ವಿಶಿಷ್ಟ ಆಲೋಚನೆಯೊಂದಿಗೆ ನಿಮ್ಮೆದುರು ಬಂದಿದ್ದು, ಆಯ್ಕೆಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ಭಾರತದ ಅತಿ ದೊಡ್ಡ ಚಿನ್ನ ಹಾಗೂ ವಜ್ರ ರೀಟೇಲ್ ಸರಣಿ ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ನಿಂದ ಹೊಸ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಲಾಗಿದೆ. ಇತ್ತೀಚಿನ ಈ ಸಂಗ್ರಹವನ್ನು ನೃತ್ಯಾಂಜಲಿ- ಭಾರತದ ನೃತ್ಯಗಳಿಗೆ ಒಂದು ಗೌರವ ಎಂದು ಕರೆಯಲಾಗಿದೆ.

ಭಾರತದ ಪರಂಪರೆಯನ್ನು ಶುದ್ಧ ಚಿನ್ನದ ರೂಪದಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನು ಈ ನೃತ್ಯಾಂಜಲಿ ಸಂಗ್ರಹದ ಮೂಲಕ ಮಾಡಲಾಗುತ್ತಿದೆ. ಸೂಕ್ಷ್ಮ ಕುಸುರಿಗಾರಿಕೆ, ಅದ್ಭುತ ತಾಂತ್ರಿಕತೆಯು ಈ ಆಭರಣ ಸರಣಿಯಲ್ಲಿನ ವಿಶೇಷವಾಗಿದೆ. ಪ್ರತಿ ಆಭರಣವನ್ನು ಶೇ 100ರಷ್ಟು ಬಿಐಎಸ್ ಹಾಲ್​ಮಾರ್ಕ್ ಆದ ಚಿನ್ನದೊಂದಿಗೆ ರೂಪಿಸಲಾಗಿದೆ ಮತ್ತು ಅದರ ಜತೆಗೆ ತುಂಬ ಬೆಲೆಬಾಳುವ ರತ್ನಗಳನ್ನು ಅಳವಡಿಸುವ ಮೂಲಕ ಆಭರಣಗಳಿಗೆ ಮತ್ತಷ್ಟು ಮೆರುಗು ನೀಡಲಾಗಿದೆ.

ಸಣ್ಣಸಣ್ಣ ತಿರುವುಗಳು, ರತ್ನಗಳನ್ನು ಜೋಡಿಸಿರುವುದು ಆಭರಣದ ವಿನ್ಯಾಸಕ್ಕೆ ತೀಕ್ಷ್ಣವಾದ ಆಯಾಮ ನೀಡಿವೆ. ಈ ಮೂಲಕ ಭಾರತೀಯ ನೃತ್ಯದ ಮಾದರಿಗಳ ವಿವಿಧ ಭಂಗಿಗಳು, ರೂಪಗಳು ಮತ್ತು ಮುದ್ರೆಗಳನ್ನು ಅನಾವರಣಗೊಳಿಸಿದೆ. ಇನ್ನು ಈ ಸಂಗ್ರಹದಲ್ಲಿ ಎಷ್ಟೆಲ್ಲ ಆಭರಣಗಳಿವೆ ಗೊತ್ತೆ? ನೆಕ್ಲೇಸ್, ಕಿವಿಯೋಲೆ, ಉಂಗುರು ಮತ್ತು ಬಳೆಗಳು ಸೇರಿದಂತೆ ವಿಶಿಷ್ಟವಾದ ಮೋಟಿಫ್​ಗಳನ್ನು ಸಹ ಹೊಂದಿದೆ.

ಇನ್ನು ತಡ ಮಾಡದೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್​ಗೆ ಭೇಟಿ ನೀಡಿ, ನೃತ್ಯಾಂಜಲಿ ಸರಣಿಯ ಆಭರಣಗಳನ್ನು ನೋಡಿ. ಭಾರತೀಯ ಪಾರಂಪರಿಕ ನೃತ್ಯದ ವಿವಿಧ ಭಂಗಿಯು ಚಿನ್ನದ ಮೇಲೆ ಹೇಗೆ ಮೂಡಿ ಬಂದಿದೆ ಎಂಬುದನ್ನು ಗಮನಿಸಿ, ಅವುಗಳನ್ನು ನಿಮ್ಮ ಸಂಗ್ರಹದ ಭಾಗವನ್ನಾಗಿ ಮಾಡಿಕೊಳ್ಳಿ.