AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games 2023: 25 ಮೀ. ಪಿಸ್ತೂಲ್‌ ಗುಂಪು ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ..!

Asian Games 2023: ಶೂಟಿಂಗ್​ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಭಾರತದ ಮನು, ಇಶಾ ಮತ್ತು ರಿದಮ್ ಅವರು 25 ಮೀಟರ್ ಪಿಸ್ತೂಲ್‌ ಟೀಮ್ ಇವೆಂಟ್‌ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Asian Games 2023: 25 ಮೀ. ಪಿಸ್ತೂಲ್‌ ಗುಂಪು ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ..!
25 ಮೀ. ಪಿಸ್ತೂಲ್‌ ಟೀಮ್ ಇವೆಂಟ್‌
ಪೃಥ್ವಿಶಂಕರ
|

Updated on:Sep 27, 2023 | 10:03 AM

Share

ಚೀನಾ ನೆಲದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದೆ. ಈ ಬಾರಿ ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ ಪದಕಗಳ ಚೀಲಕ್ಕೆ ಮತ್ತೊಂದು ಚಿನ್ನದ ಪದಕವನ್ನು ತುಂಬಿವೆ. ಶೂಟಿಂಗ್​ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ (25m Pistol Team Event) ಚಿನ್ನ ಗೆದ್ದಿದ್ದಾರೆ. ಭಾರತದ ಮನು, ಇಶಾ ಮತ್ತು ರಿದಮ್ (Manu Bhaker, Esha Singh and Rhythm Sangwan) ಅವರು 25 ಮೀಟರ್ ಪಿಸ್ತೂಲ್‌ ಟೀಮ್ ಇವೆಂಟ್‌ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತ ಗೆದ್ದ ನಾಲ್ಕನೇ ಚಿನ್ನದ ಪದಕ

ಇದು ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ ಗೆದ್ದ ನಾಲ್ಕನೇ ಚಿನ್ನದ ಪದಕವಾಗಿದೆ. ಅಲ್ಲದೆ ಕೇವಲ ಶೂಟಿಂಗ್‌ನಲ್ಲಿಯೇ ಭಾರತಕ್ಕೆ ಸಿಕ್ಕ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಇವೆಂಟ್‌ನಲ್ಲಿ ಭಾರತ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿತ್ತು. ಆದರೆ, ಈ ಬಾರಿ ಭಾರತ ಚಿನ್ನಕ್ಕೆ ಗುರಿಯಾಗಿದ್ದು ರೈಫಲ್‌ನಿಂದಲ್ಲ, ಪಿಸ್ತೂಲ್‌ನಿಂದ.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 12 ನೇ ಪದಕ: ಬೆಳ್ಳಿ ಗೆದ್ದ 17ರ ಬಾಲಕಿ ನೇಹಾ ಠಾಕೂರ್

ಮೂವರು ಹೆಣ್ಣು ಮಕ್ಕಳ ಆಟಕ್ಕೆ ಸಿಕ್ಕಿತು ಮತ್ತೊಂದು ಚಿನ್ನ

ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಒಟ್ಟಾಗಿ 1790 ಅಂಕಗಳನ್ನು ಗಳಿಸಿದರು. ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಮೂವರು ಪುತ್ರಿಯರಲ್ಲಿ ಮನು ಭಾಕರ್ ಅತ್ಯಧಿಕ 590 ಅಂಕಗಳನ್ನು ಗಳಿಸಿದರು. ಈ ಟೀಮ್ ಈವೆಂಟ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದರೆ, ಚೀನಾ ಬೆಳ್ಳಿ ಪದಕ ಗೆದ್ದಿತು. ಹಾಗೆಯೇ ದಕ್ಷಿಣ ಕೊರಿಯಾ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಚಿನ್ನಕ್ಕಿಂತ ಮೊದಲು ಬೆಳ್ಳಿ

25 ಮೀಟರ್ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಚಿನ್ನ ಗೆಲ್ಲುವ ಮೊದಲು, ಭಾರತೀಯ ಮಹಿಳೆಯರು 50 ಮೀಟರ್ ರೈಫಲ್ 3 ಸ್ಥಾನಗಳ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅರ್ಥಾತ್, ನಾಲ್ಕನೇ ದಿನದ ಮೊದಲ ಪದಕ ಬೆಳ್ಳಿಯದ್ದಾಗಿದ್ದರೆ ಎರಡನೇ ಪದಕ ಚಿನ್ನವಾಗಿತ್ತು. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸೇರಿದಂತೆ ಮೂವರು ಮಹಿಳಾ ಶೂಟರ್‌ಗಳು ಒಟ್ಟಾಗಿ ಭಾರತಕ್ಕೆ ಬೆಳ್ಳಿ ಗೆದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 am, Wed, 27 September 23

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ