IPL 2020: ಟೂರ್ನಮೆಂಟ್​ನಲ್ಲಿ ಧೂಳೆಬ್ಬಿಸಲು ಬಂದ ಅಮೆರಿಕದ ಘಾತಕ ಬೌಲರ್​, ಯಾರು ಈತ?

|

Updated on: Sep 13, 2020 | 11:56 AM

IPL ಟೂರ್ನಿ ಹತ್ತಿರವಾಗ್ತಿದ್ದಂತೆ, ದಿನ ದಿನಕ್ಕೂ ರಂಗು ಪಡೆದುಕೊಳ್ತಿದೆ. ವಿದೇಶಿ ಸ್ಟಾರ್ ಆಟಗಾರರು ಮರಳುಗಾಡಿನ IPL ಸಂಗ್ರಾಮಕ್ಕೆ ಒಬ್ಬೊಬ್ಬರಾಗಿ ಎಂಟ್ರಿ ಕೊಡ್ತಿದ್ದಾರೆ. ಆದ್ರೀಗ IPL ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಮೆರಿಕದ ಆಟಗಾರನೊಬ್ಬ ಕಣಕ್ಕಿಳಿಯುತ್ತಿದ್ದಾನೆ. ಐಪಿಎಲ್​ಗೆ ಎಂಟ್ರಿಕೊಟ್ಟ ಮೊದಲ ಅಮೆರಿಕ ಆಟಗಾರ! ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳೆನಿಸಿಕೊಂಡ ಅಫ್ಘಾನಿಸ್ತಾನ ಹಾಗೂ ನೇಪಾಳದ ಕ್ರಿಕೆಟಿಗರು ಅಬ್ಬರಿಸ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೀಗ IPL ಅನ್ನೋ ಕಲರ್​ಫುಲ್ ಟೂರ್ನಿಗೆ ಅಮೆರಿಕಾ ದೇಶದ ಆಟಗಾರನೊಬ್ಬ ಸರ್​ಪ್ರೈಸ್ ಎಂಟ್ರಿ ಕೊಟ್ಟಿದ್ದಾನೆ. ಹೌದು, […]

IPL 2020: ಟೂರ್ನಮೆಂಟ್​ನಲ್ಲಿ ಧೂಳೆಬ್ಬಿಸಲು ಬಂದ ಅಮೆರಿಕದ ಘಾತಕ ಬೌಲರ್​, ಯಾರು ಈತ?
Follow us on

IPL ಟೂರ್ನಿ ಹತ್ತಿರವಾಗ್ತಿದ್ದಂತೆ, ದಿನ ದಿನಕ್ಕೂ ರಂಗು ಪಡೆದುಕೊಳ್ತಿದೆ. ವಿದೇಶಿ ಸ್ಟಾರ್ ಆಟಗಾರರು ಮರಳುಗಾಡಿನ IPL ಸಂಗ್ರಾಮಕ್ಕೆ ಒಬ್ಬೊಬ್ಬರಾಗಿ ಎಂಟ್ರಿ ಕೊಡ್ತಿದ್ದಾರೆ. ಆದ್ರೀಗ IPL ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಮೆರಿಕದ ಆಟಗಾರನೊಬ್ಬ ಕಣಕ್ಕಿಳಿಯುತ್ತಿದ್ದಾನೆ.

ಐಪಿಎಲ್​ಗೆ ಎಂಟ್ರಿಕೊಟ್ಟ ಮೊದಲ ಅಮೆರಿಕ ಆಟಗಾರ!
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳೆನಿಸಿಕೊಂಡ ಅಫ್ಘಾನಿಸ್ತಾನ ಹಾಗೂ ನೇಪಾಳದ ಕ್ರಿಕೆಟಿಗರು ಅಬ್ಬರಿಸ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೀಗ IPL ಅನ್ನೋ ಕಲರ್​ಫುಲ್ ಟೂರ್ನಿಗೆ ಅಮೆರಿಕಾ ದೇಶದ ಆಟಗಾರನೊಬ್ಬ ಸರ್​ಪ್ರೈಸ್ ಎಂಟ್ರಿ ಕೊಟ್ಟಿದ್ದಾನೆ.

ಹೌದು, ಅಮೆರಿಕದಿಂದ ಬಂದಿರುವ ಈ ಬೌಲರ್ ಹೆಸರು ಅಲಿ ಖಾನ್. ಈತನ ಬೌಲಿಂಗ್ ಎದುರಿಸಿದ ಸ್ಟಾರ್ ಬ್ಯಾಟ್ಸ್​ಮನ್​ಗಳೇ ಒಂದು ಕ್ಷಣ ದಂಗಾಗಿ ಹೋಗ್ತಾರೆ. ಯಾಕಂದ್ರೆ ಈ ಅಲಿ ಖಾನ್ ಅನ್ನೋ ವೇಗಿ ಬೆಳಕಿಗೆ ಬಂದಿದ್ದೇ,  ವೆಸ್ಟ್​ ಇಂಡೀಸ್​​ನ ದೈತ್ಯ ವೇಗಿ ಕರ್ಟ್ನಿ ವಾಲ್ಶ್ ಅವರಿಂದ.

ಅಲಿ ಖಾನ್ ಇಂದಲ್ಲ ನಾಳೆ ಒಬ್ಬ ಘಾತಕ ವೇಗಿಯಾಗ್ತಾನೆ ಅನ್ನೋ ಭವಿಷ್ಯವನ್ನ ವೆಸ್ಟ್ ಇಂಡೀಸ್​ನ ಘಾತಕ ವೇಗಿ ಕರ್ಟ್ನಿ ವಾಲ್ಶ್ ನುಡಿದಿದ್ದರು. ಅಮೆರಿಕದಲ್ಲಿ ಪ್ರತಿಭಾವಂತ ಕ್ರಿಕೆಟಿಗರನ್ನ ಆಯ್ಕೆ ಮಾಡೋದಕ್ಕೆ ತೆರಳಿದ್ದ ವಾಲ್ಶ್, ಅಲಿ ಖಾನ್ ಬೌಲಿಂಗ್​ಗೆ ಫಿದಾ ಆಗಿ, ಆತನನ್ನ ಆಯ್ಕೆ ಮಾಡಿದ್ದಾರೆ.

ಪಾದಾರ್ಪಣೆ ಮಾಡಿದ ಮೊದಲ ಬಾಲ್​ನಲ್ಲೇ ಸಂಗಕ್ಕಾರ ಔಟ್​!
29 ವರ್ಷದ ಅಲಿ ಖಾನ್ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಲಿ ಖಾನ್ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ಮೊದಲ ಓವರ್​ನ ಮೊದಲ ಬಾಲ್​ನಲ್ಲೇ ದಿಗ್ಗಜ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ವಿಕೆಟ್ ಪಡೆದಿದ್ದ.

ಯಾರು ಈ ಅಲಿ ಖಾನ್?
ಅಲಿ ಖಾನ್ ಮೂಲತಃ ಅಮೆರಿಕದಲ್ಲಿ ಹುಟ್ಟಿ ಬೆಳೆದವನಲ್ಲ. ಅಲಿ ಖಾನ್ ಹುಟ್ಟಿದ್ದು ಪಾಕಿಸ್ತಾನ​ದ ಪಂಜಾಬ್​ನಲ್ಲಿ. ಅಲಿ ಖಾನ್ 18 ವರ್ಷದವನಾಗಿದ್ದಾಗ ಹೆತ್ತವರೊಂದಿಗೆ ಅಮೆರಿಕಕ್ಕೆ ಬಂದು ನೆಲೆಸಿದ್ದಾನೆ. ಅಮೆರಿಕದಲ್ಲಿ ನಡೆದ ಸಾಕಷ್ಟು T-20 ಲೀಗ್​ನಲ್ಲಿ ಎಲ್ಲರ ಗಮನ ಸೆಳೆದು, ಕರ್ಟ್ನಿ ವಾಲ್ಶ್​ ನೆರವಿನಿಂದ ಕೆರಿಬಿಯನ್ ಪ್ರೀಮಿಯರ್​ ಲೀಗ್​ಗೆ ಎಂಟ್ರಿ ಕೊಟ್ಟಿದ್ದ.

CPL​ನಿಂದ IPL.. TKR​ನಿಂದ KKR!
29ವರ್ಷದ ಬಲಗೈ ವೇಗದ ಬೌಲರ್ ಅಲಿ ಖಾನ್ ಈಗ IPLನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ, ಬಿರುಗಾಳಿ ಎಬ್ಬಿಸೋದಕ್ಕೆ ರೆಡಿಯಾಗಿದ್ದಾನೆ. ಮೊನ್ನೆ ತಾನೇ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚಾಂಪಿಯನ್ ಆದ ಟ್ರಿನ್​ಬ್ಯಾಗೋ ನೈಟ್ ರೈಡರ್ಸ್ (TKR) ತಂಡದ ಪರ ಅಲಿ ಖಾನ್, ಬೊಂಬಾಟ್ ಸ್ಪೆಲ್ ಮಾಡಿದ್ದ. ಸೇಂಟ್ ಲೂಸಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಲಿ ಎರಡು ವಿಕೆಟ್ ಪಡೆದು, TKR ತಂಡ ಚಾಂಪಿಯನ್ ಆಗೋದಕ್ಕೆ ನೆರವಾಗಿದ್ದ. ಅಲ್ಲದೇ, ಈ ಸೀಸನ್​ನ 8 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದ.

CPL​ನಲ್ಲಿ ಅಲಿ ಖಾನ್ ಪ್ರದರ್ಶನ
ಸಿಪಿಎಲ್​ನಲ್ಲಿ ಒಟ್ಟು 31ಪಂದ್ಯಗಳನ್ನಾಡಿರೋ ಅಲಿ ಖಾನ್, 8.3ರ ಎಕನಾಮಿಯಲ್ಲಿ 35ವಿಕೆಟ್ ಪಡೆದಿದ್ದಾನೆ. 22 ರನ್ ನೀಡಿ 3 ವಿಕೆಟ್ ಕಬಳಿಸಿರೋದು ಅಲಿ ಖಾನ್​ನ ಬೆಸ್ಟ್ ಸ್ಪೆಲ್ ಆಗಿದೆ.

ಅಲಿ ಖಾನ್​ಗೆ ಫಿದಾ ಆದ KKR ಕೋಚ್ ಮೆಕ್​ಲಮ್!
ಅಲಿ ಖಾನ್ CPL ಟೂರ್ನಿಯ ಪ್ರದರ್ಶನ KKR ಫ್ರಾಂಚೈಸಿಯನ್ನೂ ಇಂಪ್ರೆಸ್ ಮಾಡಿತ್ತು. ಅದು ಅಲ್ಲದೇ TKR ತಂಡದ ಕೋಚ್ ಆಗಿರೋ ಬ್ರೆಂಡನ್ ಮೆಕ್​ಲಮ್, KKR ತಂಡಕ್ಕೂ ಕೋಚ್. ಹೀಗಾಗಿ, ಮೆಕ್​ಲಮ್ ಅಲಿ ಖಾನ್​ನನ್ನ IPL​ಗಾಗಿ ದುಬೈಗೆ ಬರೋದಕ್ಕೆ ಬುಲಾವ್ ನೀಡಿದ್ದಾರೆ. IPL​ನಲ್ಲಿ ಸಿಕ್ಕಿರೋ ಅವಕಾಶವನ್ನ ಅಲಿ ಖಾನ್ ಸದ್ಬಳಕೆ ಮಾಡಿಕೊಳ್ಳೋದಾಗಿ ಹೇಳಿದ್ದಾನೆ.

ಅದೃಷ್ಟ ಹೇಗಿರುತ್ತೆ ನೋಡಿ. ಕಳೆದ ಸೀಸನ್​ನಲ್ಲೇ ಅಲಿ ಖಾನ್​ನನ್ನ IPL ಬಿಡ್ಡಿಂಗ್​ನಲ್ಲಿ ಯಾರೊಬ್ರು ಖರೀದಿಸಿರಲಿಲ್ಲ. IPL​ನಲ್ಲಾಡೋ ಭಾಗ್ಯ ನನಗಿಲ್ಲ ಅಂದ್ಕೊಂಡಿದ್ದ ಅಲಿಗೆ, ಈಗ IPL ಫ್ರಾಂಚೈಸಿ ಕೈ ಬೀಸಿ ಕರೆಯುತ್ತಿದೆ.

ಸದ್ಯ ಕೊಲ್ಕತ್ತಾ ತಂಡದ ವೇಗಿ ಹ್ಯಾರಿ ಗರ್ನಿ, ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಹೀಗಾಗಿ KKR ತಂಡ ಗರ್ನಿ ಸ್ಥಾನಕ್ಕೆ ಅಲಿ ಖಾನ್​ನನ್ನ ಭರ್ತಿ ಮಾಡಿಕೊಂಡಿದೆ. ಇದರೊಂದಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಮೆರಿಕ ದೇಶದ ಕ್ರಿಕೆಟಿಗ ಪಾಲ್ಗೊಳ್ಳುತ್ತಿದ್ದಾನೆ.

Published On - 11:39 am, Sun, 13 September 20