AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020 ಚುಟುಕು ಸುದ್ದಿಗಳು: ಹೋಟೆಲ್​ನಲ್ಲೂ CSK ಬೌಲಿಂಗ್ ಪ್ರಾಕ್ಟೀಸ್

ಐಪಿಎಲ್​ಗೆ ಇನ್ನೂ 8ದಿನ ಬಾಕಿ ಸಿಎಸ್​ಕೆ ತಂಡ ಆಟಗಾರರು ಹೋಟೆಲ್​ನಲ್ಲೂ ಅಭ್ಯಾಸ ನಡೆಸ್ತಿದ್ದಾರೆ. ವೇಗಿ ಜಗದೀಶನ್ ಹಾಗೂ ಎಡಗೈ ಸ್ಪಿನ್ನರ್ ಸಾಯ್ ಕಿಶೋರ್ ಹೋಟೆಲ್​ನಲ್ಲೇ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. Planning is everything! ? #Vadivelu #WhistlePodu @Jagadeesan_200 @saik_99 pic.twitter.com/woaZ674sH0 — Chennai Super Kings (@ChennaiIPL) September 11, 2020 ಥೀಮ್ ಸಾಂಗ್​ನಲ್ಲಿ ಕೊರೊನಾ ಜಾಗೃತಿ ಈ ಬಾರಿಯ ಐಪಿಎಲ್​ಗಾಗಿ ಮುಂಬೈ ಇಂಡಿಯನ್ಸ್ ತಂಡ, ಹೊಸ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ಈ ವಿಡಿಯೋದಲ್ಲಿ ಕೊರೊನಾ […]

IPL 2020 ಚುಟುಕು ಸುದ್ದಿಗಳು: ಹೋಟೆಲ್​ನಲ್ಲೂ  CSK ಬೌಲಿಂಗ್ ಪ್ರಾಕ್ಟೀಸ್
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Sep 13, 2020 | 10:09 AM

Share

ಐಪಿಎಲ್​ಗೆ ಇನ್ನೂ 8ದಿನ ಬಾಕಿ ಸಿಎಸ್​ಕೆ ತಂಡ ಆಟಗಾರರು ಹೋಟೆಲ್​ನಲ್ಲೂ ಅಭ್ಯಾಸ ನಡೆಸ್ತಿದ್ದಾರೆ. ವೇಗಿ ಜಗದೀಶನ್ ಹಾಗೂ ಎಡಗೈ ಸ್ಪಿನ್ನರ್ ಸಾಯ್ ಕಿಶೋರ್ ಹೋಟೆಲ್​ನಲ್ಲೇ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.

ಥೀಮ್ ಸಾಂಗ್​ನಲ್ಲಿ ಕೊರೊನಾ ಜಾಗೃತಿ ಈ ಬಾರಿಯ ಐಪಿಎಲ್​ಗಾಗಿ ಮುಂಬೈ ಇಂಡಿಯನ್ಸ್ ತಂಡ, ಹೊಸ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ಈ ವಿಡಿಯೋದಲ್ಲಿ ಕೊರೊನಾ ಕುರಿತು ಜಾಗೃತಿಯನ್ನ ಮೂಡಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕುರಿತು ತಿಳಿಸಲಾಗಿದೆ.

ಟ್ರೆಂಟ್ ಬೌಲ್ಟ್ ವರ್ಕೌಟ್ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿಕೊಂಡಿದ್ದಾರೆ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದದ ಬೌಲ್ಟ್, 13ನೇ ಆವೃತ್ತಿಯಲ್ಲಿ ಮುಂಬೈ ಪಾಲಾಗಿದ್ದು, ಜೀಮ್​ನಲ್ಲಿ ವರ್ಕೌಟ್ ನಡೆಸ್ತಿದ್ದಾರೆ.

ಹೋಟೆಲ್​ನಲ್ಲೇ ಆಟಗಾರರ ಮಸ್ತಿ ಬಯೋ ಬಬಲ್ ನಿಯಮ ಇರೋದ್ರಿಂದ ಐಪಿಎಲ್ ಆಟಗಾರರು ಹೋಟೆಲ್​ನಲ್ಲೇ ಎಂಜಾಯ್ ಮಾಡ್ತಿದ್ದಾರೆ. ದುಬೈನ ಹೋಟೆಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರು, ಸ್ನೂಕರ್, ಟೇಬಲ್ ಟೆನಿಸ್ ಆಡಿ ಕಾಲಕಳೆದ್ರು..

ರಾತ್ರಿಯೇ ಆಟಗಾರರ ಅಭ್ಯಾಸ ಯುಎಇನಲ್ಲಿ ಭಾರಿ ರಣಭೀಕರ ಬಿಸಿಲಿದ್ದು, ಆಟಗಾರರು ಸುಸ್ತಾಗಿ ಹೋಗ್ತಿದ್ದಾರೆ. ಮಧ್ಯಾಹ್ನ ಉರಿ ಬಿಸಿಲು ಇರೋದ್ರಿಂದ, ಎಂಟು ತಂಡಗಳ ಆಟಗಾರರು ರಾತ್ರಿ ಸೆಷನ್ ವೇಳೆಯೇ ಹೆಚ್ಚಾಗಿ ಅಭ್ಯಾಸ ಮಾಡ್ತಿದ್ದಾರೆ.

ಧೋನಿಯಲ್ಲ ಸೆಹ್ವಾಗ್ ಮೊದಲ ಆಯ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವಕ್ಕೆ ಮಹೇಂದ್ರ ಸಿಂಗ್‌ ಧೋನಿ ಮೊದಲ ಆಯ್ಕೆಯಾಗಿರಲಿಲ್ಲ. ಆದ್ರೆ ಟೀಮ್‌ ಮ್ಯಾನೇಜ್‌ಮೆಂಟ್‌ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಅವರಿಗೆ ನಾಯಕತ್ವ ನೀಡಲು ಯೋಚಿಸಿತ್ತು ಎಂದು ಎಸ್‌. ಬದ್ರಿನಾಥ್‌ ಹೇಳಿದ್ದಾರೆ.

ನರೈನ್ ನಂ.1 ಬೌಲರ್ ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ವೆಸ್ಟ್ ಇಂಡೀಸ್‌ನ ಸುನೀಲ್‌ ನರೈನ್‌ ಅತ್ಯುತ್ತಮ ಟಿ20 ಬೌಲರ್‌ ಆಗಿ ಹೊರ ಹೊಮ್ಮಲಿದ್ದಾರೆ ಎಂದು ಕೆಕೆಆರ್ ತಂಡದ ಮೆಂಟರ್‌ ಡೇವಿಡ್‌ ಹಸ್ಸಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಮುಗಿಸಿರುವ ನೆರೇನ್‌ ಸದ್ಯದಲ್ಲೇ ಕೆಕೆಆರ್‌ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ.

ಟೆಸ್ಟ್ ತಂಡವನ್ನ ಪ್ರತಿನಿಧಿಸಬೇಕು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರೋ ಸ್ಪಿನ್ನರ್ ಯಜ್ವಿಂದರ್ ಚಹಲ್, ಭಾರತ ಟೆಸ್ಟ್ ತಂಡವನ್ನ ಪ್ರತಿನಿಧಿಸೋದೇ ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ. ಭಾರತಕ್ಕೆ ವಿಶ್ವಕಪ್‌ ತಂದುಕೊಡುವುದು ಗುರಿಯಾದ್ರೆ, ಭಾರತ ಟೆಸ್ಟ್‌ ತಂಡವನ್ನು ಪ್ರತಿನಿಧಿಸುವ ನನ್ನ ವೈಯಕ್ತಿಕ ಗುರಿಯಾಗಿದೆ ಎಂದಿದ್ದಾರೆ.

ಡೆಲ್ಲಿ ಚಾಂಪಿಯನ್ ಆಗುತ್ತೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೇವಿನ್ ಪೀಟರ್​ಸನ್ ಈ ಬಾರಿಯ ಐಪಿಎಲ್ ಅನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೀಟರ್​ಸನ್ ಆರ್​ಸಿಬಿ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಪ್ರತಿನಿಧಿಸಿದ್ರು.

ರಾಯುಡು ರೈನಾ ಸ್ಥಾನ ತುಂಬ್ತಾರೆ! ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಡಗೈ ಬ್ಯಾಟ್ಸ್ ಮೆನ್ ಸುರೇಶ್ ರೈನಾ ಸ್ಥಾನ ತುಂಬಲು ಅಂಬಟಿ ರಾಯುಡು ಒಳ್ಳೆಯ ಆಯ್ಕೆ ಎಂದು ನ್ಯೂಜಿಲೆಂಡ್ ನ ಮಾಜಿ ಆಲ್ ರೌಂಡರ್ ಸ್ಕಾಟ್ ಸ್ಟೈರಿಸ್ ತಿಳಿಸಿದ್ದಾರೆ. ಸಿಎಸ್ ಕೆ ಬಳಿ ತುಂಬಾ ಆಯ್ಕೆಗಳಿವೆ. ಅದರಲ್ಲೂ ಮೂರನೇ ಸ್ಥಾನವನ್ನು ರಾಯುಡು ತುಂಬಹುದು ಎಂದಿದ್ದಾರೆ.

Published On - 9:49 am, Sun, 13 September 20