ಕೊಹ್ಲಿ ನಿನಗೆ ಮಾದರಿಯಾಗಲಿ; ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಪ್ರಿಯಾ ಪುನಿಯಾಗೆ ತಂದೆಯ ಸಾಂತ್ವನ

| Updated By: Skanda

Updated on: May 22, 2021 | 8:32 AM

ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಿಂದ ಸ್ಫೂರ್ತಿ ಪಡೆಯಲು ಪ್ರಿಯಾ ಅವರಿಗೆ ಸಲಹೆ ನೀಡಿದ್ದೇನೆ ಎಂದು ಪ್ರಿಯಾ ಅವರ ತಂದೆ ಸುರೇಂದ್ರ ತಿಳಿಸಿದ್ದಾರೆ.

ಕೊಹ್ಲಿ ನಿನಗೆ ಮಾದರಿಯಾಗಲಿ; ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಪ್ರಿಯಾ ಪುನಿಯಾಗೆ ತಂದೆಯ ಸಾಂತ್ವನ
ಪ್ರಿಯಾ ಪುನಿಯಾ ಕುಟುಂಬ
Follow us on

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಪ್ರಿಯಾ ಪುನಿಯಾ ಇತ್ತೀಚೆಗೆ ಕೊವಿಡ್ -19 ಸೋಂಕಿನಿಂದಾಗಿ ತಾಯಿಯನ್ನು ಕಳೆದುಕೊಂಡರು. ಈ ಆಲ್‌ರೌಂಡರ್ ಪ್ರಸ್ತುತ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತೀಯ ತಂಡದ ಜೊತೆಗಿದ್ದಾರೆ. ನಿಸ್ಸಂಶಯವಾಗಿ ತಾಯಿಯನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಪ್ರಿಯಾ ತಂಡದೊಂದಿಗೆ ಹೋಗುವುದು ಸುಲಭವಲ್ಲ, ಆದರೆ ಆಕೆಯ ತಂದೆ ಪ್ರಿಯಾಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜೊತೆಗೆ ಭಾರತದ ನಾಯಕ ವಿರಾಟ್ ಕೊಹ್ಲಿಯ ಉದಾಹರಣೆಯನ್ನು ನೀಡುವ ಮೂಲಕ ಅವರಿಗೆ ಸ್ಫೂರ್ತಿ ನೀಡಿದರು. ಭಾರತೀಯ ಮಹಿಳಾ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ, ಟಿ 20 ಸರಣಿಗಳನ್ನು ಆಡುವ ಜೊತೆಗೆ ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ.

ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಿಂದ ಸ್ಫೂರ್ತಿ ಪಡೆಯಲು ಪ್ರಿಯಾ ಅವರಿಗೆ ಸಲಹೆ ನೀಡಿದ್ದೇನೆ ಎಂದು ಪ್ರಿಯಾ ಅವರ ತಂದೆ ಸುರೇಂದ್ರ ಇಂಗ್ಲಿಷ್ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ 18 ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಆ ಸಮಯದಲ್ಲಿ ಕೊಹ್ಲಿ ದೆಹಲಿ ಪರ ಕರ್ನಾಟಕ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿದ್ದರು. ದಿನದ ಆಟದ ಅಂತ್ಯದ ನಂತರ, ಅವರು ತನ್ನ ತಂದೆಯ ನಿಧನದ ಬಗ್ಗೆ ತಿಳಿದುಕೊಂಡರು. ಆದರೆ ಅವರು ಮರುದಿನ ಬೆಳಿಗ್ಗೆ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ತಂಡದ ಆಟಗಾರರನ್ನು ಅಚ್ಚರಿಗೊಳಿಸಿದರು. ಆ ಪಂದ್ಯದಲ್ಲಿ ಕೊಹ್ಲಿ 90 ರನ್ ಗಳಿಸಿದರು ಮತ್ತು ತಂಡವನ್ನು ಫಾಲೋ-ಆನ್‌ನಿಂದ ಉಳಿಸಿದರು.

ಮಾನಸಿಕವಾಗಿ ಸದೃಢವಾಗಿರಲು ಸಲಹೆ
ನನ್ನ ಹೆಂಡತಿ ಚೇತರಿಸಿಕೊಳ್ಳುತ್ತಿದ್ದರು, ಆದರೆ ಅವರ ಆಮ್ಲಜನಕದ ಮಟ್ಟ ಕುಸಿದಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ iಡಬೇಕಾಗಿತ್ತು. ಆದರೆ ನಾವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸುರೇಂದ್ರ ಶುಕ್ರವಾರ ಹೇಳಿದ್ದಾರೆ. ನಾನು ಪ್ರಿಯಾಳನ್ನು ಪ್ರೇರೇಪಿಸಿದೆ. ವಿರಾಟ್ ಕೊಹ್ಲಿ ಅವರ ತಂದೆಯ ಮರಣದ ನಂತರ ರಣಜಿ ಟ್ರೋಫಿ ಆಡಲು ಹೋಗಿದ್ದರು ಎಂದು ನಾನು ಅವಳಿಗೆ ಹೇಳಿದೆ. ಇದು ನಮಗೆ ಕಷ್ಟದ ಸಮಯ, ಆದರೆ ನಾವು ಮಾನಸಿಕವಾಗಿ ಸದೃಢ ರಾಗಬೇಕು. ನೀವು ಸವಾಲುಗಳನ್ನು ಎದುರಿಸಬೇಕಾದರೆ ಮತ್ತು ಜೀವನದಲ್ಲಿ ಇಂತಹದೆ ಅನೇಕ ಸಂದರ್ಭಗಳು ಇದುರಾಗುತ್ತವೆ. ಹೀಗಾಗಿ ನಾವು ಎಲ್ಲದಕ್ಕೂ ಸಿದ್ದರಿರಬೇಕು ಎಂದು ಆಕೆಗೆ ಮನವರಿಕೆ ಮಾಡಿದೆ. ಇದನ್ನು ಅರ್ಥಮಾಡಿಕೊಂಡ ಪ್ರಿಯಾ, ಪಾಪಾ, ನಾನು ಭಾರತ ಪರ ಆಡಲು ಸಿದ್ಧನಿದ್ದೇನೆ ಎಂದು ಹೇಳಿದರು ಎಂದು ಪ್ರಿಯಾ ತಂದೆ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ
ಪ್ರಿಯಾ ತಮ್ಮ ತಾಯಿಯ ಸಾವಿನ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ನೀವು ಯಾವಾಗಲೂ ನನ್ನನ್ನು ಸದೃಢವಾಗಿರಲು ಏಕೆ ಹೇಳಿದ್ದೀರಿ ಎಂದು ಇಂದು ನಾನು ತಿಳಿದುಕೊಂಡೆ. ಒಂದು ದಿನ ನಿನ್ನನ್ನು ಕಳೆದುಕೊಂಡ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನನಗೆ ಬೇಕು ಎಂದು ನಿಮಗೆ ತಿಳಿದಿತ್ತು. ನಾನು ನಿನ್ನನ್ನು ತುಂಬಾ ಮಿಸ್​ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:
ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ; ಕೊಂಡಾಡಿದ ಶಿವಲಾಲ್​ ಯಾದವ್​ ಸಹೋದರಿ