AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳಿಕೆಯನ್ನು ತಿರುಚಬೇಡಿ; ಪಾಕ್ ಆಟಗಾರನನ್ನು ನಿಂದಿಸಿದವರಿಗೆ ನಿಯಮಗಳ ಪಾಠ ಹೇಳಿದ ನೀರಜ್ ಚೋಪ್ರಾ

Neeraj Chopra: ಈ ಘಟನೆ ಕೇಳಿದ ಬಳಿಕ ಅಭಿಮಾನಿಗಳು ನದೀಮ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದರು. ಇದನ್ನು ಕಂಡ ನೀರಜ್‌, ವೀಡಿಯೊ ಹಾಕುವ ಮೂಲಕ, ನಿಯಮಗಳನ್ನು ತಿಳಿಯದೆ ತಪ್ಪು ಕೆಲಸಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು

ಹೇಳಿಕೆಯನ್ನು ತಿರುಚಬೇಡಿ; ಪಾಕ್ ಆಟಗಾರನನ್ನು ನಿಂದಿಸಿದವರಿಗೆ ನಿಯಮಗಳ ಪಾಠ ಹೇಳಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಮತ್ತು ನದೀಮ್ ಅಶ್ರಫ್
TV9 Web
| Updated By: ಪೃಥ್ವಿಶಂಕರ|

Updated on: Aug 26, 2021 | 6:20 PM

Share

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕೇವಲ ಕ್ರೀಡೆಗೆ ಮಾತ್ರವಲ್ಲದೆ ಅವರ ಸ್ನೇಹಪರ ವ್ಯಕ್ತಿತ್ವಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ಪಾಕಿಸ್ತಾನದ ಜಾವೆಲಿನ್ ಸ್ಟಾರ್ ಅಶ್ರಫ್ ನದೀಮ್ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ, ಈ ಕಾರಣದಿಂದಾಗಿ ಅವರು ನೆರೆಯ ರಾಷ್ಟ್ರದಲ್ಲಿಯೂ ಸಹ ಮೆಚ್ಚುಗೆ ಪಡೆದಿದ್ದಾರೆ. ಆದಾಗ್ಯೂ, ಇತ್ತೀಚೆಗೆ ನೀರಜ್ ಚೋಪ್ರಾ ತನ್ನ ಪಾಕಿಸ್ತಾನಿ ಪಾಲುದಾರನ ಬಗ್ಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ, ಈ ಕಾರಣದಿಂದಾಗಿ ನೀರಜ್ ತುಂಬಾ ಕೋಪಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಿಂದ ಮರಳಿದ ನಂತರ ನೀರಜ್ ಚೋಪ್ರಾ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಪಾಕಿಸ್ತಾನಿ ಆಟಗಾರ ಅಶ್ರಫ್ ಕಿಲಾಡಿ ಬಗ್ಗೆ ಒಂದು ಘಟನೆಯನ್ನು ಹಂಚಿಕೊಂಡಿದ್ದರು. ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಪ್ಪಾದ ರೀತಿಯಲ್ಲಿ ಪ್ರಸ್ತುತಪಡಿಸಲು ಆರಂಭಿಸಿದ್ದಾರೆ. ಇದನ್ನು ಕಂಡ ನೀರಜ್ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಹಾಗೆ ಮಾಡದಂತೆ ಮನವಿ ಮಾಡಿದರು.

ಒಲಿಂಪಿಕ್ಸ್​ನಲ್ಲಿ ನಡೆದ ಘಟನೆ ವಿವರಿಸಿದ ನೀರಜ್ ಚೋಪ್ರಾ ನೀರಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಟೋಕಿಯೊ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ನಾನು ನನ್ನ ಜಾವೆಲಿನ್ ಅನ್ನು ಹುಡುಕುತ್ತಿದ್ದೆ. ಆದರೆ ಅದು ಎಲ್ಲೂ ಸಿಗಲಿಲ್ಲ. ಆಗ ಪಾಕಿಸ್ತಾನದ ಅರ್ಷದ್ ನದೀಮ್ ಆ ಜಾವೆಲಿನ್ ಅನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವುದನ್ನು ನಾನು ನೋಡಿದೆ. ನಾನು ತಕ್ಷಣ ಆತನ ಬಳಿಗೆ ಹೋಗಿ, ಸಹೋದರ ಇದು ನನ್ನ ಜಾವೆಲಿನ್, ನನಗೆ ಕೊಡು, ನಾನು ಈಗ ಎಸೆಯಲು ಹೋಗಬೇಕು ಎಂದೆ. ನಂತರ ನದೀಮ್ ನನಗೆ ಜಾವೆಲಿನ್ ವಾಪಸ್ ಕೊಟ್ಟರು. ಅಷ್ಟರಲ್ಲಾಗಲೇ ನನಗೆ ನೀಡಿದ್ದ ಸಮಯ ಮುಗಿಯುವುದರಲಿತ್ತು. ಆದ್ದರಿಂದ ನಾನು ಆತುರದಿಂದ ಮೊದಲ ಎಸೆತವನ್ನು ಎಸೆದೆ ಎಂದಿದ್ದಾರೆ.

ಅರ್ಷದ್ ನದೀಮ್ ಬೆಂಬಲಕ್ಕೆ ಬಂದ ನೀರಜ್ ಚೋಪ್ರಾ ಈ ಘಟನೆ ಕೇಳಿದ ಬಳಿಕ ಅಭಿಮಾನಿಗಳು ನದೀಮ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದರು. ಇದನ್ನು ಕಂಡ ನೀರಜ್‌, ವೀಡಿಯೊ ಹಾಕುವ ಮೂಲಕ, ನಿಯಮಗಳನ್ನು ತಿಳಿಯದೆ ತಪ್ಪು ಕೆಲಸಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ಇದು ತುಂಬಾ ಸರಳವಾದ ವಿಷಯವಾದಾಗ ಅದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಲಾಗಿದೆ. ನಾವೆಲ್ಲ ಎಸೆಯುವವರು ನಮ್ಮ ವೈಯಕ್ತಿಕ ಜಾವೆಲಿನ್ ಅನ್ನು ಅಲ್ಲಿಯೇ ಇರಿಸುತ್ತೇವೆ ಆದರೆ ಎಲ್ಲರೂ ಅದನ್ನು ಬಳಸಬಹುದು. ಅದು ನಿಯಮ. ನಾವೆಲ್ಲರೂ ತುಂಬಾ ಒಳ್ಳೆಯ ಸ್ನೇಹಿತರು. ಹೀಗಾಗಿ ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

ನಿಯಮ ಹೇಳುವುದೇನು? ಜಾವೆಲಿನ್ಗಳನ್ನು ಸಂಘಟಕರು ಸಾಮಾನ್ಯ ಪ್ರದೇಶದಲ್ಲಿ ಇಡುತ್ತಾರೆ. ಆಟಗಾರನು ತನ್ನ ವೈಯಕ್ತಿಕ ಜಾವೆಲಿನ್ ಅನ್ನು ಬಳಸಲು ಬಯಸಿದರೆ, ಮುಂಚಿತವಾಗಿ ಸಂಘಟಕರ ಗನಮಕ್ಕೆ ತರಬೇಕು. ಇದರ ನಂತರ ಅವರ ಜಾವೆಲಿನ್ ಅನ್ನು ಸಹ ಸಾಮಾನ್ಯ ಪ್ರದೇಶದಲ್ಲಿ ಇರಿಸಲಾಗುತ್ತದೆ. ಆದಾಗ್ಯೂ, ಕ್ರೀಡಾಕೂಟದಲ್ಲಿ ಭಾಗವಹಿಸುವ ಯಾವುದೇ ಕ್ರೀಡಾಪಟು ಈ ಜಾವೆಲಿನ್ ಅನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಯಾರ ಅನುಮತಿಯೂ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನದೀಮ್ ನೀರಜ್ ಚೋಪ್ರಾ ಜಾವೆಲಿನ್ ತೆಗೆದುಕೊಳ್ಳುವುದು ನಿಯಮಗಳಿಗೆ ವಿರುದ್ಧವಾಗಿಲ್ಲ. ಈ ಕಾರಣದಿಂದಾಗಿ ನೀರಜ್ ತನ್ನ ಟ್ವೀಟ್ ನಲ್ಲಿ ಈ ವಿಷಯದ ಬಗ್ಗೆ ವಿವಾದ ಮಾಡುವ ಮೊದಲು ಜನರು ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ