ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ಸರಣಿ ಫೆ.22ರಿಂದ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆರನ್ ಫಿಂಚ್ ತಮ್ಮ ಬ್ಯಾಟಿಂಗ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡುವ ಮೂಲಕ ಅವರು ತಮ್ಮ ಬ್ಯಾಟಿಂಗ್ ಅನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಫಿಂಚ್ ಐಪಿಎಲ್ 2020ರಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 22.3 ಸರಾಸರಿಯಲ್ಲಿ, 111 ಸ್ಟ್ರೈಕ್ ರೇಟ್ನಲ್ಲಿ ಆರನ್ ಫಿಂಚ್ ಬ್ಯಾಟ್ ಬೀಸಿದ್ದರು. ಈ ಕಾರಣಕ್ಕಾಗಿ, ಐಪಿಎಲ್ 2021 ರ ಹರಾಜಿನಲ್ಲಿ ಫಿಂಚ್ ಯಾವುದೇ ಖರೀದಿದಾರರ ಗಮನ ಸೆಳೆಯಲಿಲ್ಲ. ಆದಾಗ್ಯೂ ಫಿಂಚ್ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಕೆಲವು ತಾಂತ್ರಿಕ ಸುಧಾರಣೆಗಳನ್ನು ಮಾಡಿದರೆ, ಹಳೆಯ ಲಯವನ್ನು ಮರಳಿ ಪಡೆಯಬಹುದು.
ತಾಂತ್ರಿಕ ಬದಲಾವಣೆಗಳತ್ತ ಗಮನ ಹರಿಸುತ್ತಿದ್ದೇನೆ..
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಗೂ ಮುನ್ನ ಮಾತನಾಡಿದ ಫಿಂಚ್, ಮತ್ತೊಮ್ಮೆ ಟಿ-20 ಆಡುತ್ತಿರುವುದು ಸಂತೋಷವಾಗಿದೆ. ನಾನು ಯಾವಾಗಲೂ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ನಾನು ಕೆಲವು ತಾಂತ್ರಿಕ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ ಬ್ಯಾಟಿಂಗ್‌ನಲ್ಲಿ ಬದಲಾವಣೆ ತರುವುದಕ್ಕಾಗಿ ನನ್ನ ಮುಂಭಾಗದ ಪಾದದ ಮೇಲೆ ತೂಕವನ್ನು ಹಾಕಲು ಪ್ರಯತ್ನಿಸುತ್ತಿದ್ದೇನೆ. ಇದರ ಬಗ್ಗೆ ಈಗಾಗಲೇ ನಾನು ಆಂಡ್ರ್ಯೂ ಮ್ಯಾಕ್ಡೊನಾಲ್ಡ್ ಅವರೊಂದಿಗೆ ಮಾತನಾಡಿದ್ದೇನೆ. ನಾನು ಪ್ರಸ್ತುತ ಬ್ಯಾಟಿಂಗ್‌ನಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳತ್ತ ಗಮನ ಹರಿಸುತ್ತಿದ್ದೇನೆ ಎಂದರು.
ಗುಪ್ಟಿಲ್ ಒಬ್ಬ ಅದ್ಭುತ ಆಟಗಾರ..
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾ ಟನ್ ಗುಪ್ಟಿಲ್ ಬಗ್ಗೆ ಮಾತನಾಡಿದ ಫಿಂಚ್, ಗುಪ್ಟಿಲ್ ಒಬ್ಬ ಅದ್ಭುತ ಆಟಗಾರ. ಅವರು ಏಕದಿನ ಮತ್ತು ಟಿ-20 ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ಅವರು ನಮ್ಮ ವಿರುದ್ಧ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಸಹ ಆಡಿದ್ದಾರೆ ಎಂದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ಸೋಮವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.