ಯುಎಸ್ ಓಪನ್ 2020 ಆಗಸ್ಟ್ 30 ರಿಂದ ಆರಂಭವಾಗಲಿದೆ. ವರ್ಷದ ಕೊನೆಯ ಗ್ರಾಂಡ್ ಸ್ಲಾಮ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಈ ಬಾರಿ ಅನೇಕ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ, ಹೀಗಾಗಿ ಅಭಿಮಾನಿಗಳು ಬಹಳಷ್ಟು ಮನರಂಜನೆಯನ್ನು ಕಳೆದುಕೊಳ್ಳಲಿದ್ದಾರೆ. ಈಗ ಆಸ್ಟ್ರೇಲಿಯಾದ ಸೋಫಿಯಾ ಕೆನಿನ್ ಹೆಸರನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಪಂದ್ಯಾವಳಿಗೆ ನಾಲ್ಕು ದಿನಗಳ ಮೊದಲು ಸೋಫಿಯಾ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಸೋಫಿಯಾ ಹೊರತುಪಡಿಸಿ, ಖ್ಯಾತ ಆಟಗಾರ ರಾಫೆಲ್ ನಡಾಲ್ ಮತ್ತು 23 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಕೂಡ ಯುಎಸ್ ಓಪನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸೋಫಿಯಾ ಕೆನಿನ್ ಗುರುವಾರ ಕೊರೊನಾ ಸೋಂಕಿನಿಂದಾಗಿ ತನ್ನ ಹೆಸರನ್ನು ಹಿಂತೆಗೆದುಕೊಂಡರು.
ಸೋಫಿಯಾ ಕೆನಿನ್ ಕೊರೊನಾ ಪಾಸಿಟಿವ್
ವಿಶ್ವದ ಐದನೇ ಶ್ರೇಯಾಂಕದ ಆಟಗಾರ್ತಿ ಸೋಫಿಯಾ ಕೆನಿನ್ ಇತ್ತೀಚೆಗೆ ಕೋವಿಡ್ -19 ಗೆ ತುತ್ತಾಗಿದ್ದಾರೆ. 22 ವರ್ಷದ ಕೆನಿನ್ 2020 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು ಮತ್ತು ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಅವರಿಗೆ ಯುಎಸ್ ಓಪನ್ನಲ್ಲಿ ನಾಲ್ಕನೇ ಸುತ್ತನ್ನು ಮೀರಿ ಪ್ರಗತಿ ಸಾಧಿಸಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ತಿಳಿಸಿರುವ ಕೆನಿನ್, ಅದೃಷ್ಟವಶಾತ್ ನಾನು ಲಸಿಕೆ ಹಾಕಿಸಿದ್ದೇನೆ ಮತ್ತು ರೋಗಲಕ್ಷಣಗಳು ಇಲ್ಲ ಆದರೆ ನನಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಮುಂದಿನ ವಾರ ಯುಎಸ್ ಓಪನ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಈ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿ ಸೋಮವಾರದಿಂದ ಆರಂಭವಾಗುತ್ತಿದೆ.
ಸೆರೆನಾ ಮತ್ತು ನಡಾಲ್ ಭಾಗವಹಿಸುವುದಿಲ್ಲ
ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕಾಲಿನ ಸ್ನಾಯು ಗಾಯದಿಂದಾಗಿ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ನಿಂದ ಹೊರಗುಳಿಯುವ ಆಟಗಾರರ ಪಟ್ಟಿಗೆ ಸೇರಿದ್ದಾರೆ. ವಿಂಬಲ್ಡನ್ನಲ್ಲಿ ನಡೆದ ತನ್ನ ಮೊದಲ ಸುತ್ತಿನ ಪಂದ್ಯದ ಮೊದಲ ಸೆಟ್ನಲ್ಲಿ ಸೆರೆನಾ ತನ್ನ ಬಲಗಾಲಿಗೆ ಗಾಯ ಮಾಡಿಕೊಂಡಿದ್ದರಿಂದ ಟೂರ್ನಿಯಲ್ಲಿ ಆಡಿರಲಿಲ್ಲ. ಮಾಜಿ ನಂಬರ್ ಒನ್ ಟೆನಿಸ್ ತಾರೆ ರಾಫೆಲ್ ನಡಾಲ್ ಕಾಲಿನ ಗಾಯದಿಂದಾಗಿ ಈ ವರ್ಷದ ಯುಎಸ್ ಓಪನ್ನಿಂದ ಹೊರಗುಳಿದಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಮ್ನ ಸೆಮಿಫೈನಲ್ನಲ್ಲಿ ನೊವಾಕ್ ಜೊಕೊವಿಚ್ ವಿರುದ್ಧ ಸೋತ ನಂತರ ಸ್ಪೇನ್ನ ಆಟಗಾರ ವಿಂಬಲ್ಡನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಎರಡರಿಂದಲೂ ಹಿಂದೆ ಸರಿಯಲು ನಿರ್ಧರಿಸಿದರು.
Published On - 4:38 pm, Thu, 26 August 21