IPL Auction 2021: ಬದಲಾಗಿದೆ ಕಿಂಗ್ಸ್ ಇವೆಲೆನ್ ಪಂಜಾಬ್ ಹೆಸರು; ಹೊಸ ಹೆಸರಿನ ಲಾಜಿಕ್ ವಿವರಿಸಿದ್ದಾರೆ ಕೆ.ಎಲ್.ರಾಹುಲ್
ಕಿಂಗ್ಸ್ ಇಲೆವನ್ ಪಂಜಾಬ್ ಟೀಮಿಗೆ ಹೆಸರು ಬದಲಾಯಿಸುವ ಯೋಚನೆ ಯಾಕೆ ಹುಟ್ಟಿತು ಅನ್ನುವುದನನ್ನು ಟೀಮಿನ ಕ್ಯಾಪ್ಟನ್ ಕೆ.ಎಲ್.ರಾಹುಲ್ ಬಹಿರಂಗಪಡಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ತನ್ನ ಹೆಸರನ್ನು ಪಂಜಾಬ್ ಕಿಂಗ್ಸ್ ಅಂತ ಬದಲಾಯಿಸಿಕೊಂಡಿದ್ದು, ಈ ಬದಲಾವಣೆಯು ಇಂಡಿಯನ್ ಪ್ರಿಮೀಯರ್ ಲೀಗ್ 2021 ಸೀಸನ್ನಿಂದ ಅದೃಷ್ಟ ತರಲಿದೆಯೆನ್ನುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಐಪಿಎಲ್ನ ಮೂಲ 8 ತಂಡಗಳಲ್ಲಿ ಒಂದಾಗಿರುವ ಪಂಜಾಬ್ ತಂಡಕ್ಕೆ 2014ರಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿರುವುದೇ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಈ ಬಾರಿಯ ಸೀಸನ್ ಲಿಲಾವಿಗೆ ಅದರ ಬಜೆಟ್ ರೂ. 53.2 ಕೋಟಿಯಾಗಿದ್ದು ಮಿಕ್ಕಿದ 7 ಫ್ರಾಂಚೈಸಿಗಳಿಗಿಂತ ಅಧಿಕವಾಗಿದೆ. ಹಾಗಾಗಿ, ಇಂದು ನಡೆಯುವ ಹರಾಜಿನಲ್ಲಿ ಅದು ಕೆಲವು ಮ್ಯಾಚ್ ವಿನ್ನಿಂಗ್ ಆಟಗಾರರನ್ನು ಖರೀದಿಸುವ ಇರಾದೆ ಇಟ್ಟುಕೊಂಡಿರುವುದು ನಿಶ್ಚಿತ.
ಅದು ಸರಿ, ಈ ಟೀಮಿಗೆ ಹೆಸರು ಬದಲಾಯಿಸುವ ಯೋಚನೆ ಯಾಕೆ ಹುಟ್ಟಿತು ಅನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಟೀಮಿನ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ರಾಹುಲ್ ಅವರ ಒಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಕನ್ನಡಿಗ ಹೀಗೆ ಹೇಳಿದ್ದಾರೆ.
‘ಕಿಂಗ್ಸ್ ಇಲೆವನ್ ಹೆಸರು ನನಗೇನೋ ತುಂಬಾ ಇಷ್ಟವಿತ್ತು. ಆದರೆ, ನಮ್ಮ ಟೀಮು ಕೇವಲ 11 ಆಟಗಾರರ ಯುನಿಟ್ ಅಲ್ಲ, ಅದರಲ್ಲಿ ಇನ್ನೂ ಹತ್ತಾರು ಸದಸ್ಯರಿದ್ದಾರೆ. ನಾವೆಲ್ಲ ಒಂದು ಕುಟುಂಬದಂತಿರಬೇಕು ಮತ್ತು ಕುಟುಂಬವಾಗಿಯೇ ಗುರುತಿಸಕೊಳ್ಳಬೇಕು. ಹೊಸ ಹೆಸರಿನಿಂದ ನಮ್ಮ ಅದೃಷ್ಟ ಖುಲಾಯಿಸಲಿದೆ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ.
“I am pretty sure the new name will bring us good fortune this year!” ?#CaptainPunjab, we are pretty much sure, too! ?#SaddaPunjab #PunjabKings @klrahul11 pic.twitter.com/edIJyFNmv1
— Punjab Kings (@PunjabKingsIPL) February 18, 2021
ರಾಹುಲ್ ವಿಡಿಯೊ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನ ನಂತರ ಪಂಜಾಬ್ ತಂಡ ತನ್ನ ಲೆಜೆಂಡರಿ ಆಟಗಾರ ಕ್ರಿಸ್ ಗೇಲ್ ಅವರ ವಿಡಿಯೊವನ್ನು ಪೋಸ್ಟ್ ಮಾಡಿದೆ. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ, ಗೇಲ್ ಪಂಜಾಬ್ ತಂಡವನ್ನು ಸೇರಿದ್ದು 2018ರಲ್ಲಿ. ಅಲ್ಲಿಂದ 2020ರ ಸೀಸನ್ವರಗೆ ಆಡಿದ ಮೂರು ಸೀಸನ್ಗಳಲ್ಲಿ ಅವರು ಕ್ರಮವಾಗಿ 318 (11 ಪಂದ್ಯಗಳು), 490 (13 ಪಂದ್ಯಗಳು) 288 (7 ಪಂದ್ಯಗಳು) ರನ್ ಬಾರಿಸಿದ್ದಾರೆ. 2020ರ ಸೀಸನ್ನಲ್ಲಿ ಅವರು ಆಡಲಾರಂಭಿಸಿದ ನಂತರವೇ ಪಂಜಾಬ್ ತಂಡ ಸತತ 6-ಸೋಲುಗಳ ಸರಪಳಿ ಮುರಿದು ಸತತ 5 ಗೆಲುವುಗಳನ್ನು ಕಂಡಿತ್ತು. ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ, ರಾಹುಲ್ ಟೀಮಿನ ಹೆಸರು ಬದಲಾಯಿಸಿರುವ ಬಗ್ಗೆ ಹೇಳಿರುವುದನ್ನೇ ಪುನರುಚ್ಚರಿಸಿದ್ದಾರೆ.
‘ರಾಹುಲ್ ಹೇಳಿರುವುದು ಅಕ್ಷರಶಃ ನಿಜ. ಕೆಲವು ಸಲ ಬದಲಾವಣೆಗಳು ಅದೃಷ್ಟವನ್ನು ಹೊತ್ತು ತರುತ್ತವೆ. ಕೆ.ಎಲ್. ಹೇಳಿದ್ದು ಸಮಂಜಸವಾಗಿದೆ. ಪ್ರತಿಯೊಬ್ಬ ಸದಸ್ಯ ತಂಡದ ಭಾಗ ಎಂಬ ಭಾವನೆಯನ್ನು ಅದು ಮೂಡಿಸುತ್ತದೆ. ನಾವೀಗ ಪಂಜಾಬ್ ಕಿಂಗ್ಸ್ ಎಂದು ಗುರುತಿಸಿಕೊಳ್ಳುತ್ತೇವೆ’ ಅಂತ ಗೇಲ್ ಹೇಳಿದ್ದಾರೆ.
Here’s what the #UniverseBoss gotta say about the newly formed #PunjabKings ?#SaddaPunjab @henrygayle pic.twitter.com/qOrv58pjue
— Punjab Kings (@PunjabKingsIPL) February 18, 2021
ಕಿಂಗ್ಸ್ ಪಂಜಾಬ್ ಫ್ರಾಂಚೈಸಿಯ ಸಹ-ಮಾಲೀಕರಾಗಿರುವ ಪ್ರೀತಿ ಜಿಂಟಾ ಕೂಡ ಹೊಸವರ್ಷದಲ್ಲಿ ಟೀಮಿಗೆ ಎಲ್ಲವೂ ಒಳ್ಳೆಯದಾಗಲಿದೆ ಅಂತ ಟ್ವೀಟ್ ಮಾಡಿದ್ದಾರೆ. ‘ಹೊಸ ವರ್ಷವು ಹೊಸ ಆರಂಭದ ಸುಳಿವುಗಳನ್ನು ನೀಡಿದೆ. ನಾವು ಆಶ್ವಾಸನೆ ನೀಡಿದಂತೆಯೇ ಹೊಸ ಹೆಸರು ಮತ್ತು ಹೊಸ ಲೊಗೊ ಬಂದಿದೆ. ಇನ್ನು ಮುಂದೆ #SaddaPunjab #PunjabKings ಅನಿಸಿಕೊಳ್ಳಲಿದೆ. ಈ ಸುದ್ದಿಯನ್ನು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿರುವುದು ರೋಮಾಂಚನ ಹುಟ್ಟಿಸುತ್ತಿದೆ’ ಎಂದು ಪ್ರೀತಿ ಟ್ವೀಟ್ ಮಾಡಿದ್ದಾರೆ.
Listen in as @realpreityzinta explains the thought behind #PunjabKings ⬇️#SaddaPunjab pic.twitter.com/IJ6J788OHm
— Punjab Kings (@PunjabKingsIPL) February 18, 2021
ರಾಹುಲ್, ಗೇಲ್ ಮತ್ತು ಪ್ರೀತಿ ಅವರ ನಿರೀಕ್ಷೆಗಳು ನಿಜವಾಗಲಿ ಎಂದು ಪಂಜಾಬ್ ಕಿಂಗ್ಸ್ ಟೀಮಿನ ಅಭಿಮಾನಿ ಅಂದುಕೊಳ್ಳುತ್ತಿರಬಹುದು.
ಇದನ್ನೂ ಓದಿ: IPL 2021 Auction: ಐಪಿಎಲ್ 2021 ಹರಾಜಿನಲ್ಲಿದ್ದಾರೆ 14 ಕನ್ನಡಿಗರು, ಕರ್ನಾಟಕದವರಿಗೆ ಆದ್ಯತೆ ಕೊಡುತ್ತಾ RCB
Published On - 4:30 pm, Thu, 18 February 21