IPL Auction 2021: ಚೆಂಡಿರೋದೆ ಚಚ್ಚುವುದಕ್ಕೆ ಧೋರಣೆಯ ಅಜರುದ್ದೀನ್ 2021 ಐಪಿಎಲ್ ಸೀಸನ್ನಲ್ಲಿ ಆರ್ಸಿಬಿಗೆ ಆಡುತ್ತಾರೆ!
ಥಲಂಗರ ಚಿಕ್ಕ ಉರಾಗಿದ್ದರೂ ಅಲ್ಲಿ 20 ಕ್ರಿಕೆಟ್ ಕ್ಲಬ್ಗಳಿವೆಯಂತೆ. ಅಜರುದ್ದೀನ್ರದ್ದು 7 ಜನ ಅಣ್ಣ-ತಮ್ಮಂದಿರನ್ನು ಒಳಗೊಂಡ ದೊಡ್ಡ ಕುಟುಂಬ; ಇವರೇ ಎಲ್ಲರಿಗಿಂತ ಕಿರಿಯರು. ಕ್ರಿಕೆಟ್ನಲ್ಲಿರುವ ಅವರ ಅಭಿರುಚಿಯನ್ನು ಕಂಡ ಸಹೋದರರು ಹುರಿದುಂಬಿಸಿ, ಕಾಸರಗೋಡಿನಲ್ಲಿರುವ ಕ್ರಿಕೆಟ್ ಅಕ್ಯಾಡೆಮಿಯೊಂದಕ್ಕೆ ಸೇರಿಸಿದರು.
ಚೆನೈ: ಅರ್ಧಕ್ಕಿಂತ ಜಾಸ್ತಿ ಕನ್ನಡಿಗರಿಂದಲೇ ತುಂಬಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಜಲ್ಲೆ ಕಾಸರಗೋಡಿನಿಂದ ಕೆಲವೇ ಕಿಲೋಮೀಟರಗಳಷ್ಟು ದೂರದಲ್ಲಿರುವ ಥಲಂಗರ ಹೆಸರಿನ ಊರು ಬಹಳ ಕಡಿಮೆ ಜನರಿಗೆ ಗೊತ್ತಿದ್ದೀತು. ಹಾಗೆಯೇ, ಆ ಊರಿನಲ್ಲಿ ಹುಟ್ಟಿದ ಅಜ್ಮಲ್ ಹೆಸರಿನ ಯುವಕನ ಹೆಸರು ಸಹ ಮೊನ್ನೆಯವರೆಗೆ ಬಹಳ ಜನರಿಗೆ ಗೊತ್ತಿರಲಿಲ್ಲ. ಆದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಅಜ್ಮಲ್ ತನ್ನ ಮತ್ತು ತನ್ನೂರಿನ ಹೆಸರನ್ನು ಭಾರತ ಮಾತ್ರವಲ್ಲ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರಿಗೂ ಗೊತ್ತಾಗುವಂತೆ ಮಾಡಿದ್ದಾರೆ.
ಓಕೆ, ಯಾರೀ ಅಜ್ಮಲ್ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಕಳೆದ ಜನೆವರಿ 13ರಂದು ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಬಲಿಷ್ಠ ಮುಂಬೈ ಮತ್ತು ಕೇರಳ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ (ಅ ಇನ್ನಿಂಗ್ಸ್ನಲ್ಲಿ ಅವರು 54 ಎಸೆತಗಳಲ್ಲಿ 137 ರನ್ ಬಾರಿಸಿದರು) ಮೊಹಮ್ಮದ್ ಅಜರುದ್ದೀನ್ ಅವರ ಮೂಲ ಹೆಸರೇ ಅಜ್ಮಲ್. ಆದರೆ, ಕ್ರಿಕೆಟ್ ಬಗ್ಗೆ ವಿಪರೀತ ಅನಿಸುವಷ್ಟು ವ್ಯಾಮೋಹ ಇರುವ ಮತ್ತು ಭಾರತದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಆಜರುದ್ದೀನ್ ಅವರ ಅತಿ ದೊಡ್ಡ ಅಭಿಮಾನಿ ಆಗಿರುವ ಅಜ್ಮಲ್ ಅವರಣ್ಣ ಕಮರುದ್ದೀನ್, ತನ್ನ ತಮ್ಮನ ಹೆಸರನ್ನು ಅಜ್ಮಲ್ನಿಂದ ಮೊಹಮ್ಮದ್ ಅಜರುದ್ದೀನ್ ಅಂತ ಬದಲಾಯಿಸಿದ್ದು.
ಥಲಂಗರ ಚಿಕ್ಕ ಉರಾಗಿದ್ದರೂ ಅಲ್ಲಿ 20 ಕ್ರಿಕೆಟ್ ಕ್ಲಬ್ಗಳಿವೆಯಂತೆ. ಅಜರುದ್ದೀನ್ರದ್ದು 7 ಜನ ಅಣ್ಣ-ತಮ್ಮಂದಿರನ್ನು ಒಳಗೊಂಡ ದೊಡ್ಡ ಕುಟುಂಬ; ಇವರೇ ಎಲ್ಲರಿಗಿಂತ ಕಿರಿಯರು. ಕ್ರಿಕೆಟ್ನಲ್ಲಿರುವ ಅವರ ಅಭಿರುಚಿಯನ್ನು ಕಂಡ ಸಹೋದರರು ಹುರಿದುಂಬಿಸಿ, ಕಾಸರಗೋಡಿನಲ್ಲಿರುವ ಕ್ರಿಕೆಟ್ ಅಕ್ಯಾಡೆಮಿಯೊಂದಕ್ಕೆ ಸೇರಿಸಿದರು. ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿರುವ ಅಜರುದ್ದೀನ್ ಪ್ರತಿಭಾವಂತನಾಗಿದ್ದರಿಂದ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಗಮನ ಸೆಳೆದು, ಕಾಸರಗೋಡು ಜಿಲ್ಲಾ ತಂಡಕ್ಕೆ ಆಡಲಾರಂಭಿಸಿದರು.
ಕೊಲ್ಲಿ ರಾಷ್ಟ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಮರುದ್ದೀನ್, ತಮ್ಮನಿಗೆ ಅಗತ್ಯವಿರುವ ಹಣ ಸಹಾಯ ಮಾಡುತ್ತಾ ಬೇಕಾದ ಎಲ್ಲ ಕ್ರಿಕೆಟ್ ಸಲಕರಣೆಗಳನ್ನು ಅಲ್ಲಿಂದಲೇ ಕಳಿಸುತ್ತಿದ್ದರು.
ಪ್ರತಿಭಾವಂತ ಅಜರುದ್ದೀನ್ ಕ್ರೀಡೆಯಲ್ಲಿ ಬೆಳೆಯುವುದು ತಡವಾಗಲಿಲ್ಲ. 2015ರಲ್ಲಿ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡಿತು. ಆದರೆ, ಪ್ರಥಮ ದರ್ಜೆ ಪಂದ್ಯಗಳಲ್ಲಿ ಅಜರುದ್ದೀನ್ ನಿರೀಕ್ಷಿತ ಪ್ರದರ್ಶನಗಳನ್ನು ನೀಡಲಿಲ್ಲ. ನಿಮಗೆ ಆಶ್ಚರ್ಯವಾಗಹುದು, ಪ್ರಥಮ ದರ್ಜೆ ಕ್ರಿಕೆಡ್ನಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೇವಲ 25.91 ಇದೆ ಮತ್ತು ಟಿ-20 ಕ್ರಿಕೆಟ್ನಲ್ಲಿ 23.76 ಇದೆ.
ಈ ಸರಾಸರಿಗಳ ಹಿನ್ನೆಲೆಯಿಂದ ನೋಡಿದ್ದೇಯಾದರೆ, ಅಜರುದ್ದೀನ್ ಅವರಿಂದ ಹೆಚ್ಚಿನದೇನೂ ಕೇರಳ ಕ್ರಿಕೆಟ್ ಸಂಸ್ಥೆ ನಿರೀಕ್ಷಿಸುವಂತಿರಲಿಲ್ಲ. ಆದರೆ, ಕೊವಿಡ್-19 ಪಿಡುಗು ಸೃಷ್ಟಿಸಿದ ಅವಾಂತರ ಮತ್ತು ಲಾಕ್ಡೌನ್ ಅವರಿಗೆ ತಮ್ಮ ಬ್ಯಾಟಿಂಗ್ ಫೈನ್ ಟ್ಯೂನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿತು. ಅದೇ ಸಮಯಕ್ಕೆ ಕೇರಳದ ರಣಜಿ ಟೀಮಿಗೆ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟರ್ ಟಿನು ಯೊಹಾನನ್ ಕೋಚ್ ಆಗಿ ನೇಮಕಗೊಂಡಿದ್ದ್ದು ಅಜರುದ್ದೀನ್ಗೆ ವರದಾನವಾಗಿ ಸಾಬೀತಾಯಿತು.
ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅಜರುದ್ದೀನ್ ಅವರನ್ನು ಆರಂಭ ಆಟಗಾರನಾಗಿ ಆಡಿಸುವ ಯೋಚನೆ ಯೋಹಾನನ್ ಅವರಲ್ಲಿ ಹುಟ್ಟಿಕೊಂಡಿತು. ಲಾಕ್ಡೌನ್ ಸಮಯದಲ್ಲಿ ಅಜರುದ್ದೀನ್ರನ್ನು ತೀವ್ರ ಸ್ವರೂಪದ ಬ್ಯಾಟಿಂಗ್ ಅಭ್ಯಾಸದಲ್ಲಿ ಅವರು ತೊಡಗಿಸಿದರು. ಅದರ ಪ್ರತಿಫಲ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾದ ನಂತರ ಎಲ್ಲರಿಗೂ ಗೊತ್ತಾಯಿತು.
ಸಯ್ಯದ್ ಮಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ವಿರುದ್ಧ ಅಜರುದ್ದೀನ್ ಮಿಂಚಿನ ಶತಕ ಬಾರಿಸಿದ್ದು ಎಲ್ಲರ ಮನೆಮಾತಾಯಿತು. ಅವರ 137ರನ್ಗಳ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್ಗಳಿದ್ದವು. ಭಾರತದ ಪರ ಈ ಫಾರ್ಮಾಟ್ನಲ್ಲಿ ದಾಖಲಾಗಿರುವ ಮೂರನೇ ಅತಿ ವೇಗದ ಶತಕವಿದು. ಭಾರತದ ವಿಕೆಟ್ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ 32 ಎಸೆತಗಳಲ್ಲಿ ಮತ್ತು ರೋಹಿತ್ ಶರ್ಮ 35 ಎಸೆತಗಳಲ್ಲಿ ಶತಕಗಳನ್ನು ಬಾರಿಸಿದ್ದ್ದಾರೆ.
Incredible effort – that too against the giants of domestic cricket, Mumbai #KERvMUM #MohammedAzharudeen #SyedMushtaqAliT20 https://t.co/xFVY8jNfoo
— Rahul (@rahul_countonme) January 13, 2021
ಇಂಥ ಅಜರುದ್ದೀನ್ರನ್ನು ಇಂದು ಚೆನೈಯಲ್ಲಿ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ 2021 ಸೀಸನ್ ಮಿನಿ-ಲಿಲಾವಿನಲ್ಲಿ ಯಾವುದಾದರೂ ಫ್ರಾಂಚೈಸಿ ಖರೀದಿಸುವ ನಿರೀಕ್ಷೆ ಇತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಅವರ ಮೂಲಬೆಲೆಯಾಗಿದ್ದ ರೂ. 20ಲಕ್ಷಗಳಿಗೆ ಖರೀದಿಸಿರುವುದು ಕನ್ನಡಿಗರಲ್ಲಿ ಸಂತಸವನ್ನುಂಟು ಮಾಡಿದೆ. ಕಳೆದ ಸೀಸನ್ನಲ್ಲಿ 20-ವರ್ಷ ವಯಸ್ಸಿನ ದೇವದತ್ ಪಡಿಕ್ಕಲ್ ತಮಗೆ ನೀಡಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಹೆಸರು ಮಾಡಿದ್ದೂ ಅಲ್ಲದೆ ಉದಯೋನ್ಮುಖ ಪ್ರತಿಭೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
26 ವರ್ಷ ವಯಸ್ಸಿನ ಅಜರುದ್ದೀನ್ ಆರ್ಸಿಬಿ ನೀಡಬಹುದಾದ ಅವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿರುವ ಅಂಶವಾಗಿದೆ.
ಅಜರುದ್ದೀನ್ ತಮ್ಮ ಆಸೆಗಳ ಒಂದು ಪಟ್ಟಿಯನ್ನು ತಯಾರಿಸಿದ್ದು ಅದು ವೈರಲ್ ಆಗಿದೆ. ಅವರ ಆಸೆಗಳಲ್ಲಿ ಐಪಿಎಲ್ಗೆ ಆಡುವುದು, ಸ್ವಂತ ಮನೆ ಹೊಂದುವುದು, ರಣಜಿ ಋತುವೊಂದರಲ್ಲಿ 4 ಶತಕಗಳನ್ನು ಬಾರಿಸುವುದು, ಬೆಂಜ್ ಕಾರು ಖರೀದಿ ಮತ್ತು 2023 ವಿಶ್ವಕಪ್ ಕ್ರಿಕೆಟ್ನಲ್ಲಿ ಬಾರತವನ್ನು ಪ್ರತಿನಿಧಿಸುವುದು ಸೇರಿವೆ.