IPL Auction 2021 Sold Players List: ಐಪಿಎಲ್​ 2021 ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ ಹೀಗಿದೆ

IPL Auction 2021 sold players list: ಐಪಿಎಲ್​ 2021 ಹರಾಜು ಪ್ರಕ್ರಿಯೆಯಲ್ಲಿ ಆಟಗಾರರು ಒಳ್ಳೆಯ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗುತ್ತಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ 8 ತಂಡಗಳು ಅಳೆದು ತೂಗಿ ಲೆಕ್ಕಾಚಾರ ಹಾಕಿ ತಮಗೆ ಬೇಕಾದ ಆಟಗಾರರನ್ನು ಬರಸೆಳೆದುಕೊಳ್ಳುತ್ತಿದ್ದಾರೆ.

IPL Auction 2021 Sold Players List: ಐಪಿಎಲ್​ 2021 ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ ಹೀಗಿದೆ
ಐಪಿಎಲ್ 2021
Follow us
Skanda
|

Updated on:Feb 18, 2021 | 8:02 PM

ಐಪಿಎಲ್​ 2021 ಹರಾಜು ಪ್ರಕ್ರಿಯೆಯಲ್ಲಿ ಆಟಗಾರರು ಒಳ್ಳೆಯ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗುತ್ತಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ 8 ತಂಡಗಳು ಅಳೆದು ತೂಗಿ ಲೆಕ್ಕಾಚಾರ ಹಾಕಿ ತಮಗೆ ಬೇಕಾದ ಆಟಗಾರರನ್ನು ಬರಸೆಳೆದುಕೊಳ್ಳುತ್ತಿದ್ದಾರೆ. ಕೆಲ ಆಟಗಾರರಿಗೆ ಭಾರೀ ಪೈಪೋಟಿ ಇದ್ದು, ಹರಾಜು ಪ್ರಕ್ರಿಯೆ ಗಮನ ಸೆಳೆಯುತ್ತಿದೆ. ಖಾಲಿಯಿದ್ದ ಒಟ್ಟು 61 ಸ್ಥಾನಗಳಿಗಾಗಿ ಪೈಪೋಟಿ ನಡೆದಿದ್ದು, ತಂಡಗಳು ಉತ್ಸಾಹದಿಂದ ಹರಾಜಿನಲ್ಲಿ ಪಾಲ್ಗೊಂಡಿವೆ.

ಸ್ಟೀವ್​ ಸ್ಮಿತ್​ – ಡೆಲ್ಲಿ ಕ್ಯಾಪಿಟಲ್ಸ್​ – ₹2.2 ಕೋಟಿ ಸ್ಟೀವ್​ ಸ್ಮಿತ್ ಅವರನ್ನು ₹2 ಕೋಟಿಗೆ ಖರೀದಿಸಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭದಲ್ಲಿ ಮನಸ್ಸು ಮಾಡಿತ್ತಾದರೂ ಡೆಲ್ಲಿ ಕ್ಯಾಪಿಟಲ್ಸ್‌ ₹2.2 ಕೋಟಿ ನೀಡಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಜಿ ನಾಯಕನನ್ನು ತನ್ನ ತೆಕ್ಕೆಗೆ ಎಳೆದುಕೊಂಡಿರು.

ಗ್ಲೆನ್​ ಮ್ಯಾಕ್ಸ್​ವೆಲ್​ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹14.25 ಕೋಟಿ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಮೂಲಬೆಲೆ ₹2ಕೋಟಿಯಾಗಿತ್ತು. ಕಳೆದ ಬಾರಿ ₹10.75 ಕೋಟಿಗೆ ಪಂಜಾಬ್​ ತಂಡದ ಪಾಲಾಗಿದ್ದ ಮ್ಯಾಕ್ಸ್​ವೆಲ್​ ಅವರನ್ನು ಈ ವರ್ಷ ಪಂಜಾಬ್​ ತಂಡ ಉಳಿಸಿಕೊಳ್ಳಲಿಲ್ಲ. ಆದರೆ, ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಮ್ಯಾಕ್ಸ್​ವೆಲ್​ಗೆ ಊಹಿಸಿದ ರೀತಿಯಲ್ಲಿ ಬೇಡಿಕೆ ವ್ಯಕ್ತವಾಗಿ ₹14.25ಕೋಟಿಗೆ ರಾಯಲ್​ ಚಾಲೆಂಜರ್ಸ್​ ತಂಡದ ಪಾಲಾಗಿದ್ದಾರೆ.

ಶಕೀಬ್​ ಹಲ್​ ಹಸನ್ – ಕೋಲ್ಕತ್ತಾ ನೈಟ್​ ರೈಡರ್ಸ್​ – ₹3.20 ಕೋಟಿ ಶಕೀಬ್​ ಹಲ್​ ಹಸನ್​ ₹3.20 ಕೋಟಿಗೆ ಕೆಕೆಆರ್​ ಪಾಲಾಗಿದ್ದಾರೆ. ಬಾಂಗ್ಲದೇಶದ ಆಲ್​ರೌಂಡರ್​ ಶಕೀಬ್​ ಹಲ್​ ಹಸನ್​ ಅವರನ್ನು ಕೊಳ್ಳಲು ಪಂಜಾಬ್​ ಕಿಂಗ್ಸ್​ ಉತ್ಸುಕವಾಗಿತ್ತಾದರೂ ಕೊನೆಗೆ ಕೆಕೆಆರ್​ ತಂಡದ ಪಾಲಾಗಿದ್ದಾರೆ.

ಮೊಯೀನ್‌ ಅಲಿ – ಚೆನ್ನೈ ಸೂಪರ್​ ಕಿಂಗ್ಸ್​ – ₹7 ಕೋಟಿ ಆಟಗಾರ ಮೊಯೀನ್‌ ಅಲಿ ಸಿಎಸ್‌ಕೆ ತಂಡದ ಪಾಲಾಗಿದ್ದಾರೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ 18 ಎಸೆತಗಳಲ್ಲಿ 43 ರನ್‌ ಸಿಡಿಸಿದ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯೀನ್‌ ಅಲಿ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ₹7 ಕೋಟಿ ನೀಡಿ ಖರೀದಿಸಿದೆ. ಪಂಜಾಬ್​ ಕಿಂಗ್ಸ್​ ತಂಡದೊಂದಿಗೆ ನಡೆದ ಪೈಪೋಟಿಯಲ್ಲಿ ಸಿಎಸ್​ಕೆ ಮೊಯೀನ್‌ ಅಲಿ ಅವರನ್ನು ಸೇರಿಸಿಕೊಂಡಿದೆ.

ಶಿವಂ ದುಬೆ – ರಾಜಸ್ಥಾನ್‌ ರಾಯಲ್ಸ್‌ – ₹4.4 ಕೋಟಿ ಕಳೆದ ಬಾರಿ ರಾಯಲ್​ ಚಾಲೆಂಜರ್ಸ್​ ತಂಡದಲ್ಲಿದ್ದ ಶಿವಂ ದುಬೆ ಈ ವರ್ಷ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದಾರೆ.  ಶಿವಂ ದುಬೆಗಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಬಿಡ್ಡಿಂಗ್‌ ವಾರ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್ ₹4.4 ಕೋಟಿ ರೂ. ನೀಡಿ ಖರೀದಿ ಮಾಡಿದೆ.

ಕ್ರಿಸ್‌ ಮೋರಿಸ್ -‌ ರಾಜಸ್ಥಾನ್‌ ರಾಯಲ್ಸ್‌ – ₹16.25 ಕೋಟಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಖರೀದಿಗೆ ಬಿಡ್ಡಿಂಗ್‌ ವಾರ್ ಬಹಳ ಜೋರಾಗಿ‌ ನಡೆಯಿತು. ಆರಂಭದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಕೋಟಿ ಕೋಟಿ ರೂಪಾಯಿ ಹರಿಸಿ ಪೈಪೋಟಿ ನಡೆಸಿದವಾದರೂ ಬಳಿಕ ರಾಜಸ್ಥಾನ್‌ ರಾಜಸ್ಥಾನ್‌ ರಾಯಲ್ಸ್‌ ಮಧ್ಯಪ್ರವೇಶಿಸಿ  ದಾಖಲೆ ಮೊತ್ತಕ್ಕೆ ಮೋರಿಸ್​ ಅವರನ್ನು ಖರೀದಿಸಿತು. ಈ ಮೂಲಕ ಐಪಿಎಲ್‌ ಹರಾಜಿನಲ್ಲಿ ಇದುವರೆಗೆ ಮಾರಾಟಗೊಂಡ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ದಾಖಲೆ ಮೋರಿಸ್ ಪಾಲಾಗಿದೆ.

ಡೇವಿಡ್‌ ಮಲನ್ – ಪಂಜಾಬ್‌ ಕಿಂಗ್ಸ್‌ – ₹1.5 ಕೋಟಿ ಡೇವಿಡ್​ ಮಲನ್​ ಅವರನ್ನು ಪಂಜಾಬ್​ ಕಿಂಗ್ಸ್​ ₹1.5ಕೋಟಿ ನೀಡಿ ಖರೀದಿಸಿದೆ. ಟಿ20 ಕ್ರಿಕೆಟ್‌ನ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಇಂಗ್ಲೆಂಡ್‌ನ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್​ ಮಲನ್​‌ ಪಂಜಾಬ್​ ಪಾಲಾಗಿದ್ದಾರೆ.

ಆಡಮ್‌ ಮಿಲ್ನ್ – ಮುಂಬೈ ಇಂಡಿಯನ್ಸ್​ – ₹3.2 ಕೋಟಿ ನ್ಯೂಜಿಲೆಂಡ್‌ ವೇಗಿ ಆಡಮ್‌ ಮಿಲ್ನ್‌ ಅವರಿಗೆ ₹3.2 ಕೋಟಿ ನೀಡಿ ಮುಂಬೈ ಇಂಡಿಯನ್ಸ್, ತನ್ನ ಪಾಲಾಗಿಸಿಕೊಂಡಿದೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗಗಳಲ್ಲಿ ಮಿಂಚಿತ್ತು. ಈ ಬಾರಿ ಮತ್ತೊಬ್ಬ ವೇಗಿ ಆಡಮ್‌ ಮಿಲ್ನ್ ತಂಡಕ್ಕೆ ಸೇರಿರುವುದು ಮತ್ತಷ್ಟು ಬಲತುಂಬಿದೆ.

ಮುಸ್ತಾಫಿಜೂರ್‌ ರೆಹಮಾನ್‌ – ರಾಜಸ್ಥಾನ್​ ರಾಯಲ್ಸ್‌ – ₹1 ಕೋಟಿ ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜೂರ್‌ ರೆಹಮಾನ್‌ ₹1 ಕೋಟಿ ಬೆಲೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡದ ತೆಕ್ಕೆಗೆ ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಅವರನ್ನೂ ಖರೀದಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಒಟ್ಟಾರೆ ಬಲ ಮತ್ತಷ್ಟು ಜಾಸ್ತಿಯಾಗಿದೆ.

ಜೇ ರಿಚರ್ಡ್ಸನ್ – ಪಂಜಾಬ್  ಕಿಂಗ್ಸ್​ – ₹14 ಕೋಟಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್​ ಅವರನ್ನು ತೆಕ್ಕೆಗೆ ತೆಗೆದುಕೊಂಡಿರುವ ಪಂಜಾಬ್​ ಕಿಂಗ್ಸ್​ ಬೌಲಿಂಗ್​ ವಲಯದ ಬಲ ಹೆಚ್ಚಿಸಲು ಗಮನ ಹರಿಸಿದಂತೆ ಕಾಣುತ್ತಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಬಿಡ್ಡಿಂಗ್‌ ವಾರ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ₹14 ಕೋಟಿ ನೀಡಿ ಆಸಿಸ್​ ವೇಗಿ ಜೇ ರಿಚರ್ಡ್ಸನ್​ ಅವರನ್ನು ಖರೀದಿ ಮಾಡಿದೆ.

ನೇಥನ್‌ ಕೌಲ್ಟರ್‌ ನೈಲ್ – ಮುಂಬೈ ಇಂಡಿಯನ್ಸ್ – ₹5 ಕೋಟಿ ಆಸ್ಟ್ರೇಲಿಯಾದ ವೇಗದ ಬೌಲರ್‌ ನೇಥನ್‌ ಕೌಲ್ಟರ್‌ ನೈಲ್‌ ಅವರನ್ನು ಮುಂಬೈ ಇಂಡಿಯನ್ಸ್‌ ₹5 ಕೋಟಿ ನೀಡಿ ಖರೀದಿ ಮಾಡಿದೆ. ಕಳೆದ ಬಾರಿಯೂ ಮುಂಬೈ ತಂಡದಲ್ಲಿದ್ದ ನೇಥನ್‌ ಕೌಲ್ಟರ್‌ ನೈಲ್ ಅವರನ್ನು ಮುಂಬೈ ಕೈಬಿಟ್ಟು, ಇದೀಗ ಮತ್ತೆ ಮರಳಿ ಪಡೆದಿದೆ.

ಉಮೇಶ್‌ ಯಾದವ್‌ – ಡೆಲ್ಲಿ ಕ್ಯಾಪಿಟಲ್ಸ್​ –  ₹1 ಕೋಟಿ  ಕಳೆದ ವರ್ಷ ಆರ್‌ಸಿಬಿ ತಂಡದ ಪರ ಆಡಿದ್ದ ಆಟಗಾರ ಉಮೇಶ್‌ ಯಾದವ್‌ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ. ಉಮೇಶ್​ ಯಾದವ್​ ಅವರಿಗೆ ಮೂಲ ಬೆಲೆ ₹1 ಕೋಟಿ ಪಾವತಿಸಿ ಡೆಲ್ಲಿ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಪಿಯೂಶ್‌ ಚಾವ್ಲಾ – ಮುಂಬೈಗೆ ಮುಂಬೈ ಇಂಡಿಯನ್ಸ್‌ – ₹2.4 ಕೋಟಿ ಅನುಭವಿ ಲೆಗ್‌ ಸ್ಪಿನ್ನರ್‌ ಪಿಯೂಶ್‌ ಚಾವ್ಲಾಗೆ ₹2.4 ಕೋಟಿ ನೀಡಿ ಮುಂಬೈ ಇಂಡಿಯನ್ಸ್​ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈಗಾಗಲೇ ಎಲ್ಲಾ ರೀತಿಯಲ್ಲಿ ಪ್ರಬಲವಾಗಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಈ ಬಾರಿಯೂ ಮೈದಾನದಲ್ಲಿ ಸಿಡಿದೇಳಬಲ್ಲ ಆಟಗಾರರ ಮೇಲೆ ಕಣ್ಣಿಟ್ಟಿರುವಂತೆ ಕಾಣುತ್ತಿದೆ.

ಸಚಿನ್‌ ಬೇಬಿ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ ಕೇರಳದ ಯುವ ಆಲ್‌ರೌಂಡರ್‌ ಸಚಿನ್‌ ಬೇಬಿ ಅವರನ್ನು ಮೂಲ ಬೆಲೆ ₹20 ಲಕ್ಷಕ್ಕೆ ಆರ್​ಸಿಬಿ ಖರೀದಿಸಿದೆ. ಈ ಮೂಲಕ ಯುವ ಆಟಗಾರನೊಬ್ಬ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದು, ಈ ಬಾರಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕುತೂಹಲ ಮೂಡಿದೆ.

ರಜತ್‌ ಪತ್ತಿದಾರ್‌ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ ಮಧ್ಯಪ್ರದೇಶದ ಯುವ ಆಟಗಾರ ರಜತ್​ ಪತ್ತಿದಾರ್​ ಅವರನ್ನು ಮೂಲ ಬೆಲೆ ₹20 ಲಕ್ಷಕ್ಕೆ ಆರ್​ಸಿಬಿ ಖರೀದಿಸಿದೆ. ಈ ಮೂಲಕ ಮತ್ತೊಬ್ಬ ಯುವ ಆಟಗಾರ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದು, ಇವರೆಲ್ಲಾ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.

ರಿಪಲ್​ ಪಟೇಲ್​ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ ಗುಜರಾತ್​ನ ಯುವ ಆಟಗಾರ ರಿಪಲ್​ ಪಟೇಲ್ ಮೂಲ ಬೆಲೆ ₹20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪಾಲಾಗಿದ್ದಾರೆ. ಈ ಮೂಲಕ ಕೆಲ ಹೊಸ ಮುಖಗಳು ಐಪಿಎಲ್​ 2021ರಲ್ಲಿ ಮುನ್ನಲೆಗೆ ಬರುತ್ತಿದ್ದು, ಇವರೆಲ್ಲರ ಒಟ್ಟಾರೆ ಪ್ರದರ್ಶನ ಹೇಗಿರಲಿದೆ. ಕ್ರಿಕೆಟ್​ನಲ್ಲಿ ಯಾವ ರೀತಿ ಮಿಂಚಲಿದ್ದಾರೆ ಎಂದು ನೋಡಲು ಕ್ರಿಕೆಟ್​ ಪ್ರೇಮಿಗಳು ಕಾತರರಾಗಿದ್ದಾರೆ.

ಶಾರೂಖ್​ ಖಾನ್ – ಪಂಜಾಬ್​ ಕಿಂಗ್ಸ್​ – ₹5.25 ಕೋಟಿ  ದೇಸಿ ಪ್ರತಿಭೆ ಶಾರೂಖ್​ ಖಾನ್​, ಪಂಜಾಬ್ ಕಿಂಗ್ಸ್​ ತಂಡದ​ ಪಾಲಾಗಿದ್ದಾರೆ. ಶಾರೂಖ್​ ಖಾನ್​ ಅವರನ್ನು ತೆಕ್ಕೆಗೆ ತೆಗೆದುಕೊಳ್ಳಲು ಆರ್​ಸಿಬಿ ಹಾಗೂ ಪಂಜಾಬ್​ ಕಿಂಗ್ಸ್​ ಜಿದ್ದಾಜಿದ್ದಿಗೆ ಬಿದ್ದಿದ್ದವು. ಆದರೆ ಅಂತಿಮವಾಗಿ ಶಾರೂಖ್​ ಖಾನ್ ಪಂಜಾಬ್​ ತಂಡದ ಪಾಲಾಗಿದ್ದು, ಮೂಲ ಬೆಲೆ 20 ಲಕ್ಷ ಹೊಂದಿದ್ದ ಶಾರೂಖ್​ ಖಾನ್​ಗೆ ₹5.25 ಕೋಟಿ ನೀಡಿ ಪಂಜಾಬ್ ​ಕಿಂಗ್ಸ್ ​ಖರೀದಿಸಿದೆ.

ಕೆ.ಗೌತಮ್​ – ಚೆನ್ನೈ ಸೂಪರ್​ ಕಿಂಗ್ಸ್ – ₹9.25 ಕೋಟಿ ಕನ್ನಡಿಗ ಕೆ.ಗೌತಮ್​ ​₹9.25 ಕೋಟಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. ಗೌತಮ್ ಅವರನ್ನು​ ಕೊಳ್ಳಲು ಆರಂಭದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ತಂಡಗಳು​ ಪೈಪೋಟಿಗಿಳಿದಿದ್ದವು. ನಂತರ ಬಂದ ಚೆನ್ನೈ, ಉಳಿದ ತಂಡಗಳನ್ನೆಲ್ಲಾ ಮೀರಿಸಿ ₹9. 25 ಕೋಟಿಗೆ ಗೌತಮ್​ ಅವರನ್ನು ಕೊಂಡುಕೊಂಡಿತು.

ಶೆಲ್ಡನ್ ಜಾಕ್ಸನ್ – ಕೋಲ್ಕತ್ತಾ ನೈಟ್​ ರೈಡರ್ಸ್​ – ₹20 ಲಕ್ಷ ಅನುಭವಿ ವಿಕೆಟ್‌ಕೀಪರ್,‌ ಬ್ಯಾಟ್ಸ್‌ಮನ್‌ ಶೆಲ್ಡನ್ ಜಾಕ್ಸನ್‌ ಅವರನ್ನು ಕೆಕೆಆರ್‌ ಖರೀದಿಸಿದೆ. ಮೂಲಬೆಲೆ ₹20ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದು, ಈ ಬಾರಿ ಐಪಿಎಲ್​ನಲ್ಲಿ ಶೆಲ್ಡನ್ ಜಾಕ್ಸನ್‌ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ವಿಷ್ಣು ವಿನೋದ್‌ – ಡೆಲ್ಲಿ ಕ್ಯಾಪಿಟಲ್ಸ್ – ₹20 ಲಕ್ಷ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ವಿಷ್ಣು ವಿನೋದ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿದೆ. ಮೂಲಬೆಲೆ ₹20ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದು, ಈ ಬಾರಿ ಐಪಿಎಲ್​ನಲ್ಲಿ ವಿಷ್ಣು ವಿನೋದ್ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ಮೊಹಮ್ಮದ್​ ಅಜರುದ್ದೀನ್ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ್ದ ಮೊಹಮ್ಮದ್​ ಅಜರುದ್ದೀನ್ ಮೂಲಬೆಲೆ​ ₹20 ಲಕ್ಷಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾಗಿದ್ದಾರೆ. ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕೇರಳ ಪರ ಶತಕ ಬಾರಿಸಿ ಮಿಂಚಿದ್ದ ಮೊಹಮ್ಮದ್ ಅಜರುದ್ದೀನ್ ಈ ಬಾರಿ ಆರ್‌ಸಿಬಿ ಪರ ಆಡಲಿದ್ದಾರೆ.

ಲುಕ್ಮನ್​ ಮೇರಿವಾಲಾ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ ಆಟಗಾರ ಲುಕ್ಮನ್​ ಮೇರಿವಾಲಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಹರಾಜಿನಲ್ಲಿ ಖರೀದಿಸಿದೆ. ಮೂಲಬೆಲೆ ₹20ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದು, ಈ ಬಾರಿ ಐಪಿಎಲ್​ನಲ್ಲಿ ಲುಕ್ಮನ್​ ಮೇರಿವಾಲಾ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ಚೇತನ್​ ಸಕಾರಿಯ – ರಾಜಸ್ಥಾನ್ ರಾಯಲ್ಸ್​ – ₹1.20 ಕೋಟಿ ದೇಸಿ ಪ್ರತಿಭೆ ಚೇತನ್​ ಸಕಾರಿಯ ಅವರನ್ನು ಖರೀದಿಸಲು ರಾಜಸ್ಥಾನ್​ ರಾಯಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭಾರೀ ಪೈಪೋಟಿ ನಡೆಸಿದವು. ₹20ಲಕ್ಷ ಮೂಲಬೆಲೆ ಹೊಂದಿದ್ದ ಚೇತನ್​ ಸಕಾರಿಯ ಅಂತಿಮವಾಗಿ ₹1.20 ಕೋಟಿಗೆ ರಾಜಸ್ಥಾನ್​ ರಾಯಲ್ಸ್​ ತಂಡದ ಪಾಲಾಗಿದ್ದಾರೆ.

ರಿಲೇ ಮೆರೆಡಿತ್ – ಪಂಜಾಬ್ ಕಿಂಗ್ಸ್​ – ₹8 ಕೋಟಿ ಆಸ್ಟ್ರೇಲಿಯಾದ ಆಟಗಾರ ರಿಲೇ ಮೆರೆಡಿತ್​ ಬರೋಬ್ಬರಿ ₹8 ಕೋಟಿಗೆ ಪಂಜಾಬ್ ಕಿಂಗ್ಸ್​​ ತಂಡ ಸೇರಿದ್ದಾರೆ. ಮೆರೆಡಿತ್ ಅವರನ್ನು ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳ​ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮೆರೆಡಿತ್ ಅವರನ್ನು​ ಪಡೆಯುವಲ್ಲಿ ಪಂಜಾಬ್ ಕಿಂಗ್ಸ್​ ಯಶಸ್ವಿಯಾಗಿದೆ.

ಎಂ.ಸಿದ್ಧಾರ್ಥ್​ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ ಯುವ ಆಟಗಾರ ಎಂ.ಸಿದ್ಧಾರ್ಥ್​ ಅವರನ್ನು ₹20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಖರೀದಿ ಮಾಡಿದೆ. ಮೂಲಬೆಲೆ ₹20ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದು, ಈ ಬಾರಿ ಐಪಿಎಲ್​ನಲ್ಲಿ ಎಂ.ಸಿದ್ಧಾರ್ಥ್ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ಜೆ.ಸುಚಿತ್ – ಸನ್​ ರೈಸರ್ಸ್​ ಹೈದರಾಬಾದ್​ – ₹30 ಲಕ್ಷ ಕಳೆದ ಆವೃತ್ತಿಯಲ್ಲಿ ಪಂಜಾಬ್​ ತಂಡದಲ್ಲಿ ಆಡಿದ್ದ ಜಗದೀಶನ್​ ಸುಚಿತ್​, ಈ ಬಾರಿ ₹30 ಲಕ್ಷಕ್ಕೆ ಸನ್​ ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಮಾರಾಟವಾಗಿದ್ದಾರೆ. ಸನ್​ ರೈಸರ್ಸ್​ ಹೈದರಾಬಾದ್​ ತನ್ನ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದ್ದು, ಜೊತೆಗೆ ಬಾಕಿ ಉಳಿದ ಹಣವೂ ಕಡಿಮೆ ಇರುವ ಕಾರಣ ಹೆಚ್ಚು ಜನರನ್ನು ಖರೀದಿಸುವುದು ಸಾಧ್ಯವಿಲ್ಲವಾಗಿದೆ.

ಕೆ.ಸಿ.ಕಾರಿಯಪ್ಪ – ರಾಜಸ್ಥಾನ್​ ರಾಯಲ್ಸ್​ – ₹20 ಲಕ್ಷ ಕರ್ನಾಟಕದ ಯುವ ಆಟಗಾರ ಕೆ.ಸಿ.ಕಾರಿಯಪ್ಪ ಈ ಬಾರಿಯ ಹರಾಜಿನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ಪಾಲಾಗಿದ್ದಾರೆ. ಮೂಲಬೆಲೆ ₹20ಲಕ್ಷ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದು, ಈ ಬಾರಿ ಐಪಿಎಲ್​ನಲ್ಲಿ ಕೆ.ಸಿ.ಕಾರಿಯಪ್ಪ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ಚೇತೇಶ್ವರ ಪೂಜಾರ – ಚೆನ್ನೈ ಸೂಪರ್​ ಕಿಂಗ್ಸ್ – ₹50 ಲಕ್ಷ ಐಪಿಎಲ್​ಗೆ ಮರಳಿ ಬಂದಿರುವ ಚೇತೇಶ್ವರ ಪೂಜಾರ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್ ₹50 ಲಕ್ಷ ನೀಡಿ ಖರೀದಿ ಮಾಡಿದೆ. ಪೂಜಾರ ಅವರ ಮೂಲ ಬೆಲೆಯನ್ನು ಕೊಟ್ಟು ಖರೀದಿ ಮಾಡಿರುವ ಚೆನ್ನೈ ತಂಡ, ಮತ್ತೊಬ್ಬ ಆಟಗಾರರನ್ನು ತಂಡಕ್ಕೆ ಸೇರ್ಪಡಿಸಿಕೊಂಡಿದೆ.

ಕೈಲ್‌ ಜೇಮಿಸ್ಸನ್ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹15 ಕೋಟಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗ್ಲೆನ್​ ಮ್ಯಾಕ್ಸ್​ವೆಲ್​ಗೆ ₹14.25ಕೋಟಿ ನೀಡಿ ಹುಬ್ಬೇರುವಂತೆ ಮಾಡಿತ್ತು. ಆದರೆ, ಈಗ ಅವರನ್ನೂ ಮೀರಿಸಿ ನ್ಯೂಜಿಲೆಂಡ್‌ನ 7 ಅಡಿ ಎತ್ತರದ ವೇಗದ ಬೌಲರ್‌ ಕೈಲ್‌ ಜೇಮಿಸ್ಸನ್ ಅವರಿಗೆ ₹15 ಕೋಟಿ ನೀಡಿ ಖರೀದಿ ಮಾಡಿದೆ. ಪಂಜಾಬ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ತಂಡದ ನಡುವೆ ಬಿಡ್ಡಿಂಗ್‌ ವಾರ್‌ ನಡೆಸಿದ ಆರ್‌ಸಿಬಿ ಭಾರಿ ಪೈಪೋಟಿ ಕೊಟ್ಟು ‌ಕೈಲ್‌ ಜೇಮಿಸ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಟಾಮ್ ಕರನ್​ – ಡೆಲ್ಲಿ ಕ್ಯಾಪಿಟಲ್ಸ್​ – ₹5.25ಕೋಟಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಟಾಮ್‌ ಕರನ್​ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ₹5.25 ಕೋಟಿ ಕೊಟ್ಟು ತನ್ನ ಪಾಲಾಗಿಸಿಕೊಂಡಿದೆ. ಸನ್‌ರೈಸರ್ಸ್‌ ತಂಡ ₹5.25 ಕೋಟಿ ವರೆಗೂ ಪೈಪೋಟಿ ನಡೆಸಿತಾದರೂ ಛಲ ಬಿಡದ ಡೆಲ್ಲಿ ಟಾಮ್‌ ಕರನ್ ಅವರನ್ನು ತನ್ನತ್ತ ಸೆಳೆದುಕೊಂಡಿದೆ.

ಮೊಯ್ಸೆಸ್‌ ಹೆನ್ರಿಕ್ಸ್‌ – ಪಂಜಾಬ್‌ ಕಿಂಗ್ಸ್​ – ₹4.20 ಕೋಟಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮೊಯ್ಸೆಸ್‌ ಹೆನ್ರಿಕ್ಸ್ ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ. ₹4.20 ಕೋಟಿ ಕೊಟ್ಟು ಮೊಯ್ಸೆಸ್‌ ಹೆನ್ರಿಕ್ಸ್ ಅವರನ್ನು ಪಂಜಾಬ್​ ಖರೀದಿ ಮಾಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ‌ ಮೊಯ್ಸೆಸ್‌ ಹೆನ್ರಿಕ್ಸ್‌ ಅವರನ್ನು ಮತ್ತೆ ಖರೀದಿಸುವ ಪ್ರಯತ್ನ ಮಾಡಿತಾದರೂ ಪಂಜಾಬ್​ ಆ ಅವಕಾಶ ನೀಡಲಿಲ್ಲ.

ಜಲಜ್ ಸಕ್ಸೇನಾ – ಪಂಜಾಬ್​ ಕಿಂಗ್ಸ್​ – ₹30 ಲಕ್ಷ ದೇಸಿ ಆಟಗಾರ ಜಲಜ್​ ಸಕ್ಸೆನಾ ಪಂಜಾಬ್​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. ಜಲಜ್​ ಸಕ್ಸೆನಾ ಅವರಿಗೆ ಮೂಲ ಬೆಲೆ ₹30 ಲಕ್ಷ ನೀಡಿ ಪಂಜಾಬ್​ ತಂಡ ಖರೀದಿ ಮಾಡಿದೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ನಿಂದ ಪಂಜಾಬ್​ ಕಿಂಗ್ಸ್​ ಎಂದು ಹೆಸರು ಬದಲಿಸಿಕೊಂಡ ತಂಡದಲ್ಲಿ ಸಕ್ಸೇನಾ ಸಕ್ಸಸ್​ ಕಾಣಲಿದ್ದಾರಾ ಎಂದು ನೋಡಬೇಕಿದೆ.

ಉತ್ಕರ್ಷ್​ ಸಿಂಗ್​ – ಪಂಜಾಬ್​ ಕಿಂಗ್ಸ್​ – ₹20 ಲಕ್ಷ ಆಲ್​ರೌಂಡರ್​ ಆಟಗಾರ ಉತ್ಕರ್ಷ್​ ಸಿಂಗ್​ ಪಂಜಾಬ್​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. ಜಲಜ್​ ಸಕ್ಸೇನಾ ನಂತರ ಉತ್ಕರ್ಷ್​ ಅವರನ್ನೂ ಬರಮಾಡಿಕೊಂಡಿರುವ ಪಂಜಾಬ್​ ಕಿಂಗ್ಸ್​ ಅವರ ಮೂಲಬೆಲೆ ₹20 ಲಕ್ಷ ನೀಡಿ ಖರೀದಿ ಮಾಡಿದೆ.

ವೈಭವ್​ ಅರೋರಾ – ಕೋಲ್ಕತ್ತಾ ನೈಟ್​ ರೈಡರ್ಸ್​ – ₹20 ಲಕ್ಷ ಆಟಗಾರ ವೈಭವ್​ ಅರೋರಾ ಅವರನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ₹20 ಲಕ್ಷ ನೀಡಿ ಖರೀದಿಸಿದೆ. ಕೋಲ್ಕತ್ತಾ ತಂಡಕ್ಕೆ ಸೇರಿರುವ ವೈಭವ್​ ಅರೋರಾ ಈ ಬಾರಿ ಐಪಿಎಲ್​ನಲ್ಲಿ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ.

ಫ್ಯಾಬಿಯನ್ ಅಲೆನ್​ – ಪಂಜಾಬ್​ ಕಿಂಗ್ಸ್ – ₹75 ಲಕ್ಷ ವೆಸ್ಟ್​ಇಂಡಿಸ್​ ತಂಡದ ಆಲ್​ರೌಂಡರ್​ ಆಟಗಾರ ಫ್ಯಾಬಿಯನ್ ಅಲೆನ್​ ಪಂಜಾಬ್ ಕಿಂಗ್ಸ್​​ ಪಾಲಾಗಿದ್ದಾರೆ. ₹75 ಲಕ್ಷ ನೀಡಿರುವ ಪಂಜಾಬ್​ ತಂಡಕ್ಕೆ ಅಲೆನ್​ ಹೇಗೆ ಉಪಯುಕ್ತವಾಗಲಿದ್ದಾರೆ? ಯಾವ ರೀತಿ ಆಟ ಪ್ರದರ್ಶಿಸಲಿದ್ದಾರೆ? ಎಂದು ನೋಡಬೇಕಿದೆ.

ಡ್ಯಾನಿಯಲ್​ ಕ್ರಿಶ್ಚಿಯನ್ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹4.80 ಕೋಟಿ ಆಟಗಾರ ಡ್ಯಾನಿಯಲ್​ ಕ್ರಿಶ್ಚಿಯನ್​ ಆರ್​ಸಿಬಿ ತಂಡದ ಪಾಲಾಗಿದ್ದಾರೆ. ಡ್ಯಾನಿಯಲ್​ ಅವರನ್ನು ₹4.80 ಕೋಟಿಗೆ​ ಆರ್​ಸಿಬಿ ಖರೀದಿ ಮಾಡಿದೆ. ಕೊಲ್ಕತ್ತಾ ಹಾಗೂ ಬೆಂಗಳೂರು ತಂಡ ಡ್ಯಾನಿಯಲ್​ ಅವರಿಗಾಗಿ ಸೆಣಸಾಟ ನಡೆಸಿದ್ದವು. ಆದರೆ ಅಂತಿಮವಾಗಿ ಡ್ಯಾನಿಯಲ್​ ಕ್ರಿಶ್ಚಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾದರು.

ಲಿಯಾಮ್ ಲಿವಿಂಗ್‌ಸ್ಟೋನ್ – ರಾಜಸ್ಥಾನ್​ ರಾಯಲ್ಸ್ – ₹75 ಲಕ್ಷ ಆಲ್‌ರೌಂಡರ್‌ ಲಿಯಾಮ್ ಲಿವಿಂಗ್‌ ಸ್ಟೋನ್‌ಗೆ ₹75 ಲಕ್ಷ ನೀಡಿ ರಾಜಸ್ಥಾನ್ ರಾಯಲ್ಸ್‌ ಖರೀದಿ ಮಾಡಿದೆ. ಲಿಯಾಮ್ ಲಿವಿಂಗ್‌ ಸ್ಟೋನ್ ಅವರ ಮೂಲ ಬೆಲೆ ನೀಡಿ ರಾಜಸ್ಥಾನ್ ರಾಯಲ್ಸ್‌ ಕೊಂಡುಕೊಂಡಿದೆ.

ಸುಯಶ್ ಪ್ರಭು ದೇಸಾಯಿ ಮತ್ತು ಕೆ.ಎಸ್​.ಭರತ್​ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ತಲಾ ₹20 ಲಕ್ಷ ಹೊಸಬರನ್ನೂ ಕರೆದುಕೊಳ್ಳುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸುಯಶ್ ಪ್ರಭು ದೇಸಾಯಿ ಮತ್ತು ಕೆ.ಎಸ್​.ಭರತ್ ಅವರಿಗೆ ತಲಾ ₹20ಲಕ್ಷ ನೀಡಿ ಖರೀದಿ ಮಾಡಿದೆ. ಈ ಇಬ್ಬರೂ ಆಟಗಾರರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾಗಿದ್ದಾರೆ.

ಎಂ.ಹರಿಶಂಕರ್​ ರೆಡ್ಡಿ – ಚೆನ್ನೈ ಸೂಪರ್​ ಕಿಂಗ್ಸ್​ – ₹20 ಲಕ್ಷ ಎಂ.ಹರಿಶಂಕರ್​ ರೆಡ್ಡಿ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ₹20 ಲಕ್ಷ ನೀಡಿ ಖರೀದಿ ಮಾಡಿದೆ.

ಕುಲ್ದೀಪ್​ ಯಾದವ್​ – ರಾಜಸ್ಥಾನ್​ ರಾಯಲ್ಸ್​ – ₹20 ಲಕ್ಷ ಕುಲ್ದೀಪ್​ ಯಾದವ್​ ಅವರಿಗೆ ರಾಜಸ್ಥಾನ್​ ರಾಯಲ್ಸ್ ₹20 ಲಕ್ಷ ಮೊತ್ತ ನೀಡುವ ಮೂಲಕ ತನ್ನದಾಗಿಸಿಕೊಂಡಿದೆ.

ಜೇಮ್ಸ್​ ನೀಶಮ್​ – ಮುಂಬೈ ಇಂಡಿಯನ್ಸ್​ – ₹50 ಲಕ್ಷ ಆಟಗಾರ ಜೇಮ್ಸ್​ ನೀಶಮ್​ ಅವರನ್ನು ಮುಂಬೈ ಇಂಡಿಯನ್ಸ್​ ತಂಡ ₹50 ಲಕ್ಷ ನೀಡಿ ಕೊಂಡುಕೊಂಡಿದೆ.

Published On - 4:07 pm, Thu, 18 February 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​