AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepotism: ಬೇರೆ ಪ್ರತಿಭಾನ್ವಿತರಿಗಿಂತ ಅರ್ಜುನ್​ಗೆ ಹೇಗೆ ಮಣೆ ಹಾಕಲಾಯಿತು? ಅಪ್ಪ ತೆಂಡುಲ್ಕರ್ ಸ್ವಜನ ಪಕ್ಷಪಾತದ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

IPL 2021 Auction: ಅರ್ಜುನ್​ ತೆಂಡುಲ್ಕರ್​ ಮೈದಾನದಲ್ಲಿ ಹೇಗೆ ಆಡುತ್ತಾರೆ? ಅವರ ಆಟ ಹೇಗಿದೆ? ಎಂದು ನೋಡುವ ಮೊದಲೇ ಪೂರ್ವಾಗ್ರಹ ಪೀಡಿತರಾಗಿ ಟ್ರೋಲ್ ಮಾಡುವುದು ಸರಿಯಲ್ಲ. ಅವರು ಈ ಬಾರಿ ಹೇಗೆ ಆಡಲಿದ್ದಾರೆ ಎಂದು ಕಾದು ನೋಡೋಣ ಎಂದೂ ಹೇಳಿದ್ದಾರೆ. Tendulkar Nepotism

Nepotism: ಬೇರೆ ಪ್ರತಿಭಾನ್ವಿತರಿಗಿಂತ ಅರ್ಜುನ್​ಗೆ ಹೇಗೆ ಮಣೆ ಹಾಕಲಾಯಿತು? ಅಪ್ಪ ತೆಂಡುಲ್ಕರ್ ಸ್ವಜನ ಪಕ್ಷಪಾತದ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು
ಅರ್ಜುನ್​ ತೆಂಡುಲ್ಕರ್​
Skanda
|

Updated on: Feb 19, 2021 | 11:44 AM

Share

ಸಾಕಷ್ಟು ಕುತೂಹಲ ಮೂಡಿಸಿದ್ದ ಐಪಿಎಲ್​ 2021ರ ಹರಾಜು (IPL 2021 Auction) ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಕೆಲ ಉತ್ತಮ ಆಟಗಾರರಿಗಾಗಿ ಫ್ರಾಂಚೈಸಿಗಳ ನಡುವೆ ಪ್ರಬಲ ಪೈಪೋಟಿ ನಡೆದು, ದುಬಾರಿ ಮೊತ್ತ ಹರಿಸಿರುವುದೂ ಕಂಡುಬಂತು. ಈ ಮಧ್ಯೆ ಹರಾಜಿಗೆ ಸಂಬಂಧಿಸಿದಂತೆ ಒಬ್ಬ ಆಟಗಾರ ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಕ್ರಿಕೆಟ್​ ಲೋಕದ ದಿಗ್ಗಜ, ಅಭಿಮಾನಿಗಳ ಪಾಲಿನ ದೇವರು ಸಚಿನ್​ ತೆಂಡುಲ್ಕರ್​ ಅವರ ಪುತ್ರ ಅರ್ಜುನ್​ ತೆಂಡುಲ್ಕರ್​ (Arjun Tendulkar) ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡ ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡಿದ ಹಿನ್ನೆಲೆಯಲ್ಲೇ ಸ್ವಜನ ಪಕ್ಷಪಾತದ (Tendulkar Nepotism) ಮಾತು ಕೇಳಿಬರುತ್ತಿದ್ದು ಟ್ವಿಟರ್​ನಲ್ಲಿ #nepotism ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ.

ಐಪಿಎಲ್​ 2021ರ ಹರಾಜು ಪ್ರಕ್ರಿಯೆಯಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ಯಾರು ಕೊಳ್ಳಬಹುದೆಂಬ ಸಾಕಷ್ಟು ಕುತೂಹಲವಿತ್ತು. ಹೆಚ್ಚಿನವರು ಮುಂಬೈ ಇಂಡಿಯನ್ಸ್​ ತಂಡವೇ ಕೊಂಡುಕೊಳ್ಳಲಿದೆ ಎಂದು ಮೊದಲೇ ಷರಾ ಬರೆದಿದ್ದರು. ತಂದೆಯ ಆಶೀರ್ವಾದ ಇದ್ದರೆ ತಂಡಕ್ಕೆ ಸೇರುವುದು ಕಷ್ಟವೇನಲ್ಲ ಎಂದು ಬಹಳಷ್ಟು ಜನ ಆಡಿಕೊಂಡಿದ್ದರು. ಅಂತೆಯೇ ಹರಾಜು ಪ್ರಕ್ರಿಯೆಯಲ್ಲಿ ಕೊನೆಯ ಆಟಗಾರನನ್ನಾಗಿ ಅರ್ಜುನ್​ ತೆಂಡುಲ್ಕರ್​ ಅವರ ಹೆಸರು ಕರೆದಾಗ ಮುಂಬೈ ಇಂಡಿಯನ್ಸ್ ತಂಡ ₹20 ಲಕ್ಷ ನೀಡಿ ಅವರನ್ನು ಕೊಂಡುಕೊಂಡಿತು.

ಬೇರೆ ಪ್ರತಿಭಾನ್ವಿತರಿಗಿಂತ ಅರ್ಜುನ್​ ತೆಂಡುಲ್ಕರ್​ಗೆ ಹೇಗೆ ಮಣೆ ಹಾಕಲಾಯಿತು? ಹೀಗೆ ಕೊನೆಗೂ ಅರ್ಜುನ್​ ತೆಂಡುಲ್ಕರ್ ಖರೀದಿಯಾದರು ಎಂದು  ಅನೇಕ ನೆಟ್ಟಗರು ಸಿಟ್ಟಿಗೆದ್ದಿದ್ದಾರೆ. ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಏನೂ ಸಾಧನೆ ಮಾಡಿರದ ಅರ್ಜುನ್​ ತೆಂಡುಲ್ಕರ್​ ಯಾವ ಆಧಾರದ ಮೇಲೆ ಐಪಿಎಲ್​ಗೆ ಅರ್ಹ? ನಿಜವಾಗಿಯೂ ಸಾಧನೆ ಮಾಡಿರುವ ಬೇರೆ ಹುಡುಗರಿಗಿಂತ ಇವರು ಹೇಗೆ ಮಣೆ ಹಾಕಲಾಯಿತು? ಇವರನ್ನು ಕೊಂಡುಕೊಳ್ಳುವುದರ ಹಿಂದೆ ಸಚಿನ್​ ತೆಂಡುಲ್ಕರ್ ಎಂಬ ಹೆಸರು ಬಿಟ್ಟು, ಬೇರೇನು ಇದೆ ಎಂದು ಕಾಲೆಳೆದಿದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ಅವರ ಪುತ್ರ ಇಬ್ಬರನ್ನೂ ಟ್ರೋಲ್​ ಮಾಡುತ್ತಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ.

ಟೀಕಿಸುವುದು ಸರಿಯಲ್ಲ.. ಕಾದು ನೋಡೋಣ ಇನ್ನೊಂದೆಡೆ ಅರ್ಜುನ್ ತೆಂಡುಲ್ಕರ್ ಅವರ ಟ್ರೋಲ್ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದ್ದು, ಸೆಲೆಬ್ರಿಟಿಗಳ ಮಕ್ಕಳು ನಿಜವಾಗಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಮುಂದೆ ಬಂದರೂ ಸ್ವಜನ ಪಕ್ಷಪಾತದ ಹಣೆಪಟ್ಟಿ ಅಂಟಿಸಿ ಕಾಲೆಳೆಯಲಾಗುತ್ತದೆ. ಅರ್ಜುನ್​ ತೆಂಡುಲ್ಕರ್​ ಮೈದಾನದಲ್ಲಿ ಹೇಗೆ ಆಡುತ್ತಾರೆ? ಅವರ ಆಟ ಹೇಗಿದೆ? ಎಂದು ನೋಡುವ ಮೊದಲೇ ಪೂರ್ವಾಗ್ರಹ ಪೀಡಿತರಾಗಿ ಟ್ರೋಲ್ ಮಾಡುವುದು ಸರಿಯಲ್ಲ. ಅವರು ಈ ಬಾರಿ ಹೇಗೆ ಆಡಲಿದ್ದಾರೆ ಎಂದು ಕಾದು ನೋಡೋಣ. ನಂತರ ಅವರನ್ನು ಟೀಕಿಸಬೇಕೋ? ಬೇಡವೋ? ಎಂದು ನಿರ್ಧರಿಸೋಣ ಎಂದೂ  ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: 20 ಲಕ್ಷ ರೂಪಾಯಿಗೆ ಮುಂಬೈ ತಂಡ ಸೇರಿದ ಅರ್ಜುನ್​ ತೆಂಡೂಲ್ಕರ್​!

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ