US Open 2020: ವಿಶ್ವದ ಐದನೇ ಶ್ರೇಯಾಂಕಿತ ಸೋಫಿಯಾ ಕೆನಿನ್​ಗೆ ಕೊರೊನಾ ಪಾಸಿಟಿವ್; ಯುಎಸ್ ಓಪನ್​ಗೆ ಅಲಭ್ಯ

US Open 2020: ವಿಶ್ವದ ಐದನೇ ಶ್ರೇಯಾಂಕದ ಆಟಗಾರ್ತಿ ಸೋಫಿಯಾ ಕೆನಿನ್ ಇತ್ತೀಚೆಗೆ ಕೋವಿಡ್ -19 ಗೆ ತುತ್ತಾಗಿದ್ದಾರೆ. 22 ವರ್ಷದ ಕೆನಿನ್ 2020 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು ಮತ್ತು ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.

US Open 2020: ವಿಶ್ವದ ಐದನೇ ಶ್ರೇಯಾಂಕಿತ ಸೋಫಿಯಾ ಕೆನಿನ್​ಗೆ ಕೊರೊನಾ ಪಾಸಿಟಿವ್; ಯುಎಸ್ ಓಪನ್​ಗೆ ಅಲಭ್ಯ
ಸೋಫಿಯಾ ಕೆನಿನ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 26, 2021 | 4:41 PM

ಯುಎಸ್ ಓಪನ್ 2020 ಆಗಸ್ಟ್ 30 ರಿಂದ ಆರಂಭವಾಗಲಿದೆ. ವರ್ಷದ ಕೊನೆಯ ಗ್ರಾಂಡ್ ಸ್ಲಾಮ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಈ ಬಾರಿ ಅನೇಕ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ, ಹೀಗಾಗಿ ಅಭಿಮಾನಿಗಳು ಬಹಳಷ್ಟು ಮನರಂಜನೆಯನ್ನು ಕಳೆದುಕೊಳ್ಳಲಿದ್ದಾರೆ. ಈಗ ಆಸ್ಟ್ರೇಲಿಯಾದ ಸೋಫಿಯಾ ಕೆನಿನ್ ಹೆಸರನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಪಂದ್ಯಾವಳಿಗೆ ನಾಲ್ಕು ದಿನಗಳ ಮೊದಲು ಸೋಫಿಯಾ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಸೋಫಿಯಾ ಹೊರತುಪಡಿಸಿ, ಖ್ಯಾತ ಆಟಗಾರ ರಾಫೆಲ್ ನಡಾಲ್ ಮತ್ತು 23 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಕೂಡ ಯುಎಸ್ ಓಪನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸೋಫಿಯಾ ಕೆನಿನ್ ಗುರುವಾರ ಕೊರೊನಾ ಸೋಂಕಿನಿಂದಾಗಿ ತನ್ನ ಹೆಸರನ್ನು ಹಿಂತೆಗೆದುಕೊಂಡರು.

ಸೋಫಿಯಾ ಕೆನಿನ್ ಕೊರೊನಾ ಪಾಸಿಟಿವ್ ವಿಶ್ವದ ಐದನೇ ಶ್ರೇಯಾಂಕದ ಆಟಗಾರ್ತಿ ಸೋಫಿಯಾ ಕೆನಿನ್ ಇತ್ತೀಚೆಗೆ ಕೋವಿಡ್ -19 ಗೆ ತುತ್ತಾಗಿದ್ದಾರೆ. 22 ವರ್ಷದ ಕೆನಿನ್ 2020 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು ಮತ್ತು ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಅವರಿಗೆ ಯುಎಸ್ ಓಪನ್ನಲ್ಲಿ ನಾಲ್ಕನೇ ಸುತ್ತನ್ನು ಮೀರಿ ಪ್ರಗತಿ ಸಾಧಿಸಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ತಿಳಿಸಿರುವ ಕೆನಿನ್, ಅದೃಷ್ಟವಶಾತ್ ನಾನು ಲಸಿಕೆ ಹಾಕಿಸಿದ್ದೇನೆ ಮತ್ತು ರೋಗಲಕ್ಷಣಗಳು ಇಲ್ಲ ಆದರೆ ನನಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಮುಂದಿನ ವಾರ ಯುಎಸ್ ಓಪನ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಈ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿ ಸೋಮವಾರದಿಂದ ಆರಂಭವಾಗುತ್ತಿದೆ.

ಸೆರೆನಾ ಮತ್ತು ನಡಾಲ್ ಭಾಗವಹಿಸುವುದಿಲ್ಲ ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕಾಲಿನ ಸ್ನಾಯು ಗಾಯದಿಂದಾಗಿ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ನಿಂದ ಹೊರಗುಳಿಯುವ ಆಟಗಾರರ ಪಟ್ಟಿಗೆ ಸೇರಿದ್ದಾರೆ. ವಿಂಬಲ್ಡನ್ನಲ್ಲಿ ನಡೆದ ತನ್ನ ಮೊದಲ ಸುತ್ತಿನ ಪಂದ್ಯದ ಮೊದಲ ಸೆಟ್ನಲ್ಲಿ ಸೆರೆನಾ ತನ್ನ ಬಲಗಾಲಿಗೆ ಗಾಯ ಮಾಡಿಕೊಂಡಿದ್ದರಿಂದ ಟೂರ್ನಿಯಲ್ಲಿ ಆಡಿರಲಿಲ್ಲ. ಮಾಜಿ ನಂಬರ್ ಒನ್ ಟೆನಿಸ್ ತಾರೆ ರಾಫೆಲ್ ನಡಾಲ್ ಕಾಲಿನ ಗಾಯದಿಂದಾಗಿ ಈ ವರ್ಷದ ಯುಎಸ್ ಓಪನ್ನಿಂದ ಹೊರಗುಳಿದಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಮ್ನ ಸೆಮಿಫೈನಲ್ನಲ್ಲಿ ನೊವಾಕ್ ಜೊಕೊವಿಚ್ ವಿರುದ್ಧ ಸೋತ ನಂತರ ಸ್ಪೇನ್ನ ಆಟಗಾರ ವಿಂಬಲ್ಡನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಎರಡರಿಂದಲೂ ಹಿಂದೆ ಸರಿಯಲು ನಿರ್ಧರಿಸಿದರು.

Published On - 4:38 pm, Thu, 26 August 21

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ