ಕ್ರೊವೇಷಿಯಾದ ಇವಾನ್ ಡೊಡಿಗ್ ಮತ್ತು ಸ್ಲೋವಾಕಿಯಾದ ಫಿಲಿಪ್ ಪೋಲೆಸೆಕ್ ಜೋಡಿ ಆಸ್ಟ್ರೇಲಿಯಾದ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು. 9ನೇ ಶ್ರೇಯಾಂಕಿತ ಜೋಡಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್‌ನ ಜೋಯಿ ಸಾಲಿಸ್‌ಬುರಿ ಅವರನ್ನು ಸೋಲಿಸಿತು. 1.28 ಗಂಟೆ ನಡೆದ ಪಂದ್ಯದಲ್ಲಿ ದೋಡಿಗ್ ಮತ್ತು ಪೋಲಾಸೆಕ್ ಜೋಡಿ ಸತತ 6-3, 6-4 ಸೆಟ್‌ಗಳಿಂದ ರಾಮ್ ಮತ್ತು ಸಾಲಿಸ್‌ಬುರಿ ಜೋಡಿಯನ್ನು ಸೋಲಿಸಿತು.
ಡೊಡಿಗ್ ಮತ್ತು ಪೋಲೆಸೆಕ್ ಜೋಡಿಗೆ ಇದು ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿ. ಡೊಡಿಗ್ ಮತ್ತು ಪೋಲೆಸೆಕ್ ಜೋಡಿ ಮೊದಲಿನಿಂದಲೂ ರಾಮ್ ಮತ್ತು ಸಾಲಿಸಾಬುರಿ ಜೋಡಿಯ ಮೇಲೆ ಒತ್ತಡ ಹೆರುತ್ತಾ ಸಾಗಿತು. ರಾಮ್ ಮತ್ತು ಸಾಲಿಸಾಬುರಿ ಜೋಡಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶವೇ ಸಿಗಲಿಲ್ಲ.
5ನೇ ಶ್ರೇಯಾಂಕದ ರಾಮ್ ಮತ್ತು ಸಾಲಿಸ್‌ಬುರಿ ಜೋಡಿ ಸತತ ಎರಡನೇ ವರ್ಷ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನ ಫೈನಲ್ ತಲುಪಿತ್ತು. ಅವರು ಈ ಪಂದ್ಯವನ್ನು ಗೆದ್ದಿದ್ದರೆ, ಬಾಬ್ ಬ್ರಿಯಾನ್ ಮತ್ತು ಮೈಕ್ ಬ್ರಿಯಾನ್ ನಂತರ ಸತತ ಎರಡು ಬಾರಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಜೋಡಿಯಾಗುತ್ತಿದ್ದರು.
ಸತತ 3 ಬಾರಿ ಪುರುಷರ ಡಬಲ್ಸ್ ಗೆದ್ದಿದ್ದ ಬ್ರಿಯಾನ್ ಸಹೋದರರು
ಅಮೆರಿಕ ಮೂಲದ ಬಾಬ್ ಮತ್ತು ಬ್ರಿಯಾನ್ ಜೋಡಿ 2009, 2010 ಮತ್ತು 2011 ರಲ್ಲಿ ಸತತ ಮೂರು ಬಾರಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದನ್ನೂ ಓದಿ: IPL Auction 2021: ಚೆಂಡಿರೋದೆ ಚಚ್ಚುವುದಕ್ಕೆ ಧೋರಣೆಯ ಅಜರುದ್ದೀನ್ 2021 ಐಪಿಎಲ್ ಸೀಸನ್ನಲ್ಲಿ ಆರ್ಸಿಬಿಗೆ ಆಡುತ್ತಾರೆ!