ಸಚಿನ್ ತೆಂಡೂಲ್ಕರ್​ಗೆ ಕೊರೊನಾ ಪಾಸಿಟಿವ್! ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿ ಆಡಿದ ಕ್ರಿಕೆಟಿಗರಲ್ಲಿ ಹೆಚ್ಚಾದ ಆತಂಕ

ಸಚಿನ್​ ಅವರಿಗೆ ಕೊರೊನಾ ಧೃಡಪಟ್ಟಿರುವುದರಿಂದ ಈಗ ಟೀಂ ಇಂಡಿಯಾದ ಮಾಜಿ ಆಟಗಾರರಿಗೆ ಆತಂಕ ಶುರುವಾಗಿದೆ.

ಸಚಿನ್ ತೆಂಡೂಲ್ಕರ್​ಗೆ ಕೊರೊನಾ ಪಾಸಿಟಿವ್! ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿ ಆಡಿದ ಕ್ರಿಕೆಟಿಗರಲ್ಲಿ ಹೆಚ್ಚಾದ ಆತಂಕ
ರಸ್ತೆ ಸುರಕ್ಷತೆ ವಿಶ್ವ ಸರಣಿ
Follow us
ಪೃಥ್ವಿಶಂಕರ
|

Updated on: Mar 27, 2021 | 1:01 PM

ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಸಚಿನ್ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನಗೆ ಕೊರೊನಾ ಸೋಂಕಿನ ಅಲ್ಪಸ್ವಲ್ಪ ಲಕ್ಷಣಗಳಿದ್ದು, ಮನೆಯ ಮಿಕ್ಕೆಲ್ಲರಿಗೂ ಕೊರೊನಾ ನೆಗೆಟಿವ್ ಬಂದಿದೆ. ಮುಂಜಾಗೃತಾ ಕ್ರಮವಾಗಿ ಹೋಂ ಕ್ವಾರಂಟೈನ್ ಆಗಿ ವೈದ್ಯರು ಸೂಚಿಸಿದ ಎಲ್ಲ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ. ಕೊರೊನೊ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯ ಸಮುದಾಯಕ್ಕೂ, ದೇಶದ ನನ್ನೆಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞನಾಗಿದ್ದೇನೆ’ ಎಂದು ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ.

ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿ ಸಚಿನ್​ ಅವರಿಗೆ ಕೊರೊನಾ ಧೃಡಪಟ್ಟಿರುವುದರಿಂದ ಈಗ ಟೀಂ ಇಂಡಿಯಾದ ಮಾಜಿ ಆಟಗಾರರಿಗೆ ಆತಂಕ ಶುರುವಾಗಿದೆ. ಏಕೆಂದರೆ ಕೆಲವು ದಿನಗಳ ಹಿಂದಷ್ಟೇ ಸಚಿನ್​ ನೇತೃತ್ವದಲ್ಲಿ ಇಂಡಿಯಾ ಲೆಜೆಂಡ್ಸ್​ ತಂಡವು ರಸ್ತೆ ಸುರಕ್ಷತೆ ವಿಶ್ವ ಟಿ 20 ಸರಣಿಯನ್ನು ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಹೆಸರಾಂತ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಪಠಾಣ್ ಬ್ರದರ್ಸ್ ಮುಂತಾದ ಆಟಗಾರರು ಸಹ ಇದ್ದರು. ಇವರಲ್ಲದೆ ವಿದೇಶಿ ಆಟಗಾರರು ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸಚಿನ್ ಅವರಿಗೆ ಈಗ ಕೊರೊನಾ ಸೋಂಕು ತಗುಲಿರುವುದರಿಂದ ಆ ಎಲ್ಲಾ ಆಟಗಾರರಿಗೆ ಆತಂಕ ಶುರುವಾಗಿದೆ.

ರಸ್ತೆ ಸುರಕ್ಷತೆ ವಿಶ್ವ ಟಿ 20 ಸರಣಿ ಮುಗಿದ ನಂತರವೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಕೊರೊನಾ ಪರೀಕ್ಷೆಯನ್ನು ಮಾಡಿಸಿದ್ದರು. ಇದರಲ್ಲಿ ಅವರ ಫಲಿತಾಂಶವು ಸಕಾರಾತ್ಮಕವಾಗಿದೆ. ಹೀಗಾಗಿ ಆಟದ ವೇಳೆ ಎದುರಾಳಿ ತಂಡದ ಆಟಗಾರ ಔಟ್​ ಆದ ವೇಳೆ ತಂಡದ ಆಟಗಾರರೆಲ್ಲ ಸಚಿನ್​ ಒಟ್ಟಗೂಡಿ ಸಂಭ್ರಮಿಸಿದ್ದರು. ಜೊತೆಗೆ ತಂಡ ಗೆದ್ದಾಗಲೂ ಸಹ ತಂಡದ ಆಟಗಾರರೆಲ್ಲ ತಬ್ಬಿ ಸಂಭ್ರಮಿಸಿದ್ದರು. ಆದರಿಂದ ಸಚಿನ್ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರಿಗೂ ಈಗ ಕೊರೊನಾ ತಗುಲುವ ಆತಂಕ ಶುರುವಾಗಿದೆ.

ಅಂತರರಾಷ್ಟ್ರೀಯ ಆಟಗಾರರಿಗೂ ಆತಂಕ ಛತ್ತೀಸ್‌ಗಡದ ರಾಯ್‌ಪುರದಲ್ಲಿ ಆಡಿದ ರಸ್ತೆ ಸುರಕ್ಷತೆ ವಿಶ್ವ ಟಿ 20 ಸರಣಿಯಲ್ಲಿ ಭಾರತದ ಒಟ್ಟು 16 ಅನುಭವಿ ಆಟಗಾರರು ಭಾಗವಹಿಸಿದ್ದರು. ಸಚಿನ್ ತೆಂಡೂಲ್ಕರ್ ಅವರೆಲ್ಲರ ಜೊತೆ ಸಂಪರ್ಕದಲ್ಲಿದ್ದರು. ಅವರು ಒಟ್ಟಿಗೆ ವಿಕೆಟ್ ಆಚರಿಸುತ್ತಿದ್ದರು ಮತ್ತು ವಿಜಯವನ್ನು ಆಚರಿಸುತ್ತಿದ್ದರು. ಸೆಹ್ವಾಗ್, ಯುವರಾಜ್ ಮತ್ತು ಪಠಾಣ್ ಬ್ರದರ್ಸ್‌ನಂತಹ ದೊಡ್ಡ ಹೆಸರುಗಳು ಸಹ ಈ ಲಿಸ್ಟ್​ನಲ್ಲಿದೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ತಾರೆಗಳಾದ ಲಾರಾ, ಕೆವಿನ್ ಪೀಟರ್ಸನ್, ತಿಲಕರತ್ನ ದಿಲ್ಶನ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಕೊರೊನಾದ ಕರಿನೆರಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರ ಮೇಲೂ ಬೀಳಬಹುದಾಗಿದೆ.

ಇದನ್ನೂ ಓದಿ:India vs England: ಒಂದೇ ಓವರ್​ನಲ್ಲಿ 3 ಸಿಕ್ಸರ್​ ಸಿಡಿಸಿದ್ದಕ್ಕೆ ಹಾರ್ದಿಕ್ ಮೇಲೆ ಸ್ಯಾಮ್ ಕರನ್ ಗರಂ.. ಪಾಂಡ್ಯ ಖಡಕ್ ರಿಯಾಕ್ಷನ್! ವಿಡಿಯೋ ನೋಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ