
ಅಂಬಾಟಿ ರಾಯುಡು ಅವರ ಪಾಲಿಗೆ ಐಪಿಎಲ್ ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಿದ ವೇದಿಕೆಯಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ಗಾಗಿ ಉತ್ತಮ ಆಟದ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಗಳಿಸಿದರು ಮತ್ತು ಅವರ ಪ್ರತಿಭೆಯನ್ನು ಸಾಬೀತು ಪಡಿಸಿದರು. ಅಂಬಾಟಿ ರಾಯುಡು ಐಪಿಎಲ್ ಇತಿಹಾಸದಲ್ಲಿ ಎರಡು ಯಶಸ್ವಿ ತಂಡಗಳಲ್ಲಿ ಆಡಿದ ಆಟಗಾರ ರಾಯುಡು. ಅವರು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದಾರೆ. 2013 ರಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದಾಗ ರಾಯುಡು ಆ ತಂಡದಲ್ಲಿದ್ದರು. ನಂತರ 2015 ಮತ್ತು 2017 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಮತ್ತೆ ಚಾಂಪಿಯನ್ ಆದಾಗ ರಾಯುಡು ಅಲ್ಲಿಯೇ ಇದ್ದರು. ನಂತರ ಐಪಿಎಲ್ 2018 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಅಂಬಾಟಿ ರಾಯುಡು ಪಾಲು ಹೊಂದಿದ್ದಾರೆ.
ಒಂದು ಶತಕ, 19 ಅರ್ಧಶತಕ
ಅಂಬಾಟಿ ರಾಯುಡು ಇದುವರೆಗೆ 159 ಐಪಿಎಲ್ ಪಂದ್ಯಗಳನ್ನು ಆಡಿದ್ದು, 29.50 ಸರಾಸರಿಯಲ್ಲಿ 3659 ರನ್ ಗಳಿಸಿದ್ದಾರೆ. ಅವರು ಒಂದು ಶತಕ, 19 ಅರ್ಧಶತಕಗಳನ್ನು ಗಳಿಸಿದ್ದಾರೆ. 2010 ರಲ್ಲಿ ಮುಂಬೈಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಎಂಟು ಆವೃತ್ತಿಗಳಲ್ಲಿ ಈ ತಂಡದಲ್ಲಿದ್ದರು. ಇಲ್ಲಿ ಮುಖ್ಯವಾಗಿ ರಾಯುಡು ಕೆಳ ಕ್ರಮಾಂಕದಲ್ಲಿ ಆಡಿದರು. ವಿಕೆಟ್ ಕೀಪರ್ ಪಾತ್ರವನ್ನೂ ನಿರ್ವಹಿಸಿದ್ದಾರೆ. 2010 ರ ಮೊದಲ ಆವೃತ್ತಿಯಲ್ಲಿ, ಅವರು ತಮ್ಮ ಉಪಯುಕ್ತತೆಯನ್ನು ಸಾಬೀತುಪಡಿಸಿದರು. ಎರಡು ಅರ್ಧಶತಕಗಳ ಸಹಾಯದಿಂದ 14 ಪಂದ್ಯಗಳಲ್ಲಿ 356 ರನ್ ಗಳಿಸಿದ್ದರು. ಈ ಆವೃತ್ತಿಯಲ್ಲಿ, ಮುಂಬೈ ಮೊದಲ ಬಾರಿಗೆ ಫೈನಲ್ ಆಡಿತು. ಈ ಸಾಧನೆಯಿಂದಾಗಿ, ಐಪಿಎಲ್ 2011 ರ ಹರಾಜಿನ ಮೊದಲು ಮುಂಬೈ ರಾಯಡುನನ್ನು ಉಳಿಸಿಕೊಂಡಿತು. ಅವರು ಈ ನಂಬಿಕೆ ಉಳಿಸಿಕೊಂಡ ರಾಯುಡು 2011 ರಲ್ಲಿ 395 ಮತ್ತು 2012 ರಲ್ಲಿ 333 ರನ್ಗಳನ್ನು ಗಳಿಸಿದರು.
2018 ರಲ್ಲಿ ಚೆನ್ನೈ ಮೂರನೇ ಬಾರಿಗೆ ಚಾಂಪಿಯನ್
ಐಪಿಎಲ್ 2016 ರವರೆಗೆ ಅವರು ಮುಂಬೈ ತಂಡದ ಪ್ರಮುಖ ಭಾಗವಾಗಿ ಮುಂದುವರೆದರು. ಪ್ರತಿ ವರ್ಷ ರಾಯುಡು ಸುಮಾರು 300 ರನ್ ಗಳಿಸಿದರು. ಆದರೆ 2017 ರಲ್ಲಿ ಈ ಆಟಗಾರ ಇಂಜುರಿಗೆ ತುತ್ತಾಗಿದರಿಂದ ಅವರ ಆಟವೂ ಕುಸಿಯಿತು. ಒಟ್ಟು ಐದು ಪಂದ್ಯಗಳಲ್ಲಿ 91 ರನ್ ಗಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ಐಪಿಎಲ್ 2018 ರ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಿತು. ಅಂತಹ ಪರಿಸ್ಥಿತಿಯಲ್ಲಿ, ಅನೇಕ ತಂಡಗಳು ಅವರ ಬಗ್ಗೆ ಆಸಕ್ತಿಯನ್ನು ತೋರಿಸಿದವು ಆದರೆ ಚೆನ್ನೈನಿಂದ ರಾಯುಡು ಅವರನ್ನು ಖರೀದಿಸಲಾಯಿತು. ಆ ಆವೃತ್ತಿಯಲ್ಲಿ 16 ಪಂದ್ಯಗಳಲ್ಲಿ 602 ರನ್ ಗಳಿಸಿದ್ದಾರೆ. ಇಲ್ಲಿ ಅವರಿಗೆ ಇನ್ನಿಂಗ್ಸ್ ಪ್ರಾರಂಭಿಸುವ ಅವಕಾಶ ಸಿಕ್ಕಿತು. ಈ ಕಾರಣದಿಂದಾಗಿ, ಅವರು ಐಪಿಎಲ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಈ ಆವೃತ್ತಿಯಲ್ಲಿ ಚೆನ್ನೈ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.