AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ TATA ACE Pro ಧಮಾಕ; ಆಕರ್ಷಕ ಬೆಲೆ, ಸುರಕ್ಷತೆ ಎಲ್ಲಾ ಸೂಪರ್

ಬೆಂಗಳೂರಿನಲ್ಲಿ TATA ACE Pro ಧಮಾಕ; ಆಕರ್ಷಕ ಬೆಲೆ, ಸುರಕ್ಷತೆ ಎಲ್ಲಾ ಸೂಪರ್

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 02, 2025 | 2:33 PM

Share

TATA ACE Pro showcased in Bengaluru: ತನ್ನ ವಾಹನಗಳಲ್ಲಿ ನಾವೀನ್ಯತೆ, ಹೊಸ ತಂತ್ರಜ್ಞಾನ, ಕ್ಷಮತೆ, ಸುಲಭ ಬಳಕೆಗೆ ಆದ್ಯತೆ ನೀಡುವ ಟಾಟಾ ಮೋಟಾರ್ಸ್ ಸಂಸ್ಥೆ ಈ ನಿರೀಕ್ಷೆಗೆ ತಕ್ಕಂತೆ ಟಾಟಾ ಏಸ್ ಪ್ರೋ ಹೊರತಂದಿದೆ. ಬೆಂಗಳೂರಿನಲ್ಲಿ ಈ ನಾಲ್ಕು ಚಕ್ರದ ಸರಕು ವಾಹನ ಬಿಡುಗಡೆ ಆಗಿದೆ. ಆಕರ್ಷಕ ಬೆಲೆ, ಶಕ್ತಿ ಹೊಂದಿರುವ ಟಾಟಾ ಏಸ್ ಪ್ರೋ ವಾಹನ ಯುವ ಉದ್ದಿಮೆದಾರರ ಕನಸು ಸಾಕಾರಗೊಳಿಸಲು ಹೇಳಿ ಮಾಡಿಸಿದ್ದಾಗಿದೆ.

ದೇಶದ ಅಗ್ರಗಣ್ಯ ಆಟೊಮೊಬೈಲ್ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ ತನ್ನ ಹೊಚ್ಚ ಹೊಸ ACE Pro ವಾಹನವನ್ನು ಬೆಂಗಳೂರಿಗರಿಗೆ ಪರಿಚಯಿಸಿದೆ. ತಳಮಟ್ಟದ ಉದ್ದಿಮೆದಾರರು, ಅರೆಕಾಲಿಕ ಕಾರ್ಮಿಕರು, ಬ್ಯುಸಿನೆಸ್ ಮಾಲೀಕರು ಮೊದಲಾದವರ ಗಮನ ಸೆಳೆಯುತ್ತಿದೆ ಟಾಟಾದ ಈ ಹೊಸ ಗಾಡಿ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭವಿಷ್ಯದ ಸಾಗಣೆ ಅಗತ್ಯಗಳಿಗೆ ತಕ್ಕುದಾದ ಪರಿಹಾರಗಳನ್ನು ಟಾಟಾ ಮೋಟಾರ್ಸ್ ಹೊರತರುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿತ್ತು.

ಟಾಟಾ ACE Pro ವಾಹನ ಕೇವಲ ಸಾರಿಗೆಗಲ್ಲ, ಕನಸುಗಳನ್ನು ಸಾಕಾರಗೊಳಿಸಲು ರೂಪಿಸಲಾಗಿದೆ. ಇದರ ಬೆಲೆ ಕೇವಲ 3.99 ಲಕ್ಷ ರೂ. ತನ್ನ ವಿಭಾಗದಲ್ಲಿ ಇದು ಅತ್ಯುತ್ತಮ ಬೆಲೆ. ತ್ರಿಚಕ್ರ ವಾಹನಗಳಿಗೆ ಹೋಲಿಸಿದರೂ ಈ ಬೆಲೆ ಅತ್ಯುತ್ತಮ. ತ್ರಿಚಕ್ರ ವಾಹನಗಳಿಗಿಂತ ಹೆಚ್ಚು ಭಾರ ಹೊರಬಲ್ಲುದು. ಆರಾಮವಾಗಿ ಚಲಾಯಿಸಬಹುದು. ಅಧಿಕ ಲಾಭ ತಂದುಕೊಡಬಲ್ಲುದು.

ನಾಲ್ಕು ಚಕ್ರ ವಾಹನವಾದ ACE Pro ಗಾಡಿಯು ಕ್ರ್ಯಾಶ್ ಟೆಸ್ಟ್ ಆದ ಕ್ಯಾಬಿನ್, ಡಿ+1 ಸೀಟಿಂಗ್, ಸೀಟ್​​ಬೆಲ್ಟ್ ಇತ್ಯಾದಿ ಫೀಚರ್ಸ್ ಹೊಂದಿದೆ. ಈ ಮೂಲಕ ಅದು ತನ್ನ ಸೆಗ್ಮೆಂಟ್​​ನಲ್ಲಿ ಅತ್ಯಂತ ಸುರಕ್ಷಿತ ವಾಹನ ಎನಿಸಿದೆ. ಪ್ರತೀ ಸಾಗಾಟದಲ್ಲೂ ಹೆಚ್ಚು ಸರಕುಗಳನ್ನು ತೆಗೆದುಕೊಂಡು ಹೋಗಬಹುದು. ವಾಹನದ ಆಪರೇಟಿಂಗ್ ವೆಚ್ಚ ಕಡಿಮೆ ಆಗುತ್ತದೆ. ಮಾಲೀಕರಿಗೆ ಹೆಚ್ಚು ಆದಾಯ ತರಲು ನೆರವಾಗುತ್ತದೆ.

ಟಾಟಾ ಮೋಟಾರ್ಸ್ ಸಂಸ್ಥೆ ಸ್ವಂತ ಪರಿಶ್ರಮದಲ್ಲಿ ಬೆಳೆದ ಉದ್ದಿಮೆದಾರರಿಗೆ ಉತ್ಸಾಹ ತುಂಬಲು ‘ಅಬ್ ಮೇರಿ ಬಾರಿ’ ಎನ್ನುವ ಆಂದೋಲನವನ್ನೇ ನಡೆಸಿದೆ. ಈ ಆಂದೋಲನದ ಮೂಲತತ್ವಕ್ಕೆ ತಕ್ಕುದಾಗಿ ಟಾಟಾ ಏಸ್ ಪ್ರೋ ಗಾಡಿ ರೂಪಿತವಾಗಿದೆ. ದೊಡ್ಡ ಕನಸು ಹೊತ್ತಿರುವ ವ್ಯಕ್ತಿಗಳಿಗೆ ದೊಡ್ಡ ಶಕ್ತಿಯಾಗಿ ಸಿದ್ಧವಾಗಿದೆ ಟಾಟಾ ಏಸ್ ಪ್ರೋ.

Published on: Jul 02, 2025 02:28 PM