AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನೇಶ್ ಫೋಗಟ್ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಭಜರಂಗ್ ಪುನಿಯಾ! ಕಾರಣವೇನು ಗೊತ್ತಾ?

ಒಲಿಂಪಿಕ್ಸ್ ಸಮಯದಲ್ಲಿ ಭಜರಂಗ್ ಗಾಯಗೊಂಡರು, ಈ ಕಾರಣದಿಂದಾಗಿ ಅವರು ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ವಿನೇಶ್ ಫೋಗಟ್ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಭಜರಂಗ್ ಪುನಿಯಾ! ಕಾರಣವೇನು ಗೊತ್ತಾ?
ಭಾರತೀಯ ಕುಸ್ತಿಪಟು ಬಜರಂಗ್ ಪುನಿಯಾ
TV9 Web
| Edited By: |

Updated on: Aug 23, 2021 | 10:43 PM

Share

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಬಜರಂಗ್ ಪುನಿಯಾ ಈಗ ಮುಂದಿನ ಕೆಲವು ವಾರಗಳ ಕಾಲ ಅಖಾಡದಿಂದ ದೂರ ಉಳಿಯಲಿದ್ದಾರೆ. ಒಲಿಂಪಿಕ್ಸ್ ಸಮಯದಲ್ಲಿ ಭಜರಂಗ್ ಗಾಯಗೊಂಡರು, ಈ ಕಾರಣದಿಂದಾಗಿ ಅವರು ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ವಿನೀಶ್ ಫೋಗಟ್, ದಿವ್ಯಾ ಕಕಾರನ್ ಮತ್ತು ಸೋನಂ ಮಲಿಕ್ ಅವರ ಹೆಸರನ್ನು ಈಗಾಗಲೇ ಈ ಚಾಂಪಿಯನ್‌ಶಿಪ್‌ನಿಂದ ಹಿಂತೆಗೆದುಕೊಳ್ಳಲಾಗಿದೆ.

ಬಜರಂಗ್ ಪುನಿಯಾ ಅವರಿಗೆ ಚಿಕಿತ್ಸೆ ನೀಡಲು ಆರು ವಾರಗಳ ಪುನರ್ವಸತಿಗೆ ಸೂಚಿಸಲಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ಗಳು ಅಕ್ಟೋಬರ್ 2 ರಿಂದ 10 ರವರೆಗೆ ನಾರ್ವೆಯ ಓಸ್ಲೋದಲ್ಲಿ ನಡೆಯಲಿದೆ. ಹೀಗಾಗಿ ಪುನರ್ವಸತಿ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಬಜರಂಗ್‌ಗೆ ತರಬೇತಿ ಆರಂಭಿಸಲು ಸಾಧ್ಯವಾಗುವುದಿಲ್ಲ. ಬಜರಂಗ್ ಅವರು ಒಲಿಂಪಿಕ್ಸ್‌ಗೆ ಮುಂಚಿತವಾಗಿ ರಷ್ಯಾದಲ್ಲಿ ಅನುಭವಿಸಿದ ಗಾಯದ ಗಂಭೀರತೆಯನ್ನು ತಿಳಿಯಲು ಎಂಆರ್‌ಐಗೆ ಒಳಗಾಗಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಪಿಟಿಐಗೆ ಮಾತನಾಡಿದ ಭಜರಂಗ್, ನನಗೆ ಗಾಯವಾಗಿದೆ ಮತ್ತು ಡಾ.ದಿನ್ಶಾ ಅವರು ಆರು ವಾರಗಳ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗುವಂತೆ ಹೇಳಿದ್ದಾರೆ. ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ವರ್ಷದ ಉಳಿದ ಯಾವುದೇ ಶ್ರೇಯಾಂಕ ಸ್ಪರ್ಧೆ ಇಲ್ಲ. ಹೀಗಾಗಿ ಈ ವರ್ಷದ ಕ್ರೀಡಾ ಋತು ಮುಗಿದಿದೆ ಎಂದು ಬಜರಂಗ್ ಹೇಳಿದರು. ಈ ವರ್ಷ ವಿಶ್ವ ಚಾಂಪಿಯನ್‌ಶಿಪ್ ಕ್ಯಾಲೆಂಡರ್‌ನಲ್ಲಿ ಉಳಿದಿರುವ ಏಕೈಕ ಪ್ರಮುಖ ಪಂದ್ಯಾವಳಿಯಾಗಿದೆ. ಈ ವರ್ಷ ನಾನು ಬೇರೆ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ. ಟೋಕಿಯೊ ಕ್ರೀಡಾಕೂಟಕ್ಕೆ ಮುನ್ನ ಜೂನ್​ನಲ್ಲಿ ರಷ್ಯಾದಲ್ಲಿ ನಡೆದ ಅಲಿ ಅಲಿಯೇವ್ ಟೂರ್ನಿಯಲ್ಲಿ ಆಡುವಾಗ ಭಜರಂಗ್ ಗಾಯಗೊಂಡರು.

ಆ ಟೂರ್ನಿಯಲ್ಲಿ ಅಬ್ದುಲ್‌ಮಜೀದ್ ಕುಡಿಯೆವ್ ವಿರುದ್ಧ ಸೆಮಿಫೈನಲ್ ಪಂದ್ಯದಿಂದ ಬಜರಂಗ್ ಹಿಂದೆ ಸರಿದರು. ಎದುರಾಳಿ ಪಂದ್ಯದ ಮೊದಲ ಅವಧಿಯಲ್ಲಿ ಬಲಗಾಲನ್ನು ಹಿಡಿದು ಎಳೆದರು. ಕಾಲಿನ ಡ್ರ್ಯಾಗ್‌ನಿಂದಾಗಿ ಬಜರಂಗ್‌ ಬಲ ಮೊಣಕಾಲಿನ ಮೇಲೆ ಪರಿಣಾಮ ಬೀರಿತು. ಅವರು ತಕ್ಷಣವೇ ಪಂದ್ಯದಿಂದ ಹಿಂದೆ ಸರಿದರು. ಆದಾಗ್ಯೂ, ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು.

Follow Us
TV9 Web
TV9 Web

TV9 Kannada

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ