ಆಸ್ಟ್ರೇಲಿಯಾಗೆ ಸೋಲುಣಿಸಿದ ಟೀಂ ಇಂಡಿಯಾದ 6 ಯುವ ಆಟಗಾರರಿಗೆ ಎಸ್​​ಯುವಿ ಗಿಫ್ಟ್​ ಮಾಡಿದ ಆನಂದ್​ ಮಹೀಂದ್ರಾ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ ಗಾವಾಸ್ಕರ್​ ಟ್ರೋಫಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2-1 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಕ್ರಿಕೆಟ್​ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಈ ಬಾರಿ ಟೆಸ್ಟ್​​ನಲ್ಲಿ ಡೆಬ್ಯೂ ಮಾಡಿ ಅತ್ಯುತ್ತಮ ಪ್ರದರ್ಶನ ನೀಡಿದ ಆರು ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಎಸ್​​ಯವಿ ಗಿಫ್ಟ್​ ಮಾಡಿದ್ದಾರೆ! ಈ ಬಗ್ಗೆ ಆನಂದ್​ ಮಹೀಂದ್ರ ಟ್ವೀಟ್​ ಮಾಡುವ ಮೂಲಕ ಈ ಘೋಷಣೆ ಮಾಡಿದ್ದಾರೆ. ಇತ್ತೀಚಿನ ಐತಿಹಾಸಿಕ ಸರಣಿ INDvAUS ನಲ್ಲಿ ಆರು […]

ಆಸ್ಟ್ರೇಲಿಯಾಗೆ ಸೋಲುಣಿಸಿದ ಟೀಂ ಇಂಡಿಯಾದ 6 ಯುವ ಆಟಗಾರರಿಗೆ ಎಸ್​​ಯುವಿ ಗಿಫ್ಟ್​ ಮಾಡಿದ ಆನಂದ್​ ಮಹೀಂದ್ರಾ
ಆನಂದ್​ ಮಹೀಂದ್ರಾ

Updated on: Jan 23, 2021 | 5:52 PM

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ ಗಾವಾಸ್ಕರ್​ ಟ್ರೋಫಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2-1 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಕ್ರಿಕೆಟ್​ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಈ ಬಾರಿ ಟೆಸ್ಟ್​​ನಲ್ಲಿ ಡೆಬ್ಯೂ ಮಾಡಿ ಅತ್ಯುತ್ತಮ ಪ್ರದರ್ಶನ ನೀಡಿದ ಆರು ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಎಸ್​​ಯವಿ ಗಿಫ್ಟ್​ ಮಾಡಿದ್ದಾರೆ!

ಈ ಬಗ್ಗೆ ಆನಂದ್​ ಮಹೀಂದ್ರ ಟ್ವೀಟ್​ ಮಾಡುವ ಮೂಲಕ ಈ ಘೋಷಣೆ ಮಾಡಿದ್ದಾರೆ. ಇತ್ತೀಚಿನ ಐತಿಹಾಸಿಕ ಸರಣಿ INDvAUS ನಲ್ಲಿ ಆರು ಯುವಕರು ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯ ಆಡಿ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಹೀಗಾಗಿ, ನನ್ನ ಕಡೆಯಿಂದ ಆರು ಆಟಗಾರರಿಗೆ ತಲಾ ಒಂದು ಎಸ್​​ಯುವಿ ಗಿಫ್ಟ್​ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಗಿಫ್ಟ್​ ಕಂಪೆನಿ ಬದಲಿಗೆ ತಮ್ಮದೇ ಹಣದಿಂದ ನೀಡ್ತಿರೋದು ವಿಶೇಷ.

ಎಸ್​ಯುವಿ ಪಡೆದ ಟೀಂ ಇಂಡಿಯಾದ ಆರು ಆಟಗಾರರು

ಮೊಹಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​, ಶುಭ್​ಮನ್​ ಗಿಲ್, ನಟರಾಜನ್​, ನವದೀಪ್​ ಸೈನಿ ಹಾಗೂ ವಾಷಿಂಗ್ಟನ್​ ಸುಂದರ್​ಗೆ ಈ ಎಸ್​ಯುವಿ ದೊರೆಯುತ್ತಿದೆ. ಈ ಆರು ಆಟಗಾರರು ಟೆಸ್ಟ್​​ಗೆ ಪಾದಾರ್ಪಣೆ ಮಾಡಿ, ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಟ್ವೀಟ್​ ಮೂಲಕ ಆಸ್ಟ್ರೇಲಿಯನ್ನರ ಕೆನ್ನೆಗೆ ನಯವಾಗಿಯೇ ಬಾರಿಸಿದ ಆನಂದ್ ಮಹೀಂದ್ರಾ! ಏನದು?

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us