IPL 2021 Auction; List of Unsold Players: ಐಪಿಎಲ್​ನಲ್ಲಿ ಮಾರಾಟವಾಗದೆ ಉಳಿದ ಸ್ಟಾರ್​ ಆಟಗಾರರ ಪಟ್ಟಿ ಇಲ್ಲಿದೆ…

IPL 2021 Auction; List of Unsold Players: ಐಪಿಎಲ್​ನಲ್ಲಿ ಮಾರಾಟವಾಗದೆ ಉಳಿದ ಸ್ಟಾರ್​ ಆಟಗಾರರ ಪಟ್ಟಿ ಇಲ್ಲಿದೆ...
IPL 2021

IPL 2021 Unsold Players: ಪ್ರತಿ ಆಟಗಾರರನ್ನು ಮೊದಲ ಹಂತದಲ್ಲಿ ತರಲಾಗುತ್ತದೆ. ಅಲ್ಲಿ ಅವರು ಮಾರಾಟವಾಗದೆ ಇದ್ದರೆ ಅವರನ್ನು ಎರಡನೇ ಹಂತದಲ್ಲಿ ತರಲಾಗುತ್ತದೆ.

Rajesh Duggumane

|

Feb 18, 2021 | 7:53 PM

2021ಗೆ ನಡೆಯಲಿರುವ ಐಪಿಎಲ್​ 14 ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆದಿದೆ. ಸ್ಟಾರ್​ ಆಟಗಾರರು ಎನಿಸಿಕೊಂಡ ಅನೇಕರು ಇಂದು ಅನ್​ಸೋಲ್ಡ್​ ಆಗಿದ್ದಾರೆ. ಕಳೆದ ಐಪಿಎಲ್​ನಲ್ಲಿ ಈ ಆಟಗಾರರು ನೀಡಿದ ಪ್ರದರ್ಶನವನ್ನು ಗಮನಿಸಿ ಪ್ರತಿ ತಂಡವೂ ಆಟಗಾರರನ್ನು ಕೊಂಡುಕೊಳ್ಳುತ್ತದೆ. ಕೆಲ ಆಟಗಾರರು ಹೆಚ್ಚು ಕಳಪೆ ಪ್ರದರ್ಶನ ನೀಡಿದ್ದರಿಂದ ಮಾರಾಟವಾಗದೆ ಉಳಿದರು.

ಪ್ರತಿ ಆಟಗಾರರನ್ನು ಮೊದಲ ಹಂತದಲ್ಲಿ ತರಲಾಗುತ್ತದೆ. ಅಲ್ಲಿ ಅವರು ಮಾರಾಟವಾಗದೆ ಇದ್ದರೆ ಅವರನ್ನು ಎರಡನೇ ಹಂತದಲ್ಲಿ ತರಲಾಗುತ್ತದೆ. ಆಗಲೂ ಮಾರಾಟವಾಗದೆ ಇದ್ದರೆ ಅವರಿಗೆ ಅನ್​ಸೋಲ್ಡ್​ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತದೆ. ಈ ರೀತಿ ಅನ್​ಸೋಲ್ಡ್​ ಆದ ಆಟಗಾರರ ಹೆಸರು ಇಲ್ಲಿದೆ.

ಮೊದಲ ಹಂತದಲ್ಲಿ ಮಾರಾಟವಾಗದೆ ಉಳಿದ ಆಟಗಾರರು..

ಆರನ್​ ಫಿಂಚ್​: ಮೂಲ ಬೆಲೆ 1 ಕೋಟಿ ರೂಪಾಯಿ..

ಹನುಮ ವಿಹಾರಿ: ಮೂಲ ಬೆಲೆ 1 ಕೋಟಿ ರೂಪಾಯಿ..

ಜೇಸನ್​ ರಾಯ್​: ಮೂಲ ಬೆಲೆ 2 ಕೋಟಿ ರೂಪಾಯಿ..

ಎವಿನ್ ಲೂಯಿಸ್:ಮೂಲ ಬೆಲೆ 1 ಕೋಟಿ ರೂಪಾಯಿ..

ಮಾರಾಟವಾಗದೆ ಉಳಿದ ಇತರ ಆಟಗಾರರು…

ಅಲೆಕ್ಸ್ ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್, ಕುಸಲ್ ಪೆರೆರಾ, ಶೆಲ್ಡನ್ ಕಾಟ್ರೆಲ್, ಹರ್ಭಜನ್​ ಸಿಂಗ್​,ವಿವೆಕ್​ ಸಿಂಗ್, ಪವನ್​ ನೇಗಿ, ಮಾರ್ಟಿನ್​ ಗುಪ್​​ಟಿಲ್​, ಡೆವೊನ್ ಕಾನ್ವೇ, ಡ್ಯಾರೆನ್ ಬ್ರಾವೋ, ರೋವ್ಮನ್ ಪೊವೆಲ್, ಶಾನ್ ಮಾರ್ಷ್, ಕೋರೆ ಆಂಡರ್ಸನ್, ಬೆನ್ ಕಟಿಂಗ್, ಪವನ್​ ನೇಗಿ, ಮಿಚೆಲ್ ಮೆಕ್ಲೆನಾಘನ್, ಜೇಸನ್ ಬೆಹ್ರೆಂಡೋರ್ಫ್, ಕೆ.ಎಲ್.ಶ್ರೀಜಿತ್, ಜಿ. ಪೆರಿಯಾಸಾಮಿ, ಬೆನ್ ದ್ವಾರೂಯಿಸ್, ಬೆನ್ ಮೆಕ್‌ಡರ್ಮೊಟ್, ಮ್ಯಾಥ್ಯೂ ವೇಡ್, ಸಿದ್ಧೇಶ್ ಲಾಡ್, ಪ್ರೇರಕ್​  ಮಂಕಂಡ್​, ಜೋಶ್ ಇಂಗ್ಲಿಶ್​, ಸಿಮಾರ್ಜೀತ್ ಸಿಂಗ್, ಸ್ಕಾಟ್ ಕುಗ್ಗೆಲೀಜ್​​​, ಕ್ರಿಸ್​ ಗ್ರೀನ್​, ಇಸುರು ಉಡಾನಾ, ಜಾರ್ಜ್ ಲಿಂಡೆ, ಚೈತನ್ಯ ಬಿಷ್ಣೋಯ್, ಹರ್ಷ ತ್ಯಾಗಿ, ಪ್ರತ್ಯೂಷ್​ ಸಿಂಗ್​, ವಿಷ್ಣು ಸೋಲಂಕಿ, ವೆಂಕಟೇಶ್​ ಅಯ್ಯರ್​..

ಕಳೆದ ಬಾರಿ ಐಪಿಎಲ್​ನಲ್ಲಿ ಆಟಗಾರರು ನೀಡಿದ ಪ್ರದರ್ಶನ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ತುಂಬಾನೇ ಪ್ರಭಾವ ಬೀರುತ್ತದೆ.

Follow us on

Most Read Stories

Click on your DTH Provider to Add TV9 Kannada