AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮಗಳಿಗೆ ನಾಯಕ ಈ ಲಂಕಾ ಶೇಖ್: ಕ್ರಿಕೆಟ್ ಸ್ಟಾರ್​ಗಳ ಜೊತೆಗೂ ಫಾಝಿಲ್ಗೆ ಲಿಂಕ್, ತನಿಖೆ ಶುರು

ಬೆಂಗಳೂರು: ಸಂಜನಾಗೂ ಫಾಝಿಲ್‌ಗೂ ಇರೋ ಕ್ಯಾಸಿನೋ ಬ್ಯುಸಿನೆಸ್‌ ಒಂದು ಕಡೆಯಾದ್ರೆ, ಫಾಝಿಲ್‌ಗೂ ಜಮೀರ್‌ಗೂ ಇರೋ ನಂಟು ಇನ್ನೊಂದು ಕಡೆ. ಇದರ ಮಧ್ಯೆ ಶೇಖ್ ಫಾಝಿಲ್ ಲಿಂಕ್, ಆತನ ನೆಟ್‌ವರ್ಕ್ ಸ್ಯಾಂಡಲ್‌ವುಡ್ ಮಾತ್ರವಲ್ಲ. ಅದರಾಚೆಗೂ ಬೆಳೆದು ನಿಂತಿದೆ. ಫಾಝಿಲ್‌ಗೆ ಸ್ಯಾಂಡಲ್‌ವುಡ್‌ಆಚೆಗೂ ನಶೆ ನಂಜಿನ ನಂಟು! ಶೇಖ್‌ ಫಾಝಿಲ್.. ಈ ಅಸಾಮಿ ಅಂತಿಂಥ ವ್ಯಕ್ತಿಯಲ್ಲ. ಡ್ರಗ್ಸ್ ಮಾಫಿಯಾದಲ್ಲಿ ಇವನಿಗಿರುವ ನೆಟ್‌ವರ್ಕ್‌ ನಿಜಕೂ ಭಯಂಕರ. ಇವನ ಬ್ಯಾಕ್‌ಗ್ರೌಂಡ್ ಎಷ್ಟು ಸ್ಫೋಟಕವಾಗಿದ್ಯೋ, ಈತನ ಲಿಂಕ್‌ಗಳು ಕೂಡ ಅಷ್ಟೇ ರೋಚಕವಾಗಿವೆ. ಅಬುದಾಬಿ ಟಿ-10ನಲ್ಲೂ ಶೇಖ್‌ […]

ಅಕ್ರಮಗಳಿಗೆ ನಾಯಕ ಈ ಲಂಕಾ ಶೇಖ್: ಕ್ರಿಕೆಟ್ ಸ್ಟಾರ್​ಗಳ ಜೊತೆಗೂ ಫಾಝಿಲ್ಗೆ ಲಿಂಕ್, ತನಿಖೆ ಶುರು
Follow us
ಆಯೇಷಾ ಬಾನು
|

Updated on: Sep 13, 2020 | 7:19 AM

ಬೆಂಗಳೂರು: ಸಂಜನಾಗೂ ಫಾಝಿಲ್‌ಗೂ ಇರೋ ಕ್ಯಾಸಿನೋ ಬ್ಯುಸಿನೆಸ್‌ ಒಂದು ಕಡೆಯಾದ್ರೆ, ಫಾಝಿಲ್‌ಗೂ ಜಮೀರ್‌ಗೂ ಇರೋ ನಂಟು ಇನ್ನೊಂದು ಕಡೆ. ಇದರ ಮಧ್ಯೆ ಶೇಖ್ ಫಾಝಿಲ್ ಲಿಂಕ್, ಆತನ ನೆಟ್‌ವರ್ಕ್ ಸ್ಯಾಂಡಲ್‌ವುಡ್ ಮಾತ್ರವಲ್ಲ. ಅದರಾಚೆಗೂ ಬೆಳೆದು ನಿಂತಿದೆ.

ಫಾಝಿಲ್‌ಗೆ ಸ್ಯಾಂಡಲ್‌ವುಡ್‌ಆಚೆಗೂ ನಶೆ ನಂಜಿನ ನಂಟು! ಶೇಖ್‌ ಫಾಝಿಲ್.. ಈ ಅಸಾಮಿ ಅಂತಿಂಥ ವ್ಯಕ್ತಿಯಲ್ಲ. ಡ್ರಗ್ಸ್ ಮಾಫಿಯಾದಲ್ಲಿ ಇವನಿಗಿರುವ ನೆಟ್‌ವರ್ಕ್‌ ನಿಜಕೂ ಭಯಂಕರ. ಇವನ ಬ್ಯಾಕ್‌ಗ್ರೌಂಡ್ ಎಷ್ಟು ಸ್ಫೋಟಕವಾಗಿದ್ಯೋ, ಈತನ ಲಿಂಕ್‌ಗಳು ಕೂಡ ಅಷ್ಟೇ ರೋಚಕವಾಗಿವೆ.

ಅಬುದಾಬಿ ಟಿ-10ನಲ್ಲೂ ಶೇಖ್‌ ಫಾಝಿಲ್ ನೆರಳು! ಡ್ರಗ್ಸ್ ನಂಟಿನ ವಿಚಾರದಲ್ಲಿ ಶೇಖ್‌ ಫಾಝಿಲ್ ಮೇಲೆ ಕಣ್ಣಿಟ್ಟಿರುವ ಸಿಸಿಬಿಗೆ ಸ್ಫೋಟಕ ಸಂಗತಿಗಳು ಬಯಲಾಗಿವೆ. ಈತನ ವ್ಯವಹಾರ ಸ್ಯಾಂಡಲ್‌ವುಡ್, ಬಾಲಿವುಡ್ ಸ್ಟಾರ್‌ಗಳೊಂದಿಗೆ ಮಾತ್ರವಲ್ಲ. ಕ್ರಿಕೆಟ್‌ ಸ್ಟಾರ್‌ಗಳ ಜೊತೆಗೂ ಇದೆ. ಅದ್ರಲ್ಲೂ ಪ್ರತಿಷ್ಠಿತ ಅಬುದಾಬಿ ಟಿ10 ಕ್ರಿಕೆಟ್ ಲೀಗ್‌ನ ತಂಡವೊಂದಕ್ಕೆ ಈತ ಏಜೆಂಟ್ ಆಗಿರೋ ಕ್ಯಾಸಿನೋ ಪ್ರಾಯೋಜಕತ್ವ ನೀಡಿರುವುದು ಬಯಲಾಗಿದೆ.

ಕರ್ನಾಟಕ ಟಸ್ಕರ್ಸ್ ತಂಡಕ್ಕೆ ಬೆಲೀಸ್‌ ಕ್ಯಾಸಿನೋ ಸ್ಪಾನ್ಸರ್‌! ಶ್ರೀಲಂಕಾದಲ್ಲಿರುವ ಬೆಲೀಸ್ ಕ್ಯಾಸಿನೋದ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿರೋ ಶೇಖ್‌ ಫಾಝಿಲ್, ಕರ್ನಾಟಕ ಟಸ್ಕರ್ಸ್‌ ತಂಡಕ್ಕೆ ಪ್ರಾಯೋಜಕತ್ವ ತಂದುಕೊಟ್ಟಿದ್ದ. ಅಬುದಾಬಿ ಟಿ-10 ಲೀಗ್‌ನ ಕರ್ನಾಟಕ ಟಸ್ಕರ್ಸ್ ತಂಡಕ್ಕೆ 2019ರಿಂದಲೂ ಸ್ಪಾನ್ಸರ್‌ ಮಾಡಿಸ್ತಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಹಾಲಿ, ಮಾಜಿ ಆಟಗಾರರನ್ನ ಹೊಂದಿರುವ ಕರ್ನಾಟಕ ಟಸ್ಕರ್ಸ್ ಟೂರ್ನಿಯ ಪ್ರಮುಖ ತಂಡಗಳಲ್ಲಿ‌ ಒಂದಾಗಿದೆ. ಈ ತಂಡದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗೂ ಶೇಖ್ ಫಾಝಿಲ್ ನಂಟು ಹೊಂದಿದ್ದಾನೆ. ಟೂರ್ನಿಯುದ್ದಕ್ಕೂ ಟಸ್ಕರ್ಸ್ ತಂಡದೊಂದಿಗೆ ಗುರುತಿಸಿಕೊಂಡಿದ್ದ ಶೇಖ್ ಫಾಝಿಲ್ ಆಫ್ಟರ್ ಮ್ಯಾಚ್ ಪಾರ್ಟಿಗಳಲ್ಲಿ ಆಟಗಾರರ ಜೊತೆ ಪಾರ್ಟಿ ಮಾಡ್ತಿದ್ದ.. ಇಲ್ಲಿ ಡ್ರಗ್ಸ್‌ ಸಪ್ಲೈ ಮಾಡಿರುವ ಬಗ್ಗೆ ಅನುಮಾನ ಮೂಡಿದೆ.

ಒಟ್ನಲ್ಲಿ ಪೊಲೀಸರ ಕೈಗೆ ಸಿಗದೇ ಕಣ್ಣಾಮುಚ್ಚಾಲೆ ಆಡ್ತಿರೋ ಫಾಝಿಲ್‌ ಬೃಹತ್ ಜಾಲ ಒಂದೊಂದಾಗಿಯೇ ಬೆಳಕಿಗೆ ಬರ್ತಿದೆ. ಸಿಸಿಬಿಗೆ ಸಿಕ್ಕಿರೋ ರೋಚಕ ಸುಳಿವುಗಳು ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್‌ಗಳನ್ನ ನೀಡಿವೆ. ಸ್ಯಾಂಡಲ್‌ವುಡ್‌ನಿಂದ ಆರಂಭವಾದ ಸಿಸಿಬಿ ಬೇಟಿ ಈಗ ಕ್ರಿಕೆಟ್‌ವರೆಗೂ ಬಂದು ನಿಂತಿದೆ. ಸದ್ಯ ಸಿಸಿಬಿ ಪೊಲೀಸರು ಶೇಖ್‌ ಫಾಝಿಲ್‌ಗೂ ಬಲೆ ಬೀಸಿದ್ದಾರೆ.

ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ